ಮಣಿಪಾಲ-ಉಡುಪಿ ಮಧ್ಯೆ ಸೈಕಲ್ ಪಥ
ಪ್ರತ್ಯೇಕ ಸೈಕಲ್ ಟ್ರ್ಯಾಕ್ ನಿರ್ಮಾಣಕ್ಕೆ ಜಿಲ್ಲಾಡಳಿತ ಚಿಂತನೆ
Team Udayavani, Feb 13, 2020, 7:30 AM IST
ಸಾಂದರ್ಭಿಕ ಚಿತ್ರ
ಉಡುಪಿ: ಮಣಿಪಾಲ- ಉಡುಪಿ ಕಡೆ ಸಂಚರಿಸುವ ಪ್ರಯಾಣಿಕರು ಮೋಟಾರು ವಾಹನದಲ್ಲಿ ಪ್ರಯಾಣಿಸುವ ಬದಲು ಸೈಕಲ್ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ಪ್ರತ್ಯೇಕ ಸೈಕಲ್ ಟ್ರ್ಯಾಕ್ ನಿರ್ಮಿಸಲು ಜಿಲ್ಲಾಡಳಿತ ಆಲೋಚಿಸುತ್ತಿದೆ.
ಸೈಕಲ್ ಸಂಚಾರಕ್ಕೆ ಒತ್ತು!
ವಾಯುಮಾಲಿನ್ಯ, ಸಂಚಾರ ದಟ್ಟಣೆ ಕಡಿಮೆ ಮಾಡಲು ಉಡುಪಿ -ಮಣಿಪಾಲ ರಾ.ಹೆ. 169ಎ ಮಾರ್ಗದಲ್ಲಿ ಸೈಕಲ್ ಪಥ ನಿರ್ಮಿಸುವ ಕುರಿತು ಚಿಂತನೆ ನಡೆಸುತ್ತಿದೆ. ನಗರದಲ್ಲಿ ಸ್ವಂತ ವಾಹನಗಳ ಬಳಕೆ ಕಡಿಮೆ ಮಾಡುವ, ಪರಿಸರ ಸಂರಕ್ಷಣೆಯ ಉದ್ದೇಶದಿಂದ ಸೈಕಲ್ ಬಳಕೆಗೆ ಒತ್ತು ನೀಡಲಾಗುತ್ತಿದೆ. ಸದಾ ಸಂಚಾರ ದಟ್ಟಣೆಯಿಂದ ಕೂಡಿರುವ ಹಾಗೂ ವಾಹನಗಳು ವೇಗವಾಗಿ ಚಲಿಸುವ ರಸ್ತೆಗಳಲ್ಲಿ ಸೈಕಲ್ ಸವಾರರು ಸುಲಭವಾಗಿ ಹೋಗುವುದು ಸಾಧ್ಯವಿಲ್ಲ. ಇದಕ್ಕಾಗಿ ರಸ್ತೆ ಬದಿಯಲ್ಲಿ ಪಾದಚಾರಿ ಮಾರ್ಗದ ಮಾದರಿಯಲ್ಲೇ ಸೈಕಲ್ ಪಥ ನಿರ್ಮಾಣವಾಗಲಿದೆ.
ರಾ.ಹೆ. ಮಾರ್ಗದಲ್ಲಿ ಟ್ರ್ಯಾಕ್
ಪ್ರಸ್ತುತ ಕಲ್ಸಂಕ – ಪರ್ಕಳ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 169ಎ ಕಾಮಗಾರಿ ಪ್ರಗತಿಯಲ್ಲಿಸದೆ. ಕಲ್ಸಂಕದಿಂದ ಮಣಿಪಾಲದ ವರೆಗೆ ಚತುಷ್ಪಥ ಕಾಂಕ್ರೀಟ್ ರಸ್ತೆಯ ಕಾಮಗಾರಿ ಪೂರ್ಣಗೊಂಡಿದ್ದು, ಚರಂಡಿ, ಫುಟ್‌ಪಾತ್ ನಿರ್ಮಾಣ ಕಾಮಗಾರಿ ಬಾಕಿ ಇದೆ. ರಸ್ತೆ ಮತ್ತು ಚರಂಡಿ, ಫುಟ್‌ಪಾತ್ ನಡುವೆ 2ರಿಂದ 4 ಮೀ ಜಾಗವಿದ್ದು, ಅಲ್ಲಿ ಸೈಕಲ್ ಟ್ರಾÂಕ್ ನಿರ್ಮಾಣಕ್ಕೆ ಯೋಜಿಸಲಾಗಿದೆ. ಇದರಿಂದ ಉಡುಪಿ ಮತ್ತು ಮಣಿಪಾಲ ಮಧ್ಯೆ ಆರೇಳು ಕಿ.ಮೀ. ಉದ್ದದ ಪ್ರತ್ಯೇಕ ಪಥವನ್ನು ನಿರ್ಮಾಣವಾಗಲಿದೆ.
