ಮೀನುಗಾರರಿಗೆ ಶೂನ್ಯ ಬಡ್ಡಿದರದಲ್ಲಿ  ಸಾಲ: ಸಿದ್ದರಾಮಯ್ಯ


Team Udayavani, Jan 9, 2018, 8:23 AM IST

09-5.jpg

ಬೈಂದೂರು: ಮೀನುಗಾರರಿಗೆ ಈಗಿರುವ ಶೇ.4 ಬಡ್ಡಿದರವನ್ನು ಕಡಿತಗೊಳಿಸಿ, ಶೂನ್ಯ ಬಡ್ಡಿದರದಲ್ಲಿ  ಸಾಲ ನೀಡಲಾಗುವುದು. ಮುಂದಿನ ಬಜೆಟ್‌ನಲ್ಲಿ ಇದನ್ನು ಘೋಷಿಸು ತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ಇಲ್ಲಿನ ಗಾಂಧಿ ಮೈದಾನದಲ್ಲಿ ಸೋಮವಾರ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 36 ಯೋಜನೆಗಳ 490.97 ಕೋ. ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ತತ್‌ಕ್ಷಣ ಅಚ್ಛೇ ದಿನ್‌ ಆಯೇಗಾ ಎಂದು ಹೇಳಿದ್ದರೂ ಬಡವರು, ರೈತರು, ಮೀನುಗಾರರಿಗೆ ಅಚ್ಛೇ ದಿನ್‌ ಬಂದಿದೆಯೇ? ಕಪ್ಪುಹಣ ತಂದು ಎಲ್ಲರ ಬ್ಯಾಂಕ್‌ ಖಾತೆಗೂ 15 ಲ.ರೂ. ಜಮಾಯಿಸುವುದಾಗಿ ಘೋಷಿಸಿ ದರೂ ಯಾರಿಗೂ 15 ಪೈಸೆ ಕೂಡ ಬಂದಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಸುವುದಾಗಿ ಹೇಳಿದ್ದರು, ವರ್ಷಕ್ಕೆ 2 ಲಕ್ಷ ಮಂದಿಗೆ ಉದ್ಯೋಗ ನೀಡಲಾಗಿಲ್ಲ. ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂಬ ಭರವಸೆ ಹುಸಿ ಯಾಗಿದೆ. ಅಚ್ಛೇ ದಿನ್‌ ರಾಮದೇವ್‌, ಅಂಬಾನಿ, ಅದಾನಿಗಳಂಥ ಬಂಡವಾಳ ಶಾಹಿಗಳಿಗೆ ಬಂದಿದೆ ಎಂದು ಸಿಎಂ ಕುಟುಕಿದರು. 

ಅದು ಅವರ ಚಾಳಿ
ರಾಜ್ಯ ಸರಕಾರ ಮಂಜೂರು ಮಾಡಿದ ಕಾಮಗಾರಿಗಳು ಕೇಂದ್ರದ್ದೆಂದು ಹೇಳಿಕೊಂಡು ಬ್ಯಾನರ್‌ ಹಾಕಿಕೊಳ್ಳುವುದು ಬಿಜೆಪಿಯ ಚಾಳಿ. ಅವರು ಕೆಲಸ ಮಾಡುವುದು ಕಮ್ಮಿ, ಪ್ರಚಾರ ಜಾಸ್ತಿ. ಯಾರು ಎಷ್ಟು ಅನುದಾನ ನೀಡಿದ್ದಾರೆ, ಮಂಜೂರು ಮಾಡಿಸಿದ್ದಾರೆ ಎಂದು ಜನರಿಗೆ ಗೊತ್ತಿದೆ. ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಕೊಟ್ಟದ್ದು ಸೈಕಲ್‌ ಮತ್ತು ಸೀರೆ ಎರಡೇ. ಸಿಎಂ ಆದಿಯಾಗಿ ಹೆಚ್ಚಿನವರು ಜೈಲಿಗೆ ಹೋದ ಇತಿಹಾಸ ಅವರದು ಎಂದ ಸಿದ್ದರಾಮಯ್ಯ, ಸಿಎಂ ಆಗಿದ್ದಾಗ ಸಾಲ ಮನ್ನಾ ಕೇಳಿದರೆ “ಸರಕಾರ ನೋಟು ಪ್ರಿಂಟ್‌ ಮಾಡುವುದಿಲ್ಲ’ ಎಂದಿದ್ದ ಬಿಎಸ್‌ವೈ ಈಗ ಸಾಲ ಮನ್ನಾಕ್ಕೆ ಆಗ್ರಹಿಸುತ್ತಿದ್ದಾರೆ ಎಂದರು. 

