Cyber ​​Crime: ಅತಿ ಆಸೆಯೇ ಈ ದುಃಖಕ್ಕೆ ಪರಮ ಮೂಲ


Team Udayavani, Jan 14, 2025, 7:25 AM IST

Cyber ​​Crime: ಅತಿ ಆಸೆಯೇ ಈ ದುಃಖಕ್ಕೆ ಪರಮ ಮೂಲ Cyber ​​Crime: ಅತಿ ಆಸೆಯೇ ಈ ದುಃಖಕ್ಕೆ ಪರಮ ಮೂಲ

ಹಲವು ಸೈಬರ್‌ ಅಪರಾಧ ಪ್ರಸಂಗಗಳನ್ನು ಕಂಡಾಗ ನೆನಪಾಗುವ ಒಂದು ಮಾತು ಭಗವಾನ್‌ ಗೌತಮ ಬುದ್ಧನದ್ದು. ಆಸೆಯೇ ದುಃಖಕ್ಕೆ ಮೂಲ ಎಂಬ ಮಾತು ಬಹುತೇಕ ಸೈಬರ್‌ ವಂಚನೆ ಪ್ರಕರ ಣಗಳಲ್ಲಿ ಪರಮ ಸತ್ಯವಾದುದು. ಯಾಕೆಂದರೆ ಒಂದಕ್ಕಿಂತ ಎರಡರಷ್ಟೋ, ಹತ್ತರಷ್ಟೋ ಸಿಗುತ್ತದೆಂಬ ಆಸೆಯಿಂದಲೇ ಇಂಥ ಖೆಡ್ಡಾ ಗಳಿಗೆ ಬೀಳುತ್ತೇವೆ ಎನ್ನುತ್ತಾರೆ ಸೈಬರ್‌ಪರಿಣಿತರು.

ಉಡುಪಿ: ನಿತ್ಯವೂ ನಡೆಯುತ್ತಿರುವ ಸೈಬರ್‌ ಅಪರಾಧ ಪ್ರಕರಣಗಳ ಹಿನ್ನೆಲೆ ಬೆಂಬತ್ತಿ ಹೋದರೆ ಕಾಣ ಸಿಗುವ ಉತ್ತರವೆಂದರೆ ನಮ್ಮ ಅವಸರ, ಅನಗತ್ಯ ಆತಂಕ ಹಾಗೂ ಸಾಮಾನ್ಯ ಜಾ°ನದ ಕೊರತೆ.

ಸೈಬರ್‌ ಪರಿಣಿತರೂ ಹೇಳುವ ಸಲಹೆಯೊಂದೇ. “ನೀವೇ, ಅನಗತ್ಯವಾಗಿ ನಿಮ್ಮ ಮಾಹಿತಿಯನ್ನು ಸೋರಿಕೆ ಮಾಡದಿರಿ. ಅನಗತ್ಯ ಆತಂಕಗೊಳ್ಳದಿರಿ. ವಿಶೇಷ ಜಾ°ನ ಬೇಡ, ಸಾಮಾನ್ಯ ಜಾ°ನ ಬಳಸಿ’. ಇಷ್ಟು ಬಳಸಿದರೆ ಈ ಸೈಬರ್‌ ಕಗ್ಗಂಟನ್ನು ಬಹಳ ಸುಲಭವಾಗಿ ಬಿಡಿಸಬಹುದು. ಇದರೊಂದಿಗೆ ಮತ್ತೂಬ್ಬ ಪರಿಣಿತರ ಒಂದು ಸಲಹೆ ಇದೆ. ಇದು ಯಾವುದೋ ಧಾರ್ಮಿಕ ಮುಖಂಡರು ನೀಡಿದಂಥ ಸಲಹೆಯಲ್ಲ. ಸೈಬರ್‌ ಪರಿಣಿತರದ್ದೇ ಸಲಹೆ. ಏನೆಂದರೆ “ಅತಿಯಾದ ದುರಾಸೆ ಪಡಬೇಡಿ’. ಇಷ್ಟು ಸೂತ್ರಗಳನ್ನು ನಾವು ಅಳವಡಿಸಿಕೊಂಡರೆ ಸೈಬರ್‌ ವಂಚಕರನ್ನು ನಾವೇ ಬೇಸ್ತು ಬೀಳಿಸಬಹುದು.

