ಹಿಂದೂ ಸಮಾಜೋತ್ಸವ; ಶೋಭಾಯಾತ್ರೆಗೆ ಮುಸ್ಲಿಮರಿಂದ ತಂಪು ಪಾನೀಯ
Team Udayavani, Nov 26, 2017, 12:12 PM IST
ಉಡುಪಿ:ಹಿಂದೂ ಸಮಾಜೋತ್ಸವ ಶೋಭಾಯಾತ್ರೆ ಸಂದರ್ಭ ಜಿಲ್ಲೆಯ ಮುಸ್ಲಿಂ ಸಮುದಾಯದ ವತಿಯಿಂದ ತಂಪುಪಾನೀಯ ವಿತರಿಸಲು ಸಿದ್ಧತೆ ನಡೆದಿದೆ. ಜೋಡುಕಟ್ಟೆಯಿಂದ ಮೆರವಣಿಗೆ ಹೊರಡಲಿದ್ದು ಅಲ್ಲಿಂದ ಸ್ವಲ್ಪ ಮುಂದಕ್ಕೆ ಕೋರ್ಟ್ ಸಂಕೀರ್ಣದ ಎದುರು
ತಂಪು ಪಾನೀಯ ವಿತರಿಸಲಾಗುವುದು. ಈ ಹಿಂದೆ ಪೇಜಾವರ ಶ್ರೀಗಳ ಪರ್ಯಾಯ, ಪರ್ಕಳ ಮತ್ತು ಕಡಿಯಾಳಿಯ 50ನೇ ವರ್ಷದ ಶ್ರೀ ಗಣೇಶೋತ್ಸವ ಸಂದರ್ಭದಲ್ಲಿಯೂ ಇದೇ ರೀತಿ ತಂಪುಪಾನೀಯ ವಿತರಿಸಿದ್ದೇವೆ. ಇದು ನಮ್ಮ ಸ್ನೇಹ, ಸೌಹಾರ್ದದ ಸಂಕೇತ ಎಂದು ಪೇಜಾವರ ಬ್ಲಿಡ್ ಟೀಮ್ ಅಧ್ಯಕ್ಷ ಮಹಮ್ಮದ್ ಆರೀಫ್ ಮತ್ತು ಪ್ರ. ಕಾರ್ಯದರ್ಶಿ ಅನ್ಸಾರ್ ಅಹಮ್ಮದ್ ತಿಳಿಸಿದ್ದಾರೆ.
ವಿವಿಧ ಸಂಘ ಸಂಸ್ಥೆಗಳು, ಮನೆಯವರು ಪಾನೀಯ ವ್ಯವಸ್ಥೆ ಮಾಡಿದ್ದಾರೆ. ಪರ್ಕಳದ ನಿವಾಸಿ ಅಲ್ವಿನ್ ಡಿ’ಸೋಜಾ ಅಡುಗೆ ಮನೆಯಲ್ಲಿ ಬಡಿಸುವ ಕೆಲಸದಲ್ಲಿ ತೊಡಗಿದ್ದರೆ, ವಿಐಪಿ ರಘುಪತಿ ಭಟ್ ಅವರು ಮೂರೂ ದಿನ ಅಡುಗೆ ಮನೆಯಲ್ಲಿ ಬಡಿಸುವ ಸ್ವಯಂಸೇವಕರೊಂದಿಗೆ ಸೇರಿಕೊಂಡು ಸಂತಸಂತರ್ಪಣೆಯ ಕೆಲಸ ನೋಡಿಕೊಳ್ಳುತ್ತಿದ್ದಾರೆ.
ಬೈಕ್‌ಸವಾರರ ಅಬ್ಬರ
ಉಡುಪಿ, ನ. 25: ಧರ್ಮಸಂಸದ್, ಹಿಂದೂ ಸಮಾಜೋತ್ಸವದ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಉಡುಪಿ ನಗರದಲ್ಲಿ ಭಗವಾಧ್ವಜವನ್ನು ಹೊತ್ತ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ವಿಶೇಷವಾಗಿ ಹೆಚ್ಚಿನ ದ್ವಿಚಕ್ರ ವಾಹನಗಳಲ್ಲಿ ಒಂದು ಇಲ್ಲವೆ ಎರಡು ಭಗವಾಧ್ವಜಗಳು ರಾರಾಜಿಸುತ್ತಿವೆ. ಹಲವು ಮಂದಿ ಯುವತಿಯರು ಕೂಡ ತಮ್ಮ ಸ್ಕೂಟಿಗಳಲ್ಲಿ ಭಗವಾಧ್ವಜ ಕಟ್ಟಿಕೊಂಡಿದ್ದಾರೆ. ಧರ್ಮಸಂಸದ್‌ನ ಸಂಭ್ರಮವೋ ಎಂಬಂತೆ ಶನಿವಾರ ಹೆಚ್ಚಿನ ಸಂಖ್ಯೆಯ ಯುವಕರು ಬೈಕ್‌ನಲ್ಲಿ ಅತ್ತಿಂದಿತ್ತ ಸಂಚರಿಸಿದರು.
ಹಿಂದೂ ಸಮಾಜೋತ್ಸವ: ಮದ್ಯ ಮಾರಾಟ ನಿಷೇಧ
ಉಡುಪಿ, ನ. 25: ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆಯುವ ಹಿಂದೂ ಸಮಾಜೋತ್ಸವಕ್ಕೆ ಸಾವಿರಾರು ಸ್ವಾಮೀಜಿಗಳು, ಧರ್ಮಾಧಿಕಾರಿಗಳು, ಸಚಿವರು, ರಾಜಕೀಯ ಮುಖಂಡರು ಸಹಿತ ಒಂದು ಲಕ್ಷಕ್ಕೂ ಅಧಿಕ ಮಂದಿ ಸೇರುವ ಹಿನ್ನೆಲೆಯಲ್ಲಿ ಕಾನೂನು
ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ನ. 26ರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಮದ್ಯದ ಅಂಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿಗಳು ಆದೇಶಿಸಿ ಡ್ರೈ ಡೇ ಎಂದು ಘೋಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.