ಸ್ಮಾರ್ಟ್ ಸಿಟಿ ಕಲ್ಪನೆ-
ಸೈಕಲ್‌ಗೆ ಸಾಥ್
ಉಡುಪಿ, ಮಣಿಪಾಲ, ಮಲ್ಪೆಯನ್ನು ಸ್ಮಾರ್ಟ್ ಸಿಟಿಯಾಗಿಸುವ ನಿಟ್ಟಿನಲ್ಲಿ ಅಗತ್ಯವಿರುವ ಕೆಲಸಗಳು ನಡೆಯುತ್ತಿದೆ. ಖಾಸಗಿ ಸಂಸ್ಥೆಯೊಂದು ಈಗಾಗಲೇ ವಿಸ್ತೃತ ವರದಿಯೊಂದನ್ನು ತಯಾರಿಸಿದೆ. ಅದರಲ್ಲಿ ಸೈಕಲ್ ಟ್ರ್ಯಾಕ್‌ನಿರ್ಮಾಣಕ್ಕೂ ಆದ್ಯತೆ ನೀಡಲಾಗಿದ್ದು, ಪ್ರಸ್ತುತ ಹೆದ್ದಾರಿ ಕಾಮಗಾರಿ ಚಾಲ್ತಿಯಲ್ಲಿರುವುದರಿಂದ ಅದರ ಪ್ರಯೋಜನವನ್ನೂ ಪಡೆಯಲಾಗುತ್ತಿದೆ.
ಇಂಟರ್‌ಲಾಕ್ ಅಳವಡಿಕೆ
ನಮ್ಮ ಮೂಲ ಯೋಜನೆಯಲ್ಲಿ ಸೈಕಲ್ ಟ್ರ್ಯಾಕ್ ಇರಲಿಲ್ಲ. ಕಾಂಕ್ರೀಟ್ ರಸ್ತೆ ಮತ್ತು ಚರಂಡಿ-ಫುಟ್‌ಪಾತ್ ಮಧ್ಯೆ ಇರುವ ಜಾಗದಲ್ಲಿ ಇಂಟರ್‌ಲಾಕ್ ಅಳವಡಿಸುತ್ತೇವೆ. ಅದನ್ನು ಸೈಕಲ್ ಟ್ರ್ಯಾಕ್‌ಗಾಗಿ ಬಳಸಬಹುದು ಅಥವಾ ಪಾರ್ಕಿಂಗ್‌ಗೂ ಉಪಯೋಗಿಸಬಹುದು. -ಮಂಜುನಾಥ ನಾಯಕ್, ಸ.ಕಾ , ಎಂಜಿನಿಯರ್‌ರಾಷ್ಟ್ರೀಯ ಹೆದ್ದಾರಿ ಇಲಾಖೆ ಶೃಂಗೇರಿ ಉಪವಿಭಾಗ
ಪರಿಸರ ಸಂರಕ್ಷಣೆ
ನಗರ ರಸ್ತೆಗಳು ಅಭಿವೃದ್ಧಿ ಹೊಂದುತ್ತಿದೆ. ಈ ನಿಟ್ಟಿನಲ್ಲಿ ಮಣಿಪಾಲ – ಉಡುಪಿ 169ಎ ಕಾಂಕ್ರಿಟ್ ರಸ್ತೆ ಹಾಗೂ ಒಳಚರಂಡಿ ಮಧ್ಯೆ ಭಾಗದಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಿಸುವ ಯೋಜನೆ ಇದೆ. ಪರಿಸರ ಹಾಗೂ ಆರೋಗ್ಯ, ಸೈಕಲ್ ಸವಾರರಿಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಈ ಟ್ರ್ಯಾಕ್ ನಿರ್ಮಾಣ ಮಾಡಲಾಗುತ್ತದೆ.
-ಸದಾಶಿವ ಪ್ರಭು, ಅಪರ ಜಿಲ್ಲಾಧಿಕಾರಿ ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.