ಡಂಗುರಾವ ಸಾರಿ ಹರಿಯ ಡಿಂಗರಿಗರೆಲ್ಲರೂ…


Team Udayavani, Jul 6, 2017, 3:45 AM IST

dangura.jpg

ಡಂಗುರಾವ ಸಾರಿ ಹರಿಯ ಡಿಂಗರಿಗರೆಲ್ಲರೂ
ಭೂಮಂಡಲಕ್ಕೆ ಪಾಂಡುರಂಗ ವಿಠಲ ಪರದೈವವೆಂದು||
ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದು|
ಬಿಡದೆ ಢಣಾರ್‌ ಢಣಾರ್‌ ಎಂದು ಬಡಿದು ಚಪ್ಪಾಳಿಕ್ಕುತಾ|| ಡಂಗುರಾವ||
ಹರಿಯು ಮುಡಿದ ಹೂವು ಹರಿವಾಣದಲ್ಲಿಟ್ಟುಕೊಂಡು|
ಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಾಳಿಕ್ಕುತಾ||ಡಂಗುರಾವ||
ಇಂತು ಸಕಲ ಲೋಕಕ್ಕೆ ಲಕ್ಷ್ಮೀಕಾಂತ ನಲ್ಲದಿಲ್ಲವೆಂದು|
ಸಂತತಂ ಭಜಿಸುತ ನಿಶ್ಚಿಂತ ಪುರಂದರ ವಿಠಲನೆಂದೂ|| ಡಂಗುರಾವ||

ಈ ಹಾಡನ್ನು ಭಾಗವತರು ಹಾಡುತ್ತಿದ್ದಂತೆ ಉಡುಪಿ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಸ್ವಾಮೀಜಿಯವರು ಹೆಜ್ಜೆ ಹಾಕುತ್ತಾರೆ. ಇದು ಆಷಾಢ ಶುದ್ಧ ಏಕಾದಶಿ ಮಂಗಳವಾರ ರಾತ್ರಿ ಶ್ರೀಕೃಷ್ಣಮಠದಲ್ಲಿ ಹರಿವಾಣ ನೃತ್ಯ ಸೇವೆ ಸಂದರ್ಭ ಕಂಡು ಬಂದ ದೃಶ್ಯ.  

ರಾತ್ರಿ ಪೂಜೆಯಾದ ಬಳಿಕ ಸ್ವಾಮೀಜಿಯವರು ಕೃಷ್ಣನ ಗರ್ಭಗುಡಿ ಹೊರಗಿನ ಚಂದ್ರಶಾಲೆಯಲ್ಲಿ ಕುಳಿತಿರುತ್ತಾರೆ. ಆಗ ಸೂರ್ಯವಾದ್ಯವೇ ಮೊದಲಾದ ನಾಲ್ಕು ಬಗೆಯ ವಾದ್ಯೋಪಕರಣಗಳನ್ನು ಕಲಾವಿದರು ನುಡಿಸುತ್ತಾರೆ. ಅನಂತರ ಸಂಕೀರ್ತನೆ ನಡೆಯುತ್ತದೆ. ಭಾಗವತರು ನಾಲ್ಕು ಪದ್ಯಗಳನ್ನು ಹಾಡುತ್ತಾರೆ. ಪುರಾಣ ಹೇಳುವವರು ಸಾಂಕೇತಿಕವಾಗಿ ಪುರಾಣ ಪ್ರವಚನ ಮಾಡುತ್ತಾರೆ. ತೀರ್ಥಮಂಟಪದೆದುರು ಬಂದು ಸ್ವಾಮೀಜಿ ಮಂಗಳಾರತಿ ಮಾಡುತ್ತಾರೆ. ಆಗ ಭಾಗವತರು “ಡಂಗುರಾವ ಸಾರಿ ಹರಿಯ ಡಿಂಗರಿಗರೆಲ್ಲರೂ…|’ ಹಾಡುತ್ತಾರೆ. ದೇವರಿಗೆ ಸಮರ್ಪಿಸಿದ ತುಳಸಿ ಮತ್ತು ಹೂವುಗಳನ್ನು ಹರಿವಾಣದಲ್ಲಿರಿಸಿ ಹರಿವಾಣವನ್ನು ತಲೆ ಮೇಲೆ ಹೊತ್ತು ಸ್ವಾಮೀಜಿ ನರ್ತಿಸುತ್ತಾರೆ. ಇದಾದ ಬಳಿಕ ತುಳಸಿ ಮತ್ತು ಹೂವನ್ನು ಭಕ್ತರಿಗೆ ವಿತರಿಸಲಾಗುತ್ತದೆ. 

ಹಾಡಿನ ಮೊದಲ ಸೊಲ್ಲು ಹೇಳುವಾಗ ಹಿರಿಯ ಸ್ವಾಮೀಜಿ ಹರಿವಾಣವನ್ನು ಹೊತ್ತು ನರ್ತಿಸಿದರೆ ಕೊನೆಯ ಎರಡು ಸೊಲ್ಲು ಹೇಳುವಾಗ ಕಿರಿಯ ಸ್ವಾಮೀಜಿ ನರ್ತಿಸಿದರು. ನರ್ತನವೆಂದರೆ ಸಾಮಾನ್ಯ ಹೆಜ್ಜೆ ಅಷ್ಟೆ. ಏಕಾದಶಿ ದಿನ ನಿರ್ಜಲ ಉಪವಾಸದಲ್ಲಿದ್ದು ರಾತ್ರಿ ಪೂಜೆಯಾದ ಬಳಿಕ ಪಾಂಡುರಂಗ ಈ ಜಗಕ್ಕೆಲ್ಲಾ ಮುಖ್ಯಸ್ಥನೆಂಬುದು ಅನುಸಂಧಾನ ಮಾಡುವುದು/ ಸಾರುವುದು ಈ ಹಾಡಿನ ಸಾರ. ರಾತ್ರಿ ಪುರಾಣ ಪ್ರವಚನ,  ಸಂಕೀರ್ತನ, ನರ್ತನದಿಂದ ಜಾಗರವಿರಬೇಕೆಂಬ ಸಂಕೇತಾರ್ಥದಲ್ಲಿ ಈ ಆಚರಣೆಗಳು ಚಾಲ್ತಿಗೆ ಬಂದಿವೆ. ಚಾತುರ್ಮಾಸ್ಯದ ನಾಲ್ಕೂ ತಿಂಗಳಲ್ಲಿ ಬರುವ ಎಂಟು ಏಕಾದಶಿಗಳಂದು ಉಡುಪಿ ಸಂಪ್ರದಾಯದ ಎಲ್ಲಾ ಸ್ವಾಮೀಜಿಯವರು ಎಲ್ಲಿ ಮೊಕ್ಕಾಂ ಇರುತ್ತಾರೋ ಅಲ್ಲಿ ಈ ತೆರನಾದ ಆಚರಣೆ ನಡೆಯುತ್ತದೆ.

ಟಾಪ್ ನ್ಯೂಸ್

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.