ಕಟ್ ಬೆಲ್ತೂರು ನೀರಿಗಾಗಿ ನೂರು ಬಾವಿ..!
ವ್ಯವಸ್ಥಿತ ನೀರು ಪೂರೈಕೆಗೆ ಪಂಚಾಯತ್ ಹರಸಾಹಸ
Team Udayavani, Apr 27, 2019, 2:17 PM IST
.ಲಕ್ಷ್ಮಿ ಮೆಚ್ಚಿನ
ಕುಂದಾಪುರ, ಎ. 26: ಇಲ್ಲಿನ ಮನೆಗಳಲ್ಲಿ ಯಾರಾದರೂ ಒಬ್ಬರು ಇರಲೇ ಬೇಕು. ಮದುವೆ-ಮುಂಜಿ ಎಂದು ಎಲ್ಲರೂ ಮನೆಬಿಟ್ಟುಹೋಗುವಂತಿಲ್ಲ. ಏಕೆಂದರೆ ನಳ್ಳಿಯಲ್ಲಿ ನೀರು ಯಾವಾಗ ಬರುತ್ತದೆ ಎಂದು ಗೊತ್ತಿಲ್ಲ. ಹಿಡಿದಿಡಲು ಜನ ಬೇಕಲ್ಲ ಎಂದು ಪ್ರಶ್ನಿಸಿದರು ಕಟ್ ಬೆಲ್ತೂರು ಮುಳುಕುಂಟದ ಗಿರಿಜಾ.
ಕುಡಿಯುವ ನೀರಿನ ಸಮಸ್ಯೆ ಕುರಿತ ವರದಿಗೆ ತೆರಳಿದಾಗ ನೀರಿನ ಅಭಾವದ ದರ್ಶನವಾಗಿದೆ. ಇಲ್ಲಿನ ಜನರಿಗೆ ನೀರಿಲ್ಲ. ನೀರು ಕೊಡಬೇಕೆಂದು ಪಂಚಾಯತ್‌ಗೆ ಇದ್ದರೂ ಕೊಡಲು ನೀರಿಲ್ಲ,ಮನೆಗಳಲ್ಲಿ ಪಾತ್ರೆ, ಪಗಡೆಗಳಲ್ಲಿ ನೀರನ್ನು ಸಂಗ್ರಹಿಸಿಡಲಾಗಿದೆ.
ನಳ್ಳಿಯಲ್ಲಿ ಕೊರತೆ:
ನಳ್ಳಿಯಲ್ಲಿ ನಾಲ್ಕೈದು ದಿನಕ್ಕೊಮ್ಮೆ ನೀರುಬರುತ್ತದೆ. ಆದರೆ ಕೆಂಪು ಬಣ್ಣ. ಕೈಪಂಪ್ ಹೊಡೆಯಲು ಆಗುತ್ತಿಲ್ಲ ಎಂಬುದು ಗೌರಿ ಅವರ ಅಳಲು. ಈ ಪ್ರದೇಶದಲ್ಲಿ ಸುಮಾರು 20ಕ್ಕಿಂತ ಹೆಚ್ಚು ಮನೆಗಳಿವೆ. ಯಾವ ಮನೆಯಲ್ಲೂ ಬಾವಿಯಿಲ್ಲ. ಕೈಪಂಪಿನ ಸಾರ್ವಜನಿಕ ಕೊಳವೆಬಾವಿಯಿದೆ. ಆದರೆ ಅದರ ಕಟ್ಟೆ ಸರಿಯಾಗಿರದ ಕಾರಣ ಅಲ್ಲಿ ನಿಂತು ನೀರು ಎತ್ತಲು ಆಗುತ್ತಿಲ್ಲ ಎನ್ನುವ ದೂರು ಎಲ್ಲರದ್ದೂ.ಬಳಗಾರಕೇರಿಯ ಬಾವಿಗಳಿಂದ ನೀರು ತರಬೇಕಾಗುತ್ತದೆ. ಪಂಚಾಯತ್‌ನಲ್ಲೇ ನೀರಿನ ಮೂಲ ಇಲ್ಲದ ಕಾರಣ ಅವರು ಮೂರು ನಾಲ್ಕು ದಿನಕ್ಕೊಮ್ಮೆ ಕೊಡುವ ನೀರು ಸಾಲುವುದಿಲ್ಲ. ನೀರಿರುವಾಗಸರಿಯಾಗಿ ಕೊಡುತ್ತಿದ್ದರು. ಈಗ ನೀರೇ ಕಡಿಮೆ ಇರುವ ಕಾರಣ ನಳ್ಳಿಯಲ್ಲಿಯೂ ಕಡಿಮೆಯಾಗಿದೆ.ಹಾಗಾಗಿ ಕೊಟ್ಟ ನೀರನ್ನು ಜೋಪಾನವಾಗಿಟ್ಟು ಖರ್ಚು ಮಾಡುತ್ತಿದ್ದೇವೆ ಎನ್ನುತ್ತಾರೆ ಪದ್ಮಾವತಿ.
