ಹೈನುಗಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆರಂಭಗೊಂಡ ಸಂಸ್ಥೆ

ಕರ್ಕುಂಜೆ ಹಾಲು ಉತ್ಪಾದಕರ ಸಹಕಾರ ಸಂಘ

Team Udayavani, Feb 25, 2020, 5:55 AM IST

2302KDPP2

ಗ್ರಾಮೀಣ ಭಾಗದಲ್ಲಿ ಕೃಷಿಕರಿಗೆ ಹೈನುಗಾರಿಕೆ ಒಂದು ಉತ್ತಮ ಉಪಕಸುಬು. ಇದರ ಮೂಲಕ ಸ್ಥಳೀಯ ಆರ್ಥಿಕಾಭಿವೃದ್ಧಿಯ ಅವಕಾಶವನ್ನು ಮನಗಂಡು ಸ್ಥಾಪನೆಯಾಗಿದ್ದೇ ಕರ್ಕುಂಜೆ ಹಾಲು ಉತ್ಪಾದಕರ ಸಂಘ. ಸಂಘ ಸ್ಥಾಪಿಸಿದ ಹಿರಿಯರ ಉದ್ದೇಶ ಸಂಘದ ಅಭಿವೃದ್ಧಿ ಮೂಲಕ ಈಗ ನನಸಾಗಿದೆ.

ತಲ್ಲೂರು: ಕೃಷಿಯೊಂದಿಗೆ ಜಾನುವಾರುಗಳನ್ನು ಹೆಚ್ಚಾಗಿ ಸಾಕುತ್ತಿದ್ದ ನೇರಳಕಟ್ಟೆ, ಗುಲ್ವಾಡಿ, ಮಾವಿನಕಟ್ಟೆ ಭಾಗದ ಕೃಷಿಕರಿಗೆ ಹೈನುಗಾರಿಕೆಯ ಬಗ್ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಕರ್ಕುಂಜೆ ಹಾಲು ಉತ್ಪಾದಕರ ಸಂಘ ಸ್ಥಾಪನೆಯಾಯಿತು.

1985 ರಲ್ಲಿ ನೇರಳಕಟ್ಟೆ ಸಮೀಪದ ಬಾವಿಕಟ್ಟೆ ಬಳಿಯ ಬಾಡಿಗೆ ಕಟ್ಟಡವೊಂದರಲ್ಲಿ ಈ ಸಂಘ ಆರಂಭಗೊಂಡಿತು. 1987 ರ ಜು. 28 ರಂದು ಅಧಿಕೃತವಾಗಿ ನೋಂದಣಿಗೊಂಡಿತ್ತು. ಡಾ| ಸದಾಶಿವ ಶೆಟ್ಟಿಯವರು ಇದರ ಸ್ಥಾಪಕಾಧ್ಯಕ್ಷರಾಗಿದ್ದು, ಅವರೊಂದಿಗೆ ಅನೇಕ ಹೈನುಗಾರರೂ ಸಂಘ ಸ್ಥಾಪನೆಗೆ ಮುತುವರ್ಜಿವಹಿಸಿದ್ದರು.
ಆರಂಭದಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಹೈನುಗಾರರಿಂದ ಮಾತ್ರ ಆರಂಭಗೊಂಡ ಈ ಸಂಸ್ಥೆಯು ಈಗ ಸದಸ್ಯರ ಸಂಖ್ಯೆ 100 ಕ್ಕೂ ಹೆಚ್ಚಿದೆ. ಈ ಭಾಗದ ಜನರ ಆರ್ಥಿಕ ಅಭಿವೃದ್ಧಿಯಲ್ಲಿ ಈ ಸಂಘದ ಪಾತ್ರ ಮಹತ್ತರವಾಗಿದೆ. ಈ ಹಾಲಿನ ಡೈರಿಗೆ ಹಾಲು ಹಾಕಿ ತಮ್ಮ ಸಂಸಾರದ ಹೊಣೆಯನ್ನು ನಿರ್ವಹಿಸುವವರು ಅನೇಕ ಮಂದಿ ಇದ್ದಾರೆ.

ಆರಂಭಗೊಂಡ ಉದ್ದೇಶ
ಅವಿಭಜಿತ ದ.ಕ. ಜಿಲ್ಲೆಯ ಗ್ರಾಮೀಣ ಭಾಗದ ರೈತರಿಗೆ ಆರ್ಥಿಕವಾಗಿ ಚೈತನ್ಯ ತುಂಬಲು ಆರಂಭವಾದ ಸಂಸ್ಥೆ ಕೆನರಾ ಮಿಲ್ಕ್ ಯೂನಿಯನ್‌ (ಕೆಮುಲ್‌). 1985 ರಲ್ಲಿ ಕೆ.ಕೆ. ಪೈ ಅಧ್ಯಕ್ಷತೆಯಲ್ಲಿ ದ.ಕ. ಹಾಲು ಉತ್ಪಾದಕರ ಒಕ್ಕೂಟದೊಂದಿಗೆ ಕೆಮುಲ್‌ ವಿಲೀನಗೊಂಡಿತು. ಅದೇ ವರ್ಷ ನೇರಳಕಟ್ಟೆಯಲ್ಲಿ ಕರ್ಕುಂಜೆ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟ ಆರಂಭಗೊಂಡಿರುವುದು ವಿಶೇಷ. 80-90 ರ ದಶಕದಲ್ಲಿ ಈ ಭಾಗದ ಹೈನುಗಾರರಿಗೆ ಉತ್ತೇಜನ ನೀಡಲು ಸಂಘ ನೀಡುವ ನಿಟ್ಟಿನಲ್ಲಿ ಶುರುವಾಯಿತು.

