ದೇಯಿ ಬೈದೆತಿ: ನಾಳೆಯಿಂದ ಕರಾವಳಿಯಾದ್ಯಂತ ತೆರೆಗೆ
Team Udayavani, Feb 14, 2019, 12:30 AM IST
ಬೆಳ್ತಂಗಡಿ: ಸಂಕ್ರಿ ಮೋಷನ್ ಪಿಕ್ಚರ್ಸ್ ಲಾಂಛನದ ಸೂರ್ಯೋದಯ ಪೆರಂಪಳ್ಳಿ ನಿರ್ದೇಶನದ ದೇಯಿ ಬೈದೆತಿ ಗೆಜ್ಜೆಗಿರಿ ನಂದನೊಡು ಐತಿಹಾಸಿಕ ಚಲನಚಿತ್ರ ಫೆ. 15ರಂದು ಕರಾವಳಿಯಾದ್ಯಂತ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.
ಮಂಗಳೂರಿನಲ್ಲಿ ಜ್ಯೋತಿ, ಪಿವಿಆರ್, ಭಾರತ್ ಸಿನೆಮಾಸ್, ಸಿನೆ ಪೊಲಿಸ್, ಬೆಳ್ತಂಗಡಿಯಲ್ಲಿ ಭಾರತ್ ಚಿತ್ರ ಮಂದಿರ, ಸುರತ್ಕಲ್‌ನಲ್ಲಿ ನಟರಾಜ್, ಉಡುಪಿಯ ಕಲ್ಪನಾ ಚಿತ್ರ ಮಂದಿರ, ಮಣಿಪಾಲದ ಐನಾಕ್ಸ್ ಮತ್ತು ಭಾರತ್ ಸಿನೆಮಾಸ್, ಮೂಡಬಿದಿರೆಯ ಅಮರಶ್ರೀ, ಕಾರ್ಕಳದ ಪ್ಲಾನೆಟ್ ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿದೆ.ತುಳು ನಾಡಿಗರ ಬದುಕಿನ ಅಗೋಚರ ಸತ್ಯವನ್ನು ತೆರೆದಿಡುವ ಪ್ರಯತ್ನ ಈ ಚಿತ್ರದಲ್ಲಿದೆ. ಈ ಕಥೆಯು ಸುಮಾರು 500 ವರ್ಷಗಳ ಹಿಂದೆ ಕರಾವಳಿಯ ಪುತ್ತೂರಿನ ಪಡುಮಲೆಯಲ್ಲಿ ಕಾರಣಿಕ ವೀರ ಪುರುಷರಾದ ಕೋಟಿ – ಚೆನ್ನಯರ ತಾಯಿ ದೇಯಿ ಬೈದೆತಿಯ ಕುರಿತಾದ ಸತ್ಯ ಘಟನೆಯ ಕಥಾನಕವಿದು.ಬನ್ನಂಜೆ ಬಾಬು ಅಮೀನ್, ದಾಮೋದರ್ ಕಲ್ಮಾಡಿ, ಡಾ| ಗಣನಾಥ್ ಶೆಟ್ಟಿ ಎಕ್ಕಾರ್, ಚೆಲುವರಾಜ್ ಪೆರಂಪಳ್ಳಿ, ಬಾಬು ಶಿವ ಪೂಜಾರಿ ಮುಂಬಯಿ ಮೊದಲಾದ ಸಂಶೋಧಕರ ಸಹಕಾರದಲ್ಲಿ ಮೂಡಿದ ತುಳುನಾಡಿಗರ ರೋಚಕ ಇತಿಹಾಸವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿಯು ಮೆಚ್ಚುಗೆ ವ್ಯಕ್ತಪಡಿಸಿ ‘ಯು’ ಪ್ರಮಾಣಪತ್ರ ನೀಡಿದೆ.