ಕೀಳರಿಮೆ ಬೇಡ
ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಿದಂತೆ ವಿಭಿನ್ನ ರೀತಿಯ ತಂತ್ರಜ್ಞಾನಗಳೂ ಫೋನ್‌ಗಳಲ್ಲಿ ಬಂದಿದ್ದು, ಇವುಗಳ ಬಳಕೆಯ ಸಂದರ್ಭದಲ್ಲಿ ಗ್ರಾಹಕರು ಎಚ್ಚರಿಕೆಯ ಹೆಜ್ಜೆ ಇರಿಸುವುದು ಅತೀ ಅಗತ್ಯ. ಇಲ್ಲದಿದ್ದರೆ ಸೈಬರ್‌ ವಂಚಕರ ಬಲೆಗೆ ಬೀಳುವುದು ಗ್ಯಾರಂಟಿ ಎಂಬಂತಾಗಿದೆ.

ಬೆಳಗಿನ ಚಹಾದಿಂದ ಚಹಾದಿಂದ ರಾತ್ರಿಯ ಊಟದವರೆಗೂ ಈಗ ಆನ್‌ಲೈನ್‌ ಪೇಮೆಂಟ್‌. ಆ ಪೇ, ಈ ಪೇ ಎಂಬ ನಾನಾ ರೀತಿಯ ಆನ್‌ಲೈನ್‌ ಪೇಮೆಂಟ್‌ ಗಳ ಥರ್ಡ್‌ ಪಾರ್ಟಿ ಆ್ಯಪ್‌ ಗಳನ್ನು ನಾವು ನಮ್ಮ ಮೊಬೈಲಿನಲ್ಲಿ ಹೊಂದಿರದಿದ್ದರೆ ಸ್ನೇಹಿತರ ಎದುರು ಏನೋ ಒಂದು ರೀತಿಯ ಕೀಳರಿಮೆ.

“ಏನು, ಗೂಗಲ್‌ ಪೇ ಇಲ್ಲವಾ? ಫೋನ್‌ ಪೇ ನೂ ಇಲ್ಲವಾ?’ ಎಂದು ಸ್ನೇಹಿತರು ಕೇಳಿದ ಕೂಡಲೇ “ಅಯ್ಯೋ, ಇಲ್ಲ. ಹಾಕಿಕೊಳ್ಳಬೇಕು’ ಎಂದು ದನಿ ಸಣ್ಣಗೆ ಮಾಡಿಕೊಳ್ಳಬೇಕಿಲ್ಲ. ನಮಗೆ ಸುರಕ್ಷಿತವಾಗಿ ಈ ಪೇಮೆಂಟ್‌ ಆ್ಯಪ್‌ ಗಳನ್ನು ಬಳಸಲು ಬರುವುದಿದ್ದರೆ ಬಳಸಿ. ಒಂದುವೇಳೆ ಸೀಮಿತವಾಗಿ ಬಳಸುವುದಿದ್ದರೂ ನೀವು ಕಲಿತಷ್ಟು, ಅರಿತಷ್ಟೇ ಬಳಸಿ. ಗೊತ್ತಿಲ್ಲದ್ದನ್ನೂ “ಹೀಗಿರಬಹುದು’ ಎಂದು ಅಂದುಕೊಂಡು ಏನು ಮಾಡಬೇಡಿ. ಆ ಬದಿಯಲ್ಲಿ ಗಾಳ ಹಾಕಿಕೊಂಡು ಕುಳಿತ ಸೈಬರ್‌ ವಂಚಕರು ತಮ್ಮತ್ತ ನಮ್ಮ ಖಾತೆಯಲ್ಲಿನ ಹಣವನ್ನು ಎಳೆದುಕೊಂಡುಬಿಡುತ್ತಾರೆ, ಎಚ್ಚರವಿರಲಿ. ಹಾಗಾಗಿ ಅತಿಯಾದ ಆನ್‌ಲೈನ್‌ ವ್ಯವಹಾರಗಳಿಂದಲೂ ಸೈಬರ್‌ ವಂಚಕರು ನಮ್ಮ ಖಾತೆಗೆ ಕನ್ನಹಾಕಬಹುದು.

