ಸ್ಥಗಿತಗೊಂಡ ಬೈಲೂರು-ಪಳ್ಳಿ ರಸ್ತೆ ಕಾಮಗಾರಿ : ಪ್ರತಿಭಟನೆ ಎಚ್ಚರಿಕೆ
Team Udayavani, Jul 26, 2019, 5:57 AM IST
ಅಜೆಕಾರು: ಬೈಲೂರು ಗ್ರಾ.ಪಂ. ವ್ಯಾಪ್ತಿಯ ಬೈಲೂರು ಪಳ್ಳಿ ಪ್ರಮುಖ ಸಂಪರ್ಕ ರಸ್ತೆಯ ಕಾಮಗಾರಿ ಪ್ರಾರಂಭಗೊಂಡು 2 ವರ್ಷಗಳಾಗಿವೆ. ಕಳೆದ 1 ವರ್ಷದಿಂದ ಯಾವುದೇ ಕಾಮಗಾರಿ ನಡೆಸದೇ ಸ್ಥಗಿತಗೊಳಿಸಲಾಗಿದ್ದು ಸಂಚಾರ ನಡೆಸಲು ರಸ್ತೆಯೇ ಇಲ್ಲದಂತಾಗಿದೆ. ವಾರದೊಳಗೆ ಕಾಮಗಾರಿ ಪ್ರಾರಂಭಿಸದಿದ್ದಲ್ಲಿ ಗುತ್ತಿಗೆದಾರರ ಮನೆಗೆ ಮುತ್ತಿಗೆ ಹಾಕಿ ಆ. 15ರಿಂದ ಕಾಮಗಾರಿ ಪ್ರಾರಂಭಗೊಳ್ಳುವವರೆಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬೈಲೂರು ಗ್ರಾಮ ಸಭೆಯಲ್ಲಿ ನಡೆಯಿತು.
ಬೈಲೂರು ಗ್ರಾ.ಪಂ.ನ 2019 20ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಜು .25ರಂದು ಪಂಚಾಯತ್ ಅಧ್ಯಕ್ಷೆ ಶ್ವೇತಾ ಪಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಪೂರ್ಣ ಹದಗೆಟ್ಟ ಬೈಲೂರು ಪಳ್ಳಿ ಸಂಪರ್ಕ ರಸ್ತೆ ದುರಸ್ತಿಪಡಿಸುವಂತೆ ಸ್ಥಳಿಯರು ನಿರಂತರ ಒತ್ತಡ ತಂದ ಪರಿಣಾಮ ಶಾಸಕರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಪ್ರಯತ್ನಪಟ್ಟು ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಿದ್ದರೂ ಗುತ್ತಿಗೆದಾರನ ನಿರ್ಲಕ್ಷ್ಯದಿಂದಾಗಿ ಸ್ಥಳೀಯರು ಸಂಕಷ್ಟಪಡುವಂತಾಗಿದೆ ಎಂದು ಗ್ರಾಮಸ್ಥರು ದೂರಿದರು.
ಹಳೆಯ ರಸ್ತೆಯನ್ನು ಸಂಪೂರ್ಣವಾಗಿ ಅಗೆಯಲಾಗಿದ್ದು ಹೊಸ ರಸ್ತೆ ಮಾಡದೇ ಇರುವುದರಿಂದ ವಾಹನ ಸಂಚಾರ ಕಷ್ಟಸಾಧ್ಯವಾಗಿದೆ ಎಂದು ಗ್ರಾಮಸ್ಥರಾದ ಕಿಶೋರ್ ಕುಮಾರ್ ಹೇಳಿದರು.
ಈ ಸಂದರ್ಭ ಮಾತನಾಡಿದ ಜಿ.ಪಂ. ಸದಸ್ಯ ಸುಮಿತ್ ಶೆಟ್ಟಿ, ಈಗಾಗಲೇ ಹಲವು ಬಾರಿ ಗುತ್ತಿಗೆದಾರನಿಗೆ ಕಾಮಗಾರಿ ನಡೆಸುವಂತೆ ಮನವಿ ಮಾಡಲಾಗಿದ್ದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಗ್ರಾಮಸ್ಥರು ನಡೆಸುವ ಯಾವುದೇ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.
