ಡೀಮ್ಡ್ ಫಾರೆಸ್ಟ್ ಭೂಮಿ ಕಂದಾಯ ಇಲಾಖೆಗೆ – ಅಂತಿಮ ಹಂತ
Team Udayavani, Feb 4, 2018, 11:18 AM IST
ಉಡುಪಿ: ಅರಣ್ಯ-ಕಂದಾಯ ಭೂಮಿಗೆ ಹೊಂದಿಕೊಂಡಿರುವ ಡೀಮ್ಡ್ ಫಾರೆಸ್ಟ್ ಭೂಮಿಗೆ ಸಂಬಂಧಿಸಿ ಅರಣ್ಯ-ಕಂದಾಯ ಇಲಾಖೆ ಜಂಟಿ ಸರ್ವೇ ಕಾರ್ಯ ನಡೆಸಿದ್ದು, ಸರಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಇದು ಸಂಪುಟ ಚರ್ಚೆಯಲ್ಲಿದ್ದು, ಈ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸುವ ಕುರಿತ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಜಿಲ್ಲಾಡಳಿತ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಶನಿವಾರ ನಡೆದ ರೈತ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ 2,200 ಎಕರೆ ಡೀಮ್ಡ್ ಫಾರೆಸ್ಟ್ ಜಮೀನಿನ ಪೈಕಿ 1,500 ಎಕರೆ ಕಂದಾಯ ಇಲಾಖೆಗೆ ಹಸ್ತಾಂತರ ಗೊಳ್ಳಲಿದೆ. ಬಳಿಕ 94ಸಿ, 94ಸಿಸಿ, ಅಕ್ರಮ- ಸಕ್ರಮ 50-53 ಅರ್ಜಿ ವಿಲೇವಾರಿ ಮಾಡ ಲಾಗುವುದು ಎಂದು ಸಚಿವರು ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ 68,794 ಎಕರೆ ಪೈಕಿ 34,918.29 ಎಕರೆಯನ್ನು ಡೀಮ್ಡ್ ಫಾರೆಸ್ಟ್ ನಿಂದ ಕೈಬಿಡಲು ಅರಣ್ಯ ಇಲಾಖೆ ಯಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದರು.
ಉದ್ಯೋಗ ಖಾತರಿ: ಸುತ್ತೋಲೆ
ಉದ್ಯೋಗ ಖಾತರಿ ಯೋಜನೆಯಲ್ಲಿ ದೊಡ್ಡ ರೈತರಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ಹಲವು ರೈತರು ದೂರಿದರು. ಇದರಲ್ಲಿ ವಿವಿಧ ವಿಭಾಗ ಇದ್ದು, ಬೇಡಿಕೆಗೆ ತಕ್ಕಂತೆ ವಿಂಗಡಿಸಿ ಉದ್ಯೋಗ ಖಾತರಿ ಯೋಜನೆಯಲ್ಲಿ ಬಳಸಿಕೊಳ್ಳುತ್ತೇವೆ. ಇಲ್ಲಿ ಬಿಪಿಎಲ್ ಕಾರ್ಡು ದಾರರಿಗೆ ಆದ್ಯತೆ ಇದೆ. ಆದರೆ ಎಪಿಎಲ್‌ಗೆ ಕೊಡುವುದಿಲ್ಲ ಎಂದು ನಿಯಮದಲ್ಲಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸರಿಯಾದ ಮಾಹಿತಿ ಇಲ್ಲದೆ ಪಿಡಿಒ ಅವರು ದೊಡ್ಡ ರೈತರಿಗೆ ಉದ್ಯೋಗ ಖಾತರಿಯಲ್ಲಿ ಅವಕಾಶ ನೀಡದ ಕುರಿತು ಸಚಿವರು ಆಕ್ರೋಶಗೊಂಡರು. ಸಿಇಒ ಅವರ ಮೂಲಕ ಎಲ್ಲ ಪಿಡಿಒಗಳಿಗೆ ಸುತ್ತೋಲೆ ಕಳುಹಿಸಲು ಸಚಿವರು ಡಿಸಿಗೆ ಸೂಚಿಸಿದರು.
ಕಾಡು ಪ್ರಾಣಿ ಹಾವಳಿ: ಪ್ರಸ್ತಾವನೆ
ಕಾಡು ಪ್ರಾಣಿ ಹಾವಳಿ ತಡೆಗಟ್ಟಲು ರಕ್ಷಣಾ ಬೇಲಿಗೆ ರೈತರು ಆಗ್ರಹಿಸಿದರು. ಉದ್ಯೋಗ ಖಾತರಿ ಮೂಲಕ ಬೆಳೆ ಕಾವಲುಗಾರರನ್ನು ನೇಮಿಸುವ ಪ್ರಕ್ರಿಯೆಗೆ ರಾಜ್ಯದ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಯಿತು. ರೈತರು ಅರಣ್ಯ ಅಧಿಕಾರಿಗಳ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದರು. ಸರಕಾರಿ ನಿಯಮದಂತೆ ಕಾರ್ಯಾಚರಿಸುತ್ತಿದ್ದೇವೆ ಎಂದು ಅರಣ್ಯಾಧಿಕಾರಿ ಹೇಳಿದರು.
