ಶಿಲಾಯುಗ ಕಾಲದ ಆದಿಮ ಚಿತ್ರಗಳು ಪತ್ತೆ

Team Udayavani, Mar 18, 2019, 12:30 AM IST

s-14.jpg

ಶಿರ್ವ: ಭಾರತದ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾದ ಕೊಲ್ಲೂರಿನ ಸಮೀಪ, ಅವಲಕ್ಕಿ ಪಾರೆ ಎಂಬ ವನ್ಯಜೀವಿ ಸಂರಕ್ಷಿತಾರಣ್ಯದ ಸ್ಥಳದಲ್ಲಿ ಸೂಕ್ಷ್ಮಶಿಲಾಯುಗ ಕಾಲದ ಮಾನವ ಬೇಟೆಯ ಚಿತ್ರಗಳು ಪತ್ತೆಯಾಗಿವೆ. ಹಂದಿ ಬೇಟೆ, ಹಕ್ಕಿ ಬೇಟೆ, ಕಾಡುಗೂಳಿಗಳ ಬೇಟೆ, ಜಿಂಕೆ ಬೇಟೆಯ ವಿವಿಧ ಆದಿಮ ಚಿತ್ರಗಳು ಕಂಡು ಬಂದಿವೆ. ಬೇಟೆಯ ವಿವಿಧ ಭಾವ-ಭಂಗಿಗಳಲ್ಲಿ ನಿಂತ ಮಾನವರ ಹಾಗೂ ಪ್ರಾಣಿಗಳ ಚಿತ್ರಗಳು ತಮ್ಮ ನೈಜತೆಯಿಂದ ಆಕರ್ಷಕವಾಗಿವೆ. ಈ ಚಿತ್ರಗಳಲ್ಲಿ ಪ್ರಧಾನವಾದ ಚಿತ್ರ ಓರ್ವ ಮಹಿಳೆಯದ್ದೆಂದು ಗುರುತಿಸಲಾಗಿದ್ದು, ಆಕೆಯ ಚಿತ್ರವನ್ನು ಆದಿಮ ಕಾಲದ ಜನರು ಆರಾಧಿಸುತ್ತಿದ್ದರೆಂದು ನಂಬಲಾಗಿದೆ. ವಿವಿಧ ರೀತಿಯ ಒಟ್ಟು 20 ಚಿತ್ರಗಳು ಪ್ರಸ್ತುತ ಪತ್ತೆಯಾಗಿದ್ದು, ಅನಂತರದ ದಿನಗಳಲ್ಲಿ ಶೋಧ  ಮುಂದುವರಿಸಲಾಗುವುದು ಎಂದು ಶಿರ್ವ ಎಂ.ಎಸ್‌.ಆರ್‌.ಎಸ್‌. ಕಾಲೇಜಿನ ಪುರಾತತ್ವ ವಿಭಾಗದ ಮುಖ್ಯಸ್ಥ ಪ್ರೊ|ಟಿ. ಮುರುಗೇಶಿ ತಿಳಿಸಿದ್ದಾರೆ. 

ಈ ಚಿತ್ರಗಳ ಶೋಧದ ಮೊದಲು ಕರ್ನಾಟಕದ ಕರಾವಳಿಯಲ್ಲಿ ಡಾ| ಕೆ.ಬಿ. ಶಿವತಾರಕ್‌, ಪಿ. ರಾಜೇಂದ್ರನ್‌ ಹಾಗೂ ಎಲ್‌.ಎಸ್‌. ರಾವ್‌ ಅವರು ಸೂಕ್ಷ್ಮಶಿಲಾಯುಗದ ನೆಲೆಗಳನ್ನು, ಉಪ್ಪಿನಂಗಡಿ, ಮಾಣಿ, ಕಾರ್ಕಳ, ಮಸಿಕೆರೆ ಮುಂತಾದ ಸ್ಥಳಗಳಲ್ಲಿ ಶೋಧಿಸಿದ್ದರು. ಆದರೆ ಇದೇ ಪ್ರಥಮ ಬಾರಿ ಆ ಸಂಸ್ಕೃತಿಗೆ ಸಂಬಂಧಿಸಿದ ಆದಿಮ ಚಿತ್ರಗಳು ಕಪ್ಪು ಪಾದೆ ಕಲ್ಲಿನ ಮೇಲೆ ಕುಟ್ಟಿ-ಉಜ್ಜಿ ಮಾಡಿರುವುದು ಕಂಡು ಬಂದಿದೆ. ಸರಿ ಸುಮಾರು, ಕ್ರಿ.ಪೂ. 10.000ದಿಂದ 3000 ವರ್ಷಗಳ ಕಾಲಾವಧಿಯನ್ನು ಸೂಕ್ಷ್ಮಶಿಲಾಯುಗ ಕಾಲವೆಂದು ಡಾ| ಅ. ಸುಂದರ ಅವರು ತರ್ಕಿಸಿದ್ದು, ಸರಿಸುಮಾರು ಅದೇ ಕಾಲದ ಚಿತ್ರಗಳೆಂದು ಅವಲಕ್ಕಿ ಪಾರೆಯ ಚಿತ್ರಗಳ ಕಾಲವನ್ನು  ತಾತ್ಕಾಲಿಕವಾಗಿ ಭಾವಿಸಲಾಗಿದೆ . 

ಈ ಅಧ್ಯಯನದಲ್ಲಿ ಕೊಲ್ಲೂರು ವನ್ಯಜೀವಿ ಅರಣ್ಯ ವಿಭಾಗದ ಆರ್‌ಎಫ್‌ಒ ನರೇಶ್‌, ಅರಣ್ಯ ಸಿಬಂದಿ, ಕಾಲೇಜಿನ ವಿದ್ಯಾರ್ಥಿಗಳಾದ ಶ್ರೇಯಸ್ಮ  ಶ್ಯಾಮಿಲಿ, ನಾಗರಾಜ ಮತ್ತು ಕೊಲ್ಲೂರಿನ ಮುರಳೀಧರ ಹೆಗಡೆ ಅಧ್ಯಯನದಲ್ಲಿ ಸಹಕರಿಸಿದ್ದಾರೆ ಎಂದು ಪ್ರೊ| ಟಿ. ಮುರುಗೇಶಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Railway-Minister-MP-DK

Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ

2

Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.