ಡಿಎಪಿ ರಸಗೊಬ್ಬರಕ್ಕೆ ಬೇಡಿಕೆ: ಉಡುಪಿ ಜಿಲ್ಲೆಗೆ 100 ಕ್ವಿಂ. ಹೆಚ್ಚುವರಿ ಪೂರೈಕೆ
Team Udayavani, Aug 4, 2021, 6:44 AM IST
ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಡಿಎಪಿ ರಸಗೊಬ್ಬರಕ್ಕೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿರುವಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 100 ಕ್ವಿಂಟಾಲ್‌ಗಳನ್ನು ತರಲಾಗಿದೆ.
ಸೂಕ್ತ ಸಮಯದಲ್ಲಿ ರಸಗೊಬ್ಬರ ಪೂರೈಕೆಯಾಗದೆ ಸಾವಿರಾರು ಹೆಕ್ಟೇರ್‌ನಲ್ಲಿ ಕೃಷಿ ಭೂಮಿ ಮಾಡಿರುವ ರೈತರು ಅಳಲು ತೋಡಿಕೊಂಡಿದ್ದರು. ಕರಾವಳಿ ಭಾಗ ಸಹಿತ ರಾಜ್ಯದೆಲ್ಲೆಡೆ ಉತ್ತಮ ಮುಂಗಾರು ಮಳೆಯಾಗುತ್ತಿರುವ ಪರಿಣಾಮ ರಾಜ್ಯದ ಬಹುತೇಕ ಭಾಗದಲ್ಲಿ ಕೃಷಿ ಚಟುವಟಿಕೆ ಹುರುಪು ಪಡೆದುಕೊಂಡಿದ್ದು, ಈಗ ಡಿಎಪಿ ರಸಗೊಬ್ಬರ ಸಮರ್ಪಕವಾಗಿ ಪೂರೈಕೆಯಾಗುತ್ತಿರುವುದರಿಂದ ರೈತರು ಸಂತುಷ್ಟರಾಗಿದ್ದಾರೆ.
ಅಪಾರ ಬೇಡಿಕೆ:
ಇಸ್ಕೋ, ಐಪಿಎಲ್, ಎಂಸಿಎಫ್, ಆರ್‌ಸಿಎಫ್ ಸಹಿತ ರಸಗೊಬ್ಬರ ತಯಾರಿಕಾ ಸಂಸ್ಥೆಯಿಂದ ರಸಗೊಬ್ಬರ ಉತ್ಪಾದನೆ ಮಾಡಿ ಸಗಟು ಮಾರಾಟಗಾರರ ಮೂಲಕ ರಾಜ್ಯಕ್ಕೆ ರಸಗೊಬ್ಬರ ಪೂರೈಕೆಯಾಗುತ್ತಿದೆ. ಅತ್ಯಂತ ಕಡಿಮೆ ಪ್ರಮಾಣದಲ್ಲಿ ರಸಗೊಬ್ಬರ ಬಳಕೆ ಮಾಡುವ ಕರಾವಳಿ ಭಾಗದ ಉಡುಪಿಯಲ್ಲೇ 8,741 ಟನ್ ರಸಗೊಬ್ಬರದ ಬೇಡಿಕೆಯಿದೆ. ಈ ಪೈಕಿ 1,400ರಿಂದ 1,500 ಟನ್ ಡಿಎಪಿ ರಸಗೊಬ್ಬರಕ್ಕೆ ಬೇಡಿಕೆ ಇರುತ್ತದೆ. ರಾಜ್ಯದ ಇತರ ಜಿಲ್ಲೆಯಲ್ಲಿ ಇದಕ್ಕಿಂತ ದುಪ್ಪಟ್ಟು ಪ್ರಮಾಣದ ಬೇಡಿಕೆ ಇದೆ.
ಡಿಎಪಿ ಉಪಯೋಗ:
ಭತ್ತದ ನಾಟಿ ಸಂದರ್ಭ ಅಥವಾ ನಾಟಿಯಾದ 10, 15 ದಿನದೊಳಗೆ ಡಿಎಪಿ ರಸಗೊಬ್ಬರವನ್ನು ಕೃಷಿ ಭೂಮಿಗೆ ನಿಮಿತ್ತ ಪ್ರಮಾಣದಲ್ಲಿ ಸಿಂಪಡಿಸಲಾಗುತ್ತದೆ. ಆದರೆ ಈ ಬಾರಿ ಕೆಲವೆಡೆ ಈ ರಸಗೊಬ್ಬರದ ಕೊರತೆ ಉಂಟಾಗಿತ್ತು. ಕೃಷಿಗೆ ಸಮಯಕ್ಕೆ ಸರಿಯಾಗಿ ರಸಗೊಬ್ಬರ ಕೊಡದೇ ಹೋದರೆ ಅನ್ಯ ಕಾಯಿಲೆ ಸಮಸ್ಯೆ ಕಾಡುತ್ತದೆ ಎನ್ನುವುದು ರೈತರ ಅಳಲಾಗಿತ್ತು. ಕೃಷಿ ಇಲಾಖೆ ಸಕಾಲದಲ್ಲಿ ಸ್ಪಂದಿಸಿದ ಕಾರಣ ಸದ್ಯ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ.
ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ. ಡಿಎಪಿ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿತ್ತು. ಕೆಲವೇ ದಿನಗಳ ಹಿಂದೆ 100 ಕ್ವಿಂಟಲ್‌ಗಳನ್ನು ತರಿಸಲಾಗಿದೆ. ರೈತರಿಗೆ ರಸಗೊಬ್ಬರ ಸೂಕ್ತ ಸಮಯದಲ್ಲಿ ಪೂರೈಕೆ ಆಗುವಂತೆ ನೋಡಿಕೊಳ್ಳಲಾಗುತ್ತಿದೆ.-ಡಾ| ಕೆಂಪೇಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.