ಸಚ್ಚೇರಿಪೇಟೆ-ಕಡಂದಲೆ ಕಲ್ಲೋಳಿ ರಸ್ತೆಗೆ ಸಿಗದ ಡಾಮರು ಭಾಗ್ಯ

ಅಲ್ಲಲ್ಲಿ ಕಾಂಕ್ರೀಟ್‌ ಬಿಟ್ಟರೆ ಕೆಸರು, ಧೂಳೇ ಗತಿ ; ದುರಸ್ತಿಗೆ ಪಂಚಾಯತ್‌ಗೆ ಮನವಿ

Team Udayavani, Jul 6, 2019, 5:12 AM IST

0207BELMNE6A

ಬೆಳ್ಮಣ್‌: ಸುಮಾರು 75 ವರ್ಷಗಳ ಇತಿಹಾಸವುಳ್ಳ ಸಚ್ಚೇರಿ ಪೇಟೆ-ಕಡಂದಲೆ ಕಲ್ಲೋಳಿ ರಸ್ತೆ ಈ ವರೆಗೂ ಡಾಮರು ಭಾಗ್ಯ ಕಂಡಿಲ್ಲ. ಇಲ್ಲಿ ಬೇಸಗೆಯಲ್ಲಿ ಧೂಳಿನ ಸಮಸ್ಯೆಯಾದರೆ, ಮಳೆಗಾಲದಲ್ಲಿ ಹೊಂಡ-ಗುಂಡಿ ಕೆಸರಿನಿಂದ ಆವೃತವಾಗಿ ಸಂಚಾರಕ್ಕೆ ದುರಸ್ತರವಾಗಿದೆ.

ಸಚ್ಚೇರಿಪೇಟೆ ರೈಸ್‌ ಮಿಲ್‌ ಬಳಿ ಯಿಂದ ಕಡಂದಲೆ ಕಲ್ಲೋಳಿ ಸೇತುವೆಯ ವರೆಗಿನ ರಸ್ತೆಯ ಕೆಲ ಭಾಗಕ್ಕೆ ಕಾಂಕ್ರೀಟ್‌ ಹಾಕಿದ್ದ ಬಿಟ್ಟರೆ ಬಹುತೇಕ ಮಣ್ಣಿನ ರಸ್ತೆ ಇದೆ. ಸದ್ಯ ಇದು ಸಂಚಾರಕ್ಕೆ ಅಯೋಗ್ಯ ವಾಗಿದೆ. ಕಳೆದ 75 ವರ್ಷಗಳಿಂದಲೂ ಆಡಳಿತ ಈ ರಸ್ತೆಯ ಅಭಿವೃದ್ಧಿಗೆ ಮುಂದಾಗದಿರು ವುದು, ಜನರೂ ಈ ಬಗ್ಗೆ ಪ್ರತಿಕ್ರಿಯಿಸದಿರುವುದು ಅಭಿವೃದ್ಧಿ ಯಾಗದೆ ಇರಲು ಕಾರಣ ಎಂದು ಜನರಾಡಿಕೊಳ್ಳುತ್ತಿದ್ದಾರೆ.

ಮಣ್ಣಿನ ರಸ್ತೆಯೇ ಗತಿ
ಸಚ್ಚೇರಿಪೇಟೆ ರೈಸ್‌ ಮಿಲ್‌ನ ಪಕ್ಕ ಅಂದರೆ ಹೊಟೇಲ್‌ನ ಹಿಂಭಾಗದ ಪಂಚಾಯತ್‌ ರಸ್ತೆ ಭಾರೀ ಹದಗೆಟ್ಟಿದ್ದು ಅಲ್ಲಲ್ಲಿ ಹೊಂಡಗಳಿರುವ ಪರಿಣಾಮ ಇಲ್ಲಿನ ಪಕ್ಕದ ಮನೆಯವರು ನಿರಂತರ ಕೆಸರಿನ ಸಿಂಚನ ಅನುಭವಿಸುತ್ತಿದ್ದಾರೆ. ಈ ಭಾಗದ ಜನರೇ ಸೇರಿ ಒಂದಿಷ್ಟು ಮಣ್ಣು ಹಾಕಿ ಹೊಂಡ ಮುಚ್ಚಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿದ್ದು ದುರಸ್ತಿಗೆ ಪಂಚಾಯತ್‌ಗೆ ಪದೇ ಪದೇ ಮನವಿ ಮಾಡಿದ್ದಾರೆ.

