Cyber Crime : ರೂಪ ಬದಲಾಯಿತು ಗಾಳ ದೊಡ್ಡದಾಯಿತು


Team Udayavani, Jan 11, 2025, 7:30 AM IST

Cyber Crime : ರೂಪ ಬದಲಾಯಿತು ಗಾಳ ದೊಡ್ಡದಾಯಿತು

ಸೈಬರ್‌ ವಂಚಕರ ರೂಪವೇ ತಿಳಿಯುತ್ತಿಲ್ಲ.ಒಂದಕ್ಕೆ ಪರಿಹಾರ ಹುಡುಕಿಕೊಂಡರೆ ವಂಚಕರು ಮೂರು ಹೊಸ ಪ್ರಯತ್ನಗಳಿಂದ ನಮ್ಮೆದುರು ಧುತ್ತನೆ ಹಾಜರಾಗುತ್ತಾರೆ. ಇದಕ್ಕೆ ಜಾಗೃತಿಯೇ ಮದ್ದು.

ಉಡುಪಿ: ಈಗ ಸೈಬರ್‌ ವಂಚಕರ ಉಪಟಳ ಹೆಚ್ಚಾಗಿದೆ. ದಿನಕ್ಕೊಂದು ರೂಪ. ಮೊದಮೊದಲು ಫೋನ್‌ ಮಾಡಿಯೋ, ಒಟಿಪಿ ಕೇಳಿಯೋ ವಂಚಿಸಲಾಗುತ್ತಿತ್ತು. ಈಗ ದುಪ್ಪಟ್ಟು ಲಾಭ ನೀಡುವುದಾಗಿ ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ ಮೋಸಗೊಳಿಸುವ ಜಾಲ ಒಂದೆಡೆ, ಡಿಜಿಟಲ್‌ ಅರೆಸ್ಟ್‌ ಎನ್ನುವ ಮೋಸ ಮತ್ತೂಂದೆಡೆ. ಅಧರ ಮಧ್ಯೆ ಟೆಲಿಕಾಂ ವಿಭಾಗ ಎಂದುಕೊಂಡು ಫೋನ್‌ಕಾಲ್‌ಗ‌ಳ ಮೂಲಕ ಅಗತ್ಯ ಮಾಹಿತಿ ಪಡೆದು ವಂಚಿಸುವುದು ಹೆಚ್ಚಾಗಿದೆ.

ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌, ಟೆಲಿಗ್ರಾಂ ಸಹಿತ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಲಿಂಕ್‌ ಒತ್ತುವಂತೆ ಹೇಳಿದ್ದಕ್ಕೆ, ಒತ್ತಿ ಹಣ ಕಳೆದುಕೊಳ್ಳುವ ಪ್ರಸಂಗಗಳಿಗೆ ಕೊರತೆ ಇಲ್ಲ. ಒಂದು ರೂಪಕ್ಕೆ ಸೈಬರ್‌ ಕಡಿವಾಣ ಹಾಕುತ್ತಿದ್ದಂತೆ, ವಂಚಕರು ಹೊಸ ರೂಪ ಹುಡುಕು ತ್ತಾರೆ. ಅದು ವಿಫ‌ಲವಾದರೆ ಮತ್ತೊಂದು ಮಾರ್ಗ.

ವಾಟ್ಸ್‌ ಆ್ಯಪ್‌ ವಿಡಿಯೋ ಕಾಲ್‌ ಮೂಲಕ ಕರೆ ಮಾಡಿ ಯಾರಧ್ದೋ ನಗ್ನ ಚಿತ್ರಕ್ಕೆ ಇನ್ಯಾರಧ್ದೋ ಮುಖ ಸೇರಿಸಿ ಬ್ಲಾಕ್‌ವೆುçಲ್‌ ಮಾಡುವುದಿತ್ತು. ಈಗ ಕೊಂಚ ಕಡಿಮೆ. ಈಗ ಉನ್ನತ ಅಧಿಕಾರಿಗಳು, ಟೆಲಿಕಾಂ ಕಂಪೆನಿ, ವಿಮಾನ ನಿಲ್ದಾಣದ ಭದ್ರತಾ ಸಿಬಂದಿ, ಸೆಕ್ಯೂರಿಟಿ ಫೋರ್ಸ್‌ ಹೀಗೆ ಹಲವರ ಹೆಸರಿನಲ್ಲಿ ವಂಚನೆ ನಡೆಯುತ್ತಿದೆ.

