“ಕರಕುಶಲ ಉತ್ಪನ್ನಗಳಿಗೆ ಬೇಡಿಕೆ ಇಳಿಕೆ!’
Team Udayavani, Apr 2, 2019, 6:30 AM IST
ಉಡುಪಿ: ದೇಶದಲ್ಲಿ ಕರಕುಶಲ ಕರ್ಮಿಗಳು ಉತ್ಪಾದಿಸುವ ಉತ್ಪನ್ನಗಳಿಗೆ ಬೇಡಿಕೆ ಏರುತ್ತಿದೆ. ಆದರೆ ಇದೇ ವೇಳೆ ಕರಕುಶಲಕರ್ಮಿಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಭಾರತೀಯ ಕರಕುಶಲ ಮಂಡಳಿ (ಕ್ರಾಫ್ಟ್ ಕೌನ್ಸಿಲ್ ಆಫ್ ಇಂಡಿಯ- ಸಿಸಿಐ) ಕಳವಳ ವ್ಯಕ್ತಪಡಿಸಿದೆ.
ಮಣಿಪಾಲದ ಹೆರಿಟೇಜ್ ವಿಲೇಜ್‌ನಲ್ಲಿ ಸೋಮವಾರ ಆರಂಭಗೊಂಡ 2 ದಿನಗಳ ಸಿಸಿಐ ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಸಿಐ ಅಧ್ಯಕ್ಷೆ ಗೀತಾರಾಮ್, 2 ವರ್ಷಗಳ ಹಿಂದೆ ಕರಕುಶಲ ಕ್ಷೇತ್ರದ ಸಮಸ್ಯೆಗಳ ಥೀಮ್‌ನಡಿ ಕಾರ್ಯನಿರ್ವಹಿಸಿದ್ದರೆ, ಈಗ ಕರಕುಶಲ ಉತ್ಪನ್ನಗಳ ಮಾರುಕಟ್ಟೆ ಬಗೆಗಿನ ಥೀಮ್‌ನಡಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.
ಹೆರಿಟೇಜ್ ವಿಲೇಜ್‌ನಲ್ಲಿ ಆರಂಭಗೊಂಡ ಕಮಲಾ ಗ್ಯಾಲರಿ ಸೇರಿ ದೇಶದ ವಿವಿಧೆಡೆ ಸಿಸಿಐ ಸಂಯೋಜಿತ 11 ಘಟಕಗಳಿವೆ. ಈಗ ನಡೆಯುತ್ತಿರುವುದು 30ನೇ ರಾಷ್ಟ್ರೀಯ ಅಧಿವೇಶನ ಎಂದರು.
2022ರ ವೇಳೆಗೆ ದೇಶದಲ್ಲಿ ಸುಮಾರು 1.8 ಕೋ. ಕರಕುಶಲ ಕರ್ಮಿಗಳಿರಬಹುದೆಂದು ಅಂದಾಜಿಸ ಲಾಗಿದೆ. ಆದರೆ ಅನಧಿಕೃತ ಮೂಲಗಳ ಪ್ರಕಾರ ಕರಕುಶಲ ಉತ್ಪಾದಕರು, ಮಾರುಕಟ್ಟೆ ಮಾಡು ವವರು ಸೇರಿ ಸುಮಾರು 20 ಕೋಟಿ ಜನರು ಇದ್ದಾ ರೆಂದು ಸಿಸಿಐ ಕಾರ್ಯ ನಿರ್ವಾ ಹಕ ಸದಸ್ಯೆ ಸುಧಾ ಶಿವರಾಮ್ ಹೇಳಿದರು.
302 ಬಿ. ರೂ. ಮೊತ್ತದ ಕರಕುಶಲ ಉತ್ಪನ್ನವಾಗುತ್ತಿದ್ದು ಇದರಲ್ಲಿ 168.58 ಬಿ. ರೂ. ರಫ್ತಿನ ಪಾಲು ಇದೆ. ಇದರರ್ಥ ಬೇಡಿಕೆ ಹೆಚ್ಚಾಗುತ್ತಿದೆ; ಅಸಂಘಟಿತ ವಲಯ, ಕಚ್ಚಾ ಸಾಮ ಗ್ರಿಗಳ ಕಡಿಮೆ ಗುಣಮಟ್ಟ, ಸೀಮಿತ ಮಾರುಕಟ್ಟೆ ಸಾಮರ್ಥ್ಯ, ಹಣಕಾಸು ಒತ್ತಡ, ಮಾರುಕಟ್ಟೆ ಮತ್ತು ಗ್ರಾಹಕರ ನಡುವೆ ಸಂಪರ್ಕದ ಕೊರತೆ ಇತ್ಯಾದಿ ಸವಾಲುಗಳು ಇವೆ ಎಂದರು.