ಕೆಸರುಮಯ ಎಳಿಯಾಳ ರಸ್ತೆ
ಪಂಚಾಯತ್ ವ್ಯಾಪ್ತಿಯ ಕೌಡೂರು ಎಳಿಯಾಳದ ಕೆರೆಮನೆ ರಸ್ತೆಗೆ ಜೆಸಿಬಿ ಮೂಲಕ ಮಣ್ಣು ಹಾಕಲಾಗಿದ್ದು ಇದರಿಂದಾಗಿ ರಸ್ತೆ ಕೆಸರಿನ ಹೊಂಡದಂತಾಗಿದೆ. ಸುಮಾರು 15 ಮನೆಯವರಿಗೆ ಸಂಪರ್ಕದ ಏಕೈಕ ರಸ್ತೆ ಇದಾಗಿದ್ದು ಪಂಚಾಯತ್ ಆಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರಾದ ಉಮಾನಾಥ್ ಮಾಡ ಮನವಿ ಮಾಡಿದರು.
ಈ ಬಗ್ಗೆ ಮಾತನಾಡಿದ ಪಂಚಾಯತ್ ಅಧ್ಯಕ್ಷರು, ಕೆಸರುಮಯವಾಗಿರುವ ರಸ್ತೆಗೆ ಜಲ್ಲಿ ಹುಡಿಯನ್ನು ಹಾಕಿ ಸಂಚಾರಕ್ಕೆ ಅನುವುಮಾಡಿ ಕೊಡಲಾಗುವುದು ಎಂದರು.
ಅಸಮರ್ಪಕ ಒಳಚರಂಡಿ ವ್ಯವಸ್ಥೆ
ಬೈಲೂರು ಪೇಟೆಯಲ್ಲಿರುವ ಒಳಚರಂಡಿಯು ತ್ಯಾಜ್ಯಗಳಿಂದ ತುಂಬಿ ಹೋಗಿದ್ದು ತ್ಯಾಜ್ಯ ನೀರು ಹಾಗೂ ಮಳೆಯ ನೀರು ರಸ್ತೆಯಲ್ಲಿಯೇ ಹರಿಯುವಂತಾಗಿದೆ. ಅಲ್ಲದೆ ಪೇಟೆಯ ಹೊಟೇಲ್ನ ತ್ಯಾಜ್ಯವನ್ನು ನೇರವಾಗಿಚರಂಡಿಗೆ ಬಿಡುತ್ತಿರುವುದರಿಂದ ಪೇಟೆ ಪರಿಸರ ದುರ್ವಾಸನೆಯಿಂದ ಕೂಡಿದೆ ಎಂದು ಗ್ರಾಮಸ್ಥರಾದ ಮೋಹನ್ ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸುಮಿತ್ ಶೆಟ್ಟಿ, ಕ್ರಿಯಾ ಯೋಜನೆಯಲ್ಲಿ ಅನುದಾನ ಒದಗಿಸಿ ಹಂತಹಂತವಾಗಿ ಒಳಚರಂಡಿ ವ್ಯವಸ್ಥೆಯ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಸ್ವಚ್ಛತೆಗೆ ಹಿನ್ನಡೆ
ಸ್ವಚ್ಛ ಭಾರತ್ ಮಿಷನ್‌ನಡಿಯಲ್ಲಿ ಪಂಚಾಯತ್ ಆಡಳಿತವು ಸ್ವಚ್ಛತೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆಯಾದರೂ ಹೊರ ರಾಜ್ಯಗಳಿಂದ ಬಂದು ಪಂಚಾಯತ್ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿರುವ ಕೂಲಿ ಕಾರ್ಮಿಕರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರಾದ ಕಿಶೋರ್ ಕುಮಾರ್ ಮನವಿ ಮಾಡಿದರು.
