ಡಿ. 13, 14ರಂದು ಜೆಮಿನಿಡ್ ಉಲ್ಕಾವೃಷ್ಟಿ: ಗಂಟೆಗೆ 120 ಉಲ್ಕೆ ಗೋಚರ
Team Udayavani, Dec 12, 2020, 1:07 AM IST
ಸಾಂದರ್ಭಿಕ ಚಿತ್ರ
ಉಡುಪಿ: ಜೆಮಿನಿಡ್ ಉಲ್ಕಾವೃಷ್ಟಿಯು ಡಿ. 13 ಮತ್ತು 14ರಂದು ಗೋಚರಿಸಲಿದೆ. ಆ ದಿನ ರಾತ್ರಿ 8.30ರ ಹೊತ್ತಿಗೆ ಪೂರ್ವ- ಕ್ಷಿತಿಜದಿಂದ ಮಿಥುನ ರಾಶಿಯು ಉದಯ ವಾಗುತ್ತದೆ. ಇದೇ ದಿಕ್ಕಿನ ಸ್ವಲ್ಪ ಮೇಲ್ಭಾಗದಲ್ಲಿ ಪಂಚಕೋನಾಕೃತಿಯನ್ನು ಗುರುತಿಸಬಹುದು. ಇದೇ ವಿಜಯಸಾರಥಿ ನಕ್ಷತ್ರ ಪುಂಜ. ಈ ನಕ್ಷತ್ರ ಪುಂಜದಲ್ಲಿ ಅತೀ ಪ್ರಕಾಶಮಾನವಾಗಿ ಗೋಚರಿಸುವ ನಕ್ಷತ್ರವೇ ಬ್ರಹ್ಮ ಹೃದಯ. ಇದರ ಕೆಳಗಡೆ ಮಿಥುನ ರಾಶಿಯ ಪುನರ್ವಸು ನಕ್ಷತ್ರ (ಕ್ಯಾಸ್ಟರ್ ಹಾಗೂ ಪೋಲಕ್ಸ್‌ಗಳ ಜೋಡಿ)ವನ್ನು ಗುರುತಿಸಬಹುದು. ಪುನರ್ವಸುವಿನಲ್ಲಿ ಮೇಲ್ಭಾಗದಲ್ಲಿರುವ ನಕ್ಷತ್ರವು ಕ್ಯಾಸ್ಟರ್ ಆಗಿರುತ್ತದೆ.
ಈ ನಕ್ಷತ್ರದ ಮೇಲಿನಿಂದ ಜೆಮಿನಿಡ್ ಉಲ್ಕಾ ವೃಷ್ಟಿ ಉದ್ಭವಿಸುವುದನ್ನು ರಾತ್ರಿ 8.30ರಿಂದ ಕಾಣಬಹುದು. ರಾತ್ರಿ 1ರಿಂದ ಮುಂಜಾನೆ 4ರ ವರೆಗೆ ವೀಕ್ಷಣೆಗೆ ಉತ್ತಮ ಸಮಯ. ಈ ಅವಧಿಯಲ್ಲಿ ನಕ್ಷತ್ರ ಪುಂಜವು ಕ್ಷಿತಿಜದಿಂದ ತುಂಬಾ ಮೇಲೆ ಕಾಣುವುದರಿಂದ ಉಲ್ಕೆಗಳನ್ನು ಸ್ಪಷ್ಟವಾಗಿ ವೀಕ್ಷಿಸಿ ಆನಂದಿಸಬಹುದು.
ಮಿಥುನ ರಾಶಿಯಿಂದ ಆರಂಭವಾಗುವ ಜೆಮಿನಿಡ್ ಉಲ್ಕಾವೃಷ್ಟಿಯು 3,200 ಫೆಥನ್ ಎಂಬ ಒಂದು ಕ್ಷುದ್ರಗ್ರಹದಿಂದ ಉದ್ಭವಿಸುತ್ತದೆ. ಈ ಗ್ರಹದ ಅವಶೇಷಗಳು ತುಂಬಾ ಹೆಚ್ಚಾಗಿರು ವುದರಿಂದ ಜೆಮಿನಿಡ್ ಉಲ್ಕಾವೃಷ್ಟಿಯೂ ಒಂದು ಕುತೂಹಲಕಾರಿ ವಿದ್ಯಮಾನವಾಗಿದೆ. ಇದನ್ನು ವೀಕ್ಷಿಸುವವರಿಗೆ ಗಂಟೆಗೆ ಸುಮಾರು 120ರಷ್ಟು ಉಲ್ಕೆಗಳು ಗೋಚರಿಸುತ್ತದೆ. ಪ್ರತಿ 30 ಸೆಕೆಂಡುಗಳಿಗೊಮ್ಮೆ ಕಾಣುವ ಈ ಉಲ್ಕಾಪಾತದ ವಿಸ್ಮಯವನ್ನು ವೀಕ್ಷಿಸಿ ಆನಂದಿಸಬಹುದೆಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.