ಪ್ರಜಾಪ್ರಭುತ್ವ ಹಬ್ಬ: ಸುಗಮ ಆಚರಣೆಗೆ ಆಡಳಿತ ಸಿದ್ಧ; ಮತದಾರ ಬದ್ಧ


Team Udayavani, Apr 18, 2019, 6:00 AM IST

1704mlr40-election

ಮಂಗಳೂರು: ಚುನಾವಣ ಕರ್ತವ್ಯಕ್ಕೆ ನಿಯೋಜಿತರಾದ ಸಿಬಂದಿ ಮತಗಟ್ಟೆಗಳಿಗೆ ತೆರಳಿದರು.

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತದಾನ ಎ. 18ರಂದು ನಡೆಯಲಿದ್ದು, ಸರ್ವ ಸಿದ್ಧತೆ ಅಂತಿಮಗೊಂಡಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಮತದಾನ ನಡೆಯಲಿದೆ. ಕ್ಷೇತ್ರದಲ್ಲಿ ಒಟ್ಟು 13 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ. ಮತದಾನಕ್ಕೆ ಅನುಕೂಲವಾಗುವಂತೆ ಸಾರ್ವಜನಿಕ ರಜೆ ಘೋಷಿಸಲಾಗಿದೆ.

ದ.ಕ. ಒಟ್ಟು ಮತದಾರರು:
17,24,460
ಜಿಲ್ಲೆಯಲ್ಲಿ 8,45,308 ಪುರುಷರು ಮತ್ತು 8,79,050 ಮಹಿಳೆಯರು ಹಾಗೂ 102 ಇತರರು ಸೇರಿ ಒಟ್ಟು 17,24,460 ಮತದಾರರಿದ್ದಾರೆ.

ಎಲ್ಲ 1,861 ಮತಗಟ್ಟೆಗಳ ಮತದಾನ ಪ್ರಕ್ರಿಯೆಯ ಸಂಪೂರ್ಣ ವಿವರ ಪಡೆಯಲು ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿ ಜಿಪಿಎಸ್‌ ಮುಖಾಂತರ ಮಾಹಿತಿ ಸಂಪರ್ಕ ನೆಟ್‌ವರ್ಕ್‌ ಕಲ್ಪಿಸಲಾಗಿದೆ. 110 ಮತಗಟ್ಟೆಗಳಿಂದ ಲೈವ್‌ ಸ್ಟ್ರೀಮಿಂಗ್‌ ವ್ಯವಸ್ಥೆ ಮಾಡಲಾಗಿದೆ. 300 ಮೈಕ್ರೊ ವೀಕ್ಷಕರನ್ನು ನೇಮಿಸಲಾಗಿದೆ.

ಮೊದಲಿಗೆ ಅಣಕು ಮತದಾನ
ಬೆಳಗ್ಗೆ 6ರಿಂದ 7ರ ತನಕ ಚುನಾವಣ ಏಜೆಂಟರ ಸಮ್ಮುಖದಲ್ಲಿ 50 ಅಣಕು ಮತಗಳನ್ನು ಚಲಾಯಿಸ ಲಾಗುತ್ತದೆ. 7 ಗಂಟೆಗೆ ಮತದಾನ ಪ್ರಾರಂಭವಾಗಲಿದೆ.

ನಿಷೇಧಾಜ್ಞೆ ಜಾರಿ, ಮದ್ಯ
ಮಾರಾಟ ನಿಷೇಧ
ಚುನಾವಣೆ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ. 3,300 ಪೊಲೀಸರು ಹಾಗೂ ಸುಮಾರು 700 ಕೆಎಸ್‌ಆರ್‌ಪಿ, ಸಿಆರ್‌ಪಿಎಫ್‌, ಸಿಪಿಎಂಎಫ್‌, ಸಿಎಆರ್‌ ಸಿಬಂದಿಯನ್ನು ನಿಯೋಜಿಸಲಾಗಿದೆ. 300 ಮಂದಿ ಮೈಕ್ರೋ ವೀಕ್ಷಕರಿರುತ್ತಾರೆ.