ಕೆಲವು ಕ್ಷಣದಲ್ಲಿ ಹಣ ಮಾಯ
ವಿದೇಶ ಸಹಿತ ಉತ್ತರ ಭಾರತದಲ್ಲಿ ಐಟಿ-ಬಿಟಿ ಹೆಸರಿನಲ್ಲಿ ನಕಲಿ ಕಂಪೆನಿಗಳು ಕಾರ್ಯಾಚರಣೆ ಮಾಡುತ್ತಿದ್ದು, ವ್ಯವಸ್ಥಿತವಾಗಿ ದಕ್ಷಿಣ ಭಾರತದವರನ್ನು ಗುರಿಯಾಗಿಸಿಕೊಂಡು ಹಣ ಲೂಟಿ ಮಾಡುತ್ತಿದ್ದಾರೆ. ಜಸ್ಟ್‌ ಡಯಲ್‌ ಸಹಿತ ಇತರ ಮೂಲಗಳಿಂದ ಮೊಬೈಲ್‌ ಸಂಖ್ಯೆ ಗಳನ್ನು ಸಂಗ್ರಹಿಸಿ ಲಿಂಕ್‌ಗಳನ್ನು ರವಾನಿಸ ಲಾಗುತ್ತದೆ. ಕರೆಗಳನ್ನು ಮಾಡಿ ದಾರಿ ತಪ್ಪಿಸಿ ಹಣ ದೋಚುವ ಖದೀಮರಿದ್ದಾರೆ. ಕೆಲವೇ ಕ್ಷಣದಲ್ಲಿ ನಮ್ಮ ಖಾತೆಯಲ್ಲಿದ್ದ ಸಾವಿರ, ಲಕ್ಷ, ಕೋಟಿಗಳು ಮಂಗಮಾಯವಾದ ದೂರುಗಳು ಜಿಲ್ಲೆಯ ಹಲವೆಡೆ ದಾಖಲಾಗಿರುವುದು ಇದಕ್ಕೆ ನಿದರ್ಶನ.

ಮಾರು ಹೋಗುವುದೇಕೆ?
ಸೈಬರ್‌ ವಂಚನೆಯ ಬಗ್ಗೆ ಪ್ರತಿಯೊಬ್ಬರಿಗೂ ಇರುವ ಜ್ಞಾನ ಅಲ್ಪ ಮಾತ್ರ. ಕೆಲವು ಆ್ಯಪ್‌ಗ್ಳನ್ನು ಡೌನ್‌ಲೋಡ್‌ ಮಾಡಿದರೆ ಅಕೌಂಟ್‌ನಲ್ಲಿರುವ ಹಣ ಕಡಿತವಾಗುತ್ತದೆ ಎಂಬ ಕಲ್ಪನೆಯೇ ಈಗಲೂ ಹಲವಾರು ಮಂದಿಯಲ್ಲಿದೆ. ಆದರೆ ವಾಸ್ತವ ಹಾಗಲ್ಲ. ಸ್ವಲ್ಪ ಎಚ್ಚರ ತಪ್ಪಿದರೂ ನಮ್ಮ ಖಾತೆಯಿಂದ ಯಾರೋ ಹಣ ಲಪಟಾಯಿಸಬಹುದು. ಈ ನಿಟ್ಟಿನಲ್ಲಿ ಆನ್‌ಲೈನ್‌ ವ್ಯವಹಾರ, ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಇತ್ಯಾದಿ ಯಾವುದೇ ಅನಾಮಧೇಯ ಲಿಂಕ್‌ಗಳನ್ನು ಕ್ಲಿಕ್‌ ಮಾಡುವ ಮುನ್ನ ಎಚ್ಚರ ವಹಿಸುವುದು ಅತೀ ಅಗತ್ಯ ಎನ್ನುತ್ತಾರೆ ಪೊಲೀಸರು.

ಷೇರು ಮಾರುಕಟ್ಟೆ
ಹೂಡಿಕೆಯೆಂಬ ದೊಡ್ಡ ಖೆಡ್ಡಾ
ಷೇರು ಮಾರುಕಟ್ಟೆಯ ಬಗ್ಗೆ ಈಗ ವಿದ್ಯಾರ್ಥಿಗಳಿಂದ ಹಿರಿಯ ನಾಗರಿಕರವರೆಗೂ ಅತೀವ ಆಸಕ್ತಿ. ಯಾವುದೇ ವ್ಯವಹಾರಕ್ಕೆ ಸಂಬಂಧಿಸಿದಂತೆ ಗೂಗಲ್‌ನಲ್ಲಿ ಒಂದು ಬಾರಿ ಸರ್ಚ್‌ ಮಾಡಿದರೆ ಅದಕ್ಕೆ ಸಂಬಂಧಿಸಿದ ಹಲವು ಲಿಂಕ್‌ಗಳನ್ನು ಕಾಣ ಬಹುದು. ಇತ್ತೀಚೆಗೆ ಜಿಲ್ಲೆಯ ಉಪನ್ಯಾಸಕ ರೊಬ್ಬರು ಷೇರುಮಾರುಕಟ್ಟೆಯ ಆಸೆಗೆ ಬಿದ್ದು 40 ಲ.ರೂ.ಗೂ ಅಧಿಕ ಹಣವನ್ನು ಕಳೆದುಕೊಂಡರು.