ವಿಶ್ವ ಸಂಸ್ಥೆ ವರದಿ ಪ್ರಕಾರ 30 ವರ್ಷಗಳ ಬಳಿಕ ಭಾರತೀಯ ಕರ ಕುಶಲಕರ್ಮಿಗಳ ಸಂಖ್ಯೆ ಶೇ. 30ರಷ್ಟು ಇಳಿಮುಖವಾಗಲಿದೆ. ಇದರರ್ಥ ಕರಕುಶಲ ಕಲಾವಿದರ ಮೇಲೆ ಮರು ಹೂಡಿಕೆ ಮಾಡಬೇಕಾದ, ಇತಿಹಾಸ, ಸಂಸ್ಕೃತಿ, ಜೀವನೋಪಯೋಗಿ ಮೂಲದ ರಕ್ಷಣೆ ಮಾಡಬೇಕಾಗಿದೆ ಎಂದು ಸುಧಾ ಅಭಿಪ್ರಾಯಪಟ್ಟರು.
ಸಿಸಿಐ ಕರ್ನಾಟಕದ ಅಧ್ಯಕ್ಷೆ ಭಾರತೀ ಗೋವಿಂದರಾಜ್ ಸ್ವಾಗತಿಸಿದರು. ರಂಗಕರ್ಮಿ ಪ್ರಸನ್ನ ಹೆಗ್ಗೊàಡು, ಹಸ್ತಶಿಲ್ಪ ಟ್ರಸ್ಟ್ ಟ್ರಸ್ಟಿ ಟಿ. ರಾಜೇಶ್ ಪೈ, ಕಾರ್ಯದರ್ಶಿ ಶ್ರೀನಿವಾಸ ಶೆಣೈ ಉಪಸ್ಥಿತರಿದ್ದರು.
ವಿಜಯನಾಥ ಶೆಣೈ ಸ್ಮಾರಕ ಸಭಾಂಗಣ ಉದ್ಘಾಟನೆ
ಮಣಿಪಾಲ ಹೆರಿಟೇಜ್ ವಿಲೇಜ್ ರೂವಾರಿ, ಸಾಂಸ್ಕೃತಿಕ ಕ್ಷೇತ್ರದ ಸಂಘಟಕರಾಗಿದ್ದ ವಿಜಯನಾಥ ಶೆಣೈ ಸ್ಮಾರಕ ಸಭಾಂಗಣವನ್ನು ಸೋಮವಾರ ಹೆರಿಟೇಜ್ ವಿಲೇಜ್ ಆವರಣದಲ್ಲಿ ಚೆನ್ನೈಯ ಭಾರತೀಯ ಕರಕುಶಲ ಮಂಡಳಿ (ಸಿಸಿಐ) ಅಧ್ಯಕ್ಷೆ ಗೀತಾ ರಾಮ್ ಉದ್ಘಾಟಿಸಿದರು.
ಕಮಲಾ ಗ್ಯಾಲರಿ ಉದ್ಘಾಟನೆ
ಕರ್ನಾಟಕದ ಕರಾವಳಿಯಲ್ಲಿ ಜನಿಸಿ ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧರಾದ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಹೆಸರಿನ ತಾತ್ಕಾಲಿಕ ಗ್ಯಾಲರಿ ಹೆರಿಟೇಜ್ ವಿಲೇಜ್‌ನಲ್ಲಿ ಆರಂಭಗೊಂಡಿತು. ರಂಗಕರ್ಮಿ ಪ್ರಸನ್ನ ಹೆಗ್ಗೊàಡು ಉದ್ಘಾಟಿಸಿದರು. ಕಮಲಾದೇವಿಯವರು ಮೊದಲು ಮದುವೆಯಾದ ಮಂಗಳೂರಿನ ಶಿವಬಾಗ್‌ನಲ್ಲಿದ್ದ ಮನೆಯನ್ನು ಹೆರಿಟೇಜ್ ವಿಲೇಜ್‌ನಲ್ಲಿ ಮರುಸ್ಥಾಪಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.