ಮಂಗಳವಾರ ಸಂಜೆ 6ರಿಂದ ಶುಕ್ರವಾರ ಸಂಜೆ 6 ಗಂಟೆ ವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ವಿಧಿಸಲಾಗಿದೆ. ಮಂಗಳವಾರ ಸಂಜೆ 6ರಿಂದ ಗುರುವಾರ ಮಧ್ಯರಾತ್ರಿ ತನಕ ಮದ್ಯ ಮಾರಾಟ ನಿಷೇಧಿಸಲಾಗಿದೆ. ಇದು ಗಡಿ ಭಾಗದ ಕೇರಳದ 5 ಕಿ.ಮೀ. ತನಕವೂ ಜಾರಿಯಲ್ಲಿರುತ್ತದೆ.

ಕಮಿಷನರೆಟ್‌ ವ್ಯಾಪ್ತಿ
ಮಂಗಳೂರು ಕಮಿಷನರೆಟ್‌ ವ್ಯಾಪ್ತಿಯಲ್ಲಿ ಒಟ್ಟು 883 ಮತಗಟ್ಟೆಗಳಿದ್ದು, ಈ ಪೈಕಿ 220 ಕ್ಲಿಷ್ಟಕರ ಹಾಗೂ 663 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಬಂದೋಬಸ್ತು ಪ್ರಯುಕ್ತ ಡಿಸಿಪಿ 2, ಡಿವೈಎಸ್ಪಿ-ಎಸಿಪಿ 7, ಇನ್ಸ್‌ಪೆಕ್ಟರ್‌ 16, ಪಿಎಸ್‌ಐ 7, ಎಎಸ್‌ಐ 79, ಎಚ್‌ಸಿ/ಪಿಸಿ ಮತ್ತು ಹೋಂಗಾರ್ಡ್‌ ಸಹಿತ ಒಟ್ಟು 1500 ಪೊಲೀಸರು ಹಾಗೂ ಕೇಂದ್ರೀಯ ಪಡೆಯ 2 ಕಂಪೆನಿ ಮತ್ತು 8 ಕೆಎಸ್‌ಆರ್‌ಪಿ 12 ಸಿಎಆರ್‌ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ.

ಸೂಕ್ಷ್ಮ ಸ್ಥಳಗಳಲ್ಲಿ ತಲಾ 3 ಸಿಎಆರ್‌ ತುಕಡಿಗಳಂತೆ ಒಟ್ಟು 12 ಸಿಎಆರ್‌ ತುಕಡಿಗಳನ್ನು ಹಾಗೂ 4 ಕೆಎಸ್‌ಆರ್‌ಪಿ ತುಕಡಿಗಳನ್ನು 8 ತುಕಡಿಗಳನ್ನಾಗಿ ವಿಭಾಗಿಸಿ ಒಂದೊಂದು ಶಾಸಕ ಕ್ಷೇತ್ರದಲ್ಲಿ ತಲಾ 2 ತುಕಡಿಗಳಂತೆ ನಿಯೋಜಿಸಲಾಗಿದೆ. 220 ಸೂಕ್ಷ್ಮ ಮತಗಟ್ಟೆಗಳ ಪೈಕಿ 156 ಮತಗಟ್ಟೆಗಳಿಗೆ ಕೇಂದ್ರೀಯ ಪಡೆಗಳ ಭದ್ರತೆ ಕೂಡ ಇದ್ದು, ಇನ್ನುಳಿದ ಕ್ಲಿಷ್ಟಕರ ಮತಗಟ್ಟೆಗಳಿಗೆ ಮೈಕ್ರೋ ಆಬ್ಸರ್ವರ್‌ ಮತ್ತು ವೀಡಿಯೋ ಆಬ್ಸರ್ವರ್‌ ಕಣ್ಗಾವಲು ಇದೆ.

ದ.ಕ. ಜಿಲ್ಲಾ ವ್ಯಾಪ್ತಿ
ದ.ಕ. ಜಿಲ್ಲಾ ಪೊಲೀಸ್‌ ವ್ಯಾಪ್ತಿಗೆ ಒಳಪಡುವ ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ ವಿಧಾನಸಭಾ ಕ್ಷೇತ್ರಗಳಲ್ಲದೆ ಮಂಗಳೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬರುವ ಮತಗಟ್ಟೆಗಳು ಸೇರಿದಂತೆ ಒಟ್ಟು 978 ಮತಗಟ್ಟೆಗಳಿದ್ದು, 272 ಅತಿ ಸೂಕ್ಷ್ಮ ಮತಗಟ್ಟೆ ಹಾಗೂ 706 ಸಾಮಾನ್ಯ ಮತಗಟ್ಟೆಗಳಾಗಿ ವಿಂಗಡಿಸಲಾಗಿದೆ.

