ಕಟಪಾಡಿ: ಅಪಾಯಕಾರಿ ಹಂಪ್ಸ್ !
ಸವಾರರ ಗಮನ ಸೆಳೆಯಲು ಬಣ್ಣ ಬಳಿದು ಸೂಚನಾ ಫಲಕ ಅಳವಡಿಕೆ
Team Udayavani, Mar 27, 2019, 6:30 AM IST
ಕಟಪಾಡಿ: ಅಪಾಯ ಕಾರಿಯಾಗಿ ಕಂಡು ಬರುತ್ತಿದ್ದ ಕಟಪಾಡಿ ಹಳೆ ಎಂಬಿಸಿ ರಸ್ತೆಯಲ್ಲಿ ಸುರಕ್ಷತೆ ಮತ್ತು ವೇಗ ನಿಯಂತ್ರಣಕ್ಕಾಗಿ ನಿರ್ಮಿಸಲಾಗಿದ್ದ ಹಂಪ್ಸ್ ಗೆ ಇದೀಗ ಬಣ್ಣ ಬಳಿದು, ಅನತಿ ದೂರದಲ್ಲಿ ಬಿಳಿ ಬಣ್ಣದ ಪಟ್ಟಿಯನ್ನು ಹೊಡೆದು, ಗಮನ ಸೆಳೆಯುವ ರೀತಿಯಲ್ಲಿ ಸೂಚನಾ ಫಲಕವೊಂದನ್ನು ಅಳವಡಿಸಲಾಗಿದೆ.
ಕಲ್ಲಾಪು, ಕೋಟೆ, ಕಟಪಾಡಿ ಪೇಟೆ ಭಾಗದಿಂದ ಅತೀ ಹೆಚ್ಚಿನ ವಾಹನ ಸಂಚರಿಸುವ ಕಟಪಾಡಿ ಪೇಟೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ
ಕಲ್ಪಿಸುವ ಪ್ರಮುಖ ಒಳ ರಸ್ತೆ ಇದಾಗಿದ್ದು, ಇಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾದ ಹಂಪ್ಸ್‌ನಿಂದಾಗಿ ಸವಾರರು ಅಪಘಾತಕ್ಕೀಡಾಗಿ ಗಾಯಗೊಂಡಿದ್ದರು ಎಂದು ಸ್ಥಳೀಯರು ಆರೋಪಿಸಿದ್ದರು.
ಶನಿವಾರ ಉದ್ಯಾವರದ ದ್ವಿಚಕ್ರ ವಾಹನ ಸವಾರ ಬಿದ್ದು ಬಲಕಾಲಿನ
ಮೂಳೆ ಮುರಿತಕ್ಕೊಳಗಾಗಿದ್ದು ಮತ್ತೆ ಈ ಬಗ್ಗೆ ಗಮನ ಸೆಳೆಯುವಂತಾಗಿತ್ತು.
ಹಂಪ್ಸ್ ಇರುವಿಕೆಯ ಬಗ್ಗೆ ವಾಹನ ಸವಾರರ ಗಮನ ಸೆಳೆಯಲು
ಸೋಮವಾರ ತಡರಾತ್ರಿಯಲ್ಲಿ ಬಣ್ಣ ಬಳಿಯಲಾಗಿದ್ದು, ಆಯಕಟ್ಟಿನ ಸ್ಥಳದಲ್ಲಿ ಸೂಚನಾ ಫಲಕವನ್ನು ಅಳವಡಿಸಲಾಗಿರುತ್ತದೆ.
ಈ ಬಗ್ಗೆ ನಿತ್ಯ ಸಂಚಾರಿಗಳು ಸಂತಸ ವ್ಯಕ್ತಪಡಿಸಿದ್ದು, ವಾಹನ ಸವಾರರು ಸೂಚನಾ ಫಲಕವನ್ನು ಅನುಸರಿಸಿ ಎಚ್ಚೆತ್ತು ವಾಹನ ಚಲಾಯಿಸುವಂತೆಯೂ ಆಗ್ರಹಿಸುತ್ತಿದ್ದಾರೆ.
ಸುರಕ್ಷತೆ ಕಲ್ಪಿಸಲು ಯತ್ನ
ವೇಗವಾಗಿ ಬೈಕ್ ಸಹಿತ ಇತರೇ ವಾಹನಗಳು ಇಲ್ಲಿ ಅಪಾಯಕಾರಿಯಾಗಿ ಸಂಚರಿಸಿ ಅಪಘಾತವಾಗುತ್ತಿದ್ದುದನ್ನು ಗಮನಿಸಿ ಮತ್ತು ಈ ಭಾಗದಲ್ಲಿ ಅಕ್ಕಪಕ್ಕದಲ್ಲಿ ಮನೆಗಳಿದ್ದು ಅಪಘಾತವನ್ನು ತಪ್ಪಿಸಲು ವೇಗ ನಿಯಂತ್ರಣಕ್ಕಾಗಿ ಹಂಪ್ಸ್ ಅಳವಡಿಸಲಾಗಿತ್ತು. ಇದೀಗ ವಾಹನ ಸವಾರರ ಗಮನ ಸೆಳೆಯುವ ಮಾದರಿಯಲ್ಲಿ ಬಣ್ಣ, ಬಣ್ಣದ ಪಟ್ಟಿ, ಸೂಚನಾ ಫಲಕವನ್ನು ಸುರಕ್ಷತಾ ದೃಷ್ಟಿಯಿಂದ ಅಳವಡಿಸಲಾಗಿದೆ. ರಿಫ್ಲೆಕ್ಟರ್ ಲಭ್ಯವಾದ ಕೂಡಲೇ ಅಳವಡಿಸಿ ಮತ್ತಷ್ಟು ಸುರಕ್ಷತೆ ಕಲ್ಪಿಸಲು ಯತ್ನಿಸುತ್ತೇನೆ .
-ಪ್ರೇಮ್ ಕುಮಾರ್ ಕಟಪಾಡಿ, ಮಾಜಿ ಗ್ರಾ.ಪಂ. ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.