ದಲಿತರ ಮೀಸಲಾತಿ ವಿರೋಧಿಸಿಲ್ಲ; ತಪ್ಪು ಕಲ್ಪನೆಯಿಂದ ಪ್ರತಿಭಟನೆ
Team Udayavani, Nov 28, 2017, 8:37 AM IST
ಉಡುಪಿ: ಧರ್ಮ ಸಂಸದ್‌ನಲ್ಲಿ ನಾನು ಮಂಡಿಸಿ ಸ್ವೀಕರಿಸಿದ ಪ್ರಸ್ತಾವದಲ್ಲಿ ದಲಿತರ ಮೀಸಲಾತಿಯನ್ನು ವಿರೋಧಿಸಿಯೇ ಇಲ್ಲ. ತಪ್ಪು ಕಲ್ಪನೆಗಳಿಂದ ಸಾಹಿತಿಗಳು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಧಾರ್ಮಿಕ ಅಲ್ಪಸಂಖ್ಯಾಕರಿಗೆ ನೀಡುವ ಸವಲತ್ತುಗಳನ್ನು ಧಾರ್ಮಿಕ ಬಹುಸಂಖ್ಯಾಕರಿಗೂ ನೀಡಬೇಕು ಎಂದು ಹೇಳಿದ್ದೆ. ಧಾರ್ಮಿಕ ಅಲ್ಪ ಸಂಖ್ಯಾಕರಲ್ಲಿ ದಲಿತರು ಸೇರುವುದಿಲ್ಲ. ಮುಸ್ಲಿಮರು ಮತ್ತು ಕ್ರೈಸ್ತರು ಸೇರುತ್ತಾರೆ. ಅವರಿಗೆ ನೀಡುವ ಸವಲತ್ತನ್ನು ನಿಲ್ಲಿಸಲು ನಾನು ಹೇಳಿಲ್ಲ. ಆ ಸವಲತ್ತನ್ನು ಉಳಿದ ಧಾರ್ಮಿಕ ಬಹು ಸಂಖ್ಯಾಕ ಹಿಂದೂಗಳಿಗೆ ಅನ್ವಯಿಸಬೇಕು ಎಂದು ಮಾತ್ರ ಹೇಳಿದ್ದೇನೆ. ಇದರಿಂದ ಧಾರ್ಮಿಕ ಬಹು ಸಂಖ್ಯಾಕರಲ್ಲಿ ಸೇರುವ ದಲಿತರಿಗೂ ಹಿಂದುಳಿದವರು ನಡೆಸುವ ಶಿಕ್ಷಣ ಸಂಸ್ಥೆಗಳಿಗೂ ಹೆಚ್ಚಿನ ಸವಲತ್ತುಗಳು ದೊರೆಯಲು ಅವಕಾಶವಾಗುತ್ತದೆ.
ಅದರಂತೆ ಚರ್ಚ್, ಮಸೀದಿಗಳಿಗೆ ಇರುವ ಸ್ವಾಯತ್ತತೆ ಮಠ, ಮಂದಿರಗಳಿಗೂ ದೊರೆಯುತ್ತದೆ. ಇದಕ್ಕಾಗಿ ಸಂವಿಧಾನದಲ್ಲಿ ತಿದ್ದುಪಡಿ ಮಾಡ ಬೇಕಾಗುತ್ತದೆ ಎಂದಿದ್ದೇನೆ. ಸಂವಿಧಾನದಲ್ಲಿ ಅನೇಕ ತಿದ್ದುಪಡಿಗಳು ಈಗಾಗಲೇ ನಡೆದಿವೆ. ನಾನು ಸೂಚಿಸಿದ ತಿದ್ದುಪಡಿ ಸಂವಿಧಾನ ವಿರೋಧಿಯಾಗುತ್ತದೆಯೇ ಎಂದವರು ಪ್ರಶ್ನಿಸಿದ್ದಾರೆ. ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವುದು ಬೇಡ. ಎಲ್ಲರನ್ನು ಸಮಾನವಾಗಿ ನೋಡಿ ಎನ್ನುವುದೇ ಇದರ ಸಂದೇಶವಾಗಿದೆ ಎಂದರು.
ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ.ಎಂ. ಮುನ್ಷಿ, ಬೆನಗಲ್ ರಾಮ ರಾವ್ ಮೊದಲಾದವರು ಸದಸ್ಯರಾಗಿದ್ದ ಸಮಿತಿಯ ಅಧ್ಯಕ್ಷರಾಗಿ ಡಾ| ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಮಿತಿ ಸಂವಿಧಾನದ ಕರಡು ಪ್ರತಿಯನ್ನು ಸಿದ್ಧಪಡಿಸಿತ್ತು. ರಾಜೇಂದ್ರ ಬಾಬು ಅಧ್ಯಕ್ಷತೆಯ ರಾಷ್ಟ್ರದ 500ಕ್ಕಿಂತ ಹೆಚ್ಚು ಪ್ರತಿನಿಧಿಗಳುಳ್ಳ ಸಂಘಟನಾ ಸಮಿತಿಯು ಸಂವಿಧಾನವನ್ನು ಅಂಗೀಕರಿಸಿತ್ತು ಎಂದು ಪೇಜಾವರ ಹಿರಿಯ ಶ್ರೀಗಳು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.