ಅತ್ಯಾಚಾರಗೈದು ಗರ್ಭಿಣಿಯ ಕೊಲೆ: ಅಪರಾಧಿಗೆ ಮರಣದಂಡನೆ


Team Udayavani, Feb 21, 2018, 9:24 AM IST

258863.jpg

ಕುಂದಾಪುರ: ಪಡುಗೋಪಾಡಿಯ ಗರ್ಭಿಣಿಯ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಪ್ರಕರಣದ ಅಪರಾಧಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಕುಂದಾಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ. ಗೋಪಾಡಿ ಗ್ರಾಮದ ಪಡುಗೋಪಾಡಿಯ ನಿವಾಸಿ ಪ್ರಶಾಂತ ಮೊಗವೀರ (30) ಅಪರಾಧಿ. 

ಆತ ಪಡುಗೋಪಾಡಿಯ ಲಿಂಗಜ್ಜಿ ಮನೆ ನಿವಾಸಿ, ಮೀನುಗಾರ ಆನಂದ ಅವರ ಪತ್ನಿ, ಐದು ತಿಂಗಳ ಗರ್ಭಿಣಿ ಇಂದಿರಾ (30) ಅವರ ಮೇಲೆ ಅತ್ಯಾಚಾರಗೈದು ಹತ್ಯೆ ಮಾಡಿದ್ದ, ಫೆ. 14 ರಂದು ಆತನ ‌ ಮೇಲಿದ್ದ ಆರೋಪಗಳೆಲ್ಲ ಸಾಬೀತಾಗಿತ್ತು ಕಾರವಾರದ ಜೈಲಿನಲ್ಲಿದ್ದ ಆತ‌ನನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶ ಪ್ರಕಾಶ ಖಂಡೇರಿ ಶಿಕ್ಷೆ ವಿಧಿಸಿ ‌ ತೀರ್ಪು ನೀಡಿದ್ದಾರೆ. 

ಗರಿಷ್ಠ ಶಿಕ್ಷೆ
ಪ್ರಶಾಂತ್‌ ಮೊಗವೀರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 448 ರಡಿ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿದ್ದಕ್ಕೆ 1 ವರ್ಷ ಕಠಿನ ಶಿಕ್ಷೆ, ಕಳ್ಳತನ ಉದ್ದೇಶದಿಂದ ಅಕ್ರಮ ಪ್ರವೇಶಕ್ಕೆ 351 ರಡಿ 4 ವರ್ಷ ಕಠಿನ ಸಜೆ, ಅತ್ಯಾಚಾರ ಎಸಗಿದ್ದಕ್ಕೆ 376 ರಡಿ 10 ವರ್ಷ ಕಠಿನ ಶಿಕ್ಷೆ, ಕುತ್ತಿಗೆಯಲ್ಲಿದ್ದ ಕರಿಯಮಣಿ ಕಳ್ಳತನಕ್ಕೆ 10 ವರ್ಷ ಕಠಿನ ಸಜೆ, 5 ತಿಂಗಳ ಹೆಣ್ಣು ಭ್ರೂಣ ಹೊಟ್ಟೆಯಲ್ಲಿದ್ದ ಗರ್ಭಿಣಿಯನ್ನು ಕ್ರೂರವಾಗಿ ಕೊಲೆಗೈದುದಕ್ಕಾಗಿ ಮರಣದಂಡನೆ ಶಿಕ್ಷೆಯನ್ನು ನ್ಯಾಯಾಧೀಶರು ವಿಧಿಸಿದ್ದಾರೆ. 

 ಆಕೆ ಇಲ್ಲವೆಂಬ ಕೊರಗಿದ್ದರೂ, ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆ ನೀಡಿರುವುದು ನೋವಿನಲ್ಲೂ ನೆಮ್ಮದಿ ತಂದಿದೆ ಎಂದು ಇಂದಿರಾ ಪತಿ ಆನಂದ ಪ್ರತಿಕ್ರಿಯಿಸಿದ್ದಾರೆ.

ಅಪರಾಧಿಗೆ ಗಲ್ಲು ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಮೃತ ಮಹಿಳೆಯ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.  ಮೃತ ಮಹಿಳೆ ಪರ ರವಿಕಿರಣ್‌ ಮುಡೇìಶ್ವರ  ವಿಶೇಷ ಸರಕಾರಿ ಅಭಿಯೋಜಕರಾಗಿ, ಸಂಭಾವನೆ ಪಡೆಯದೇ ವಾದ ಮಂಡಿಸಿದ್ದರು.

