Daivasthana ಕಾಣಿಕೆ ಡಬ್ಬಿ ಕಳ್ಳ 24 ಗಂಟೆಯಲ್ಲಿ ಸೆರೆ!

ದೈವಸ್ಥಾನದಲ್ಲಿ ಕಳವುಗೈದಾತ ನಿದ್ದೆಯಿಂದ ಎಚ್ಚರಗೊಳ್ಳದೆ ಸಿಕ್ಕಿಬಿದ್ದ

Team Udayavani, Jul 14, 2024, 11:56 PM IST

Daivasthana ಕಾಣಿಕೆ ಡಬ್ಬಿ ಕಳ್ಳ 24 ಗಂಟೆಯಲ್ಲಿ ಸೆರೆ!

ಕಾಪು: ಉಡುಪಿ ಮತ್ತು ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯ ದೈವಸ್ಥಾನಗಳಲ್ಲಿ ಕಾಣಿಕೆ ಡಬ್ಬಿಗೆ ಕೈ ಹಾಕಿದ ಚೋರನೋರ್ವ ಬಳಿಕ ಅತಿಯಾದ ನಿದ್ದೆಯಿಂದ ಎಚ್ಚರಗೊಳ್ಳದೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಉಡುಪಿಯಲ್ಲಿ ನಡೆದಿದೆ. ಇದಕ್ಕೆ ದೈವದ ಕಾರಣಿಕವೇ ಕಾರಣ ಎಂದು ಸ್ಥಳೀಯರು ನಂಬಿದ್ದಾರೆ.

ಬಾಗಲಕೋಟೆ ಜಿಲ್ಲೆಯ ನವ ನಗರ ಐಟಿಐ ಕಾಲೇಜು ಬಳಿ ನಿವಾಸಿ ಮುದುಕಪ್ಪ ಬಾಳಪ್ಪ ಬಿದರಿ (23) ಸಿಕ್ಕಿಬಿದ್ದ ಆರೋಪಿ.

ಬಿದರಿ ಜು. 4 ರಾತ್ರಿ ಮತ್ತು ಜು. 5ರ ಮುಂಜಾನೆಯ ನಡುವೆ ಉಡುಪಿಯ ಕಸ್ತೂರ್ಬಾ ನಗರದ ಡಯಾನ ಥಿಯೇಟರ್‌ ಮುಂಭಾಗದಲ್ಲಿರುವ ಚಿಟಾ³ಡಿ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಸಂಬಂಧಪಟ್ಟ ಮತ್ತು ಜು. 6ರಂದು ರಾತ್ರಿ ಕಟಪಾಡಿ ಫಾರೆಸ್ಟ್‌ಗೇಟ್‌ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಯನ್ನು ಕಳವು ಮಾಡಿದ್ದನು. ಈತ ಕಾಣಿಕೆ ಡಬ್ಬಿ ಎಗರಿಸುವ ದೃಶ್ಯಗಳು ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದವು. ಈ ಸಂಬಂಧ ದೈವಸ್ಥಾನದ ಆಡಳಿತ ಮಂಡಳಿಗಳು ಠಾಣೆಗಳಲ್ಲಿ ದೂರು ನೀಡಿದ್ದವು.

ದೈವದ ಅಭಯ
ಕಾಣಿಕೆ ಡಬ್ಬ ಕಳವು ಸಂಬಂಧ ದೈವಸ್ಥಾನದ ಆಡಳಿತ ಮಂಡಳಿಯು ಜು. 6ರಂದು ಸಾಮೂಹಿಕ ಪ್ರಾರ್ಥನೆಯೊಂದಿಗೆ ದೈವ ದರ್ಶನ ನಡೆಸಿ, ದೈವದ ಬಳಿ ಉಯಿಲು ನೀಡಿತ್ತು. ಈ ಸಂದರ್ಭ ದೈವವು 24 ಗಂಟೆಯೊಳಗೆ ಕಳ್ಳನನ್ನು ತೋರಿಸಿಕೊಡುತ್ತೇನೆ ಎಂಬ ಅಭಯ ನೀಡಿತ್ತು.