ಈ ಬಗ್ಗೆ ಆಶಾ ಕಾರ್ಯಕರ್ತೆಯರು ಬಾಡಿಗೆ ಮನೆ ನೀಡಿದ ವ್ಯಕ್ತಿಗಳಿಗೆ ಸೂಕ್ತ ಸೂಚನೆ ನೀಡುವಂತೆ ಕ್ರಮ ಕೈಗೊಳ್ಳುವುದಾಗಿ ಪಂಚಾಯತ್ ಅಧ್ಯಕ್ಷರು ಹೇಳಿದರು.
ಶೇರಿಗಾರ ಬೆಟ್ಟು ಪ್ರದೇಶದಲ್ಲಿ ವಿದ್ಯುತ್ ತಂತಿಗಳಿಗೆ ಮರದ ಗೆಲ್ಲುಗಳು ತಾಗುತ್ತಿದ್ದು ಈವರೆಗೂ ತೆರವುಗೊಂಡಿಲ್ಲ ಎಂದು ಗ್ರಾಮಸ್ಥರಾದ ರವಿ ನಾಯಕ್ ಆರೋಪಿಸಿದರು. ಎರಡು ದಿನದಲ್ಲಿ ಮರದ ಅಪಾಯಕಾರಿ ಗೆಲ್ಲುಗಳನ್ನು ತೆರವುಗೊಳಿಸಲಾಗುವುದು ಎಂದು ಮೆಸ್ಕಾಂ ಅಧಿಕಾರಿ ತಿಳಿಸಿದರು.
ಕುಡಿಯುವ ನೀರಿನ ದುರ್ಬಳಕೆ
ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಂಪರ್ಕವನ್ನು ಒದಗಿಸಲಾಗಿದ್ದು ಕೆಲ ಗ್ರಾಮಸ್ಥರು ಇದರ ದುರ್ಬಳಕೆ ಮಾಡುತ್ತಿದ್ದಾರೆ. ಇಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದರು.
ಗ್ರಾಮ ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್ ಭಾಗವಹಿಸಿದ್ದರು. ಶಿಕ್ಷಣ, ಕೃಷಿ, ತೋಟಗಾರಿಕೆ, ಕಂದಾಯ, ಪಶು, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ, ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ತಾ.ಪಂ. ಸದಸ್ಯೆ ನಿರ್ಮಲಾ, ಗ್ರಾ.ಪಂ. ಉಪಾಧ್ಯಕ್ಷ ಜಗದೀಶ್ ಪೂಜಾರಿ, ಸದಸ್ಯರಾದ ವನಿತಾ ರಾವ್, ಶಾಂತ ನಾಯ್ಕ, ಸತೀಶ್ ಶೆಟ್ಟಿ, ಅನಿತಾ, ಸಂತೋಷ್, ಸುರೇಶ್ ಸಾಲ್ಯಾನ್, ಸಚ್ಚಿದಾನಂದ ಶೆಟ್ಟಿ, ಜಗದೀಶ್ ತೆಂಡೂಲ್ಕರ್, ದೀಕ್ಷಿತಾ, ಮೇರಿ ಎಂ. ಕೆ., ಪಿಡಿಒ ರವಿರಾಜ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ನಿರ್ಮಲಾ ವರದಿ ಮಂಡಿಸಿ, ಸ್ವಾಗತಿಸಿದರು. ಸಿಬಂದಿ ಸಹಕರಿಸಿದರು.
ತುರ್ತು ಸಂದರ್ಭಗಳಲ್ಲಿ ಹೈನುಗಾರರು ಪಶು ಸಂಗೋಪನ ಅಧಿಕಾರಿಗಳಿಗೆ ಕರೆ ಮಾಡಿದರೂ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದಾಗಿ ಬೆಲೆಬಾಳುವ ದನಗಳು ಸಾಯುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಈ ಬಗ್ಗೆ ಮಾತನಾಡಿದ ಸುಮಿತ್ ಶೆಟ್ಟಿ, ತಾಲೂಕಿನಲ್ಲಿ ಪಶುವೈದ್ಯರ ಕೊರತೆಯಿಂದಾಗಿ ಇಂತಹ ಘಟನೆಗಳು ನಡೆಯುತ್ತಿವೆ. ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸುವಂತೆ ಪಶುವೈದ್ಯರಿಗೆ ಸೂಚಿಸಿದರು.
