ಬೀಚ್ ಅಭಿವೃದ್ಧಿ ಸಮಿತಿಯಿಂದ ಕಡು ಬಡವರಿಗೆ ಶವ ಸಂಸ್ಕಾರ ಉಚಿತ
ಮೂಲ ಸೌಕರ್ಯದೊಂದಿಗೆ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿರುವ ಮಲ್ಪೆ ಬೀಚ್
Team Udayavani, Nov 10, 2022, 10:11 AM IST
ಮಲ್ಪೆ: ಬೀಚ್ ಆಭಿವೃದ್ಧಿ ಸಮಿತಿ ಬೀಚ್‌ನ ಎಲ್ಲ ಅಭಿವೃದ್ಧಿ ಕೆಲಸ ಹಾಗೂ ಹಿಂದೂ ರುದ್ರಭೂಮಿಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಇತ್ತೀಚೆಗೆ ನಗರಸಭಾ ಅಧಿವೇಶನದಲ್ಲಿ ಬೀಚ್‌ನ ನಿರ್ವಹಣೆಯ ಗುತ್ತಿಗೆ ಪಡೆದುಕೊಂಡ 5 ಭಜನಾ ಮಂದಿರಗಳ ವಿರುದ್ದ ನಗರಸಭಾ ಸದಸ್ಯರೋರ್ವರು ಸುಳ್ಳು ಆಪಾದನೆ ಮಾಡುತ್ತಿರುವುದು ಅವರ ಘನತೆಗೆ ತಕ್ಕುದಲ್ಲ.
ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಭಜನಾ ಮಂದಿರಗಳ ಹೆಸರಿಗೆ ಕಳಂಕ ತರುವ ಕೆಲವರ ದುರುದ್ದೇಶ ಖಂಡನೀಯ ಎಂದು ಬೀಚ್ ಆಭಿವೃದ್ಧಿ ಸಮಿತಿಯ ಅಧ್ಯಕ್ಷ ಪಾಂಡುರಂಗ ಮಲ್ಪೆ ಹೇಳಿದ್ದಾರೆ.
ಇಲ್ಲಿ ಕಾಲಿಡಲು ಹೆದರಿಕೆ
ಒಂದು ಕಾಲದಲ್ಲಿ ಮಲ್ಪೆ ಬೀಚ್ ಅಭಿವೃದ್ಧಿಯಾಗದೇ ಪ್ರವಾಸಿಗರು ಇಲ್ಲಿ ಕಾಲಿಡಲೂ ಹೆದರುವಂತಹ ಸಮಯ ಇತ್ತು. ಊರಿನ ಬೀಚ್ ಅಭಿವೃದ್ಧಿಯಾಗಬೇಕೆಂಬ ಉದ್ದೇಶದಿಂದ ಸ್ಥಳೀಯ ಭಜನಾ ಮಂದಿರದ ಸೇವಾ ಘಟಕವಾಗಿ ರಚಿಸಲ್ಪಟ್ಟ ಸಮಿತಿಯೇ ಬೀಚ್ ಅಭಿವೃದ್ಧಿ ಸಮಿತಿ.
1976ರವರೆಗೂ ಇಲ್ಲಿ ರಾತ್ರಿ ಲಾರಿಗಟ್ಟಲೆ ಮರಳು ಸಾಗಿಸಿ ಬೀಚ್ ಉದ್ದಕ್ಕೂ ಕಸ ತುಂಬಿದ ದೊಡ್ಡ ದೊಡ್ಡ ಹೊಂಡಗಳಿತ್ತು. ಭಜನಾ ಮಂದಿರದ ಪ್ರಯತ್ನದಿಂದ ಮರಳು ಸಾಗಟ ನಿಲ್ಲಿಸ ಲಾಯಿತು. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಅವರು ನಿರ್ಮಿಸಿ ಅರ್ಧಕ್ಕೆ ನಿಲ್ಲಿಸಲಾಗಿರುವ ಹೊಟೇಲನ್ನು ಸರಕಾರ ಹೊಟೇಲ್ ಮತ್ತು ಅದರ ಎದುರಿನ ರಸ್ತೆ ತುಂಡರಿಸಿ ಸಮುದ್ರತೀರದ ಉದ್ದಕ್ಕೂ ಸಾರ್ವಜನಿಕರು ಬಾರ ದಂತೆ ಅವರಣಗೋಡೆ ನಿರ್ಮಿಸಿ ಖಾಸಗಿಯವರಿಗೆ ನೀಡಲು ಹೊರ ಟಾಗ ಅದರ ವಿರುದ್ದ ಹೋರಾಟ ನಡೆಸಿದರ ಪರಿಣಾಮ ಇಂದು ಬೀಚ್ ಸಾರ್ವಜನಿಕರಿಗಾಗಿ ಉಳಿದುಕೊಂಡಿದೆ ಎನ್ನುತ್ತಾರೆ ಪಾಂಡುರಂಗ ಮಲ್ಪೆ.
ಮೂಲ ಸೌಕರ್ಯ
2008ರಲ್ಲಿ ಅಂದಿನ ನಗರಸಭಾ ಸದಸ್ಯ ಪಾಂಡುರಂಗ ಮಲ್ಪೆ ಅವರು ಪ್ರಯತ್ನ, ಕೆ. ರಘುಪತಿ ಭಟ್ ಅವರ ಮುಂದಾಳುತನದಲ್ಲಿ, ರಸ್ತೆ ಮತ್ತು ಪಾರ್ಕಿಂಗ್ ಪ್ರದೇಶದಲ್ಲಿ ಇಂಟರ್‌ಲಾಕ್, ಶೌಚಾಲಯ, ಸ್ನಾನಗೃಹ, ಗಾಂಧಿ ಪ್ರತಿಮೆ ನಿರ್ಮಾಣ, ವೇದಿಕೆ, ಹೈಮಾಸ್ಟ್ ದೀಪ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು.