ಕಣ್ಣೀರಿಟ್ಟ ಅಪರಾಧಿ
ಶಿಕ್ಷೆ ಪ್ರಕಟಿಸುತ್ತಿದ್ದಂತೆ ಕಟಕಟೆಯಲ್ಲಿ ನಿಂತಿದ್ದ ಪ್ರಶಾಂತ್‌ ಮೊಗವೀರ ಭಾವುಕನಾಗಿದ್ದ. ಬಳಿಕ ಮತ್ತೆ ಕಾರಾವಾರ ಜೈಲಿಗೆ ಕರೆದೊಯ್ಯುಲು ಕೋರ್ಟ್‌ ಹೊರಗೆ ಕರೆತರುವಾಗ ಗಳಗಳನೇ ಅತ್ತ. ತಂದೆ ತಾಯಿ ಇಲ್ಲದ ಪ್ರಶಾಂತ್‌ ಮೊಗವೀರ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದನು. ಅವಿವಾಹಿತನಾಗಿದ್ದ ಈತ ಈ ಕೃತ್ಯ ಎಸಗುವ ಒಂದು ತಿಂಗಳ ಹಿಂದೆ ಮಲ್ಪೆಯಲ್ಲಿ ಮೀನುಗಾರಿಕೆಯ ಬಲೆಯ ಸೀಸ ಕದ್ದು ಮಲ್ಪೆ ಪೊಲೀಸರಿಂದ ಬಂಧನಕ್ಕೆ ಒಳಗಾಗಿ 13 ದಿ® ಹಿರಿಯಡ್ಕ ಜೈಲಿನಲ್ಲಿದ್ದನು. 

ಎರಡನೆ ಗಲ್ಲು ಶಿಕ್ಷೆ ತೀರ್ಪು
ಉಡುಪಿ ಜಿಲ್ಲೆಯ ಇತಿಹಾಸದಲ್ಲಿ ಎರಡನೇ ಮರಣದಂಡನೆ ತೀರ್ಪು ನೀಡಿದ ಪ್ರಕರಣವಾಗಿದ್ದು, ಈ ಹಿಂದೆ 2010 ರಲ್ಲಿ ನೂಜಾಡಿಯ ಅಕ್ಕಯ್ಯ ಪೂಜಾರಿ¤ ಕೊಲೆ ಪ್ರಕರಣದ ಆರೋಪಿ ಸತೀಶ್‌ ಹೆಮ್ಮಾಡಿಗೆ ಮರಣದಂಡನೆ ವಿಧಿಸಿ ಕುಂದಾಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2016 ರ ಎ. 29 ರಂದು ತೀರ್ಪು ನೀಡಿತ್ತು. ಆದರೆ 2017ರ ಅ.  12 ರಂದು ಹೈಕೋರ್ಟ್‌ ನ ರವಿ ಮಳೀಮs… ಹಾಗೂ ಡಿಕುನ್ಹಾ ಅವರಿದ್ದ ವಿಭಾಗೀಯ ಪೀಠ ಆ ತೀರ್ಪನ್ನು ರದ್ದುಪಡಿಸಿ, ಆರೋಪಿಯನ್ನು ನಿರ್ದೋಷಿ ಎಂದು ಘೋಷಿಸಿದೆ. 

ಪೆನ್‌ ನೆಲಕ್ಕೆಸೆದ ನ್ಯಾಯಾಧೀಶರು
ಪ್ರಕಾಶ್‌ ಖಂಡೇರಿ ಗಲ್ಲು ಶಿಕ್ಷೆ ಪ್ರಕಟಿಸಿದ ಬಳಿಕ ತೀರ್ಪು ಬರೆದ ಪೆನ್ನನ್ನು ನೆಲಕ್ಕೆ ರಭಸವಾಗಿ ಎಸೆದರು. ಗಲ್ಲು, ಅಥವಾ ಮರಣ ದಂಡನೆ ಶಿಕ್ಷೆ ಘೋಷಿಸಿದನ ಬಳಿಕ ಮತ್ತೆ ಇಂತಹ ಪ್ರಕರಣ ಮರುಕಳುಹಿಸದಿರಲಿ ಎನ್ನುವ ಕಾರಣಕ್ಕೆ ನ್ಯಾಯಾಧೀಶರು ಪೆನ್ನಿನ ನಿಬ್‌ ಮುರಿಯುವುದು ಅಥವಾ ಪೆನ್ನನ್ನು ಎಸೆಯುತ್ತಾರೆ. ಕೊಲೆ, ಅತ್ಯಾಚಾರ, ಹೆಣ್ಣು ಭ್ರೂಣ ಹತ್ಯೆಯಂತಹ ಗಂಭೀರ ಆರೋಪ ಎಸಗಿದ ಆರೋಪಿಗೆ ಗಲ್ಲು ಶಿಕ್ಷೆ ಬಿಟ್ಟರೆ ಬೇರೆ ಯಾವ ಶಿಕ್ಷೆ ನೀಡಿದರೂ ಕಡಿಮೆಯೇ ಎಂದು ಸುಪ್ರೀಂ ಕೋರ್ಟ್‌ ತೀರ್ಪುಗಳನ್ನು ಉಲ್ಲೇಖೀಸಿ ಈ ತೀರ್ಪು ನೀಡಿದ್ದಾರೆ.

ಟಾಪ್ ನ್ಯೂಸ್

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

3

Kundapura: ಟವರ್‌ನ ಬುಡದಲ್ಲೇ ನೆಟ್‌ವರ್ಕ್‌ ಇಲ್ಲ!

3-girish

Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ

16

Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು

1-vvv

ಭಾರತ ಮಾತೆಗೆ ಕಿರೀಟ ತೊಡಿಸಿದ ಸರಕಾರ:’ವಿಶ್ವಾರ್ಪಣಮ್‌’ನಲ್ಲಿ ಪಲಿಮಾರು ಶ್ರೀ ಅಭಿಮತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.