ಕಳ್ಳ ಸಿಕ್ಕಿ ಬಿದ್ದಿದ್ದು ಹೇಗೆ
ಜು. 7ರಂದು ಬೆಳಗ್ಗೆ ಆರೋಪಿ ಬಿದರಿ ಉಡುಪಿ ಕೆಎಸ್ಸಾರ್ಟಿಸಿ ನಿಲ್ದಾಣದ ಬಳಿ ಮಲಗಿದ್ದು, ಅಲ್ಲಿಗೆ ಪ್ರಯಾಣಿಕರೋರ್ವರನ್ನು ಬಿಡಲು ಬಂದಿದ್ದ ಚಿಟಾ³ಡಿ ಕುಕ್ಕಿಕಟ್ಟೆ ದೈವಸ್ಥಾನದ ಆಡಳಿತ ಸಮಿತಿ ಸದಸ್ಯರೋರ್ವರು ಬೆಳಗ್ಗೆ 8 ಗಂಟೆಯವರೆಗೂ ಬಸ್‌ ನಿಲ್ದಾಣದಲ್ಲಿ ಯುವಕ ನೋರ್ವ ನಿದ್ದೆ ಮಾಡುತ್ತಿರುವುದನ್ನು ಗಮನಿಸಿದ್ದಾರೆ. ಹತ್ತಿರ ಹೋಗಿ ನೋಡಿದಾಗ ಕಾಣಿಕೆ ಡಬ್ಬಿ ಕಳವು ಮಾಡಿದ ವ್ಯಕ್ತಿಯನ್ನೇ ಹೋಲುತ್ತಿದ್ದು ಈ ಬಗ್ಗೆ ತತ್‌ಕ್ಷಣ ಉಡುಪಿ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಗಸ್ತು ನಿರತ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ತಾನು ಚಿಟಾ³ಡಿ ಮತ್ತು ಕಟಪಾಡಿಯಲ್ಲಿನ ದೈವಸ್ಥಾನದ ಕಾಣಿಕೆ ಡಬ್ಬಿಯನ್ನು ಎಗರಿಸಿರುವುದಾಗಿ ಹೇಳಿದ್ದಾನೆ. ಮತ್ತಷ್ಟು ವಿಚಾರಣೆಗೊಳಪಡಿಸಿದಾಗ ಈ ಹಿಂದೆ ದೊಡ್ಡಣ್ಣಗುಡ್ಡೆ ಮತ್ತು ಬೈಲೂರು ದೈವಸ್ಥಾನದ ಕಾಣಿಕೆ ಡಬ್ಬಿಯನ್ನೂ ತಾನೇ ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ದೈವದ ಪವಾಡ ಪ್ರಬಲ
ಕಾಣಿಕೆ ಡಬ್ಬ ಕಳ್ಳ 24 ತಾಸಿನ ಒಳಗಡೆ ಪತ್ತೆಯಾಗುವ ಮೂಲಕ ತುಳುನಾಡಿನಲ್ಲಿ ದೈವದ ಪವಾಡ ಮತ್ತು ಕಾರಣಿಕ ಇನ್ನೂ ಪ್ರಬಲವಾಗಿದೆ ಎಂಬುದನ್ನು ತೋರಿಸಿಕೊಟ್ಟಂತಾಗಿದೆ ಎಂದು ಚಿಟಾ³ಡಿ ದೈವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಶ್ರೀನಿವಾಸ್‌ ಹೇಳಿದ್ದಾರೆ.

ಟಾಪ್ ನ್ಯೂಸ್

hk-patil

Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

ARMY (2)

Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು

Tollywood: ಲೋಕೇಶ್‌, ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್‌ ಎಂಟ್ರಿ?

Tollywood: ಲೋಕೇಶ್‌, ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್‌ ಎಂಟ್ರಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ದಿಶಾಂಕ್ ಆಪ್ ನಲ್ಲಿ ಕಾಣಿಸಿಕೊಂಡ ‘ಸುಲ್ತಾನ್ ಪುರ’… ಜಿಲ್ಲಾಧಿಕಾರಿಯಿಂದ ಸ್ಪಷ್ಟನೆ

Udupi: ದಿಶಾಂಕ್ ಆಪ್ ನಲ್ಲಿ ಕಾಣಿಸಿಕೊಂಡ ‘ಸುಲ್ತಾನ್ ಪುರ’… ಜಿಲ್ಲಾಧಿಕಾರಿಯಿಂದ ಸ್ಪಷ್ಟನೆ

1-katapady

Katapady: ಲಾರಿಗೆ ಟೂರಿಸ್ಟ್ ವಾಹನ ಢಿಕ್ಕಿ; ಹಲವು ಪ್ರವಾಸಿಗರಿಗೆ ಗಂಭೀರ ಗಾಯ

25-kota

Kota: ಮರೆಯಾಗುತ್ತಿವೆ ಮೇಟಿ ಪೂಜೆ, ರಾಶಿ ಪೂಜೆ

17-katapady

Katapady: ಹಟ್ಟಿಗೊಬ್ಬರ ಖರೀದಿ ಹೆಸರಲ್ಲಿ ಮೋಸ!

14-malpe

Malpe: ನಿರಂತರ ರಜೆ: ಬೀಚ್‌ಗಳಲ್ಲಿ ಪ್ರವಾಸಿಗರ ದಟ್ಟಣೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

hk-patil

Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

20

Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.