ಸುರಕ್ಷೆಗೆ ಗಮನ
ಪ್ರವಾಸಿಗರ ಸುರಕ್ಷೆ ದೃಷ್ಟಿಯಿಂದ 8 ಮಂದಿ ಲೈಫ್ ಗಾರ್ಡ್, ಜೀವ ರಕ್ಷಕ ಸಾಧನ, ಸಿ. ಸಿ ಕೆಮರಾ, ಧ್ವನಿವರ್ಧಕ, ಸೂಚನೆ ನೀಡಲು ಮೋಟಾರ್ ಬೈಕ್, ಈಜಲು ಪ್ರತ್ಯೇಕ ಸ್ವಿಮ್ಮಿಂಗ್ ಝೋನ್, ಸೂಚನಾ ಫಲಕ, ಸ್ವಚ್ಚತಾ ಸಿಬಂದಿ, ಹಟ್, ಸ್ವಚ್ಚತಾ ವಾಹನ, ವಾಚ್ ಟವರ್ ನಿರ್ಮಿಸ ಲಾಗಿದೆ. ಅದರೂ ಜೀವರಕ್ಷಕರ ಎಚ್ಚರಿಕೆ ಧಿಕ್ಕರಿಸಿ ಅಥವಾ ಮದ್ಯಪಾನ ಮಾಡಿ ಅಪಾಯವನ್ನು ತಂದುಕೊಳ್ಳುತ್ತಿದ್ದಾರೆ.
ಟೆಂಡೆರ್ ನಿಯಮದಂತೆ ದ್ವಿಚಕ್ರ ವಾಹನ ಸಹಿತ ಪ್ರತಿ 2 ಗಂಟೆಯಂತೆ ಪಾರ್ಕಿಂಗ್ ಶುಲ್ಕ ವಸೂಲು ಮಾಡಲು ಅವಕಾಶ ಇದೆ. ಇಡೀ ದಿನಕ್ಕೆ ಒಂದೇ ಶುಲ್ಕ ಸ್ವೀಕರಿಸಲಾಗುತ್ತದೆ. ಇದುವರೆಗೂ ದ್ವಿಚಕ್ರಕ್ಕೆ ವಾಹನ ಶುಲ್ಕ ಸ್ವೀಕರಿಸುವುದಿಲ್ಲ. ಪಾರ್ಕಿಂಗ್ ಜಾಗ ಚಿಕ್ಕದಾಗಿರುವ ಕಾರಣ ವಡಭಾಂಡೇಶ್ವರದ ಸ್ವಾಗತ ಕಮಾನಿ ನಿಂದ ಹನುಮಾನ್ ವಿಠೊಭ ಭಜನಾ ಮಂದಿರದವರೆಗೆ ಮತ್ತು ಶಿವ ಪಂಚಾಕ್ಷರಿ ಭಜನಾ ಮಂದಿರದ ರಸ್ತೆಯ ಎರಡೂ ಬದಿ ಪಾರ್ಕಿಂಗ್ ಶುಲ್ಕ ಸಂಗ್ರಹ ಮಾಡಲು ಟೆಂಡೆರ್‌ನಲ್ಲಿ ಅವಕಾಶ ಒದಗಿಸಲಾಗಿದೆ.
ಕಡು ಬಡವರಿಗೆ ಉಚಿತ ಸೇವೆ
ಪಾಳುಬಿದ್ದಿ ಹಿಂದೂ ರುದ್ರಭೂಮಿ ಯನ್ನು ಬೀಚ್ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಶಾಸಕರ ಮತ್ತು ನಗರ ಸಭೆಯ ನಿಧಿಯಿಂದ 2 ಲಕ್ಷ ರೂ. ವಿನಿಯೋಗಿಸಿ ಜುಲೈ ಒಂದ 2012ರಲ್ಲಿ ಸಾರ್ವಜನಿಕರ ಸೇವೆ ಒದಗಿಸಲಾಗಿತ್ತು. ಕೊರೋನ ಸಂದರ್ಭದಲ್ಲಿ ದೂರದ ಊರುಗಳಿಂದ ತಂದ ಶವಗಳಿಗೆ ಸಂಸ್ಕಾರ ಮಾಡಲಾಗಿದೆ. ಈಗಲೂ ಕಡು ಬಡವರಿಗೆ ಯಾವುದೇ ಶುಲ್ಕ ಸ್ವೀಕರಿಸುವುದಿಲ್ಲ. ಎಲ್ಲವೂ ಸಮಿತಿಯ ವತಿಯಿಂದ ಪಾವತಿ ಮಾಡಲಾಗುತ್ತದೆ.
ದತ್ತಿ ಇಲಾಖೆಯ 5 ಲಕ್ಷ ಅನುದಾನ ದಲ್ಲಿ ಸ್ವಾಗತ ಗೋಪುರ, ನಗರಸಭೆ ನಿಧಿಯಿಂದ ರೂ.5 ಲಕ್ಷ ವೆಚ್ಚದಲ್ಲಿ ಕಟ್ಟಿಗೆ ದಾಸ್ತಾನು ಕೊಠಡಿ ನಿರ್ಮಿಸಲಾಗಿದೆ. ಮುಂದೆ ರುದ್ರಭೂಮಿಯ ಅಭಿವೃದ್ಧಿಗೆ ಕರಾವಳಿ ಪ್ರಾಧಿಕಾರದಿಂದ 10ಲಕ್ಷ. ಸಮಾಜ ಕಲ್ಯಾಣ ಇಲಾಖೆಯಿಂದ 10ಲಕ್ಷ ಬಿಡುಗಡೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.