ಕರಾವಳಿ ಮೀನುಗಾರರ ಬೇಡಿಕೆ ಈಡೇರಿಕೆಗೆ ಆಗ್ರಹ; ನಾಳೆ ಮುಖ್ಯಮಂತ್ರಿ ಬಳಿಗೆ ನಿಯೋಗ
Team Udayavani, Feb 11, 2020, 1:44 AM IST
ಮಲ್ಪೆ: ಕರಾವಳಿಯ ಮೀನುಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಡಾ| ಜಿ. ಶಂಕರ್ ನೇತೃತ್ವದ ಮೀನುಗಾರರ ನಿಯೋಗವು ಫೆ. 12ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ನೀಡಿ ಆಗ್ರಹಿಸಲಿದೆ.
ಬೇಡಿಕೆಗಳೇನು?
ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ತತ್‌ಕ್ಷಣ ಮಹಿಳಾ ಮೀನುಗಾರರ ಸಾಲ ಮನ್ನಾ ಘೋಷಣೆಯನ್ನು ಮಾಡಿದ್ದಾರೆ. ಆದರೆ ಆ ಯೋಜನೆಯಲ್ಲಿ ಬಹಳಷ್ಟು ಗೊಂದಲಗಳಿದ್ದು, 27 ಸಾವಿರ ಮಹಿಳಾ ಮೀನುಗಾರರು ಬ್ಯಾಂಕಿನಲ್ಲಿ ಸುಸ್ತಿದಾರರಾಗಿ ಸಂಕಷ್ಟದಲ್ಲಿದ್ದಾರೆ. ಮಹಿಳಾ ಮೀನುಗಾರರ ಸಾಲ ಮಂಜೂರಾತಿ ಮಾಡುವಾಗ ಕೈಗೊಂಡ ಮಾನದಂಡವನ್ನೇ ಅನುಸರಿಸಿಕೊಂಡು ಸಾಲ ಮನ್ನಾ ಯೋಜನೆಯನ್ನು ಕೈಗೊಳ್ಳಬೇಕು ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಘೋಷಣೆಯಾದ ಸಾಲ ಮನ್ನಾವನ್ನು ಸಹಕಾರಿ ಬ್ಯಾಂಕ್‌ಗಳಿಗೂ ವಿಸ್ತರಿಸಬೇಕು. ಕರಾವಳಿ ಮತ್ತು ಒಳನಾಡು ಮೀನುಗಾರಿಕೆಗೆ ಸಮಗ್ರ ಹೊಸ ನೀತಿ ರಚಿಸಬೇಕು. ಮತ್ಸಾಶ್ರಯ ಯೋಜನೆಯಡಿ ಸೂಕ್ತ ಕ್ರಮ ಕೈಗೊಂಡು ಮೀನುಗಾರರಿಗೆ ಮನೆಗಳನ್ನು ಮಂಜೂರು ಗೊಳಿಸಬೇಕು. ಕೇಂದ್ರ ಪುರಸ್ಕೃತ ಯೋಜನೆಯಡಿ ಹಣ ಬಿಡುಗಡೆಯಾಗದೆ ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಪುನರ್ ಪ್ರಾರಂಭಿಸಬೇಕು.
ಈಗಾಗಲೇ ಮುಖ್ಯಮಂತ್ರಿಗಳ ಮೂಲಕ ಗಂಗಾಮತಸ್ಥ ಮತ್ತು 39 ಉಪಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿಸುವಂತೆ ಸಲ್ಲಿಸಲಾದ ಪ್ರಸ್ತಾವದ ಕುರಿತು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು. ಒಣ ಮೀನು ವ್ಯಾಪಾರಸ್ಥರಿಗೆ ಕೇಂದ್ರ ಪುರಸ್ಕೃತ ಯೋಜನೆಯಂತೆ ಸೋಲಾರ್ ಡ್ರಯರ್ ಖರೀದಿಸಲು ವಿಶೇಷ ಸಹಾಯಧನ ಒದಗಿಸಬೇಕು.