ಮತಗಟ್ಟೆಗಳಿಗೆ ಒಟ್ಟು 1,463 ಅ ಧಿಕಾರಿಗಳು/ಸಿಬಂದಿ ನಿಯೋಜಿ ಸಿದ್ದು, ಡಿವೈಎಸ್‌ಪಿ, ಪೊಲೀಸ್‌ ಇನ್ಸ್‌ ಪೆಕ್ಟರ್‌ ಹಾಗೂ ಪಿಎಸ್‌ಐ ಅವರ 102 ಸೆಕ್ಟರ್‌ಗಳನ್ನು ರಚಿಸಲಾಗಿದೆ. 4 ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಯ ಸೆಕ್ಟರ್‌ಗಳಿದ್ದು, 32 ಸೂಕ್ಷ್ಮ ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ. ಅಲ್ಲದೆ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಯ 255 ಸಿಬಂದಿ ಇದ್ದಾರೆ. 5 ಕೆಎಸ್‌ಆರ್‌ಪಿ ತುಕಡಿ (125 ಸಿಬಂದಿ), 16 ಡಿಎಆರ್‌ ತುಕಡಿ (128 ಸಿಬಂದಿ) ಸೇರಿದಂತೆ ಒಟ್ಟು 2,119 ಜನ ಅ ಧಿಕಾರಿ/ಸಿಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ.

ದಾಖಲೆ ಮತದಾನ ನಿರೀಕ್ಷೆ
ಈ ಬಾರಿ ಮತದಾನ ಪ್ರಮಾಣ ಹೆಚ್ಚಳವಾಗಬೇಕು ಎಂಬುದು ಜಿಲ್ಲಾಡಳಿತದ ನಿರೀಕ್ಷೆ. ಇದಕ್ಕಾಗಿ ಜಿಲ್ಲಾ ಸ್ವೀಪ್‌ ಸಮಿತಿ ವಿವಿಧ ಕಾರ್ಯಕ್ರಮಗಳ ಮೂಲಕ ಮತದಾರರ ಜಾಗೃತಿಯನ್ನು ನಡೆಸಿದೆ. 2014ರ ಎ. 17ರ ಲೋಕಸಭಾ ಚುನಾವಣೆಯಲ್ಲಿ ಆದ ಶೇ. 76.67 ಮತದಾನ ಜಿಲ್ಲೆಯ ಸಾರ್ವಕಾಲಿಕ ದಾಖಲೆ ಮತದಾನ. ಈ ಬಾರಿ ಇದನ್ನು ಮೀರುವ ನಿರೀಕ್ಷೆಯಿದೆ.

ಮೊಬೈಲ್‌ ನಿರ್ಬಂಧ
ಅತಿಸೂಕ್ಷ್ಮಮತಗಟ್ಟೆಗಳಲ್ಲಿ ವೀಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ಗಡಿಭಾಗದಲ್ಲಿ ಅಂತಾರಾಜ್ಯ ಚೆಕ್‌ಪೋಸ್ಟ್‌ ಸ್ಥಾಪಿಸಲಾಗಿದ್ದು ಸಿಸಿ ಕೆಮರಾ ಅಳವಡಿಸಲಾಗಿದೆ. ಮೊಬೈಲ್‌ ಫೋನ್‌, ಕೆಮರಾ ಮತ್ತಿತರ ವಸ್ತುಗಳಿಗೆ ಮತಗಟ್ಟೆ ಕೇಂದ್ರದೊಳಗೆ ನಿರ್ಬಂಧವಿದೆ. ಪಕ್ಷಗಳ ಏಜೆಂಟರು ಮೊಬೈಲ್‌ ಫೋನ್‌ಗಳನ್ನು ಒಯ್ಯುವುದನ್ನೇ ನಿಷೇಧಿಸಲಾಗಿದೆ.