ಸಚಿವರಾಗುವ ಅರ್ಹತೆಯಿದೆ
ಬೈಂದೂರು ಶಾಸಕ ಗೋಪಾಲ ಪೂಜಾರಿ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಕ್ಕಿಲ್ಲ ಎನ್ನುವ ಅಸಮಾಧಾನವಿದ್ದರೂ ಮುಂದಿನ ದಿನಗಳಲ್ಲಿ ಆ ಅವಕಾಶ ಖಂಡಿತ ಲಭಿಸುತ್ತದೆ, ಆ ಅರ್ಹತೆ ಅವರಿಗಿದೆ ಎಂದು ಸಿಎಂ ಹೇಳಿದರು. 

66 ಸಾವಿರ ಬಿಪಿಎಲ್‌ ಕಾರ್ಡ್‌: ಪ್ರಮೋದ್‌
ಉಡುಪಿ ಜಿಲ್ಲೆಯ 66 ಸಾವಿರ ಮಂದಿಗೆ ಬಿಪಿಎಲ್‌ ಕಾರ್ಡ್‌ ವಿತರಿಸಲಾಗಿದೆ. ಮೀನು ಗಾರಿಕೆ ಸಚಿವನಾಗಿದ್ದರೂ ನನ್ನ ಕ್ಷೇತ್ರದ ಮೀನು ಗಾರಿಕೆ ಅಭಿವೃದ್ಧಿಗೆ ಕೇವಲ 50 ಕೋ.ರೂ. ಅನುದಾನ ತಂದರೆ, ಗೋಪಾಲ ಪೂಜಾರಿ ಅವರು 350 ಕೋ.ರೂ. ಅನುದಾನ ತಂದಿದ್ದಾರೆ ಎಂದು ಪ್ರಮೋದ್‌ ಮಧ್ವರಾಜ್‌ ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಈ ಕ್ಷೇತ್ರದ ಅಭಿವೃದ್ಧಿಗೆ ಈವರೆಗೆ ಒಟ್ಟು 2 ಸಾವಿರ ಕೋ.ರೂ. ಅನು ದಾನವನ್ನು ಸಿಎಂ ನೀಡಿದ್ದಾರೆ. ಆದರೆ ಬಿಜೆಪಿ ಯವರು ರಾಜ್ಯದ ಯೋಜನೆಗಳನ್ನು ಕೇಂದ್ರದ್ದು ಎಂದು ಹೇಳಿ ಬೋರ್ಡ್‌ ಹಾಕಿ ಕೊಳ್ಳು ತ್ತಿದ್ದಾರೆ. 350 ಕೋ.ರೂ. ವೆಚ್ಚದ ವಾರಾಹಿ ಏತ ನೀರಾವರಿ ಮಂಜೂರು ಮಾಡಿಸಿದ್ದೇನೆ ಎಂದರು. 

ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌ ಮಾತನಾಡಿದರು. ಸಚಿವ ಯು.ಟಿ. ಖಾದರ್‌, ಭಟ್ಕಳ ಶಾಸಕ ಮಾಂಕಾಳ ವೈದ್ಯ, ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ರಾಜ್ಯ ಸಹಕಾರಿ ಮಹಾಮಂಡಲದ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ರಾಜ್ಯ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಎಂ.ಎ. ಗಫೂರ್‌, ಬ್ಲಾಸಂ ಫೆರ್ನಾಂಡಿಸ್‌, ರಾಜ್ಯ ಇಂಟಕ್‌ ಅಧ್ಯಕ್ಷ ರಾಕೇಶ್‌ ಮಲ್ಲಿ, ಕಾಂಗ್ರೆಸ್‌ ಮುಖಂಡರಾದ ರಾಜು ಪೂಜಾರಿ, ಮದನ್‌ ಕುಮಾರ್‌, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಜಿ.ಪಂ. ಸಿಇಒ ಶಿವಾನಂದ ಕಾಪಶಿ, ಯೋಜನಾಧಿಕಾರಿ ಶ್ರೀನಿವಾಸ ರಾವ್‌, ಎಸ್‌ಪಿ ಲಕ್ಷ್ಮಣ ನಿಂಬರ್ಗಿ ಮತ್ತಿತರರು ಉಪಸ್ಥಿತರಿದ್ದರು. ಪತ್ರಕರ್ತ ಕೆ.ಸಿ. ರಾಜೇಶ್‌ ಕಾರ್ಯಕ್ರಮ ನಿರೂಪಿಸಿದರು. 

