ಸಂಸ್ಕೃತಿ ಉಳಿವು, ಅಪಕಲ್ಪನೆ ಅಳಿವು: ಡಾ| ಎಸ್.ಆರ್. ಭಟ್
Team Udayavani, Jan 5, 2019, 12:30 AM IST
ಉಡುಪಿ: ಭಾರತದ ಪ್ರಾಚೀನ ಇತಿಹಾಸ, ಸಂಸ್ಕೃತಿಯ ಕುರಿತು ಕೆಲವು ಪಾಶ್ಚಾತ್ಯ ವಿದ್ವಾಂಸರು ಮತ್ತು ವಿಶೇಷವಾಗಿ ಕಮ್ಯುನಿಸ್ಟ್ ಪ್ರೇರಿತ ಇತಿಹಾಸಕಾರರು ಸೃಷ್ಟಿಸಿದ ಅಪಕಲ್ಪನೆಯನ್ನು ಸಮರ್ಥವಾಗಿ ನಿರಾಕರಿಸುವ ಜತೆಗೆ ಮೂಲ ಸಂಸ್ಕೃತಿಯ ಉಳಿವನ್ನು ಕಾಪಾಡಿಕೊಳ್ಳಬೇಕು ಎಂದು ಹೊಸ ದಿಲ್ಲಿಯ ಭಾರತೀಯ ದಾರ್ಶನಿಕ ಅನು ಸಂಧಾನ ಪರಿಷತ್ (ಐಸಿಪಿಆರ್) ಅಧ್ಯಕ್ಷ ಡಾ| ಸಿದ್ದೇಶ್ವರ ರಾಮೇಶ್ವರ ಭಟ್ ಕರೆ ನೀಡಿದರು.
ಭಾರತೀಯ ವಿದ್ವತ್ ಪರಿಷತ್ ಹಾಗೂ ಶ್ರೀ ಪಲಿಮಾರು ಮಠದ ತಣ್ತೀಸಂಶೋಧನ ಸಂಸತ್ ವತಿಯಿಂದ ಐಸಿಪಿಆರ್ ಹಾಗೂ ಹೈದರಾಬಾದ್‌ನ ಇಂಡಿಕ್ ಅಕಾಡೆಮಿ ಸಹಯೋಗದಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಿದ “ಡಿಸ್‌ಪ್ಯಾಶನೇಟ್ ಚರ್ನಿಂಗ್ ಆಫ್ ಇಂಡಾಲಜಿ’ ಎಂಬ ವಿಷಯದ ಮೂರು ದಿನಗಳ ಅಂತಾರಾಷ್ಟ್ರೀಯ ವಿದ್ವತ್ ಗೋಷ್ಠಿಯ ಉದ್ಘಾಟನ ಸಮಾರಂಭದಲ್ಲಿ ಅವರು ಮಾತನಾಡಿದರು. ಪಾಶ್ಚಾತ್ಯ ವಿದ್ವಾಂಸರಲ್ಲಿ ಕೆಲವರು ಸತ್ಯ ವಿಮರ್ಶೆ ಮಾಡಿದರೂ ಕೆಲ ವರು ಅಪಕಲ್ಪನೆ ಹರಿಬಿಟ್ಟರು. ವಿಶೇಷವಾಗಿ ಕಮ್ಯುನಿಸ್ಟ್ ಚಿಂತನೆಯ ಇತಿಹಾಸಕಾರರು ದುರುದ್ದೇಶ ಪೂರ್ವಕವಾಗಿ ಇತಿಹಾಸವನ್ನು ತಿರುಚಿ ದರು ಮತ್ತು ಇಂದಿಗೂ ವಿ.ವಿ.ಗಳಲ್ಲಿ ಇವರೇ ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಭಟ್ ವಿಷಾದಿಸಿದರು.
ಪರ್ಯಾಯ ಶ್ರೀ ಪಲಿಮಾರು
ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟಿಸಿ ಶುಭ ಕೋರಿದರು. ಪೂರ್ವಗ್ರಹಮುಕ್ತವಾದ ಚಿಂತನೆ ನಡೆಸಿದರೆ ಮಾತ್ರ ಸತ್ಯಾ ನ್ವೇಷಣೆ ಸಾಧ್ಯ. ಪ್ರಾಚೀನವಾದುದೆಲ್ಲ ಅನುಪಯುಕ್ತ, ಆಧುನಿಕವೆಲ್ಲ ಉಪಯುಕ್ತ ಎಂಬ ಸಾರಾಸಗಟು ಚಿಂತ ನೆಯೇ ದೋಷಪೂರಿತ ಎಂದು ಶ್ರೀ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹೇಳಿದರು. ನಾಗ್ಪುರದ ಕವಿಕುಲಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಶ್ರೀನಿವಾಸ ವರಖೇಡಿ ಅವರ ಪುಸ್ತಕ ವನ್ನು ಬಿಡುಗಡೆಗೊಳಿಸಲಾಯಿತು.