ಕಣಜಾರುವಿನಿಂದ ಕಂಪನದವರೆಗೆ ರಸ್ತೆಯನ್ನು ಎತ್ತರಿಸಿ ಅಭಿವೃದ್ಧಿಪಡಿಸಲಾಗಿದ್ದು ಈ ಸಂದರ್ಭ ವಿದ್ಯುತ್ ಕಂಬಗಳು ತೆರವುಗೊಳ್ಳದೆ ಇರುವುದರಿಂದ ರಸ್ತೆಯುದ್ದಕ್ಕೂ ವಿದ್ಯುತ್ ತಂತಿಗಳು ಕೈಗೆಟಕುವಂತಿದ್ದು ಅಪಾಯಕಾರಿಯಾಗಿವೆ. ಅಲ್ಲದೆ ಕಣಜಾರು ಸಿಂಡಿಕೇಟ್ ಬ್ಯಾಂಕ್ ಬಳಿ ವಿದ್ಯುತ್ ಪರಿವರ್ತಕ ರಸ್ತೆಯಂಚಿನಲ್ಲಿಯೇ ಇದ್ದು ವಾಹನ ಸಂಚಾರರಿಗೆ ತೀರಾ ಅಪಾಯಕಾರಿಯಾಗಿದೆ ಎಂದು ಗ್ರಾಮಸ್ಥರು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಳ್ಳುವುದಾಗಿ ಮೆಸ್ಕಾಂ ಅಧಿಕಾರಿಗಳು ತಿಳಿಸಿದರು.
ಸ್ಪಂದಿಸದ ಅಧಿಕಾರಿಗಳು
ತುರ್ತು ಸಂದರ್ಭಗಳಲ್ಲಿ ಹೈನುಗಾರರು ಪಶು ಸಂಗೋಪನ ಅಧಿಕಾರಿಗಳಿಗೆ ಕರೆ ಮಾಡಿದರೂ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದಾಗಿ ಬೆಲೆಬಾಳುವ ದನಗಳು ಸಾಯುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಈ ಬಗ್ಗೆ ಮಾತನಾಡಿದ ಸುಮಿತ್ ಶೆಟ್ಟಿ, ತಾಲೂಕಿನಲ್ಲಿ ಪಶುವೈದ್ಯರ ಕೊರತೆಯಿಂದಾಗಿ ಇಂತಹ ಘಟನೆಗಳು ನಡೆಯುತ್ತಿವೆ. ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸುವಂತೆ ಪಶುವೈದ್ಯರಿಗೆ ಸೂಚಿಸಿದರು.
ಕೈಗೆಟಕುವ ವಿದ್ಯುತ್ ತಂತಿಗಳು
ಕಣಜಾರುವಿನಿಂದ ಕಂಪನದವರೆಗೆ ರಸ್ತೆಯನ್ನು ಎತ್ತರಿಸಿ ಅಭಿವೃದ್ಧಿಪಡಿಸಲಾಗಿದ್ದು ಈ ಸಂದರ್ಭ ವಿದ್ಯುತ್ ಕಂಬಗಳು ತೆರವುಗೊಳ್ಳದೆ ಇರುವುದರಿಂದ ರಸ್ತೆಯುದ್ದಕ್ಕೂ ವಿದ್ಯುತ್ ತಂತಿಗಳು ಕೈಗೆಟಕುವಂತಿದ್ದು ಅಪಾಯಕಾರಿಯಾಗಿವೆ. ಅಲ್ಲದೆ ಕಣಜಾರು ಸಿಂಡಿಕೇಟ್ ಬ್ಯಾಂಕ್ ಬಳಿ ವಿದ್ಯುತ್ ಪರಿವರ್ತಕ ರಸ್ತೆಯಂಚಿನಲ್ಲಿಯೇ ಇದ್ದು ವಾಹನ ಸಂಚಾರರಿಗೆ ತೀರಾ ಅಪಾಯಕಾರಿಯಾಗಿದೆ ಎಂದು ಗ್ರಾಮಸ್ಥರು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಳ್ಳುವುದಾಗಿ ಮೆಸ್ಕಾಂ ಅಧಿಕಾರಿಗಳು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.