ಮೊದಲಿಗೆ ವಾಟ್ಸಾಪ್‌ ಗ್ರೂಪ್‌ ರಚಿಸಿದ ವಂಚಕರು ಅದಕ್ಕೆ ಇವರನ್ನು ಸೇರ್ಪಡೆ ಮಾಡಿ ದಿನನಿತ್ಯ ಲಾಭ ಬರುವ ಬಗ್ಗೆ ತಿಳಿಸಿದ್ದರು. ಕೆಲವು ದಿನಗಳ ಕಾಲ ಆ ಗ್ರೂಪ್‌ ಅನ್ನು ಗಮನಿಸುತ್ತಿದ್ದ ಉಪನ್ಯಾಸಕರು ಅನಂತರ ಹಣ ಹೂಡಿಕೆ ಮಾಡ ತೊಡಗಿದರು. ದಿನಂಪ್ರತಿ ಸಾವಿರಾರು ರೂ.ಹೂಡಿಕೆ ಮಾಡಿದರು. ಮೊದಲಿಗೆ ಶೇ.10ರಷ್ಟು ಲಾಭಾಂಶ ಅವರು ಷೇರು ಖಾತೆಗೆ ಬಂದಿತು. ಬಳಿಕ ವಂಚಕರು 25 ಲ.ರೂ. ಹಾಗೂ 50 ಲ.ರೂ.ಗೂ ಅಧಿಕ ಹೂಡಿಕೆ ಮಾಡಿದರೆ ಶೇ.50 ಹಾಗೂ ದುಪ್ಪಟ್ಟು ಹಣ ನೀಡುವ ಆಮಿಷವೊಡ್ಡಿದ್ದರು.

ಈ ಮಧ್ಯೆ ದೈನಂದಿನ ಆಟಕ್ಕೆ ಸಾಲ ಸೌಲಭ್ಯ ಒದಗಿಸುವುದಾಗಿಯೂ ತಿಳಿಸಿದ್ದರು. ಇದನ್ನು ನಂಬಿದ ಅವರು ಹಣ ಹೂಡಿಕೆ ನಿಲ್ಲಿಸಲಿಲ್ಲ. ಆದರೆ ಸಾಲ ವಸೂಲಾತಿ ನೆಪದಲ್ಲಿ ಇವರ ಖಾತೆಯಲ್ಲಿದ್ದ ಹಣ ಅಷ್ಟೇ ವೇಗವಾಗಿ ಕಡಿಮೆಯಾಯಿತು.
ಆಯ್ಕೆಯೂ ಇರಲಿಲ್ಲ. ತಾನು ಮೋಸ ಹೋಗಿದ್ದೇನೆ ಎಂಬ ಬಗ್ಗೆ ಮನವರಿಕೆಯಾಗಿ ಕೂಡಲೇ ಸೈಬರ್‌ ಠಾಣೆಗೆ ತೆರಳಿ ಅವರು ದೂರು ನೀಡಿದರು. ಈ ಪೈಕಿ ಸುಮಾರು 2 ಲ.ರೂ.ಗಳನ್ನು ಪೊಲೀಸರು ತಡೆಹಿಡಿದಿರುವುದಾಗಿ ತಿಳಿಸಿದ್ದು, ಉಳಿದ ಹಣದ ಮೂಲ ಪತ್ತೆಯ ಬಳಿಕವಷ್ಟೇ ಏನಾಯಿತೆಂಬ ವಿಷಯ ಬಹಿರಂಗಗೊಳ್ಳಬೇಕಿದೆ.