ಹೊಸ ಕಟ್ಟಡ
2011ರಲ್ಲಿ ನೇರಳಕಟ್ಟೆಯ ನಿಸರ್ಗ ಬಸ್‌ ನಿಲ್ದಾಣ ಸಮೀಪದ ಹೊಸ ಕಟ್ಟಡಕ್ಕೆ ಈ ಹಾಲು ಉತ್ಪಾದಕರ ಸಂಗ ಸ್ಥಳಾಂತರಗೊಂಡಿತು. ಆ ವರ್ಷದ ಏಪ್ರಿಲ್‌ನಲ್ಲಿ ಕ್ಷಿರಾಬ್ಧಿ ಎನ್ನುವ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ.

ಪ್ರಸ್ತುತ ಸ್ಥಿತಿಗತಿ
ಈಗ ಇಲ್ಲಿ ಒಟ್ಟು 133 ಸದಸ್ಯರಿದ್ದು, ಅದರಲ್ಲಿ 55 ಮಂದಿ ಹೈನುಗಾರರು ಖಾಯಂ ಆಗಿ ಹಾಲು ಹಾಕುತ್ತಿದ್ದಾರೆ. ದಿನಕ್ಕೆ 380 ರಿಂದ 400 ಲೀ. ಹಾಲು ಸಂಗ್ರಹವಾಗುತ್ತಿದೆ.

ಗರಿಷ್ಠ ಸಾಧಕರು
2018 -19 ನೇ ಸಾಲಿನಲ್ಲಿ 1,62,191 ಲೀಟರ್‌ ಹಾಲು ಸಂಗ್ರಹವಾಗಿದೆ. ಈ ಸಂಘದಲ್ಲಿ ಈ ವರ್ಷದಲ್ಲಿ ಹಾಲು ಹಾಕಿದ ಗರಿಷ್ಠ ಸಾಧಕರ ಪಟ್ಟಿಯಲ್ಲಿ ಶೀನ ಪೂಜಾರಿಯವರಿಗೆ ಅಗ್ರಸ್ಥಾನ. ಅವರು ದಿನಕ್ಕೆ 48 ಲೀಟರ್‌ ಹಾಲು ಸಂಘಕ್ಕೆ ಹಾಕುತ್ತಿದ್ದಾರೆ.

ಗ್ರಾಮೀಣ ಭಾಗದ ಹೈನುಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕರ್ಕುಂಜೆ ಹಾಲು ಉತ್ಪಾದಕರ ಸಹಕಾರ ಸಂಘ ಆರಂಭಗೊಂಡಿತು. ಈಗಲೂ ಈ ಭಾಗದ ಕೃಷಿಕರಿಗೆ ಬಹಳಷ್ಟು ಪ್ರಯೋಜನವಾಗುತ್ತಿದೆ. ಸಂಘದ ವತಿಯಿಂದ ಈ ಭಾಗದಲ್ಲಿ ಹೈನುಗಾರರನ್ನು ಹೆಚ್ಚಿಸುವ ಗುರಿಯಿದೆ.
-ಕೆ. ಪದ್ಮನಾಭ ಅಡಿಗ, ಅಧ್ಯಕ್ಷರು

ಅಧ್ಯಕ್ಷರು:
ಡಾ| ಪ್ರಕಾಶ್‌ ಶೆಟ್ಟಿ, ಹೆಮ್ಮಕ್ಕಿ ವಿಠಲ ಶೆಟ್ಟಿ, ಸುಂದರ್‌ ಶೆಟ್ಟಿ ಅಂಪಾರು, ವಿಠಲ ಶೆಟ್ಟಿ ಕರ್ಕುಂಜೆ, ಕೆ. ಪದ್ಮನಾಭ ಅಡಿಗ (ಹಾಲಿ)
ಕಾರ್ಯದರ್ಶಿಗಳು: ಮೊಹಮ್ಮದ್‌ ನಜೀರ್‌ ಸಾಹೇಬ್‌, ಶೇಷಗಿರಿ ನಾಯಕ್‌ (ಹಾಲಿ)

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

death

Gangolli: ಲಾರಿ ಪ್ರಯಾಣದ ವೇಳೆ ಕ್ಲೀನರ್‌ ಸಾವು

accident2

Padubidri: ಅಪರಿಚಿತ ವಾಹನ ಢಿಕ್ಕಿ;‌ ಪಾದಚಾರಿಗೆ ತೀವ್ರ ಗಾಯ

de

Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.