ಕಡಂದಲೆ, ಬೋಳಕ್ಕೆ ಹತ್ತಿರದ ರಸ್ತೆ
ಈ ರಸ್ತೆ ಕಡಂದಲೆ ಹಾಗೂ ಬೋಳ ಗ್ರಾಮಗಳಿಗೆ ಹತ್ತಿರದ ಸಂಪರ್ಕ ರಸ್ತೆಯಾಗಿದ್ದು ವಿಧ ಶಾಲೆ, ಕಾಲೇಜು, ಕಚೇರಿಗಳಿಗೆ ಹೋಗುವ ಜನ ಇದೇ ರಸ್ತೆ ಬಳಸುತ್ತಿದ್ದಾರೆ. ಈ ರಸ್ತೆಯಲ್ಲಿ ಮುಂದಕ್ಕೆ ಸಾಗಿದರೆ ಪಂಚಾಯತ್‌ ನೀಡಿದ್ದ 80 ಕ್ಕೂ ಹೆಚ್ಚು ಸರಕಾರಿ ನಿವೇಶನಗಳಲ್ಲಿ ಜನ ವಾಸವಾಗಿದ್ದು ಅವರೆಲ್ಲರೂ ಇದೇ ರಸ್ತೆಯನ್ನು ಬಳಸಿ ಸಾಗಬೇಕಾಗಿದೆ.

ಜನಪ್ರತಿನಿಧಿಗಳ ಮೌನ
ಪಂಚಾಯತ್‌ ರಸ್ತೆಯಾಗಿದ್ದರೂ ದುರಸ್ತಿ ಬಗ್ಗೆ ಪಂಚಾಯತ್‌ ಆಡಳಿತ ದಿವ್ಯ ನಿರ್ಲಕ್ಷé ತೋರುತ್ತಿರುವ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಜಾಗದ ಸಮಸ್ಯೆ
ಹಿಂದೆ ಪಂಚಾಯತ್‌ ವತಿಯಿಂದ ಈ ರಸ್ತೆಗೆ ಕಾಂಕ್ರೀಟ್‌ ಹಾಕಲು ಅನುದಾನ ಮಂಜೂರಾಗಿತ್ತು. ಜಾಗದ ತೊಂದರೆಯಿಂದ ರಸ್ತೆಯ ಮುಂದಿನ ಭಾಗಕ್ಕೆ ಕಾಂಕ್ರೀಟ್‌ ಹಾಕಲಾಗಿದೆ. ಇದೀಗ ರಸ್ತೆ ದುರಸ್ತಿಗೆ ಪಂಚಾಯತ್‌ ಸಿದ್ಧವಿದೆ. ಜಾಗದ ಸಮಸ್ಯೆ ಇಲ್ಲದಿದ್ದರೆ ಈ ರಸ್ತೆಯನ್ನು ಸರಿಪಡಿಸಲಾಗುವುದು.
-ಶುಭಾ ಪಿ.ಶೆಟ್ಟಿ,,ಅಧ್ಯಕ್ಷರು,
ಮುಂಡ್ಕೂರು ಗ್ರಾ.ಪಂ.

ವಾಹನ ಸಂಚಾರ ಕಷ್ಟ
ಸಾವಿರಾರು ಜನ ಸಂಚಾರ ಇರುವ ಈ ಹಳೆಯ ರಸ್ತೆ ಇನ್ನೂ ದುರಸ್ತಿ ಕಂಡಿಲ್ಲ. ಕೆಸರು ಹಾಗೂ ಧೂಳಿನಿಂದ ಕೂಡಿರುವ ಈ ರಸ್ತೆಯಲ್ಲಿ ವಾಹನ ಸಂಚಾರ ಹಾಗೂ ಜನ ಸಂಚಾರ ಬಲು ಕಷ್ಟ.
-ಶಶಿಕಾಂತ ಸಚ್ಚೇರಿಪೇಟೆ, ಗ್ರಾಮಸ್ಥ

ಟಾಪ್ ನ್ಯೂಸ್

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

8

Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!

3

Karkala: ಕಾಮಗಾರಿಗೆ ಅಡ್ಡಿ; ಸಾರ್ವಜನಿಕರ ಆಕ್ರೋಶ

5-katapady

Katapady: ಕುಂತಳನಗರ ಭಾರತಿ ಹಿ. ಪ್ರಾ. ಶಾಲೆ; ಶತಮಾನೋತ್ಸ ವ ಸಮಾರಂಭಕ್ಕೆ ಚಾಲನೆ

4-katapady

ಶ್ರೀಕ್ಷೇತ್ರ ಪೇಟೆಬೆಟ್ಟು ಕಟಪಾಡಿ- ಜ.4,5: ಬಬ್ಬುಸ್ವಾಮಿ, ಪರಿವಾರ ದೈವಗಳ ನೇಮೋತ್ಸವ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

police

Kasaragod; ಬಂದೂಕು ತೋರಿಸಿ ಹಲ್ಲೆ : ನಾಲ್ವರ ಮೇಲೆ ಕೇಸು

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

2

Mulki: ಗಾಂಜಾ ಮಾರಾಟ ಯತ್ನ; ಇಬ್ಬರ ಬಂಧನ

accident

Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.