ಹೈನುಗಾರಿಕೆ, ಕೃಷಿ  ಮುಂಡ್ಕೂರು ಲಕ್ಷ್ಮೀನಾರಾಯಣ ಕಿಣಿ ಸಾಧನೆ 

Team Udayavani, Jun 7, 2017, 4:03 PM IST

2belmane5.jpg

ಬೆಳ್ಮಣ್‌: ಹೈನುಗಾರಿಕೆಯನ್ನು ತನ್ನ ಜೀವಾಳವನ್ನಾಗಿಸಿ ಜತೆಯಲ್ಲಿ  ವಿವಿಧ ತರಕಾರಿ ಬೆಳೆ, 35 ಎಕರೆ ಜಾಗದಲ್ಲಿ ರಬ್ಬರ್‌ ಕೃಷಿ ಹೀಗೆ ಹಲವು ವಿಧದ ಮಿಶ್ರ ಕೃಷಿಗಳನ್ನು ಮಾಡುವುದರ ಮೂಲಕ ಗ್ರಾಮೀಣ ಭಾಗದ ಕೃಷಿಕರಾದ ಲಕ್ಷ್ಮೀನಾರಾಯಣ ಕಿಣಿಯರು  ಜೀವನದಲ್ಲಿ ಭಾರೀ ಯಶಸ್ಸು ಕಂಡಿದ್ದಾರೆ.

ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ದಡ್ಡುವಿನ ಪ್ರಗತಿಪರ  ಕೃಷಿಕ ಲಕ್ಷ್ಮೀನಾರಾಯಣ ಕಿಣಿಯವರ ಕೃಷಿ ಬದುಕಿನ ಯಶೋಗಾಥೆ ಇತರರಿಗೆ ಮಾದರಿಯಾಗಿದೆ. ಮುಂಡ್ಕೂರು ದಡ್ಡು ಪ್ರದೇಶದಲ್ಲಿ ಸುಮಾರು 35 ಎಕರೆ ಪ್ರದೇಶ  ಹಚ್ಚ ಹಸಿರಾಗಿದ್ದು ಪರಿಸರ ಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತಿದೆ. ಅಲ್ಲದೆ ಸ್ವಾವಲಂಬಿ ಬದುಕು ಕಟ್ಟಲು ಹೊರಟಿರುವ ಮಂದಿಗೆ ಪ್ರೇರಣೆ ನೀಡ ಹೊರಟಿದೆ. ಇವೆಲ್ಲಕ್ಕೆ  ಕಾರಣಕರ್ತರು ಲಕ್ಷ್ಮೀನಾರಾಯಣ ಕಿಣಿ  ತನ್ನ 30 ಎಕರೆ ಜಾಗದಲ್ಲಿ ಕಳೆದ ಹಲವು ವರ್ಷಗಳಿಂದ ರಬ್ಬರ್‌ ಬೆಳೆಯನ್ನು ಬೆಳೆದು ಉತ್ತಮ ಲಾಭವನ್ನು ಗಳಿಸುತ್ತಿದ್ದಾರೆ. ಅಲ್ಲದೆ ಇನ್ನುಳಿದ ಸುಮಾರು 5 ಎಕರೆ ಜಾಗದಲ್ಲಿ ವಿವಿಧ ರೀತಿಯ ಮಿಶ್ರ ಕೃಷಿಯನ್ನು ಬೆಳೆಯುವುದರ ಮೂಲಕ ಯಶಸ್ಸು ಕಂಡಿದ್ದಾರೆ.

ಕಳೆದ 3 ವರ್ಷಗಳಿಂದ ಸುಮಾರು 35 ದನಗಳನ್ನು ಸಾಕುವುದರೊಂದಿಗೆ ಹೈನು ಗಾರಿಕೆಯಲ್ಲಿಯೂ ಯಶಸ್ಸು ಕಂಡಿದ್ದಾರೆ. ತನ್ನ ಮನೆಯ ಪಕ್ಕದಲ್ಲೇ ಹೈನುಗಾರಿಕೆಯನ್ನು ಮಾಡುತ್ತಿದ್ದು ವಿವಿಧ ತಳಿಯ ದನಗಳನ್ನು ಸಾಕುತ್ತಿದ್ದು ಪ್ರತೀ ನಿತ್ಯ ಬೆಳಗ್ಗೆ 100 ಲೀಟರ್‌ ಹಾಗೂ ಸಂಜೆ 50ರಿಂದ 60 ಲೀಟರ್‌ ಹಾಲು ಪಡೆದು ಮಾರಾಟ ಮಾಡಿ ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ.

