ಧರ್ಮ ಸಂಸದ್‌ ಇಂದು ಆರಂಭ

Team Udayavani, Nov 24, 2017, 6:00 AM IST

dharma.jpg

ಉಡುಪಿ: ರಾಕ್ಷಸರು ಋಷಿಮುನಿಗಳಿಗೆ, ಸಮಾಜಕ್ಕೆ ತೊಂದರೆ ಕೊಡುತ್ತಿದ್ದಾಗ ಋಷಿಮುನಿಗಳು ಸಭೆ ಸೇರಿ ಕೆಲವು ನಿರ್ಣಯಗಳನ್ನು ತೆಗೆದುಕೊಂಡ ಉದಾಹರಣೆಗಳು ಪುರಾಣಗಳಲ್ಲಿ ಕಂಡುಬರುತ್ತವೆ. ಮುಖ್ಯವಾಗಿ ಇಂತಹ ಸಭೆ ಸೇರುತ್ತಿದ್ದುದು ನೈಮಿಷಾರಣ್ಯದಲ್ಲಿ ಎಂಬ ಉಲ್ಲೇಖಗಳಿವೆ. ಸಾಮಾಜಿಕ ಸಮಸ್ಯೆಗಳಿಗೂ ಧಾರ್ಮಿಕ ವಿಧಿವಿಧಾನಗಳ ಬಗೆಗೂ ಇಂತಹ ಸಭೆ ನಡೆಯುತ್ತಿತ್ತು. ಸುಮಾರು ಸಾವಿರ ವರ್ಷಗಳ ಹಿಂದೆ ಇಂತಹ ಧಾರ್ಮಿಕ ಚೌಕಟ್ಟಿನ ಸಭೆ ನಡೆಯುತ್ತಿದ್ದ ಜಾಗಗಳಲ್ಲಿ ಉಡುಪಿಯ ಶ್ರೀ ಅನಂತೇಶ್ವರ ದೇವಸ್ಥಾನದ ಹೆಬ್ಟಾಗಿಲೂ ಒಂದು. ಇಂತಹ ವಿದ್ವತ್ಸಭೆಗಳಿಗೆ ಸಂವಾದಿಯಾಗಬಲ್ಲ ಸಾಧುಸಂತರ ಸಭೆ ಈಗ ಉಡುಪಿಯಲ್ಲಿ  ನಡೆಯುತ್ತಿದೆ.

1964ರಲ್ಲಿ: 1964ರ ಆಗಸ್ಟ್‌ 29ರಂದು ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷದ್‌ ಇಟ್ಟ ಬಹು ಹೆಜ್ಜೆಗಳಲ್ಲಿ ಸಾಧುಸಂತರನ್ನು ಸೇರಿಸಿ ಚರ್ಚಿಸಿ ತಳೆಯುವ ನಿರ್ಣಯಗಳೂ ಒಂದು. ಆರೆಸ್ಸೆಸ್‌ ಸರಸಂಘಚಾಲಕ ಗುರೂಜಿ ಗೋಳವಲ್ಕರ್‌ ಅವರು ಹಿಂದೂ ಸಮಾಜದ ವಿವಿಧ ಸಮಸ್ಯೆ, ಹಿಂದೂ ಸಮಾಜದಲ್ಲಿ ಸ್ವಾಮೀಜಿ ಯವರ ಬಗೆಗಿನ ಗೌರವಗಳನ್ನು ಗಮನಿಸಿ ಇವುಗಳ ನಡುವೆ ಒಂದು ಕೊಂಡಿ ಏರ್ಪಡಿಸಲು ನಡೆಸಿದ ಚಿಂತನೆಯ ಫ‌ಲಶ್ರುತಿಯೇ ವಿಹಿಂಪ. ತಮ್ಮ ಮಠ, ಸಂಪ್ರದಾಯಗಳಿಗಷ್ಟೇ ತಮ್ಮನ್ನು ಸೀಮಿತ ಗೊಳಿಸಿದ್ದ ಧರ್ಮಾಚಾರ್ಯರು ವ್ಯಾಪಕವಾದ ಸಾಮಾಜಿಕ ದೃಷ್ಟಿ ಬೆಳೆಸಿಕೊಂಡು ಒಟ್ಟು ಹಿಂದೂ ಸಮಾಜದ ಪರವಾಗಿ ಕೆಲಸ ಮಾಡಿದರೆ ಅದ್ಭುತ ಪ್ರಗತಿ ಸಾಧ್ಯ ಎನ್ನುವುದನ್ನು ಗೋಳವಲ್ಕರ್‌ ಅವರು ಮನಗಂಡರು. ಟ್ರಿನಿಡಾಡ್‌ನ‌ ಸಂಸದ ಶಂಭುನಾಥ ಕಪಿಲದೇವ್‌ ಅವರು 1963ರಲ್ಲಿ ಗೋಳವಲ್ಕರ್‌ ಅವರನ್ನು ಭೇಟಿ ಮಾಡಿ ವಿದೇಶಗಳಲ್ಲಿ ಧಾರ್ಮಿಕ ವಿಷಯಗಳಿಗೆ ಮಾರ್ಗದರ್ಶನದ ಕೊರತೆ ಇರುವುದನ್ನು ಮನಗಾಣಿಸಿದರು. ಇನ್ನೊಂದು ಕಡೆ ಭಾರತದಲ್ಲಿಯೇ ಮತಾಂತರವಾದವರನ್ನು ವಾಪಸು ಕರೆತರುವ ವ್ಯವಸ್ಥೆಯ ಅಗತ್ಯವನ್ನೂ ಮನಗಂಡರು.

