Karkala Case; ಇನ್ಸ್ಟಾಗ್ರಾಮ್‌ ಪರಿಚಯ… ಅಪಹರಿಸಿ ನೀಚ ಕೃತ್ಯ; ಕಾರ್ಕಳದಲ್ಲಿ ಆಗಿದ್ದೇನು?


Team Udayavani, Aug 24, 2024, 11:02 AM IST

details of Karkala incident

ಉಡುಪಿ: ಜಿಲ್ಲೆಯ ಕಾರ್ಕಳದ (Karkala) ನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಯುವತಿ ಮೇಲಿನ ಸಾಮೂಹಿಕ ಬಲವಂತ ಕೃತ್ಯ ಪ್ರಕರಣಕ್ಕೆ ಸಂಬಂಧಿಸಿಂತೆ ಪೊಲೀಸರು ಈಗಾಗಲೇ ಇಬ್ಬರನ್ನು ಬಂಧಿಸಿದ್ದಾರೆ. ಸಂತ್ರಸ್ಥ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಕಾರ್ಕಳದ ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರ ಎಂಬಲ್ಲಿ ಈ ಘಟನೆ ನಡೆದಿದೆ. 21 ವರ್ಷದ ಯುವತಿಗೆ ಅಮಲು ಬರಿಸುವ ಪಾನೀಯ ಬೆರೆಸಿ ಅತ್ಯಾಚಾರ ಎಸಗಿದ್ದಾರೆ ಎಂದು ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಶನಿವಾರ (ಆ.24) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಈ ಕುರಿತು ಹೇಳಿಕೆ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕೃತ್ಯ ಎಸಗಿದ ಪ್ರಮುಖ ಆರೋಪಿ ಅಲ್ತಾಫ್‌ ಮತ್ತು ಸಹಾಯ ಮಾಡಿದ್ದ ಸವೇರಾ ರಿಚರ್ಡ್‌ ಕಾರ್ಡೋಜಾ ಎಂಬಾತನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಆಗಿದ್ದೇನು?

ಸಂತ್ರಸ್ಥ ಯುವತಿಗೆ ಆರೋಪಿ ಅಲ್ತಾಫ್‌ ಕಳೆದ 3-4 ತಿಂಗಳಿನಿಂದ ಇನ್ಸ್ಟಾಗ್ರಾಮ್‌ ಮೂಲಕ ಪರಿಚಯವಾಗಿದ್ದ. ಶುಕ್ರವಾರ (ಆ.23) ಯುವತಿಗೆ ಕರೆ ಮಾಡಿದ್ದ ಆರೋಪಿ ಒಂದು ಜಾಗಕ್ಕೆ ಬರಹೇಳಿದ್ದ. ಅಲ್ಲಿಂದ ಆಕೆಯನ್ನು ಅಪಹರಿಸಿದ್ದ. ಅಲ್ಲಿಗೆ ಸ್ನೇಹಿತ ಸವೇರಾ ರಿಚರ್ಡ್‌ ಎರಡು ಬಿಯರ್‌ ಬಾಟಲಿ ತಂದಿದ್ದು, ಬಿಯರ್‌ ಗೆ ಮತ್ತು ಬರಿಸುವ ಪದಾರ್ಥ ಸೇರಿಸಿ ಯುವತಿಗೆ ಕುಡಿಸಿದ್ದ.

ಬಳಿಕ ಅಲ್ತಾಫ್‌ ಮತ್ತು ಸ್ನೇಹಿತರು ಸೇರಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾಗಿ ದೂರಿನಲ್ಲಿ ಹೇಳಲಾಗಿದೆ. ರಂಗನಪಲ್ಕೆ ಎಂಬ ಸ್ಥಳಕ್ಕೆ ಕರೆದೊಯ್ದು ಹಾಡಿಯಲ್ಲಿ ಕೃತ್ಯ ಎಸಗಲಾಗಿದೆ. ಘಟನೆ ಬಳಿಕ ಸ್ವತಃ ಅಲ್ತಾಫ್‌ ಯುವತಿಯನ್ನು ಆಕೆಯ ಮನೆಮುಂದೆ ತಂದು ಬಿಟ್ಟಿದ್ದ ಎನ್ನಲಾಗಿದೆ.

ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಿಸಿದ್ದ ವಾಹನವನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಯುವತಿ ಜೇನುಕೃಷಿ ಮಾಡಿಕೊಂಡಿರುತ್ತಿದ್ದಳು. ಈಕೆಯ ಕುಟುಂಬ ಕೆಲವು ವರ್ಷಗಳ ಹಿಂದೆಯೇ ಕಾರ್ಕಳಕ್ಕೆ ಬಂದು ನೆಲೆಸಿತ್ತು ಎಂದು ತಿಳಿದುಬಂದಿದೆ.

ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಯುವತಿಯನ್ನು ಕಾರ್ಳಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿ ಆರೋಪಿ ಬಂಧನಕ್ಕೆ ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

kejriwal 2

Kejriwal ಜೈಲೋ, ಬಿಡುಗಡೆ ಭಾಗ್ಯವೋ? ಇಂದು ಸುಪ್ರೀಂ ತೀರ್ಪು

1-dp

Namaz, ಆಜಾನ್‌ ವೇಳೆ ದುರ್ಗಾಪೂಜೆ ಸ್ಥಗಿತ: ಬಾಂಗ್ಲಾ ಸರಕಾರ

Bajpe

Bajpe-Kateel State Highway: ಕಾರು ಢಿಕ್ಕಿ : 6 ವಿದ್ಯುತ್‌ ಕಂಬಗಳಿಗೆ ಹಾನಿ

petrol

Petrol, ಡೀಸೆಲ್‌ ಬೆಲೆ ಶೀಘ್ರದಲ್ಲೇ ಇಳಿಕೆ ಸಾಧ್ಯತೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

putin (2)

Modi ಭೇಟಿ ಮಾಡಲು ನಾನು ಕಾಯುತ್ತಿರುವೆ: ರಷ್ಯಾ ಅಧ್ಯಕ್ಷ

Exam ಸೆ. 24ರಿಂದ ಎಸೆಸೆಲ್ಸಿ ಮಧ್ಯ ವಾರ್ಷಿಕ ಪರೀಕ್ಷೆ

Exam ಸೆ. 24ರಿಂದ ಎಸೆಸೆಲ್ಸಿ ಮಧ್ಯ ವಾರ್ಷಿಕ ಪರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

udUdupi ಗೀತಾರ್ಥ ಚಿಂತನೆ-34: ಸ್ವಕರ್ಮ, ಸ್ವಧರ್ಮ: ಉತ್ಪಾದನೆಯ ಮರ್ಮ

Udupi ಗೀತಾರ್ಥ ಚಿಂತನೆ-34: ಸ್ವಕರ್ಮ, ಸ್ವಧರ್ಮ: ಉತ್ಪಾದನೆಯ ಮರ್ಮ

Missing

Udupi: ಬನ್ನಂಜೆ ನಿವಾಸಿ ನಾಪತ್ತೆ

Malpe: ಬೆಂಕಿ ಉಗುಳುವ ವೇಳೆ ಸೀಮೆ ಎಣ್ಣೆ ಹೊಟ್ಟೆಯೊಳಗೆ ಹೋಗಿ ವ್ಯಕ್ತಿ ಸಾವು

Malpe: ಬೆಂಕಿ ಉಗುಳುವ ವೇಳೆ ಸೀಮೆ ಎಣ್ಣೆ ಹೊಟ್ಟೆಯೊಳಗೆ ಹೋಗಿ ವ್ಯಕ್ತಿ ಸಾವು

Kaup: ಸ್ಕೂಟಿಗೆ ರಿಕ್ಷಾ ಢಿಕ್ಕಿ; ಗಾಯ

Kaup: ಸ್ಕೂಟಿಗೆ ರಿಕ್ಷಾ ಢಿಕ್ಕಿ; ಸವಾರನಿಗೆ ಗಾಯ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

MUST WATCH

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

ಹೊಸ ಸೇರ್ಪಡೆ

ಆರೆಸ್ಸೆಸ್‌ “ಕ್ಲಾಸ್‌’ನಲ್ಲೂ ಬಿಜೆಪಿ ಬಣ ಸಂಘರ್ಷ

RSS “ಕ್ಲಾಸ್‌’ನಲ್ಲೂ ಬಿಜೆಪಿ ಬಣ ಸಂಘರ್ಷ

kejriwal 2

Kejriwal ಜೈಲೋ, ಬಿಡುಗಡೆ ಭಾಗ್ಯವೋ? ಇಂದು ಸುಪ್ರೀಂ ತೀರ್ಪು

1-dp

Namaz, ಆಜಾನ್‌ ವೇಳೆ ದುರ್ಗಾಪೂಜೆ ಸ್ಥಗಿತ: ಬಾಂಗ್ಲಾ ಸರಕಾರ

Bajpe

Bajpe-Kateel State Highway: ಕಾರು ಢಿಕ್ಕಿ : 6 ವಿದ್ಯುತ್‌ ಕಂಬಗಳಿಗೆ ಹಾನಿ

petrol

Petrol, ಡೀಸೆಲ್‌ ಬೆಲೆ ಶೀಘ್ರದಲ್ಲೇ ಇಳಿಕೆ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.