ಹಂದಿ ಬೇಟೆ; ಕೋವಿ ಪರವಾನಿಗೆ ಹಂದಿ ಬೇಟೆ, ಕೋವಿ ಪರವಾನಿಗೆ ಕುರಿತು ಸುದೀರ್ಘ ಚರ್ಚೆ ನಡೆಯಿತು. ಕಾಡುಪ್ರಾಣಿ ಸತ್ತರೆ ರೈತರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ಕಾಡುಹಂದಿಗಳಿಂದ ಬೆಳೆನಾಶ ತಪ್ಪಿಸಲು ಬೇಟೆಗೆ ಸರಕಾರ ಅವಕಾಶ ನೀಡಿದ್ದರೂ ಅಧಿಕಾರಿಗಳು ಬಿಡುತ್ತಿಲ್ಲ
ಎಂದು ರೈತರು ಹೇಳಿದರು. ಸಮಸ್ಯೆ ಇರುವ ಕಡೆ ಅರ್ಜಿ ಕೊಟ್ಟರೆ ಹಂದಿ ಕೊಲ್ಲಲು ನಾವೇ ಅವಕಾಶ ಕೊಡುತ್ತೇವೆ. ಉರುಳು ಹಾಕಿ ಕೊಲ್ಲಲು ಅವಕಾಶವಿಲ್ಲ ಎಂದು ವೈಲ್ಡ್‌ಲೈಫ್ ಡಿಎಫ್ಒ ಗಣೇಶ್ ಭಟ್ ಉತ್ತರಿಸಿದರು.
ಮಾಜಿ ಸೈನಿಕನ ಅಳಲು ಹೆಬ್ರಿ ನಾಡಾ³ಲಿನಲ್ಲಿರುವ ತನ್ನ ಜಾಗಕ್ಕೆ ಕಂದಾಯ ಅಧಿಕಾರಿಗಳು ಹಕ್ಕುಪತ್ರ ನೀಡುತ್ತಿಲ್ಲ ಎಂದು ಮಾಜಿ ಸೈನಿಕ ಭಾಸ್ಕರ ಪೂಜಾರಿ ಅಳಲು ತೋಡಿಕೊಂಡರು. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಸಚಿವರು ಡಿಸಿಗೆ ಸೂಚಿಸಿದರು.
ಅರಣ್ಯ ಭಾಗದ ರಸ್ತೆ ಮುಟ್ಟುವಂತಿಲ್ಲ!
ರಸ್ತೆಯನ್ನು ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸುವ ಕುರಿತು ಗ್ರಾ.ಪಂ. ಸದಸ್ಯರ ಸಹಿತ ಶಾಸಕರು, ಸಚಿವರು ಕೂಡ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಎಫ್ಒ ಗಣೇಶ ಭಟ್, ಇರುವಮಣ್ಣಿನ ರಸ್ತೆಯನ್ನು ಸರಿಪಡಿಸಲು ಅವಕಾಶವಿದೆ. ಆದರೆ ರಸ್ತೆ ಅಗಲ, ಡಾಮರೀಕರಣ, ಕಾಂಕ್ರೀಟೀಕರಣಕ್ಕೆ ಅರಣ್ಯ ಇಲಾಖೆ ಕೇಂದ್ರ ಕಚೇರಿ ಯಿಂದ ಅನುಮತಿ ಪಡೆಯಬೇಕು ಎಂದರು.
ರೈತ ಮುಖಂಡರಾದ ದೀಪಕ್ ಕುಮಾರ್ ಶೆಟ್ಟಿ, ಬಿ.ವಿ. ಪೂಜಾರಿ, ಸತ್ಯನಾರಾಯಣ ಉಡುಪ ಜಪ್ತಿ, ಸತೀಶ್ ಕಿಣಿ, ಹದ್ದೂರು ರಾಜೀವ ಶೆಟ್ಟಿ, ಪ್ರಸನ್ನ ಕುಮಾರ್ ಶೆಟ್ಟಿ, ಪ್ರದೀಪ್ ಕುಮಾರ್, ಉದಯ ಕುಮಾರ್, ಹರಿಪ್ರಸಾದ್ ಶೆಟ್ಟಿ, ಗುಂಡು ಪೂಜಾರಿ ಮಾತನಾಡಿದರು.
