ಡಿಜಿ ಲಾಕರ್, ಎಂ ಪರಿವಾಹನ್ ಆ್ಯಪ್
ದಾಖಲೆ ಜೋಪಾನಕ್ಕೆ ಸುಲಭ ತಂತ್ರ
Team Udayavani, Sep 11, 2019, 5:23 AM IST
ಉಡುಪಿ: ವಾಹನಗಳ ಮೂಲ ಮುದ್ರಿತ ಪ್ರತಿಗಳನ್ನು ಕೊಂಡೊಯ್ಯುವುದೇ ಚಾಲಕರಿಗೆ ಸಮಸ್ಯೆ. ಆದರೆ ಇತ್ತೀಚೆಗೆ ಜಾರಿಗೆ ಬಂದಿರುವ ಭಾರೀ ದಂಡದ ನಿಯಮದಿಂದ ಪಾರಾಗಲು ವಾಹನಿಗರು ಇದೀಗ ಸ್ಮಾರ್ಟ್ ತಂತ್ರಜ್ಞಾನದ ಮೊರೆಹೋಗುತ್ತಿದ್ದಾರೆ.
ತಪಾಸಣೆ ಸಂದರ್ಭ ದಾಖಲೆಗಳನ್ನು “ಡಿಜಿ ಲಾಕರ್’ ಅಥವಾ “ಎಂ ಪರಿವಾಹನ್’ ಆ್ಯಪ್ ಮೂಲಕವೂ ತೋರಿಸಬಹುದೆಂದು ಕೇಂದ್ರ ಸರಕಾರ ಈ ಹಿಂದೆಯೇ ಸೂಚಿಸಿದ್ದು, ಹೆಚ್ಚಿನವರು ಯಾವುದಾದರೊಂದು ಆ್ಯಪ್ ಮೂಲಕ ದಾಖಲೆಗಳನ್ನು ಇಟ್ಟುಕೊಳ್ಳಲಾರಂಭಿಸಿದ್ದಾರೆ. ಈ ಸಂಬಂಧ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಡಿಜಿಟಲ್ ದಾಖಲೆಗಳನ್ನು ಸಲ್ಲಿಸಬಹುದು ಎಂದು ತಿಳಿಸಿದೆ.
ಸ್ಮಾರ್ಟ್ ಫೋನ್‌ಗಳಲ್ಲಿ ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಐಒಎಸ್ ಮುಖಾಂತರ ಈ ಆ್ಯಪ್‌ಗ್ಳನ್ನು ಡೌನ್‌ಲೋಡ್ ಮಾಡಿಕೊಂಡು ಅಲ್ಲಿ ತಿಳಿಸಿರುವ ವಿಧಾನದಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದು.
ಸದ್ಯಕ್ಕೆ ತುಸು ವಿನಾಯಿತಿ
ನಿಯಮದ ಪ್ರಕಾರ ವಾಹನ ದಾಖಲೆಗಳ ಜೆರಾಕ್ಸ್ ಪ್ರತಿಗಳು ಪರಿಗಣನೆಗೆ ಬರುವುದಿಲ್ಲ. ಸವಾರರಿಗೆ ಒಮ್ಮೆಲೇ ಹೊರೆಯಾಗಬಾರದು ಎಂಬ ನಿಟ್ಟಿನಲ್ಲಿ ಅದನ್ನು ಕಡ್ಡಾಯವಾಗಿ ಪಾಲಿಸುತ್ತಿಲ್ಲ. ಜೆರಾಕ್ಸ್ ತೋರಿಸಿದರೆ ತುಸು ವಿನಾಯಿತಿ ನೀಡುತ್ತೇವೆ. ಮುಂಬರುವ ದಿನಗಳಲ್ಲಿ ನೋಂದಾಯಿತ ಆ್ಯಪ್ ಮೂಲಕ ಅಥವಾ ಮೂಲದಾಖಲೆಗಳನ್ನು ತೋರಿಸುವುದು ಕಡ್ಡಾಯವಾಗುತ್ತದೆ.
– ನಾರಾಯಣ್, ಟ್ರಾಫಿಕ್ ಸಬ್‌ಇನ್‌ಸ್ಪೆಕ್ಟರ್
ಫೋಟೋ, ಜೆರಾಕ್ಸ್ ಬೇಡ
ಬಹುತೇಕ ವಾಹನ ಚಾಲಕರು ತಪಾಸಣೆ ಸಮಯದಲ್ಲಿ ಜೆರಾಕ್ಸ್ ಪ್ರತಿಗಳನ್ನು ನೀಡುತ್ತಾರೆ. ಇದು ಪರಿಗಣನೆಗೆ ಬರುವುದಿಲ್ಲ. ಫೋಟೋ ಮೂಲಕವೂ ಮೂಲದಾಖಲೆಯನ್ನು ತೋರಿಸಿದರೆ ಪರಿಗಣನೆಗೆ ಬರುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kharge: ಬೆಂಗಳೂರಿಗೆ ಬಂದು ನನ್ನ ಜತೆ ಚರ್ಚೆಗೆ ನಿಲ್ಲಿ: ಪ್ರಧಾನಿ ಮೋದಿಗೆ ಖರ್ಗೆ ಸವಾಲು
IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್ ಹರಾಜು
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.