ಸಾಧಕ ಕೃಷಿಕ
ಮುಂಡ್ಕೂರಿನ ಲಕ್ಷ್ಮೀನಾರಾಯಣ ಕಿಣಿ ಇದೀಗ ಸಾಧಕ ಕೃಷಿಕರ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. ಆದರೆ ಇಲಾಖೆಯ ಕೆಲವೊಂದು ಯೋಜನೆ ಗಳು ರೈತರಿಗೆ ಸರಿಯಾದ ವೇಳೆಯಲ್ಲಿ ಸಿಗುವುದಿಲ್ಲವೆಂಬ ಕಾರಣದಿಂದ ಕಿಣಿ ಅವರು ಬೇಸರ ವ್ಯಕ್ತಪಡಿಸುತ್ತಾರೆ. ಹೈನುಗಾರಿಕೆಯಲ್ಲಿ ಕಿಣಿ ಅವರು 35 ದನಗಳಿಂದ ಸಾಕಷ್ಟು  ಲಾಭವನ್ನು ಪಡೆಯುತ್ತಿದ್ದಾರೆ. ಜತೆಗೆ ಮನೆಯ ಸುತ್ತ ತೊಂಡೆ, ಬೆಂಡೆ, ಬದನೆಯಂತಹ ಗಿಡಗಳನ್ನು ಬೆಳೆದಿದ್ದು ತರಕಾರಿಯಲ್ಲೂ ಉತ್ತಮ ಲಾಭ ಗಳಿಸುತ್ತಿದ್ದಾರೆ. ಈ ಮೂಲಕ  ಕಿಣಿ ಅವರು ಇತರ ರೈತರಿಗೆ ಮಾದರಿಯಾಗಿದ್ದಾರೆ. ತನ್ನ  ಕೃಷಿ ಚಟುವಟಿಕೆಗೆ ಬೇಕಾದ ನೀರಿ ಗಾಗಿ ಸುಮಾರು ರೂ. 5 ಲಕ್ಷ ವ್ಯಯಿಸಿ ಅಂತರ್ಜಲ ವೃದ್ಧಿಗೂ ಕೈ ಹಾಕಿದ್ದಾರೆ.

ಹಲವಾರು ಕಾರಣಗಳಿಂದ ಕೃಷಿ  ಕ್ಷೇತ್ರದಿಂದ ಹಿಂದೆ ಸರಿಯುತ್ತಿರುವ ಅದೆಷ್ಟೋ ಕೃಷಿಕರ ಮಧ್ಯೆ ಗ್ರಾಮೀಣ ಭಾಗದಲ್ಲಿದ್ದೂ ಕೃಷಿಯ ಜತೆ ಬದುಕು ಕಟ್ಟುತ್ತಿದ್ದು ಹೆ„ನುಗಾರಿಕೆಯ ಜೊತೆಯಲ್ಲಿ ಇತರ ಮಿಶ್ರ ಕೃಷಿಯಲ್ಲೂ ಯಶಸ್ಸು ಕಂಡಿದ್ದು , ಇವರ ಸಾಧನೆ ಎಲ್ಲಾ ಕೃಷಿಕರಿಗೂ ಮಾದರಿಯಾಗಿದೆ.

ಹೈನುಗಾರಿಕೆ ಹಾಗೂ ಮಿಶ್ರ ಕೃಷಿಯನ್ನು ಬೆಳೆಯುವುದರಿಂದ ಹೆಚ್ಚಿನ ಲಾಭವನ್ನು ಪಡೆಯಲು ಸಾಧ್ಯ, ವಿವಿಧ‌ ತರಕಾರಿ ಹಾಗೂ 30 ಎಕರೆ ಜಾಗದಲ್ಲಿ ರಬ್ಬರ್‌ ಕೃಷಿಯನ್ನು ಮಾಡಿದ ಪರಿಣಾಮ ಲಾಭವನ್ನು ಪಡೆಯುತ್ತಿದ್ದೇನೆ, ಸರಕಾರ, ಇಲಾಖೆ ಗುರುತಿಸಿಲ್ಲ ಬೇಸರವಿದೆ, ಖಾಲಿ ಜಮೀನು  ಬಿಡಬೇಡಿ ಎಲ್ಲರೂ ಕೃಷಿ ಮಾಡಿ.
– ಮುಂಡ್ಕೂರು ಲಕ್ಷ್ಮೀನಾರಾಯಣ ಕಿಣಿ, ಪ್ರಗತಿಪರ ಕೃಷಿಕ

– ಶರತ್‌ ಶೆಟ್ಟಿ

ಟಾಪ್ ನ್ಯೂಸ್

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?

1-russia

Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.