ಒಳಚರಂಡಿ ಕಾಮಗಾರಿಯಿಂದ ರಸ್ತೆಗೆ ಹಾನಿ
Team Udayavani, May 19, 2018, 6:25 AM IST
ಕುಂದಾಪುರ: ನಗರದ ವಿವಿಧೆಡೆ ಒಳ ಚರಂಡಿ ಕಾಮಗಾರಿಗಾಗಿ ಕಾಂಕ್ರೀಟ್ ರಸ್ತೆಯನ್ನು ಅಗೆ ಹಾಕಲಾಗಿದ್ದು ಇದರಿಂದ ರಸ್ತೆಯ ಸೌಂದರ್ಯವೇ ನಾಶವಾಗಿದೆ. ಅಗೆದ ಜಾಗದಲ್ಲಿ ದುರಸ್ತಿ ಮಾಡಿ ಮತ್ತೆ ಕಾಂಕ್ರೀಟ್ ಹಾಕಲಾಗುತ್ತಿದ್ದರೂ, ಮೂಲಸ್ಥಿತಿಗೆ ಬಂದಿಲ್ಲ. ಜತೆಗೆ ವಾಹನ ಸವಾರರಿಗೂ ತ್ರಾಸವಾಗುತ್ತಿದೆ.
ಒಳಚರಂಡಿ ಕಾಮಗಾರಿ
38 ಕೋ.ರೂ. ವೆಚ್ಚದಲ್ಲಿ ಸಮಗ್ರ ಒಳಚರಂಡಿ ಯೋಜನೆಯ ಕಾಮಗಾರಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದೆ. ಅದಕ್ಕಾಗಿ ಪುರಸಭೆ ವ್ಯಾಪ್ತಿಯ ಪ್ರಮುಖ ರಸ್ತೆಗಳನ್ನು ಅಗೆದು ಪೈಪ್‌ಲೈನ್ , ಮ್ಯಾನ್‌ಹೋಲ್ ಅಳವಡಿಸಲಾಗುತ್ತಿದೆ. ಕಾಮಗಾರಿಗಾಗಿ ಅನೇಕ ಕಡೆ ಇಂಟರ್‌ಲಾಕ್ ಕೀಳಲಾಗಿದೆ. ಇನ್ನು ಕೆಲವೆಡೆ ಕಾಂಕ್ರೀಟ್ ರಸ್ತೆ ಅಗೆಯಲಾಗಿದೆ. ಪರಿಣಾಮ ಸುವ್ಯವಸ್ಥಿತ ರಸ್ತೆಗಳು ಹಾಳಾಗಿವೆ. ಕಾಲೇಜು ರಸ್ತೆ, ಚಿಕ್ಕನ್‌ಸಾಲ್ ರಸ್ತೆ, ಈಸ್ಟ್ ಬ್ಲಾಕ್ ವಾರ್ಡ್, ಚರ್ಚ್ ರಸ್ತೆ, ನಾನಾ ಸಾಹೇಬ್ ರಸ್ತೆ ,ಚಿಕ್ಕನ್‌ಸಾಲ್ ರಸ್ತೆ, ಸೈಂಟ್ ಮೆರೀಸ್ ರಸ್ತೆ, ಕುಂದೇಶ್ವರ ದ್ವಾರದ ಎದುರಿನ ಮುಖ್ಯ ರಸ್ತೆಗೆ ಸೇರುವ ರಸ್ತೆ, ಮುಖ್ಯ ರಸ್ತೆಯಿಂದ ಚಿಕ್ಕನ್‌ಸಾಲ್ ರಸ್ತೆಗೆ ಸೇರುವ ಅಡ್ಡ ರಸ್ತೆ, ಅಂಚೆ ಕಚೇರಿ ಸಮೀಪ ಸೇರಿದಂತೆ ಬಹುತೇಕ ಕಡೆ ಅಗೆತ ನಡೆದು ಮರುದುರಸ್ತಿಯಾಗಿದೆ. ಕೆಲವೆಡೆ ದುರಸ್ತಿ ಕಾರ್ಯ ಇನ್ನಷ್ಟೇ ನಡೆಯಬೇಕಿದೆ.
ಈಡೇರದ ಭರವಸೆ
ಪುರಸಭೆಯು ಪೈಪ್‌ಲೈನ್‌ಗೊàಸ್ಕರ ಮೀಸಲಾದ ರಸ್ತೆಯನ್ನು ಮೊದಲಿನಂತೆಯೇ ಮಾಡಿಕೊಡುವ ಭರವಸೆ ನೀಡಿತ್ತು. ಆದರೆ ಭರವಸೆ ಈಡೇರಲೇ ಇಲ್ಲ. ಪುರಸಭೆ ಮತ್ತು ಕರ್ನಾಟಕ ಜಲಮಂಡಳಿ ಈ ಯೋಜನೆ ನಿರ್ವಹಿಸುತ್ತಿದ್ದು ಕಳೆದ ಎರಡು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದರೂ ಇನ್ನೂ ಪೂರ್ಣಗೊಂಡಿಲ್ಲ.
ತೇಪೆಗೆ ವಿರೋಧ
ಒಳಚರಂಡಿ ಕಾಮಗಾರಿಗಾಗಿ ಸುವ್ಯವಸ್ಥಿತ ರಸ್ತೆಯ ಅಂದಗೆಡಿಸಿದ್ದು ಸರಿಯಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯ. ಜತೆಗೆ ಕಾಮಗಾರಿಯಿಂದ ಸಣ್ಣ ಚಕ್ರದ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತದೆ. ದ್ವಿಚಕ್ರ ವಾಹನಗಳು ನಿಯಂತ್ರಣ ಕಳೆದುಕೊಳ್ಳುತ್ತವೆ. ಮಳೆಗಾಲಕ್ಕೆ ಮುನ್ನ ಸಮರ್ಪಕ ಕಾಮಗಾರಿ ನಡೆಯದಿದ್ದರೆ ಇನ್ನಷ್ಟು ತೊಂದರೆ ಎದುರಾದೀತು ಎಂಬ ಆತಂಕವಿದೆ.
ಶೀಘ್ರ ಪೂರ್ಣ
ಮಳೆಗಾಲದ ಒಳಗೆ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ. ಯುಜಿಡಿ ಕಾಮಗಾರಿಗೆ ಸಂಬಂಧಿಸಿದ ಎಂಜಿನಿಯರ್‌ಗೆ ಈ ಕುರಿತು ಪುರಸಭೆಯಿಂದ ಸೂಚನೆ ನೀಡಲಾಗಿದೆ. ಮಳೆಗಾಲದ ಒಳಗೆ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದಾರೆ.
– ರಾಜೇಶ್ ಕಾವೇರಿ,
ಪುರಸಭೆ ಉಪಾಧ್ಯಕ್ಷರು
– ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ
Bengaluru: ಕದ್ದ ಮೊಬೈಲ್ ಕೊರಿಯರ್ ಮೂಲಕ ಕೇರಳಕ್ಕೆ ರವಾನೆ!
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.