ಸಮಸ್ಯೆ:
ದೇವಲ್‌ಕುಂದ ಮತ್ತು ಕಟ್ ಬೆಲ್ತೂರ್ ಗ್ರಾಮ ಗಳೆರಡೂ ಸೇರಿ ಕಟ್‌ಬೆಲೂ¤ರು ಗ್ರಾ.ಪಂ. ಆಗಿದ್ದು
ಒಟ್ಟು 4,900 ಜನಸಂಖ್ಯೆಯಿದೆ. ಕಳೆದ ಬಾರಿ ಬೇಸಗೆ ಬೇಗೆ ಬಾಧಿಸಿದ್ದು ಮಾರ್ಚ್ ತಿಂಗಳಿನಲ್ಲಿ.ಸುಳ್ಸೆ ಕ್ರಾಸ್ ಸುಳ್ಸೆ ಕೆಳೆಗೆ ದೇವಲ್ಕುಂದದ ಬಾಳಿಕೆರೆ, ಬೆಳ್ಳಿಬೆಳಕು, ಜಾಡಿ, ಮುಳ್ಳುಂಜ ಮೊದಲಾದೆಡೆಗೆ ಟ್ಯಾಂಕರ್ ನೀರು ವಿತರಿಸಲಾಗಿತ್ತು. ಆದರೆ ಈ ಬಾರಿ ಫೆಬ್ರವರಿ ತಿಂಗಳಲ್ಲೇ ಬೇಸಗೆ ಬಿಸಿ ತಟ್ಟಿದೆ. ಕುಡಿಯಲು ಸರಬರಾಜು ಮಾಡಲು ನೀರಿಲ್ಲ. ಇದ್ದ ಬಾವಿ ಹಾಗೂ ಕೊಳವೆಬಾವಿಗಳೂ ನೀರಾರಿಸಿಕೊಂಡಿವೆ.
ಬಾವಿಯಲ್ಲಿ ಕೆಸರು ಕಾಣುವಷ್ಟು ನೀರು ತಳಮುಟ್ಟಿದೆ. ಕೊಳವೆಬಾವಿಯಲ್ಲೂ ಅಗತ್ಯವಿದ್ದಷ್ಟು ನೀರಿಲ್ಲ.
ಕೈ ಕಟ್ಟಿ ಕೂರದ ಪಂಚಾಯತ್ ಆಡಳಿತ:ಪಂಚಾಯತ್ ಆಡಳಿತ ಕೈ ಕಟ್ಟಿ ಕೂರದೇ ಜನರಿಗೆ ನೀರು ಒದಗಿಸಲು ಕಟ್ ಬೆಲ್ತೂರ್ ಗ್ರಾಮದ ಆಚಾರ್‌ಕೇರಿ ಎಂಬಲ್ಲಿ ತೆರೆದ ಬಾವಿ, ಕಟ್‌ಬೆಲೂ¤ರಿನ ಹರೆಗೋಡಿನ ಕಂಚಾಡಿಯಲ್ಲಿ ಕಾಲನಿಗಳಿಗೆ ನೀರುಒದಗಿಸಲು ತೆರೆದ ಬಾವಿ, ಹರೆಗೋಡು ಕೊತ್ತಾಡಿ ಯಲ್ಲಿ ಕಾಲನಿಗೆ ನೀರೊದಗಿಸಲು ತೆರೆದಬಾವಿ, ಪಟ್ಟೆವಿನಾಯಕ ದೇವಸ್ಥಾನದ ಬಳಿ ಕೊಳವೆಬಾವಿ ರಚನೆ, ದೇವಲ್ಕುಂದ ಗ್ರಾಮದಲ್ಲಿ ಬಾವಿ ಅಭಿವೃದ್ಧಿ ಮಾಡಲು
ಕ್ರಿಯಾಯೋಜನೆ ಕಳುಹಿಸಿದೆ. ಅಲ್ಲ ತುರ್ತಾಗಿ ಬೆಲ್ತೂರಿನ ಸುಳ್ಸೆ ಕ್ರಾಸ್,ದೇವಲ್ಕುಂದದ ಬಾಳಿಕೆರೆಯಲ್ಲಿ ಕೊಳವೆ ಬಾವಿ ಕೊರೆಸಿಕೊಡುವಂತೆ ಪಂಚಾಯತ್ ವತಿಯಿಂದ ತಾಲೂಕು ಆಡಳಿತಕ್ಕೆ ಮನವಿ ಮಾಡಲಾಗಿದೆ. ಇದು ಸಾಕಾಗುವುದಿಲ್ಲ; ಬಾಳಿಕೆರೆಗೆ ಇನ್ನೆರಡು ಕೊಳವೆಬಾವಿ ಕೊರೆಸಿದರೆ ತಕ್ಕಮಟ್ಟಿಗೆ ಸಮಸ್ಯೆ ಸುಧಾರಣೆಯಾದೀತು.