ಅಶಕ್ತರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲು ಜಿಲ್ಲಾಡಳಿತದ ವತಿಯಿಂದ ಬೇಡಿಕೆಯ ಮೇರೆಗೆ ವಾಹನ ವ್ಯವಸ್ಥೆ ಮಾಡಲಾಗುತ್ತದೆ. ಮತದಾರರಿಗೆ ನೆರವು ನೀಡಲು ಮತಗಟ್ಟೆಗಳ 200 ಮೀ. ವ್ಯಾಪ್ತಿಯ ಹೊರಗೆ ಬಿಎಲ್‌ಒಗಳು ಉಪಸ್ಥಿತರಿದ್ದು, ಮತದಾರರಿಗೆ ನೆರವು ನೀಡಲಿದ್ದಾರೆ.

ಉಡುಪಿ: ಮಸ್ಟರಿಂಗ್‌ ಮತ್ತು ಡಿಮಸ್ಟರಿಂಗ್‌ ಕೇಂದ್ರಗಳಿಂದ ಬುಧವಾರ ಮಧ್ಯಾಹ್ನವೇ ಅಧಿಕಾರಿ ಮತ್ತು ಸಿಬಂದಿ ಮತಯಂತ್ರ ಹಾಗೂ ಇತರ ಮತದಾನ ಸಾಮಗ್ರಿಗಳೊಂದಿಗೆ ಮತಗಟ್ಟೆಗಳಿಗೆ ತೆರಳಿದ್ದು, ಮತದಾರರನ್ನು ಸ್ವಾಗತಿಸಲು ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಅಧಿಕಾರಿ, ಸಿಬಂದಿ ಪೂರ್ಣ ಸಿದ್ಧರಾಗಿದ್ದಾರೆ.

ಉಡುಪಿ ವಿ.ಸಭಾ ಕ್ಷೇತ್ರದ ಮಸ್ಟರಿಂಗ್‌ ಕೇಂದ್ರವಾದ ಸೈಂಟ್‌ ಸಿಸಿಲೀಸ್‌ ಶಾಲೆ, ಕುಂದಾಪುರದ ಭಂಡಾರ್‌ಕಾರ್ ಕಾಲೇಜು, ಕಾಪುವಿನ ದಂಡತೀರ್ಥ ಕಾಲೇಜು ಮತ್ತು ಕಾರ್ಕಳದ ಮಂಜುನಾಥ ಪೈ ಸ್ಮಾರಕ ಕಾಲೇಜುಗಳಿಂದ ಅಧಿಕಾರಿ, ಸಿಬಂದಿ ನಿಯೋಜಿತ ಮತಗಟ್ಟೆಗಳಿಗೆ ಗೊಂದಲವಿಲ್ಲದೆ ತೆರಳಿದರು. ಮತದಾನ ಪ್ರಮಾಣವನ್ನು ಹೆಚ್ಚಿಸಲು, ಆಮಿಷಕ್ಕೆ ಒಳಗಾಗದೆ ಮತದಾನ ನಡೆಸಲು ಜಿಲ್ಲಾಡಳಿತ ಅನೇಕ ರೀತಿಯ ಪ್ರಯತ್ನಗಳನ್ನು ನಡೆಸಿದೆ.

ಪರವೂರು, ಹೊರರಾಜ್ಯ
ಮತದಾರರ ಉತ್ಸಾಹ
ಮುಂಬಯಿ, ಬೆಂಗಳೂರು, ಚೆನ್ನೈ ಮಾತ್ರವಲ್ಲದೆ ವಿದೇಶಗಳಲ್ಲಿ ಉದ್ಯೋಗ ನಿಮಿತ್ತ ಇದ್ದವರಲ್ಲಿ ಅನೇಕ ಮಂದಿ ಮತದಾನಕ್ಕಾಗಿ ಊರಿಗೆ ಬಂದಿದ್ದಾರೆ. ಇದು ಹಬ್ಬ, ಜಾತ್ರೆ, ರಜೆ ಸೀಸನ್‌ ಆಗಿರುವುದರಿಂದ ಅವುಗಳ ಜತೆಗೆ ಮತದಾನ ಹಬ್ಬದಲ್ಲಿಯೂ ಪಾಲ್ಗೊಳ್ಳುವ ಉದ್ದೇಶದಿಂದಲೂ ಬಂದವರು ಅನೇಕ ಮಂದಿ. ತಮ್ಮ ಮನೆಯಲ್ಲಿರುವ ಹಿರಿಯರನ್ನು ಮತದಾನ ಕೇಂದ್ರಗಳಿಗೆ ಕರೆದೊಯ್ಯುವುದಕ್ಕೆ ಅನೇಕರು ಉತ್ಸುಕರಾಗಿದ್ದಾರೆ.

