ಮಲ್ಪೆ: ಕತ್ತಿಯಿಂದ ಕಡಿದು ಪರಾರಿ
Team Udayavani, Dec 6, 2018, 11:01 AM IST
ಮಲ್ಪೆ: ವ್ಯವಹಾರಕ್ಕೆ ಸಂಬಂಧಿಸಿ ಹಣದ ವಿಚಾರದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವರಿಗೆ ಕತ್ತಿಯಿಂದ ಕಡಿದಿರುವ ಘಟನೆ ಮಂಗಳವಾರ ರಾತ್ರಿ ಮಲ್ಪೆಯ ಕೊಳ ಎಂಬಲ್ಲಿ ಬಳಿ ನಡೆದಿದೆ.
ಕೊಳದಲ್ಲಿ ಮೀನು ವ್ಯಾಪಾರದ ಆಫೀಸಿನಲ್ಲಿ ಕುಳಿತಿದ್ದ ಕಟಪಾಡಿ ಏಣಗುಡ್ಡೆಯ ನಿವಾಸಿ ಸುಧಾಕರ ಸುವರ್ಣ ಅವರಿಗೆ ಕೊಳ ನಿವಾಸಿ ಧನು ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಕುತ್ತಿಗೆ, ಬಲಗೈ ಮತ್ತು ಎದೆಭಾಗಕ್ಕೆ ಗಾಯವಾಗಿರುವ ಸುಧಾಕರ ಸುವರ್ಣ ಅವರನ್ನು ಸ್ಥಳೀಯರು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಸುಧಾಕರ ಸುವರ್ಣ ಮತ್ತು ಧನು ಮೀನು ವ್ಯವಹಾರದಲ್ಲಿ ಪಾಲುದಾರರಾಗಿದ್ದರು. ಕೆಲವು ಸಮಯದ ಹಿಂದೆ ಹಣದ ವ್ಯವಹಾರದಲ್ಲಿ ಇಬ್ಬರಿಗೂ ಜಗಳವಾಗಿ ಪ್ರತ್ಯೇಕವಾಗಿದ್ದರು. ಆ ಬಳಿಕ ಸುಧಾಕರ ಸುವರ್ಣ ಆವರು ಬೇರೆಯವರ ಜತೆಯಲ್ಲಿ ವ್ಯವಹಾರ ನಡೆಸುತ್ತಿದ್ದರು. ಈ ಮಧ್ಯೆ ಹಣದ ವಿಚಾರಕ್ಕೆ ಸಂಬಂಧಿಸಿ ಧನು ಹಲ್ಲೆ ನಡೆಸಿದ್ದಾನೆ. ಸುಧಾಕರ್ ಸುವರ್ಣ ಚೇತರಿಸಿಕೊಂಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಮಲ್ಪೆ ಠಾಣಾಧಿಕಾರಿ ಮಧು ಬಿ.ಇ. ನೇತೃತ್ವದಲ್ಲಿ ಪೊಲೀಸರು ಆರೋಪಿಯ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ ಸಾಬೀತು; ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಪ್ರಕಟ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Kasaragod Crime News: ರಸ್ತೆಯಲ್ಲಿ ಬಿಯರ್ ಬಾಟ್ಲಿ ಒಡೆದ ಮೂವರ ಬಂಧನ
Belthangady: ಬಸ್ ಬೈಕ್ ಢಿಕ್ಕಿ, ಸವಾರ ಗಂಭೀರ
Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.