ನೂರು ಬಾವಿ ರಚನೆ:
ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮದಲ್ಲಿ ನೂರು ಬಾವಿ ತೋಡಿಸಲಾಗಿದೆ. ಜನರಿಗೆ ಬಾವಿ ತೋಡಲು ಪ್ರೋತ್ಸಾಹ ನೀಡಲಾಗಿದ್ದು ಮುಂದೆ ಬಂದವರಿಗೆ ಉದ್ಯೋಗಖಾತ್ರಿ ಅನುದಾನ ನೀಡಲಾಗಿದೆ. ಅನೇಕರು ಟ್ಯಾಂಕರ್ ನೀರು ಕುಡಿಯಲು ಯೋಗ್ಯವಿಲ್ಲ ಎಂದು ಆಪಾದಿಸುವ ಕಾರಣ ಸಾಧ್ಯವಾದಷ್ಟು ಮಂದಿ ಬಾವಿ ತೋಡಿಸಿ ಎಂದು ಪಂಚಾಯತ್ ಮುತುವರ್ಜಿ ವಹಿಸಿ ಮನವೊಲಿಸಿದೆ. ಎರಡು ಕೊಳವೆಬಾವಿಗಳಲ್ಲಷ್ಟೇ ನೀರು ದೊರೆತಿದೆ. ಸರಕಾರದ ವತಿಯಿಂದ ನಾಣ್ಯ ಹಾಕಿ ನೀರು ಪಡೆಯುವ ಶುದ್ಧ ನೀರಿನ ಘಟಕ ಪಂಚಾಯತ್
ಸಮೀಪವೇ ಇದ್ದು ಸಾರ್ವಜನಿಕರು ಹಾಗೂ ಕೊಲ್ಲೂರಿಗೆ ಹೋಗುವ ಯಾತ್ರಿಕರು ಅದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ.
ವಾರ್ಡ್ ಜನರ ಬೇಡಿಕೆಗಳು:
>ಎರಡು ದಿನಕ್ಕೊಮ್ಮೆ ನೀರುಕೊಡಬೇಕು
>ಕನಿಷ್ಟ ಮುಕ್ಕಾಲು ಗಂಟೆ ನೀರು ಕೊಡಬೇಕು
>ನೀರು ಬಿಡುವ ಸಮಯ ನಿಗದಿಯಾಗಬೇಕು
>ಶಾಶ್ವತ ನೀರಿಗೆ ವ್ಯವಸ್ಥೆಯಾಗಬೇಕು
ನೀರಿನ ತೀವ್ರ ಸಮಸ್ಯೆಇದ್ದಲ್ಲಿ
ತಮ್ಮ ಹೆಸರಿನ ಸಹಿತ
“ಉದಯವಾಣಿ’ ವಾಟ್ಸಪ್ ನಂಬರ್
9148594259 ಬರೆದು
ಕಳುಹಿಸಿ.
ಮಾಹಿತಿ ನೀಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.