ಶಿಷ್ಯ ಹಿತ ಸಾಧನೆ ಗುರುಗಳ ಕರ್ತವ್ಯ: ಜಗದ್ಗುರು ಶ್ರೀ ಭಾರತೀತೀರ್ಥರು
Team Udayavani, Jul 27, 2017, 8:35 AM IST
ಕುಂದಾಪುರ: ಸನಾತನ ಧರ್ಮದಲ್ಲಿ ಗುರುವಿನ ಸ್ಥಾನ ತುಂಬ ಮಹತ್ವದ್ದು, ಯಾವುದೇ ಸಮುದಾಯದವರು ಬದುಕಿನಲ್ಲಿ ಅಭಿವೃದ್ಧಿ ಸಾಧಿಸಲು ಗುರುವಿನ ಅನುಗ್ರಹ ತೀರಾ ಅಗತ್ಯ. ಆದ್ದರಿಂದ ಶಿಷ್ಯಹಿತ ಸಾಧನೆ ಗುರುಗಳ ಕರ್ತವ್ಯ ಎಂದು ಶೃಂಗೇರಿ ಶಾರದಾಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರು ಹೇಳಿದರು.
ಅವರು ಶೃಂಗೇರಿಯ ನರಸಿಂಹ ವನದ ಗುರುನಿವಾಸದಲ್ಲಿ ಚಾತುರ್ಮಾಸ್ಯ ವ್ರತನಿರತರಾದ ತಮ್ಮ ದರ್ಶನಾರ್ಥಿಗಳಾಗಿ ಆಗಮಿಸಿದ ಶ್ರೀಮಠದ ಪರಂಪರಾಗತ ಶಿಷ್ಯರಾದ ದೇವಾಡಿಗ ಸಮುದಾಯದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ಈ ಸಂದರ್ಭದಲ್ಲಿ ಜಗದ್ಗುರುಗಳ ಉತ್ತರಾಧಿಕಾರಿ ಶಿಷ್ಯ ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಅವರು ಉಪಸ್ಥಿತರಿದ್ದರು.ದೇವಾಡಿಗ ಸಮುದಾಯದವರು ಅನಾದಿಕಾಲದಿಂದಲೂ ಶೃಂಗೇರಿ ಶ್ರೀ ಶಾರದಾಪೀಠವನ್ನು ತಮ್ಮ ಗುರುಪೀಠವೆಂದು ನಂಬಿ ಶ್ರದ್ದೆಯಿಂದ ನಡೆದುಕೊಳ್ಳುತ್ತಿದ್ದಾರೆ. ಅವರ ಶ್ರದ್ಧಾ ಭಕ್ತಿಗಳು ಸಮಗ್ರ ಸಮಾಜದ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಜಗದ್ಗುರು ಮಹಾ ಸಂಸ್ಥಾನದ ಪ್ರಾಂತೀಯ ಧರ್ಮಾಧಿಕಾರಿ ಡಾ| ಎಚ್.ವಿ. ನರಸಿಂಹಮೂರ್ತಿ ಸನಾತನ ಧರ್ಮಾನುಯಾಯಿಗಳೆಲ್ಲರಿಗೂ ಚಾತುರ್ಮಾಸ್ಯ ಗುರುದರ್ಶನ ಅತ್ಯಂತ ಶ್ರೇಯಸ್ಕರವಾದುದು.ಪರಿವ್ರಾಜಕರಾದ ಯತಿಗಳು ಆ ದಿನಗಳಲ್ಲಿ ಒಂದೇ ಕಡೆ ನೆಲೆ ನಿಂತು ತಪೋನುಷ್ಠಾನ ನಿರತರಾಗಿ ಶಿಷ್ಯರ ಹಿತವನ್ನು ಹಾರೈಸುತ್ತಾರೆ ಎಂದು ಹೇಳಿ ದೇವಾಡಿಗ ಸಮಾಜದವರ ಗುರುಭಕ್ತಿಯನ್ನು ಶ್ಲಾಘಿಸಿದರು.
ಗುರುದರ್ಶನ ಸಮಿತಿಯ ವ್ಯವಸ್ಥಾಪಕ ಮಂಜುನಾಥ ದೇವಾಡಿಗ ತಮ್ಮ ಸಮಾಜದ ಸ್ಥಿತಿ ಗತಿಗಳನ್ನು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.