“ಡಯಾಬಿಟಿಸ್ ಚಿಕಿತ್ಸಾ ವಿಭಾಗ’ ಉದ್ಘಾಟನೆ
Team Udayavani, Sep 5, 2017, 7:25 AM IST
ಉಡುಪಿ: ಆರೋಗ್ಯ ಸೇವೆಯಲ್ಲಿ ವಿಶೇಷ ಪರಿಣತ ತಜ್ಞ ವೈದ್ಯರನ್ನು ಹೊಂದಿರುವ ಉಡುಪಿಯ ಹೈಟೆಕ್ ಮೆಡಿಕೇರ್ ಆಸ್ಪತ್ರೆ ವಿವಿಧ ಸ್ಪೆಶಾಲಿಟಿ ಚಿಕಿತ್ಸಾ ವಿಭಾಗಗಳನ್ನು ತನ್ನಲ್ಲಿ ಅಳವಡಿಸುತ್ತ ಬಂದಿದ್ದು, ಇದೀಗ ಪರಿಣತ ಮಧುಮೇಹ ತಜ್ಞೆ ಡಾ| ಎನ್. ಶುೃತಿ ಬಲ್ಲಾಳ್ ಅವರ ನೇತೃತ್ವದಲ್ಲಿ “ಮಧುಮೇಹ ಚಿಕಿತ್ಸಾ ವಿಭಾಗ’ ರವಿವಾರ ಉದ್ಘಾಟನೆಗೊಂಡಿತು.
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಸೂರ್ಯನಾರಾಯಣ ಉಪಾಧ್ಯ ಅವರು ಉದ್ಘಾಟಿಸಿ, ಉತ್ತಮ ಆರೋಗ್ಯಕ್ಕಾಗಿ ಉತ್ತಮ ಶರೀರ ಹೊಂದುವುದು ಅತೀ ಅಗತ್ಯ. ಇಂದಿನ ಬದಲಾದ ಜೀವನ ಶೈಲಿ, ನಾವು ಸೇವಿಸುವ ಆಹಾರ, ವಾಯು, ನೀರು, ಕಲುಷಿತದಿಂದ ಕೂಡಿದ್ದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುತ್ತದೆ. ಇದರಿಂದ ನಮ್ಮ ಶರೀರದ ರಕ್ಷಣೆಯಲ್ಲಿ ವೈದ್ಯರ ಪಾತ್ರ ಅತೀ ಮುಖ್ಯವಾಗಿರುತ್ತದೆ. ಈ ಆಸ್ಪತ್ರೆಯಲ್ಲಿರುವ ಪರಿಣತ ವೈದ್ಯರ ತಂಡ ಹಾಗೂ ಇದೀಗ ಉದ್ಘಾಟನೆಗೊಂಡ ಡಯಾಬಿಟಿಸ್ ಚಿಕಿತ್ಸಾ ವಿಭಾಗ ಉತ್ತಮ ಸೇವೆ ನೀಡಲಿ ಎಂದು ಹಾರೈಸಿದರು.
ಅಂಬಲಪಾಡಿ ದೇವಾಲಯದ ಧರ್ಮದರ್ಶಿ ಡಾ| ವಿಜಯ ಬಲ್ಲಾಳ್, ಉಡುಪಿ ಶಾರದಾ ಇಂಟರ್‌ನ್ಯಾಶನಲ್ ಹೊಟೇಲ್ ಮಾಲಕ ಬಿ. ಸುಧಾಕರ ಶೆಟ್ಟಿ, ಅನಂತ ಆಚಾರ್ ಉದ್ಯಾವರ, ಡಾ| ಎನ್. ಅರ್ಜುನ್ ಬಲ್ಲಾಳ್ ಉಪಸ್ಥಿತರಿದ್ದರು. ಸಾಯಿನಾಥ್ ಉದ್ಯಾವರ ನಿರೂಪಿಸಿ, ಮಕ್ಕಳ ತಜ್ಞ ಡಾ| ಜನಾರ್ದನ ಪ್ರಭು ವಂದಿಸಿದರು.
ಆಧುನಿಕ ಸೌಲಭ್ಯಗಳು
ಪ್ರಸಿದ್ಧ ವೈದ್ಯರನ್ನು ಒಳಗೊಂಡ ಆಸ್ಪತ್ರೆಯು ಸ್ತ್ರೀರೋಗ, ಜನರಲ್ ಮೆಡಿಸಿನ್, ಜನರಲ್ ಸರ್ಜರಿ, ಮಕ್ಕಳ ವಿಭಾಗ, ಎಲುಬು ಮತ್ತು ಮೂಳೆ ವಿಭಾಗ ಮುಂತಾದ ಹೊರರೋಗಿ ವಿಭಾಗ ಹಾಗೂ ಸುಸಜ್ಜಿತ ಸೌಲಭ್ಯಗಳ ಒಳರೋಗಿ ವಿಭಾಗ, ನವಜಾತ ಶಿಶುಗಳ ತೀವ್ರ ನಿಗಾ ಘಟಕ, ಡೊಪ್ಲರ್ ಸ್ಕಾ Âನ್, ಸುಸಜ್ಜಿತ ಆಪರೇಶನ್ ಥಿಯೇಟರ್, ನವೀನ ತಾಂತ್ರಿಕತೆಯ ಲ್ಯಾಬೋರೇಟರಿ, ಅತ್ಯುತ್ತಮ ನರ್ಸಿಂಗ್ ಕೇರ್, ಪರಿಣಾಮಕಾರಿ ಎಕ್ಸ್‌ರೇ ವಿಭಾಗ, ಅಪಘಾತ-ತುರ್ತು ಚಿಕಿತ್ಸಾ ಘಟಕ, ಐಎಫ್ ಸೆಂಟರ್ ಹಾಗೂ ಇನ್ನಿತರ ಆಧುನಿಕ ಸೌಲಭ್ಯಗಳನ್ನು ಹೊಂದಿದೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಟಿ.ಎಸ್. ರಾವ್ ಅವರು ಪ್ರಸ್ತಾವನೆಯಲ್ಲಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.