ಸಂಕಲಕರಿಯ: ಹೀಗೊಂದು ನಾಟಿ ಸ್ಪೆಷಲಿಸ್ಟ್ ಮಹಿಳಾ ತಂಡ !
Team Udayavani, Jul 18, 2017, 2:50 AM IST
ಬೆಳ್ಮಣ್: ಕೂಲಿ ಕಾರ್ಮಿಕರ ಕೊರತೆಯಿಂದ ಕೃಷಿಕ ಕಂಗೆಟ್ಟು ನಮ್ಮ ರೈತರು ಎಕರೆಗಟ್ಟಲೆ ಜಮೀನುಗಳನ್ನು ಹಡೀಲು ಬಿಟ್ಟಿರುವಾಗ ಮುಂಡ್ಕೂರು ಸಂಕಲಕರಿಯದ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಮುಂಡ್ಕೂರು ದೊಡ್ಡಮನೆ ಭಾಸ್ಕರ ಶೆಟ್ಟಿಯವರ ಜಮೀನಿನಲ್ಲಿ ದಾಮಸ್ಕಟ್ಟೆ ಶಾಂತಿಪಲ್ಕೆಯ ಮಹಿಳೆಯರ ತಂಡವೊಂದು ಕಡಿಮೆ ಅವಧಿಯಲ್ಲಿ, ಕಡಿಮೆ ಖರ್ಚಿನಲ್ಲಿ ನೇಜಿ ತೆಗೆದು ನಾಟಿ ಮಾಡಿ ಭಾರೀ ಸುದ್ದಿ ಮಾಡಿದೆ.
ತಂಡಕ್ಕೆ ಸಮ್ಮಾನ
ತನ್ನ ಈ ವರ್ಷದ ಸಾಗುವಳಿಯನ್ನು ಹೆಚ್ಚೇನೂ ಚಿಂತೆಯಿಲ್ಲದೆ ಪೂರೈಸಿದ ಭಾಸ್ಕರ ಶೆಟ್ಟಿ ಈ ತಂಡವನ್ನು ಮನೆಯಂಗಳದಲ್ಲಿಯೇ ಸಮ್ಮಾನಿಸಿದ್ದಾರೆ. ತಂಡದ ಮುಖ್ಯಸ್ಥೆ ಪದ್ಮಾವತಿ ಈ ಸಮ್ಮಾನ ಸ್ವೀಕರಿಸಿದರು. ಊಟ ತಿಂಡಿ ಕೊಟ್ಟು 300 ರೂಪಾಯಿಯ ದಿನಗೂಲಿಯಲ್ಲಿ ಬೆಳಗ್ಗೆ 8ರಿಂದ ಸಂಜೆ 6 ಗಂಟೆಯವರೆಗೆ ದುಡಿಯುವ ಮಹಿಳೆಯರ ಈ ತಂಡ ಈಗಾಗಲೇ ಸಂಕಲಕರಿಯ, ಏಳಿಂಜೆ, ಐಕಳ ಮತ್ತಿನ್ನಿತರ ಪರಿಸರದಲ್ಲಿ ಬಹಳಷ್ಟು ಹೆಸರು ಮಾಡಿದೆ. ತಲಾ 15 ಮಂದಿಯ ಎರಡು ತಂಡಗಳಿದ್ದು ಕರೆದಲ್ಲಿಗೆ ತತ್‌ಕ್ಷಣ ಈ ತಂಡಗಳು ಸ್ಪಂದಿಸುತ್ತದೆ.