ಶಾಸಕರಾದ ಬೈಂದೂರು ಗೋಪಾಲ ಪೂಜಾರಿ, ಪ್ರತಾಪ್‌ಚಂದ್ರ ಶೆಟ್ಟಿ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿ.ಪಂ. ಸದಸ್ಯರಾದ ಮೈರ್ಮಾಡಿ ಸುಧಾಕರ ಶೆಟ್ಟಿ, ಶಿಲ್ಪಾ ಜಿ. ಸುವರ್ಣ, ಎಡಿಶನಲ್ ಎಸ್‌ಪಿ ಕುಮಾರಚಂದ್ರ, ವಾರಾಹಿ ಯೋಜನೆಯ ಸೂಪರಿಂಟೆಂಡೆಂಟ್ ಎಂಜಿನಿಯರ್ ಪದ್ಮನಾಭ ಉಪಸ್ಥಿತರಿದ್ದರು. ಅಂತೋನಿ ಇಮ್ಯಾನುವೆಲ್ ಸುವಾರಿಸ್ ಸ್ವಾಗತಿಸಿ, ಮೋಹನ್‌ರಾಜ್ ನಿರೂಪಿಸಿದರು.
ಕಿಕ್ಕಿರಿದ ಸಭಾಂಗಣ; ರೈತರ ಆಕ್ರೋಶ
ಬೃಹತ್ ಸಭಾಂಗಣವು ಸಭೆಗೆ ಮುನ್ನವೇ ಭರ್ತಿಯಾಗಿತ್ತು. ಅನಂತರವೂ ರೈತರು ಬರುತ್ತಲಿದ್ದರು. ಮಧ್ಯದ ಖಾಲಿ ಜಾಗ, ಮುಂದುಗಡೆ ಹೆಚ್ಚುವರಿ ಕುರ್ಚಿ ಹಾಕಿದರೂ ಹಲವಾರು ಮಂದಿಗೆ ಜಾಗ ಸಿಗಲಿಲ್ಲ. ಕೆಲವು ರೈತರು ನಿಂತೇ ಪಾಲ್ಗೊಂಡರು. ಮುಖ್ಯವಾಗಿ ಕಂದಾಯ ಮತ್ತು ಅರಣ್ಯ ಅಧಿಕಾರಿಗಳ ವರ್ತನೆಯ ವಿರುದ್ಧ ರೈತರಿಂದ ಭಾರೀ ಆಕ್ರೋಶ ವ್ಯಕ್ತವಾಯಿತು.
ವಾರಾಹಿ ಕಾಮಗಾರಿ ವಿಳಂಬ, ವಾರಾಹಿ ನೀರನ್ನು ಉಡುಪಿಗೆ ತರುವಾಗ ಮಧ್ಯೆ ಸಿಗುವ ಗ್ರಾ.ಪಂ. ವ್ಯಾಪ್ತಿಯವರಿಗೆ ನೀರು ಕೊಡುವುದು, ಅಡಿಕೆ, ತೆಂಗಿನ ಕಾಯಿಗೆ ಬೆಳೆ ಹಾನಿ ದರ ನಿಗದಿ, ಕಾಡು ಪ್ರಾಣಿಗಳ ಹಾವಳಿಗೆ ರೈತರು, ತಜ್ಞರು ನೀಡಿದ ವರದಿ ಅನುಷ್ಠಾನ, ಹಕ್ಕುಪತ್ರ ವಿತರಣೆ ಇತ್ಯಾದಿ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಸರಕಾರಕ್ಕೆ ಸಲ್ಲಿಸಲು ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಚಿವರ ಬಳಿಗೆ ರೈತ ನಿಯೋಗ
ವನ್ಯಜೀವಿ ಕಾಯ್ದೆ ಕೇಂದ್ರ ಸರಕಾರ ರಚಿಸಿದ್ದು, ಅದನ್ನು ನಾವು ಬದಲಿ ಸಲು ಅಸಾಧ್ಯ. ಆದರೆ ಪ್ರಸ್ತಾವನೆ ಸಲ್ಲಿಸಬಹುದು. ಕಾಯ್ದೆ, ಸರಕಾರದ ನಿಯಮಾವಳಿಗಳಲ್ಲಿ ಇರುವ ಗೊಂದಲ ಪರಿಹಾರಕ್ಕಾಗಿ ರೈತರ ನಿಯೋಗ ಬೆಂಗಳೂರಿಗೆ ಬಂದರೆ ಅರಣ್ಯ ಸಚಿವರು ಮತ್ತು ಉನ್ನತಾಧಿಕಾರಿಗಳ ಸಭೆ ನಡೆ ಸಲು ಬದ್ಧ. ಸಾಧ್ಯವಾದರೆ ಅರಣ್ಯ ಸಚಿವರನ್ನು ಉಡುಪಿಗೆ ಕರೆಸಿ ಚರ್ಚೆ ನಡೆಸಲಾ ವುದು ಎಂದು ಸಚಿವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
State Government Programme: ರೈತರಿಂದ ದೂರ ಸರಿದ ಕೃಷಿ ಯಂತ್ರಧಾರೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.