ಮೀನುಗಾರಿಕೆಗೆ ಕರರಹಿತ ಡೀಸೆಲ್ ಮೇಲೆ ವಿಧಿಸುತ್ತಿರುವ ರಸ್ತೆ ಕರವನ್ನು ಮನ್ನಾ ಮಾಡಬೇಕು. ರಾಜ್ಯದ ಎಲ್ಲ ಬಂದರುಗಳಲ್ಲಿ ಬ್ರೇಕ್ ವಾಟರ್ ನಿರ್ಮಾಣ, ಕರರಹಿತ ಡೀಸೆಲ್ ಪ್ರಮಾಣ ದಿನಕ್ಕೆ 300 ಲೀ.ನಿಂದ 500 ಲೀ.ಗೆ ಹೆಚ್ಚಳ, ಸಾಂಪ್ರದಾಯಿಕ ನಾಡದೋಣಿ ಮೀನುಗಾರರಿಗೆ ಕರರಹಿತ ಸೀಮೆಎಣ್ಣೆಯನ್ನು ಪ್ರತಿ ಪರ್ಮಿಟ್‌ಗೆ 400 ಲೀ.ನಂತೆ ನೀಡುವುದು. ಇವೇ ಮೊದಲಾದ ಬೇಡಿಕೆಗಳನ್ನು ಈಡೇರಿಸುವಂತೆ, ಮುಖ್ಯಮಂತ್ರಿ, ಮೀನುಗಾರಿಕೆ ಸಚಿವರು, ಸಂಸದರು ಹಾಗೂ ಕರಾವಳಿ ಜಿಲ್ಲೆಯ ಎಲ್ಲ ಶಾಸಕರನ್ನು ಡಾ| ಜಿ. ಶಂಕರ್ ಅವರ ನೇತೃತ್ವದ ಮೀನುಗಾರರ ನಿಯೋಗದ ಮೂಲಕ ಒತ್ತಾಯಿಸಲಾಗುವುದು ಎಂದು ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜಮೆಯಾಗದ ಡೀಸೆಲ್ ಸಬ್ಸಿಡಿ
5 ತಿಂಗಳಿನಿಂದ ಮೀನುಗಾರಿಕೆಗೆ ಬಳಸುವ ಡೀಸೆಲ್ ಸಬ್ಸಿಡಿ ಮೊತ್ತ ಬ್ಯಾಂಕ್ ಖಾತೆಗೆ ಜಮೆಯಾಗದೆ ಮೀನುಗಾರರು ತೊಂದರೆ ಅನುಭವಿಸುತ್ತಿದ್ದು, ಪ್ರತೀ ತಿಂಗಳ 5ರೊಳಗೆ ಖಾತೆಗೆ ಜಮೆಯಾಗುವಂತೆ ಇಲಾಖಾ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ನಿಯೋಗ ಮನವಿ ಮಾಡಲಿದೆ.
ಸುವರ್ಣ ತ್ರಿಭುಜ: ಪರಿಹಾರಕ್ಕೆ ಆಗ್ರಹ
ಸುವರ್ಣ ತ್ರಿಭುಜ ಮೀನುಗಾರಿಕಾ ಬೋಟ್ ಅವಘಡದಲ್ಲಿ ನಾಪತ್ತೆಯಾದ ಏಳು ಮೀನುಗಾರರ ಕುಟುಂಬಗಳಿಗೆ ವಿಶೇಷ ಪರಿಹಾರವಾಗಿ ತಲಾ 25 ಲಕ್ಷ ರೂ. ನೀಡಬೇಕು ಮತ್ತು ಬೋಟಿನ ವಿಮಾ ಮೊತ್ತಕ್ಕೆ ಸಂಬಂಧಪಟ್ಟಂತೆ ಸೂಕ್ತ ನಿರ್ದೇಶನ ನೀಡುವಂತೆ ಆಗ್ರಹಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಹುಲ್ಲು ಕೊಯ್ಯುವ ಯಂತ್ರಕ್ಕೆ ಸಿಲುಕಿದ್ದ ಹೆಬ್ಬಾವಿಗೆ ಶಸ್ತ್ರಚಿಕಿತ್ಸೆ
Video: ಚಿಂದಿ ಆಯುವ ಮಕ್ಕಳ ಕೈಯಲ್ಲಿ 500 ರ ಕಂತೆ ಕಂತೆ ನೋಟು… ವಿಡಿಯೋ ವೈರಲ್
BBK11: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಬಿರುಗಾಳಿ ಎಂದ ಉಗ್ರಂ ಮಂಜು ತಂದೆ
Kota: ಬಡವರ ಪಾಲಿಗೆ ಬಾಂಧವ್ಯದ ನೆರಳು
Manipur ಘಟನೆಗಳಿಗೆ ಕ್ಷಮೆ ಕೇಳಿದ ಸಿಎಂ: ಪ್ರಧಾನಿ ಏಕೆ ಭೇಟಿ ನೀಡಿಲ್ಲ ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.