ಲಕ್ಷ್ಮಣ ಕೆ. ಅಮೀನ್ ಅರ್ಪಿಸುವ ಸಂಕ್ರಿ ಮೋಷನ್ ಪಿಕ್ಚರ್ ಬ್ಯಾನರ್‌ನಲ್ಲಿ ತಯಾರಾದ ಚಿತ್ರಕ್ಕೆ ದೇವ್‌ರಾಜ್ ಪಾಲನ್, ರಾಜ್‌ಕೃಷ್ಣ, ಅಮಿತ್ ರಾವ್ ರವರ ಸಹ ನಿರ್ದೇಶನವಿದ್ದು ಸಂಜೀವ ಪೂಜಾರಿ ಹೆರ್ಗ, ಕಿರಣ್ ಹೆಗ್ಡೆ ಬಿಜ್ರಿಯವರ ನಿರ್ಮಾಣ ನಿರ್ವಹಣೆಯಿದೆ. ಚಿತ್ರಕ್ಕೆ ಭಾಸ್ಕರ್ ರಾವ್ ಸಂಗೀತ, ಮಣಿಕಾಂತ್ ಕದ್ರಿ ಅವರ ಹಿನ್ನೆಲೆ ಸಂಗೀತವಿದೆ. ರವಿ ಸುವರ್ಣ ಮತ್ತು ಹರೀಶ್ ಪೂಜಾರಿ ಕುಕ್ಕುಂಜೆ ಅವರ ಛಾಯಾಗ್ರಹಣ, ಮೋಹನ್ ಎಲ್. ಸಂಕಲನದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.
ರವಿ ಪೂಜಾರಿ ಹಿರಿಯಡ್ಕ ಹಾಗೂ ದಿನೇಶ್ ಸುವರ್ಣ ರಾಯಿ ಚಿತ್ರದ ಕಲಾ ನಿರ್ದೇಶಕರು. ಉಮೇಶ್ ಪೂಜಾರಿ ಬೆಳ್ತಂಗಡಿ ಸಹ ನಿರ್ಮಾಪಕರಾಗಿದ್ದಾರೆ. ಚಿತ್ರದಲ್ಲಿ ಸೌಜನ್ಯ ಹೆಗ್ಡೆ, ಸೀತಾ ಕೋಟೆ, ಅಮಿತ್ ರಾವ್, ಚೇತನ್ ರೈ ಮಾಣಿ, ಎಂ.ಕೆ. ಮಠ, ಪ್ರಕಾಶ್ ಧರ್ಮನಗರ, ಅಶ್ವಿನಿ ಕೋಟ್ಯಾನ್, ಕಾಜೊಲ್ ಕುಂದರ್, ಪ್ರವೀಣ್ ಶೆಟ್ಟಿ, ಸುನಿಲ್ ನೆಲ್ಲಿಗುಡ್ಡೆ, ಲಕ್ಷ್ಮಣ್ ಮಲ್ಲೂರ್, ಸುನಿಲ್ ಪಲ್ಲಮಜಲು, ಹೆಚ್.ಕೆ. ನಯನಾಡು, ಸುಜಾತಾ ಶೆಟ್ಟಿ, ಮೋನಿಕಾ ಆಂಡ್ರದೆ, ನಾಗರಾಜ್ ವರ್ಕಾಡಿ, ಭಾಸ್ಕರ್ ಮಣಿಪಾಲ್, ಸೂರ್ಯೋದಯ್, ಪವಿತ್ರಾ ಶೆಟ್ಟಿ ಕಟಪಾಡಿ, ಇಡ್ಲಿ ರಾಜ ಮತ್ತಿತರರು ತಾರಾಗಣದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Udupi: ಟವರ್ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್ ದಾವೆ: ಸಂಸದ ಕೋಟ
MUST WATCH
ಹೊಸ ಸೇರ್ಪಡೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Discipline: ಬದುಕಿನಲ್ಲಿ ಶಿಸ್ತಿರಲಿ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Perth test: ಜೈಸ್ವಾಲ್-ರಾಹುಲ್ ಅಜೇಯ ಆಟ; ಪರ್ತ್ ನಲ್ಲಿ ಭಾರತದ ಮೇಲಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.