ಮೂಲ ಪತ್ತೆಯ ಸವಾಲು
ಜಿಲ್ಲೆಯಲ್ಲಿ ಈ ವರ್ಷ ನಡೆದ ಒಟ್ಟು 63 ಪ್ರಕರಣಗಳಲ್ಲಿ 13,22,30,534 ರೂ.ಗಳನ್ನು ಸಂತ್ರಸ್ತರು ಕಳೆದುಕೊಂಡಿದ್ದು, ಈ ಪೈಕಿ 35,57,705 ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪೈಕಿ ಸಂತ್ರಸ್ತರ ಖಾತೆಗಳಿಂದ ಹೋದ ಹಣದ ಮೂಲ ಪತ್ತೆಯೇ ಬ್ಯಾಂಕ್‌ನವರಿಗೆ ಸವಾಲಿನ ಕಾರ್ಯವಾಗಿದೆ. ಪಶ್ಚಿಮ ಬಂಗಾಳ, ಒರಿಸ್ಸಾ, ಬಿಹಾರ, ಹೊಸದಿಲ್ಲಿ ಹೀಗೆ ವಿವಿಧೆಡೆಗಳ ಲೊಕೇಷನ್‌ ಸಿಗುತ್ತಿದ್ದು, ಆ ಖಾತೆ ಯಾರ ಹೆಸರಿನಲ್ಲಿದೆ ಎಂಬ ಮಾಹಿತಿಗಳೇ ತಿಳಿದುಬಂದಿಲ್ಲ.

ಟಾಪ್ ನ್ಯೂಸ್

Rain: ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವೆಡೆ ಅಕಾಲಿಕ ಮಳೆ  

Rain: ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವೆಡೆ ಅಕಾಲಿಕ ಮಳೆ  

Sachin Panchal Case: Sankranti shock for accused including Raju Kapanura

Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್

KTR and BRS leaders are under house arrest

House arrest: ಮಾರಾಮಾರಿ ಪ್ರಕರಣ; ಕೆಟಿಆರ್‌ ಸೇರಿ ಬಿಆರೆಸ್‌ ಪ್ರಮುಖರ ಗೃಹ ಬಂಧನ

Pathanamthitta: 44 people arrested in the case of asault of a Dalit girl

Pathanamthitta: ದಲಿತ ಬಾಲಕಿಯ ಮೇಲೆ ದೌರ್ಜನ್ಯ ಪ್ರಕರಣದಲ್ಲಿ 44 ಜನರ ಬಂಧನ

I will welcome anyone from North Karnataka to become the Chief Minister: S.R. Patil

Hubli: ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾದರೆ ಸ್ವಾಗತಿಸುವೆ: ಎಸ್.ಆರ್.ಪಾಟೀಲ

7-tender-coconut

Tender Coconut: ಚಳಿಗಾಲದಲ್ಲಿ ಎಳನೀರು ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ….

Sagara-Beluru

Congress: ಪಕ್ಷದ ಶಾಸಕರು ಹೈಕಮಾಂಡ್ ಸೂಚನೆ ಪಾಲಿಸುವ ವಿಶ್ವಾಸವಿದೆ: ಬೇಳೂರು ಗೋಪಾಲಕೃಷ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain: ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವೆಡೆ ಅಕಾಲಿಕ ಮಳೆ  

Rain: ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವೆಡೆ ಅಕಾಲಿಕ ಮಳೆ  

6

Padubidri: ಇಲ್ಲಿ ದೊಂದಿಯೇ ಬೆಳಕು, ಮರಳೇ ಪ್ರಸಾದ!

sand 1

Mangaluru – ಕಾರ್ಕಳಕ್ಕೆ ಅಕ್ರಮ ಮರಳು ಸಾಗಾಟ

Udupi ಗೀತಾರ್ಥ ಚಿಂತನೆ-155: ಶೀತೋಷ್ಣಕ್ಕೂ ಸುಖದುಃಖಕ್ಕೂ ಸಂಬಂಧ

Udupi ಗೀತಾರ್ಥ ಚಿಂತನೆ-155: ಶೀತೋಷ್ಣಕ್ಕೂ ಸುಖದುಃಖಕ್ಕೂ ಸಂಬಂಧ

Brahmavar ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ

Brahmavar ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Rain: ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವೆಡೆ ಅಕಾಲಿಕ ಮಳೆ  

Rain: ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವೆಡೆ ಅಕಾಲಿಕ ಮಳೆ  

Sachin Panchal Case: Sankranti shock for accused including Raju Kapanura

Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್

KTR and BRS leaders are under house arrest

House arrest: ಮಾರಾಮಾರಿ ಪ್ರಕರಣ; ಕೆಟಿಆರ್‌ ಸೇರಿ ಬಿಆರೆಸ್‌ ಪ್ರಮುಖರ ಗೃಹ ಬಂಧನ

10-koratagere

Koratagere: ಸಂಕ್ರಾಂತಿ ಹಬ್ಬಕ್ಕೆ ಹಸುಗಳಿಗೆ ಪೂಜೆ

9-hospete

Hospete: ಮಕರ ಸಂಕ್ರಾತಿ: ಅಯ್ಯಪ್ಪನಿಗೆ ವಿಶೇಷ ಪೂಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.