ಉಡುಪಿ: ಮೆಡಿಕಲ್ ಶಾಪ್ ಬಂದ್ ಮಾಡುವ ವೇಳೆಯಲ್ಲಿ ಬಂದ ಗ್ರಾಹಕರಿಂದ ಮಾಲಕನ ಮೇಲೆ ಹಲ್ಲೆ
Team Udayavani, May 11, 2021, 5:30 PM IST
ಸಾಂದರ್ಭಿಕ ಚಿತ್ರ
ಉಡುಪಿ: ಕೇಳಿದ ಸಮಯಕ್ಕೆ ಮಾತ್ರೆ ನೀಡದ ಮೆಡಿಕಲ್ ಶಾಪ್ ಮಾಲಕರ ಮೇಲೆ ವ್ಯಕ್ತಿಗಳಿಬ್ಬರು ಹಲ್ಲೆ ಮಾಡಿದ ಘಟನೆ ಸೋಮವಾರ ರಾತ್ರಿ ಉಡುಪಿಯಲ್ಲಿ ನಡೆದಿದೆ.
ಉಡುಪಿಯ ಕೊಡಂಕೂರಿನಲ್ಲಿ ಮೆಡಿಕಲ್ ಶಾಪ್ ವೊಂದನ್ನು ನಡೆಸುತ್ತಿರುವ ಪುಷ್ಪರಾಜ್ ಶೆಟ್ಟಿ ಸೋಮವಾರ ಸರ್ಕಾರದ ಆದೇಶದಂತೆ ರಾತ್ರಿ 8:00 ಗಂಟೆಯ ವೇಳೆಗೆ ಮೆಡಿಕಲ್ ಬಂದ್ ಮಾಡಲು ಹೊರಟಿದ್ದಾರೆ. ಈ ವೇಳೆಯಲ್ಲಿ ಹರೀಶ್ ಹಾಗೂ ಅವರ ಮಗ ಶಾಪ್ ಗೆ ಬಂದು ಬಿಪಿ ಮಾತ್ರೆಯನ್ನು ಕೇಳಿದ್ದಾರೆ. ಸಮಯ ಆಗಿದ್ದರಿಂದ ಶಾಪ್ ಮುಚ್ಚಲು ಹೊರಟ್ಟಿದ್ದ ಪುಷ್ಪರಾಜ್ ಶೆಟ್ಟಿ ನಾಳೆ ಬೆಳಿಗ್ಗೆ ಕೊಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ : ಕೋವಿಡ್ ಸೋಂಕಿತರಿಗೆ ಉಚಿತ ಆ್ಯಂಬುಲೆನ್ಸ್ ಸೇವೆ ನೀಡಲು ಮುಂದಾದ ಫಾಲ್ಕನ್ ಕ್ಲಬ್
ಇದನ್ನು ಕೇಳದ ಗ್ರಾಹಕರು ಮಾತಿಗೆ ಮಾತು ಬೆಳೆಸಿ, ಮಾಲಕರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಹರೀಶ್ ಹಾಗೂ ಅವರ ಮಗ ಕೈಯಿಂದ ಪುಷ್ಪರಾಜ್ ಶೆಟ್ಟಿ ಮೇಲೆ ಹಲ್ಲೆ ಮಾಡಿದ್ದು, ಹಲ್ಲೆಯಿಂದ ಪುಷ್ಪರಾಜ್ ಮುಖಕ್ಕೆ, ಕಣ್ಣಿನ ಕೆಳಗೆ ಗಾಯವಾಗಿದೆ. ಇಷ್ಟು ಮಾತ್ರವಲ್ಲದೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Central Office: 49 ಹೊಸ ತಾಲೂಕಿಗೆ “ಪ್ರಜಾ ಸೌಧ’ ಸಂಕೀರ್ಣ ಯಾವಾಗ?
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ. ಅಪೇಕ್ಷಿತ ಆರ್ಥಿಕ ನೆರವು ಲಭ್ಯ.
ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ
Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ
Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.