ಬೆಂಗಳೂರು – ಕುಂದಾಪುರ – ವಾಸ್ಕೋ ವೇಗದ ರೈಲಿಗೆ ಬೇಡಿಕೆ
ಮನವಿಗೆ ಸಂಸದರ ಸ್ಪಂದನೆ, ಸಚಿವರಿಗೆ ಪತ್ರ
Team Udayavani, Nov 14, 2019, 4:50 AM IST
ಸಾಂದರ್ಭಿಕ ಚಿತ್ರ
ಕುಂದಾಪುರ: ಬೆಂಗಳೂರಿನಿಂದ ಮಂಗಳೂರು, ಉಡುಪಿ ಮೂಲಕವಾಗಿ ಕಾರವಾರದಿಂದ ಗೋವಾದ ವಾಸ್ಕೋ ಕಡೆಗೆ ರಾತ್ರಿ ವೇಳೆ ಹೊಸ ವೇಗದ ರೈಲು ಆರಂಭಿಸಬೇಕು ಎಂದು ಆಗ್ರಹಿಸಿ ಕುಂದಾಪುರದ ರೈಲ್ವೇ ಪ್ರಯಾಣಿಕ ಹಿತ ರಕ್ಷಣ ಸಮಿತಿ ವತಿಯಿಂದ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಲಾಯಿತು.
ಇದಕ್ಕೆ ಸ್ಪಂದಿಸಿದ ಸಂಸದರು ರೈಲ್ವೇ ಸಚಿವರಾದ ಪಿಯೂಷ್ ಗೋಯಲ್, ಸುರೇಶ್ ಅಂಗಡಿ ಮತ್ತು ನೈಋತ್ಯ ರೈಲ್ವೇ ಇಲಾಖೆಯ ಜನರಲ್ ಮ್ಯಾನೇಜರ್‌ಗೆ ಪತ್ರ ಮತ್ತು ದೂರವಾಣಿಯ ಮೂಲಕ ತತ್‌ಕ್ಷಣ ಗಮನಹರಿಸುವಂತೆ ಬೇಡಿಕೆ ಸಲ್ಲಿಸಿದ್ದಾರೆ.
ರೈಲ್ವೇ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ನೇತೃತ್ವದಲ್ಲಿ ಸದಸ್ಯರ ನಿಯೋಗ ಸಂಸದರಿಗೆ ಮನವಿ ಸಲ್ಲಿಸಿದ್ದು, ಈ ಹೊಸ ರೈಲಿನ ವೇಳಾಪಟ್ಟಿಯು ಸುರತ್ಕಲ್ ಮತ್ತು ಕಾರವಾರದ ಮಧ್ಯೆ ಇರುವ ಜನರಿಗೆ ಅನುಕೂಲಕರವಾಗಿರಲಿ ಎಂದು ಆಗ್ರಹಿಸಿದ್ದಾರೆ. ಇದನ್ನು ರೈಲ್ವೇ ಇಲಾಖೆ ಗಮನಕ್ಕೆ ತರಲಾಗುವುದು ಎಂದು ಸಂಸದೆ ಭರವಸೆ ನೀಡಿದರು.
ಇದರೊಂದಿಗೆ ವಾರದಲ್ಲಿ 4 ದಿನ ಸಂಚರಿಸುವ ಕುಣಿಗಲ್ ಮಾರ್ಗದ ರೈಲುಗಳು ಕಾರವಾರ ಮತ್ತು ಬೆಂಗಳೂರು ತಲುಪುವಾಗ ಅನಗತ್ಯ ವಿಳಂಬವಾಗುತ್ತಿದ್ದು, ಮಡಗಾಂವ್ ಪ್ಯಾಸೆಂಜರ್ ರೈಲನ್ನು ಕಾರವಾರ ರೈಲಿನ ಹಿಂದೆ ಸಂಚರಿಸುವಂತೆ ಮಾಡಿದರೆ ಈ ಸಮಸ್ಯೆಗೆ ಸ್ವಲ್ಪವಾದರೂ ಪರಿಹಾರ ಸಿಗಲಿದೆ ಎನ್ನುವ ವಿಚಾರವನ್ನು ಕೂಡ ಸಂಸದರ ಗಮನಕ್ಕೆ ತರಲಾಯಿತು.
ಮುಂಬಯಿ – ಮಡಗಾಂವ್ ಜನಶತಾಬ್ದಿ ಗಾಡಿಯನ್ನು ಮಂಗಳೂರು ಇಂಟರ್ ಸಿಟಿಯ ಜತೆ ವಿಲೀನದ ಕುರಿತು ಸಮಿತಿ ಬೇಡಿಕೆ ಸಲ್ಲಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.