ಈ ಬಾರಿಯ ಪ್ರಚಾರಕ್ಕೆ ಅಭ್ಯರ್ಥಿ ಗಳು, ಪಕ್ಷಗಳ ಮುಖಂಡರು, ಕಾರ್ಯಕರ್ತರು ಮನೆ ಮನೆಗೆ ತೆರಳಿದ್ದರೆ, ಮತದಾನ ಜಾಗೃತಿ ಸೇರಿದಂತೆ ವಿವಿಧ ಚುನಾವಣ ಕೆಲಸಗಳಿಗಾಗಿ ಅಧಿಕಾರಿ, ಸಿಬಂದಿ ಕೂಡ ಮತದಾರರ ಮನೆಗಳಿಗೆ ಭೇಟಿ ನೀಡಿದ್ದು ವಿಶೇಷವಾಗಿತ್ತು.

ಬನ್ನಿ… ಹಬ್ಬದಲ್ಲಿ ಪಾಲ್ಗೊಳ್ಳಿ
ಈ ಚುನಾವಣೆ ದೇಶದ ಮಹತ್ವದ ಹಬ್ಬ ಎಂದು ಭಾರತದ ಚುನಾವಣ ಆಯೋಗವೇ ಹೇಳಿದೆ. ನಾವು ಕೂಡ ಇದಕ್ಕಾಗಿ ಜಿಲ್ಲೆಯಲ್ಲಿ ತಯಾರಿ ಮಾಡಿದ್ದೇವೆ. ಎಲ್ಲ ಮತದಾರರಿಗೆ ವೋಟರ್‌ ಸ್ಲಿಪ್‌ ನೀಡಿದ್ದೇವೆ. ಎಲ್ಲರೂ ಮತದಾನ ಮಾಡಿ ಈ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು. ಈ ಬಾರಿ ನಮ್ಮಲ್ಲಿ ಶೇ. 80ಕ್ಕಿಂತ ಹೆಚ್ಚು ಮತದಾನವಾಗಬೇಕೆಂಬ ಉದ್ದೇಶ, ಆಸೆ ನಮ್ಮದು. ಬನ್ನಿ… ಮತದಾರರೆಲ್ಲರೂ ಮತ ಚಲಾಯಿಸಿ.
– ಹೆಪ್ಸಿಬಾ ರಾಣಿ ಕೊರ್ಲಪಾಟಿ,
ಜಿಲ್ಲಾಧಿಕಾರಿ, ಚುನಾವಣಾಧಿಕಾರಿ ಉಡುಪಿ

ಟಾಪ್ ನ್ಯೂಸ್

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

kejriwal-2

Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ

1-maika

‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Namma Metro; Metro services till 2 am on December 31

Namma Metro; ಡಿಸೆಂಬರ್‌ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

Padubidri: ವೃದ್ಧ ದಂಪತಿಗೆ ಸುರಕ್ಷಿತ ಕಾಲು ಸಂಕದ ಭರವಸೆ

13(1

Udupi: ಕೊರಗ ಸಮುದಾಯಕ್ಕೆ ಸಮಸ್ಯೆಗಳ ಸರಣಿ

12-udupi

Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ

10-kaup

Kaup: ಬೈಕ್ ಗೆ ಕಾರು ಢಿಕ್ಕಿ; ಸವಾರ ಗಂಭೀರ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

kejriwal-2

Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ

1-maika

‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

doctor

ಕೊಪ್ಪಳದಲ್ಲಿ ಕ್ಯಾನ್ಸರ್‌ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್‌ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.