ಈ ಮೂರು ಚಿಂತನೆಗಳಿಗೆ ಉತ್ತರರೂಪವಾಗಿ ಹೊರಹೊಮ್ಮಿದ ವಿಹಿಂಪ ಅನಂತರದ ಕಾಲಘಟ್ಟಗಳಲ್ಲಿ ವಿವಿಧ ಸಂಪ್ರದಾಯಗಳ ಧರ್ಮಾಚಾರ್ಯರನ್ನು ಒಂದು ವೇದಿಕೆಯಲ್ಲಿ ಒಂದುಗೂಡಿಸಿ ಚರ್ಚಿಸುವ ಪ್ರಯತ್ನದಲ್ಲಿ ಸಫ‌ಲವಾಯಿತು.

1972ರಲ್ಲಿ : 1972ರಲ್ಲಿ ವಿಹಿಂಪಕ್ಕೆ ಧರ್ಮಾಚಾರ್ಯರನ್ನು ಒಳ ಗೊಂಡ ಮಾರ್ಗದರ್ಶಕ ಮಂಡಲವನ್ನು ರಚಿಸಿತು. ಹಿಂದೂ ಸಮಾಜಕ್ಕೆ ಅನ್ವಯವಾಗುವ ಸಮಾನ ಆಚಾರ ಸಂಹಿತೆ ರೂಪಿಸುವ ಕೆಲಸವನ್ನು ಮಾಡಿತು. ಪ್ರತಿವರ್ಷ ಮಾರ್ಗದರ್ಶಕ ಮಂಡಲ ಸಭೆ ನಡೆಯಲಿದ್ದು, ಈ ವಿದ್ವತ್‌ ಸಭೆಯಲ್ಲಿ ಮಂಡಿತವಾದ ವಿಚಾರಗಳನ್ನು ಅನುಷ್ಠಾನಗೊಳಿಸಲು ಅಗತ್ಯದ ಕಾರ್ಯಕ್ರಮಗಳನ್ನು ಆಯೋಜಿಸಲು ಧರ್ಮಸಂಸದ್‌ ಎಂಬ ವಿಶೇಷ ಕಾರ್ಯಾಂಗವನ್ನು 1984ರಲ್ಲಿ ಆರಂಭಿಸಲಾಯಿತು.