ವಂಚಕರ ಕರೆ ಸ್ವೀಕರಿಸುವ ಮೊದಲು ಎಚ್ಚರ ವಹಿಸಬೇಕು. ಯಾವುದೇ ಅಪರಿಚಿತ ಸಂಖ್ಯೆ ಯಿಂದ ಕರೆಬಂದರೆ ಒಂದು ನಿಮಿಷ ಯೋಚನೆ ಮಾಡಿ ಉತ್ತರ ನೀಡಬೇಕು. ಅದೇ ಆ ಗಳಿಗೆಯಲ್ಲಿ ನಾವು ಕೈಗೊಳ್ಳಬೇಕಾದ ಶ್ರೇಷ್ಠ ನಿರ್ಧಾರ. ಯಾವುದೇ ವೈಯಕ್ತಿಕ ದಾಖಲೆ ಕೇಳಿದರೆ ಪೂರ್ವಾಪರ ಯೋಚಿಸದೇ ಕಳುಹಿಸಬಾರದು. ಫೋನ್‌ ಕರೆ ಅಥವಾ ಆನ್‌ಲೈನ್‌ ಸಂದೇಶ ಇತ್ಯಾದಿ ಬಗ್ಗೆ ಆರಂಭದಲ್ಲೇ ಎಚ್ಚರ ವಹಿಸುವುದು ಸೂಕ್ತ.

ಉಡುಪಿ ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ ಸೈಬರ್‌ ಕ್ರೈಂ ವಿಷಯವಾಗಿ 63 ಪ್ರಕರಣ ದಾಖಲಾ ಗಿವೆ. ಇದರಲ್ಲಿ ಅತಿ ಹೆಚ್ಚೆಂದರೆ ಇನ್‌ವೆಸ್ಟ್‌ ಮೆಂಟ್‌ ಫ್ರಾಡ್‌-33. ಏಕಾಏಕಿ ಹಣ ದುಪ್ಪಟ್ಟು ಮಾಡುವ ಆಮಿಷ. ಅಂದರೆ ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ 100 ರೂ. ಹೂಡಿಕೆ ಮಾಡಿದರೆ 200 ರೂ. ಕೊಡುತ್ತೇವೆ.

5 ಸಾವಿರ ಹೂಡಿಕೆ ಮಾಡಿದರೆ 10 ಸಾವಿರ ನೀಡುತ್ತೇವೆ. 1 ಲಕ್ಷ ಹೂಡಿಕೆ ಮಾಡಿದರೆ 2 ಲಕ್ಷ ಕೊಡುತ್ತೇವೆ – ಹೀಗೆ ಆರಂಭದಲ್ಲಿ ಅಲ್ಪ ಮೊತ್ತ ದುಪ್ಪಟ್ಟು ಮಾಡಿ ಕೊಡುತ್ತಾರೆ. ಲಕ್ಷದ ಮೇಲೆ ಹೂಡಿಕೆ ಮಾಡಿದಂತೆ ಹಣ ಪಡೆದು ಲಾಭಾಂಶ ಮತ್ತು ಹೂಡಿಕೆ ಹಣ ಎರಡೂ ಇಲ್ಲದಂತೆ ನಾಪತ್ತೆಯಾಗುತ್ತಾರೆ. ಇತ್ತೀಚೆಗೆ ಇಂಥ ಪ್ರಕರಣಗಳಲ್ಲೇ ಹೆಚ್ಚು ದೂರುಗಳು ಕೇಳಿಬರುತ್ತಿವೆ.

