ಉತ್ಸವಗಳು ಇದ್ದಲ್ಲಿ ಸಂಸ್ಕೃತಿ ಇರುತ್ತದೆ: ಗ.ನಾ. ಭಟ್ಟ
Team Udayavani, Jan 17, 2019, 1:30 AM IST
ಕಾರ್ಕಳ: ಭಾರತೀಯರು ಮೂಲತಃ ಉತ್ಸವ ಪ್ರಿಯರು. ಉತ್ಸವ ಇದ್ದಲ್ಲಿ ಸಂಸ್ಕೃತಿ ಇರುತ್ತದೆ. ಸಾಂಕೇತಿಕ ಉದ್ದೇಶಗಳೂ, ಮೌಲ್ಯಗಳೂ, ಸಂದೇಶಗಳೂ ಇರುತ್ತವೆ ಎಂದು ಮೈಸೂರಿನ ವಿದ್ವಾಂಸ ಗ.ನಾ. ಭಟ್ಟರು ಹೇಳಿದರು.
ಕಾರ್ಕಳ ಸಾಹಿತ್ಯ ಸಂಘದ ಆಶ್ರಯದಲ್ಲಿ ಜ. 14ರಂದು ನಗರದ ಪ್ರಕಾಶ್ ಹೊಟೇಲಿನ ಸಂಭ್ರಮ ಸಭಾಂಗಣದಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲಿ ಅಪರಿಮಿತ ಸಂಪತ್ತು ಇರುತ್ತದೆಯೋ ಅಲ್ಲಿ ಉತ್ಸವ ನಡೆಯುತ್ತದೆ. ಪರ್ವ ಎಂದರೆ ಹಬ್ಬ. ಸಂತೋಷ ಕೊಡುವ ದಿನ. ಹಬ್ಬ ಆಚರಿಸುವ ಇನ್ನೊಂದು ಅಂಗ ವ್ರತ. ನಿಯಮದಲ್ಲಿದ್ದುಕೊಂಡು ಕಾರ್ಯಾನುಷ್ಠಾನ ಮಾಡುವ ವ್ರತ ದೇಹ, ಮನಸ್ಸು, ಇಂದ್ರಿಯ, ಬುದ್ಧಿಗಳನ್ನು ಸಂಸ್ಕಾರಗೊಳಿಸುತ್ತದೆ. ಈ ಎಲ್ಲ ತತ್ತಾ$Ìರ್ಥಗಳನ್ನು ತಿಳಿದುಕೊಂಡು ಹಬ್ಬದಾಚರಣೆ ಮಾಡಬೇಕು ಎಂದರು.
ಸಂಘದ ಹಿರಿಯ ಸದಸ್ಯ ಪ್ರೊ| ಎಸ್. ಗೋವಿಂದ ಪ್ರಭು ಅವರು ಸ್ವಾಗತಿಸಿ, ಡಾ| ವರದರಾಜ ಚಂದ್ರಗಿರಿ ಪರಿಚಯ ಮಾಡಿದರು.
ರುಕ್ಮಿಣಿದೇವಿ ಕಾರ್ಯಕ್ರಮ ನಿರೂಪಿಸಿ, ಪ್ರ. ಕಾರ್ಯದರ್ಶಿ ಪ್ರೊ| ಪದ್ಮನಾಭ ಗೌಡ ಅವರು ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.