![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Sep 13, 2017, 7:35 AM IST
ಉಡುಪಿ: ಶ್ರೀಕೃಷ್ಣ ಜಯಂತಿ ಆಚರಿಸುವಾಗ ಪೂಜೆ, ಅರ್ಚನೆ, ಉತ್ಸವ ಎಲ್ಲದರ ಜತೆಗೆ ಶ್ರೀಕೃಷ್ಣ ಯಾವ ಉದ್ದೇಶ ಕ್ಕಾಗಿ ಅವತರಿಸಿದ್ದಾನೆ ಅನ್ನುವುದರ ಬಗೆಗೂ ಅರಿತುಕೊಳ್ಳುವುದು ಮುಖ್ಯ. ಆಗ ಶ್ರೀ ಕೃಷ್ಣಾಷ್ಟಮಿಗೆ ಸಾರ್ಥಕತೆ ಬರುತ್ತದೆ. ಪರಮಾತ್ಮನಲ್ಲಿ ಭಕ್ತಿ ಹಾಗೂ ನಾವು ಮಾಡುವ ಕರ್ತವ್ಯದಲ್ಲಿ ನಿಷ್ಠೆ (Duty and Devotion) ಹೊಂದುವುದು. ಇದು ಜಗದ್ಗುರುವಾಗಿ ಅವತರಿಸಿದ ಶ್ರೀಕೃಷ್ಣ ಭಗವದ್ಗೀತೆಯ ಮೂಲಕ ಮಾನವ ಕುಲಕ್ಕೆ ನೀಡಿದ ಸಂದೇಶ.
ನಾವು ಮಾಡುವ ಕರ್ತವ್ಯದಲ್ಲಿ ಭಗವಂತನನ್ನು ಕಾಣಬೇಕು. ಕರ್ತವ್ಯ ಅಂದರೆ ಪೂಜೆ, ಪುನಸ್ಕಾರ ಮಾತ್ರವಲ್ಲ. ನಮ್ಮ ವೃತ್ತಿಯೇ ಕರ್ತವ್ಯ. ರೈತರು, ಶಿಕ್ಷಕರು, ಕುಂಬಾರರು ಹೀಗೆ ಹೊಟ್ಟೆ ಪಾಡಿಗೆ ಮಾಡುವ ಯಾವ ಕೆಲಸವಾದರೂ ಮೋಸ, ವಂಚನೆ ರಹಿತವಾಗಿ ಮಾಡಿದರೆ ಭಗವಂತ ಪೂಜೆ ಸಲ್ಲಿಸಿದಂತೆ. ಅತಿಯಾದ ಸ್ವಾರ್ಥ ಒಳ್ಳೆಯದಲ್ಲ ಎಂದು ಶ್ರೀ ಕೃಷ್ಣ ಹೇಳುತ್ತಾನೆ. ಭ್ರಷ್ಟಚಾರದ ಮೂಲವೇ ದುರಾಸೆೆ. ಎಷ್ಟು ಅಗತ್ಯವೋ ಅಷ್ಟು ಮಾತ್ರ ಅಪೇಕ್ಷೆ ಪಡಿ. ಅತಿ ಆಸೆ ಬೇಡ. ಕೆಟ್ಟ ಯೋಚನೆ ಮಾಡ ಬೇಡಿ. ಸ್ವಾರ್ಥ ಬಿಟ್ಟು , ಸರಳ ಜೀವನ ನಡೆಸಿ, ಆಗ ಭ್ರಷ್ಟಾಚಾರಕ್ಕೆ ಅವಕಾಶವೇ ಇರುವು ದಿಲ್ಲ. ಇದರಿಂದ ಜೀವನದಿಂದ ದುವ್ಯìಸನ ವನ್ನೂ ದೂರವಿಡಬಹುದು. ದುವ್ಯìಸನ ಮುಕ್ತ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಕೊಟ್ಟ ಸಂದೇಶ ಪೂರಕ. ಪರಮಾತ್ಮನಲ್ಲಿ ಭಕ್ತಿ ನಿಸ್ವಾರ್ಥ ಕರ್ತವ್ಯ ಇವೆರಡು ಇದ್ದರೆ ಅನ್ಯಾಯ ನಡೆಯಲು ಸಾಧ್ಯವೇ ಇಲ್ಲ, ಉತ್ತಮ ಸಮಾಜ ನಿರ್ಮಾಣವೇ ಶ್ರೀ ಕೃಷ್ಣನ ಸಂದೇಶ.
– ಶ್ರೀ ವಿಶ್ವೇಶತೀರ್ಥ ಶ್ರೀಪಾದರು
ಪರ್ಯಾಯ ಶ್ರೀ ಪೇಜಾವರ ಮಠ, ಶ್ರೀ ಕೃಷ್ಣಮಠ, ಉಡುಪಿ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.