ಕೃಷಿ ಬದುಕಿಗೆ ಪೂರಕ
ಕೃಷಿ ಚಟುವಟಿಕೆಗಳಲ್ಲಿ ಬಹಳಷ್ಟು ಆಸಕ್ತಿ ಹೊಂದಿರುವ ಈ ಮಹಿಳೆಯರ ತಂಡ ಹಳ್ಳಿಯ ಕೃಷಿಕರಿಗೆ ಹೊಸ ಹುಮ್ಮಸ್ಸು ತಂದಿದೆ. ಕೂಲಿ ಕಾರ್ಮಿಕರ ಕೊರತೆಯಿಂದ ಕಂಗೆಟ್ಟು ಯಂತ್ರೀಕೃತ ಕೃಷಿ ಉಪಕರಣ ಬಳಕೆಯ ಜತೆ ತೋಟಗಾರಿಕೆ ಮತ್ತಿನ್ನಿತರ ಕೃಷಿಗಳತ್ತ ವಾಲುತ್ತಿರುವಾಗ ಪದ್ಮಾವತಿಯವರ ತಂಡ ಕೃಷಿ ಬದುಕಿಗೆ ಪೂರಕವೆನಿಸುವ ಕೆಲಸ ಮಾಡಿದೆ.
ಈ ಹಿಂದೆ 15 ದಿನಗಳಲ್ಲಿಯೂ ಮುಗಿಯದ ನಾಟಿ ಕಾರ್ಯ ಈ ವರ್ಷ ಪದ್ಮಾವತಿಯವರ ತಂಡದ ನೆರವಿನಿಂದ 5 ದಿನಗಳಲ್ಲೇ ಮುಗಿದಿದೆ. ನಮ್ಮಂತಹ ಕೃಷಿಕರ ಭವಿಷ್ಯ ಇಂತಹ ಮಹಿಳೆಯರ ಕೈಯಲ್ಲಿದೆ.
– ಮುಂಡ್ಕೂರು ದೊಡ್ಡಮನೆ ಭಾಸ್ಕರ ಶೆಟ್ಟಿ, ಕಾರ್ಕಳ ತಾ| ಉತ್ತಮ ಕೃಷಿಕ ಪ್ರಶಸ್ತಿ ಪುರಸ್ಕೃತರು
ಪ್ರಾಮಾಣಿಕವಾದ ದುಡಿಮೆ ಮಾಡುತ್ತಿದ್ದೇವೆ, ಕೃಷಿಕರ ಬವಣೆಗಳನ್ನು ಚೆನ್ನಾಗಿ ಅರಿತಿದ್ದೇವೆ. ಎರಡೆರರಡು ತಂಡಗಳ ಮೂಲಕ ಕರೆದಲ್ಲಿಗೆ ಹೋಗಿ ನಾಟಿ ಮಾಡುತ್ತೇವೆ.
– ಪದ್ಮಾವತಿ ಶಾಂತಿಪಲ್ಕೆ, ತಂಡದ ಮುಖ್ಯಸ್ಥೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
ಸ್ವಚ್ಛತೆ, ಬಯಲು ಬಹಿರ್ದೆಸೆ ಮುಕ್ತ ಗ್ರಾಮ; ಕಾರ್ಕಳ ಪ್ರಥಮ, ಹೆಬ್ರಿಗೆ ದ್ವಿತೀಯ ಸ್ಥಾನ
ಗೋವಂಶ ಸುರಕ್ಷೆಗಾಗಿ ಕೋಟಿ ವಿಷ್ಣುಸಹಸ್ರನಾಮ ಪಠನ, ಜಪ ಅಭಿಯಾನ: ವಿವಿಧ ಮಠಾಧೀಶರ ಬೆಂಬಲ
Udupi: ದಿಢೀರ್ ಅಸ್ವಸ್ಥ; ಅಂಬಾಗಿಲಿನ ವ್ಯಕ್ತಿಯೊಬ್ಬರು ಸಾವು
Udupi: ವಿದೇಶದಲ್ಲಿ ಎಂಪಿಎಚ್ ಸೀಟ್ ಭರವಸೆ; ಹಣ ಪಡೆದು ವಂಚನೆ: 3 ಮಂದಿಯ ಬಂಧನ
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್