12ನೇ ಧರ್ಮಸಂಸದ್‌: ಅಗತ್ಯಕ್ಕೆ ತಕ್ಕಂತೆ ಒಂದೆಡೆ ಸೇರಿ ವ್ಯಾಪಕ ಚರ್ಚೆ ನಡೆಸಿ ಮೂಡಿ ಬರುವ ವಿಚಾರಗಳನ್ನು ಜಾರಿಗೊಳಿಸಲು ಹಿಂದೂ ಸಮಾಜಕ್ಕೆ ಧರ್ಮಸಂಸದ್‌ ಆದೇಶ ನೀಡುತ್ತದೆ. ಮಾರ್ಗದರ್ಶಕ ಮಂಡಲಕ್ಕಿಂತ ಹೆಚ್ಚಿನ ಧರ್ಮಾಚಾರ್ಯರು ಇದರಲ್ಲಿ ಪಾಲ್ಗೊಳ್ಳುವ ಕಾರಣ ಪ್ರಾತಿನಿಧಿಕ ಸ್ವರೂಪ ಅಧಿಕವಿರುತ್ತದೆ. ಇದುವರೆಗೆ 11 ಬಾರಿ ಧರ್ಮಸಂಸದ್‌ ಸಭೆ ಸೇರಿದೆ. ಈಗ 12ನೇ ಧರ್ಮಸಂಸದ್‌ ಸಭೆ 1964ರಲ್ಲಿ ವಿಹಿಂಪ ಸ್ಥಾಪನಾ ಸಭೆಯಲ್ಲಿದ್ದ ಪೇಜಾವರ ಶ್ರೀಗಳ ಐದನೆಯ ಪರ್ಯಾಯದಲ್ಲಿ ಸಂಪನ್ನಗೊಳ್ಳುತ್ತಿದೆ. 1969ರಲ್ಲಿ ಉಡುಪಿಯಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆದ ಪ್ರಥಮ ವಿಹಿಂಪ ಸಮ್ಮೇಳನ ಪ್ರಾಂತ ಮಟ್ಟದ್ದಾದರೂ ಅದು ಅಸ್ಪೃಶ್ಯತೆ ವಿರುದ್ಧ ತಳೆದ ನಿರ್ಣಯ, ಪೇಜಾವರ ಶ್ರೀಗಳ ಘೋಷಣೆ, ಅನಂತರ ಶ್ರೀಗಳೇ ಸ್ವತಃ ವಿಹಿಂಪ ಜತೆ ದಲಿತರ ಕೇರಿಗಳಿಗೆ ಹೆಜ್ಜೆ ಹಾಕಿದ್ದು ರಾಷ್ಟ್ರ ಮಟ್ಟದಲ್ಲಿ ಪ್ರಭಾವ ಬೀರಿತು.

ಟಾಪ್ ನ್ಯೂಸ್

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

2-mudhol

Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Special Train ಮಕರ ಸಂಕ್ರಾಂತಿ:  ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

1-horoscope

Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi ಶ್ರೀಕೃಷ್ಣಮಠ: ವಾರ್ಷಿಕ ಸಪ್ತೋತ್ಸವ ಆರಂಭ

Udupi ಶ್ರೀಕೃಷ್ಣಮಠ: ವಾರ್ಷಿಕ ಸಪ್ತೋತ್ಸವ ಆರಂಭ

ಉಡುಪಿಯಲ್ಲಿ ಶ್ರೀಕೃಷ್ಣ ಕಾರಿಡಾರ್‌ ಚಿಂತನೆ

ಉಡುಪಿಯಲ್ಲಿ ಶ್ರೀಕೃಷ್ಣ ಕಾರಿಡಾರ್‌ ಚಿಂತನೆ

Kaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನKaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನ

Kaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನ

Udupi ಸಪ್ತೋತ್ಸವ: ಭಜನೆ ಸಂಕೀರ್ತನೆ ಉದ್ಘಾಟನೆ

Udupi ಸಪ್ತೋತ್ಸವ: ಭಜನೆ ಸಂಕೀರ್ತನೆ ಉದ್ಘಾಟನೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

2-mudhol

Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Special Train ಮಕರ ಸಂಕ್ರಾಂತಿ:  ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.