ಮೀನುಗಾರರನ್ನು ಎಸ್‌ಟಿ ವರ್ಗಕ್ಕೆ ಸೇರಿಸಲು ಶಿಫಾರಸು
ಮೀನುಗಾರ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರಿಸಲು ಕೇಂದ್ರಕ್ಕೆ ಈಗಾಗಲೇ 2 ಬಾರಿ ಶಿಫಾರಸು ಮಾಡಿದ್ದರೂ ತಿರ ಸ್ಕರಿಸಿದ್ದು, ಈಗ ಮತ್ತೂಮ್ಮೆ ಶಿಫಾರಸು ಮಾಡ  ಲಾಗುವುದು. ರಾಜ್ಯದ ಎಲ್ಲ ಕ್ಷೇತ್ರ ಗಳಿಗೂ ಅನುದಾನ ಮಂಜೂರು ಮಾಡ ಲಾಗಿದ್ದು, ಅಭಿವೃದ್ಧಿಯಲ್ಲಿ ತಾರ ತಮ್ಯ ಮಾಡುವುದಿಲ್ಲ. 22,506 ರೈತರ 8,165 ಕೋ.ರೂ. ಸಾಲ ಮನ್ನಾ ಮಾಡ ಲಾಗಿದೆ; ಅವಧಿಯೊಳಗೆ ಸಾಲ ಮರು ಪಾವತಿ ಸಿದ ಎಲ್ಲ ರೈತರ ಹಣ ಮನ್ನಾ ಮಾಡಿ, ಕರ್ನಾಟಕದ ಸರ್ವತೋಮುಖ ಬೆಳ ವಣಿಗೆಗೆ ಪ್ರಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

“ಮನಸ್ಸಿನಲ್ಲಿದೆ ಹಿಂದುತ್ವ’
ಬಿಜೆಪಿ ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನ ಯಾತ್ರೆ ಮಾಡುತ್ತಿದೆ. ಪರಿ ವರ್ತನೆ ಆಗಬೇಕಾಗಿರುವುದು ರಾಜ್ಯ ದಲ್ಲಲ್ಲ; ಕೋಮುವಾದಿಗಳಾದ ಬಿಎಸ್‌ವೈ, ಸದಾನಂದ ಗೌಡ, ಈಶ್ವರಪ್ಪ, ಶೋಭಾ ರಲ್ಲಿ ಪರಿವರ್ತನೆ ಆಗಬೇಕಾಗಿದೆ. ಅವರಿಗೆ ಜಾತ್ಯತೀತ ತತ್ವದಲ್ಲಿ ನಂಬಿಕೆ ಇಲ್ಲ ಎಂದ ಸಿದ್ದ ರಾಮಯ್ಯ, ಹಿಂದುತ್ವದ ಬಗ್ಗೆ ಬಿಜೆಪಿಯಿಂದ ಕಲಿಯಬೇಕಾಗಿಲ್ಲ. ಹಿಂದುತ್ವ ಮನಸ್ಸಿನಲ್ಲಿದ್ದರೆ ಸಾಕು. ಅದು ಆಹಾರ, ವ್ಯವಹಾರದಲ್ಲಿ  ಅಲ್ಲ  ಎಂದರು.

ಟಾಪ್ ನ್ಯೂಸ್

Yathanaa

Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ಷೇಪ

1-jenu

GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!

GTD

Court Judgement: ತಪ್ಪಿತಸ್ಥ ಎಂದಾದರೆ ಮಾತ್ರ ರಾಜೀನಾಮೆ ನೀಡಬೇಕು: ಜಿ.ಟಿ.ದೇವೇಗೌಡ

Horoscope

Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ

GM-Pancha

Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ

KH-Muniyappa

Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Yathanaa

Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ಷೇಪ

1-jenu

GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!

GTD

Court Judgement: ತಪ್ಪಿತಸ್ಥ ಎಂದಾದರೆ ಮಾತ್ರ ರಾಜೀನಾಮೆ ನೀಡಬೇಕು: ಜಿ.ಟಿ.ದೇವೇಗೌಡ

Horoscope

Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ

GM-Pancha

Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.