ಭಾರತೀಯ ವಿದ್ವಾಂಸ ಪರಿಷತ್‌ನ ಮುಖ್ಯಸ್ಥ ಡಾ| ವೀರನಾರಾಯಣ ಪಾಂಡುರಂಗಿ ಸ್ವಾಗತಿಸಿ, ಕಾರ್ಯ ದರ್ಶಿ ಪ್ರೊ| ನಾಗರಾಜ್ ಪುತೂರಿ ವಂದಿ ಸಿದರು. ತಣ್ತೀಸಂಶೋಧನ ಸಂಸತ್ ನಿರ್ದೇಶಕ ಡಾ| ವಂಶಿ ಕೃಷ್ಣ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ಮುಕ್ತ ಪ್ರಶ್ನಾವಳಿಗೆ ಅವಕಾಶ ರಾಜಾಂಗಣದಲ್ಲಿ ನಡೆಯುವ ವಿದ್ವತ್‌ಗೊàಷ್ಠಿಯಲ್ಲಿ ಪ್ರತಿದಿನ ಬೆಳಗ್ಗೆ 9ರಿಂದ 11ರ ವರೆಗೆ ಹಾಗೂ ಸಂಜೆ 4ರಿಂದ 5 ಗಂಟೆ ವರೆಗೆ ಸಾರ್ವಜನಿಕರು ಮುಕ್ತವಾಗಿ ಪ್ರಶ್ನೆಗಳು ಕೇಳಿ ಉತ್ತರ ಪಡೆದುಕೊಳ್ಳಲು ಅವಕಾಶವಿದೆ. ಜ. 6ರಂದು “ಸಂಸ್ಕೃತ ಯಾರದ್ದು?’ ಎಂಬ ಕುರಿತು ಸಾರ್ವಜನಿಕ ಚರ್ಚೆ ಜರಗಲಿದೆ.
ತಪ್ಪೊಪ್ಪಿಕೊಳ್ಳದ ಮಾನಸಿಕತೆ
ಪಾಶ್ಚಾತ್ಯ ಕಣ್ಣಿನಲ್ಲಿ ಭಾರತೀಯ ಇತಿಹಾಸ, ಸಂಸ್ಕೃತಿಯನ್ನು ಕಂಡದ್ದರ ಪರಿಣಾಮ ಇದು ಭಾರತದ ಸಂಸ್ಕೃತಿಗೆ ಧಕ್ಕೆಯಾಯಿತು. ಪಾಶ್ಚಾತ್ಯರು ಶಬ್ದವಾರು ಅರ್ಥ ಕಲ್ಪಿಸಿದರೆ ಭಾರತದಲ್ಲಿ ಅಧ್ಯಾಯವಾರು ಚಿಂತನೆ ಕ್ರಮವಿದೆ. ವಿದೇಶದ ವಿದ್ವಾಂಸರಿಂದ ತೊಂದರೆಯಾದಂತೆ ಭಾರತದ ವಿದ್ವಾಂಸರಿಂದಲೂ ಧಕ್ಕೆಯಾಗಿದೆ. ಉದಾಹರಣೆಗೆ ನಮ್ಮ ಸಮಾಜ ವಿಜ್ಞಾನಿಗಳೂ ಮೂಲ ಸಂಶೋಧಕರಲ್ಲ. ಅವರು ಬದಲಾಗುವುದೂ ಇಲ್ಲ ಎಂದು ಕೆನಡಾ ದೇಶದ ಬ್ರಿಟಿಷ್ ಕೊಲಂಬಿಯಾ ವಿ.ವಿ. ಗೌರವ ಪ್ರಾಧ್ಯಾಪಕ, ವಿದ್ವಾಂಸ ಪ್ರೊ| ಅಶೋಕ್ ಅಕ್ಲೂಜಕರ ಬೆಟ್ಟು ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.