ದೇಶದ ಪ್ರತಿಷ್ಠಿತ ಕಂಪೆನಿ, ವಿದೇಶಗಳಲ್ಲಿ ಉದ್ಯೋಗ ನೀಡುವುದಾಗಿ ಹಣ ಪಡೆದು ವಂಚಿಸುವ ಜಾಲದ ವಿರುದ್ಧ 7 ಪ್ರಕರಣ ದಾಖ ಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಲಿಂಕ್‌ ಕಳುಹಿಸಿ ಹಣ ಪಡೆಯುವ 4 ಪ್ರಕರಣ ಘಟಿಸಿದೆ. 3 ಡಿಜಿಟಲ್‌ ಅರೆಸ್ಟ್‌, ಟೆಲಿಕಾಂ ಕಂಪೆನಿ ಹೆಸರಿನಲ್ಲಿ ಕರೆ ಮಾಡಿ ಒಟಿಪಿ ಪಡೆದು ಫ್ರಾಡ್‌ ಮಾಡಿರುವ 8 ಪ್ರಕರಣ ದಾಖಲಾಗಿದೆ. ಹೀಗೆ ಒಟ್ಟು 63 ವಿವಿಧ ಪ್ರಕರಣ ಸೈಬರ್‌ಕ್ರೈಂ ಅಡಿ ದಾಖಲಾಗಿದ್ದು, ಇದರಲ್ಲಿ 13.22 ಕೋ.ರೂ. ವಂಚನೆಯಾಗಿದೆ. ಪೊಲೀಸರು ದಸ್ತಗಿರಿ ಮಾಡಿ ವಶಕ್ಕೆ ಪಡದಿರುವುದು ಕೇವಲ 35.57 ಲಕ್ಷ ರೂ. ಗಳು !

ದುಪ್ಪಟ್ಟು ಹಣದ ಆಸೆಗೆ ಬಿದ್ದು…
ವಾಟ್ಸ್‌ಆ್ಯಪ್‌ ಮೂಲಕ
ಒಂದು ಲಿಂಕ್‌ ಬಂತು ಅದನ್ನು ತೆರೆದಂತೆ ಟೆಲಿಗ್ರಾಮ್‌ನಲ್ಲಿ ಇನ್ನೊಂದು ಲಿಂಕ್‌ ತೆರೆದುಕೊಂಡಿತು. ಅದರಲ್ಲಿ ಆನ್‌ಲೈನ್‌ ಟ್ರೇಡಿಂಗ್‌ ಮಾಹಿತಿ ಇತ್ತು. ಒಂದು ರೂಪಾಯಿ ಹೂಡಿಕೆ ಮಾಡಿದರೆ ಎರಡು ರೂ ಸಿಗಲಿದೆ ಎಂಬಂತೆ ನಂಬಿಸಿ ಹೂಡಿಕೆಗೆ ಆಹ್ವಾನಿಸಿದರು. ಅವರು ಕಳುಹಿಸಿದ ಲಿಂಕ್‌ನಲ್ಲಿದ್ದ ಮಾಹಿತಿಯ ಆಧಾರದಲ್ಲಿ ಬ್ಯಾಂಕ್‌ ಖಾತೆಯ ವಿವರ ಭರ್ತಿ ಮಾಡಿದೆ, ಹೂಡಿಕೆಯನ್ನು ಆರಂಭಿಸಿದ ಮೊದ ಮೊದಲು ಹೂಡಿಕೆಗೆ ದುಪ್ಪಟ್ಟು ಹಣ ಬರುತ್ತಿತ್ತು. ಒಮ್ಮೆಗೆ ಲಕ್ಷ ಮೀರಿ ಹೂಡಿಕೆ ಮಾಡುತ್ತಿದ್ದಂತೆ ಹೂಡಿಕೆ ಹಣವೂ ಬಂದಿಲ್ಲ. ಲಾಭಾಂಶವೂ ಇಲ್ಲ. ಆ ಲಿಂಕ್‌ಕೂಡ ತೆರೆದುಕೊಳ್ಳುತ್ತಿಲ್ಲ. ದೂರು
ನೀಡಿದರೂ ದುಡ್ಡು ಸಿಕ್ಕಿಲ್ಲ ಎನ್ನುತ್ತಾರೆ
ನೊಂದ ಯುವಕ.

