ಕಾರ್ಕಳ: ಲಿಫ್ಟ್ ಬಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ
Team Udayavani, Feb 12, 2019, 1:00 AM IST
ಕಾರ್ಕಳ: ನಗರದ ಮುಖ್ಯ ರಸ್ತೆಯಲ್ಲಿನ ಸಾಲ್ಮರ ಎಂಬಲ್ಲಿ ಕಾಮಗಾರಿ ಸ್ಥಗಿತಗೊಂಡಿರುವ ಬಹುಮಹಡಿ ಕಟ್ಟಡ ವೊಂದರಲ್ಲಿ ಸಾಮಗ್ರಿ ಮೇಲೇರಿಸುವ ಲಿಫ್ಟ್ ಅಪಾಯಕಾರಿ ಸ್ಥಿತಿಯಲ್ಲಿದ್ದು, ಅನಾಹುತಕ್ಕೆ ಆಹ್ವಾನ ನೀಡುತ್ತಿದೆ.
ಮುರಿದು ಬೀಳುವ ಸ್ಥಿತಿ
ಕಟ್ಟಡಕ್ಕೆ ಹೊಂದಿಕೊಂಡಂತೆ ಕಬ್ಬಿಣದ ರಾಡ್ ಬಳಸಿ ಲಿಫ್ಟ್ ನಿರ್ಮಿಸಲಾಗಿದ್ದು, ತುಕ್ಕು ಹಿಡಿದಿರುವುದು ಮಾತ್ರವಲ್ಲದೇ ಅದಕ್ಕೆ ಆಧಾರವಾಗಿರುವ ಮರದ ತುಂಡುಗಳು ಮುರಿದು ಬೀಳುವ ಸ್ಥಿತಿಯಲ್ಲಿದೆ.
ಸಂಭಾವ್ಯ ಅನಾಹುತ ನಡೆದಲ್ಲಿ ಭಾರವಾದ ರಾಡ್ ಹೈ ಟೆನÒನ್ ತಂತಿಗೆ ಬೀಳಲಿದೆ. ಪೇಟೆಯ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಈ ಕಟ್ಟಡ ಜನನಿಬಿಡ ಪ್ರದೇಶದಲ್ಲಿರುವುದರಿಂದ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಶೀಘ್ರ ಗಮನ ಹರಿಸಿದಲ್ಲಿ ಉತ್ತಮ.
ಯಾಕೆ ನಿರ್ಲಕ್ಷ್ಯ?
ಪುರಸಭೆಯ 5ನೇ ವಾರ್ಡ್‌ನಲ್ಲಿ 8 ಅಂತಸ್ತುಗಳನ್ನು ಹೊಂದಿರುವ ಈ ಕಟ್ಟಡದ ಕಾಮಗಾರಿ ಅರ್ಧದಲ್ಲೇ ಮೂರು ವರ್ಷಗಳು ಕಳೆದರೂ, ಕಟ್ಟಡದ ಮಾಲಕರು ಅದಕ್ಕೆ ಕಟ್ಟಿದ ಲಿಫ್ಟ್ ತೆರವು ಮಾಡಲು ಮುಂದಾಗಿಲ್ಲ. ಇದು ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ.
ಕಾರ್ಯಾಲಯದಿಂದ ಅನತಿ ದೂರದಲ್ಲಿದ್ದರೂ ಅಪಾಯಕಾರಿ ಲಿಫ್ಟ್ ಕುರಿತು ಪುರಸಭೆಯ ಅರಿವಿಗೆ ಬಾರದಿರುವುದು ಆಶ್ಚರ್ಯವೇ ಸರಿ!
ಮೆಸ್ಕಾಂ ಮೌನ
ಹೈ ಟೆನÒನ್ ತಂತಿ ಹಾದು ಹೋಗಿದ್ದಾಗ್ಯೂ ಮೆಸ್ಕಾಂ ಮಾತ್ರ ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದೆ ಮೌನ ವಹಿಸಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಅಪಾಯ ಸಂಭವಿಸುವ ಮೊದಲು ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಕೊಂಡು ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಲ್ಲಿ ಉತ್ತಮ.
ಪುರಸಭೆಗೆ ದೂರು ನೀಡುತ್ತೇವೆ
ಸಾರ್ವಜನಿಕರಿಗೆ ತೊಂದರೆಯಾಗಲಿರುವ ಕುರಿತು ನಾವು ಪುರಸಭೆಗೆ ದೂರು ನೀಡುತ್ತೇವೆ. ಪುರಸಭೆಯೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ.
– ನಾರಾಯಣ ನಾಯ್ಕ ಕಾರ್ಯನಿರ್ವಾಹಕ ಎಂಜಿನಿಯರ್, ಮೆಸ್ಕಾಂ ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.