ಕ್ಲಿಕ್‌ ಮಾಡುವ ಮುನ್ನ
ಯೋಚಿಸಿ, ಇಲ್ಲವೇ ಲಿಂಕ್‌ ಅಳಿಸಿ
ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಿದಂತೆ ವಿಭಿನ್ನ ರೀತಿಯ ತಂತ್ರಜ್ಞಾನಗಳೂ ಫೋನ್‌ಗಳಲ್ಲಿ ಬಂದಿದ್ದು, ಇವುಗಳ ಬಳಕೆಯ ಸಂದರ್ಭದಲ್ಲಿ ಗ್ರಾಹಕರು ಎಚ್ಚರಿಕೆಯ ಹೆಜ್ಜೆ ಇರಿಸಬೇಕು. ಇಲ್ಲದಿದ್ದರೆ ಸೈಬರ್‌ ವಂಚಕರ ಬಲೆಗೆ ಬೀಳುವುದು ಗ್ಯಾರಂಟಿ. ಬೆಳಗಿನ ಚಹಾದಿಂದ ರಾತ್ರಿಯ ಊಟದವರೆಗೂ ಈಗ ಆನ್‌ಲೈನ್‌ ಪೇಮೆಂಟ್‌. ಇದು ಇಲ್ಲದಿದ್ದರೆ ಕೀಳರಿಮೆಯಂತಹ ಮನೋಭಾವ. ಇದನ್ನೇ ಅವಕಾಶ ಆಗಿಸಿಕೊಳ್ಳುತ್ತಿದ್ದಾರೆ ಸೈಬರ್‌ ವಂಚಕರು.

ಶೇ. 90 ರಷ್ಟು !
ಅನಾಮಧೇಯ ಲಿಂಕ್‌ಗಳನ್ನು ಕ್ಲಿಕ್ಕಿಸಿಕೊಂಡು ಹಣ ಕಳೆದುಕೊಂಡ ಹಲವು ಉದಾಹರಣೆಗಳು ಜಿಲ್ಲಾಂದ್ಯತ ನಡೆದಿದೆ. ವಿವಿಧೆಡೆ ನಡೆದಿತ್ತು. ಈಗ ಅದಕ್ಕೂ ಭಿನ್ನವಾದ ಪ್ರಕರಣಗಳು ವರದಿಯಾಗುತ್ತಿವೆ. ಜಿಲ್ಲೆಯ ಅಂಕಿ ಅಂಶಗಳ ಪ್ರಕಾರ ಸೈಬರ್‌ ವಂಚನೆ ಗೊಳಗಾದವರಲ್ಲಿ ಶೇ.90ಕ್ಕೂ ಅಧಿಕ ಮಂದಿ ಸಿರಿವಂತರು ಹಾಗೂ ವಿದ್ಯಾವಂತರೇ ಈ ಮೋಸ ಜಾಲಕ್ಕೆ ಮರುಳಾಗುತ್ತಿದ್ದಾರೆ. ಆದ ಕಾರಣ ಇಂಥ ಲಿಂಕ್‌ ಗಳನ್ನು ಒತ್ತುವಾಗ ಬುದ್ಧಿವಂತಿಕೆ ಪ್ರದರ್ಶಿಸಬೇಕು. ಇಲ್ಲದಿದ್ದರೆ ವಂಚಕರ ಗಾಳಕ್ಕೆ ನಾವು ಬಿದ್ದಂತೆಯೇ. ಅದರಲ್ಲಿ ಯಾವುದೇ ಅನುಮಾನ ಬೇಡ.

ಟಾಪ್ ನ್ಯೂಸ್

4-ct-ravi

Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

3-road-mishap

Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

2-katapady

Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ

BJP-SPL-Meet

BJP Politics: ಬಿ.ಎಸ್‌.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-road-mishap

Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ

2-katapady

Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ

Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ

Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆMalpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Mudhol: ಪ್ರತ್ಯೇಕ ಅಪಘಾತ ಇಬ್ಬರು ಮೃತ್ಯು..

Mudhol: ಪ್ರತ್ಯೇಕ ಅಪಘಾತ, ಇಬ್ಬರು ಮೃತ್ಯು..

4-ct-ravi

Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

3-road-mishap

Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.