“ರಿವೀಟ್‌ಮೆಂಟ್’ ಕೊರತೆಯಿಂದ ಸಂಚಾರ ವ್ಯವಸ್ಥೆಗೆ ತಡೆ
Team Udayavani, Jun 26, 2018, 6:30 AM IST
ಕೊಲ್ಲೂರು: ಮಾರಣಕಟ್ಟೆ- ಸನ್ಯಾಸಿಬೆಟ್ಟು ಸಂಪರ್ಕ ಕಿರುಸೇತುವೆ ನಿರ್ಮಾಣ ಗೊಂಡು ಒಂದೂವರೆ ವರ್ಷ ಕಳೆದರೂ “ರಿವೀಟ್‌ಮೆಂಟ್’ ಕಾಮಗಾರಿ ಪೂರ್ಣಗೊಳ್ಳದೇ ಸಂಚಾರಕ್ಕೆ ತೊಡಕಾಗಿ ರುವುದು ನಿತ್ಯ ಪ್ರಯಾಣಿಕರ ಪಾಲಿಗೆ ಗೋಳಾಗಿದೆ.
ಸುತ್ತಿ ಬಳಸಿ ಮಾರಣಕಟ್ಟೆ ಸಾಗುವ ಹಾದಿಯ ನಡುವೆ ಹರಿಯುವ ಹೊಳೆಗೆ ಮರದ ದಿಮ್ಮೆಯ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದ್ದು ಆ ಮಾರ್ಗವಾಗಿ ಮಳೆ ಗಾಲದಲ್ಲಿ ಆ ಭಾಗದ ನಿವಾಸಿಗಳು ಸಾಗುವ ಪರಿಪಾಠ ಹೊಂದಿದ್ದರು.
ಕಳೆದ ವರುಷ ಮಳೆಗಾಲದಲ್ಲಿ ಆ ಮಾರ್ಗವಾಗಿ ಶಾಲೆಗೆ ಸಾಗುತ್ತಿದ್ದ ವಿದ್ಯಾರ್ಥಿನಿ ವಿಸ್ಮಯ ದೇವಾಡಿಗ ಆಕಸ್ಮಿಕವಾಗಿ ಕಾಲು ಜಾರಿ ನದಿ ಪಾಲಾಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಬೇಡಿಕೆಯಂತೆ ರೂ. 10 ಲಕ್ಷ ವೆಚ್ಚದಲ್ಲಿ ಕರಾವಳಿ ಅಭಿವೃದ್ಧಿಪ್ರಾಧಿಕಾರದ ನೇತƒತ್ವದಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಕಿರುಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಿತ್ತು.
ಸೇತುವೆ ನಿರ್ಮಾಣವಂತೂ ಪೂರ್ಣ ವಾಗಿದೆ. ಆದರೆ ಅವುಗಳ ಇಕ್ಕೆಲಗಳ ರಸ್ತೆಯ ಅಂಚಿಗೆ ಮಣ್ಣು ತುಂಬಿಸಿ ರಿವೀಟ್‌ಮೆಂಟ್ ಕಾಮಗಾರಿ ಆರಂಭಗೊಳ್ಳದಿರುವುದು ಸಂಚಾರಕ್ಕೆ ತೊಡಕಾಗಿದೆ. ರಿûಾ ಸಮೇತ ದ್ವಿಚಕ್ರ ವಾಹನಗಳು ಈ ಮಾರ್ಗವಾಗಿ ಸಂಚರಿಸುವುದು ಕಷ್ಟಸಾಧ್ಯವಾಗಿದೆ.
ಭಾರೀ ಮಳೆಯಿಂದಾಗಿ ರಸ್ತೆಯ ಬದಿಗೆ ತುಂಬಿಸಿದ ಮಣ್ಣು ನೀರು ಪಾಲಾಗಿದೆ. ಆ ಮಾರ್ಗವಾಗಿ ಸಾಗುವ ಮಂದಿಯ ಗೋಳು ಹೇಳತೀರದು. ಕಿರು ಸೇತುವೆ ನಿರ್ಮಾಣವಾದರೂ ಬಳಕೆಗೆ ಬಾರದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಲುಸಂಕ ನಿರ್ಮಾಣವಾಗಿದ್ದರೂ ಅದಕ್ಕೆ ಪೂರಕವಾಗಿ ನಿರ್ಮಿಸಬೇಕಾದ ರಿವೀಟ್‌ಮೆಂಟ್ ಗೆ ಸುಮಾರು 4 ಲಕ್ಷ ಅಂದಾಜು ವೆಚ್ಚ ತಗಲಲಿದೆ. ಆದರೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರವು ತಮಗೆ ಬಿಡುಗಡೆಯಾದ ರೂ. 10 ಲಕ್ಷಕ್ಕೆ ಸೀಮಿತವಾಗಿ ಕಾಮಗಾರಿ ಪೂರ್ಣಗೊಳಿಸಿದ್ದು ಮುಂದಿನ ಅನು ದಾನಕ್ಕಾಗಿ ತಾ.ಪಂ., ಗ್ರಾ.ಪಂ. ಗಳು ಜಿ.ಪಂ. ಮೊರೆ ಹೋಗಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ.
ಅನುದಾನಕ್ಕಾಗಿ ಶಾಸಕರಿಗೆ ಮನವಿ
ಚಿತ್ತೂರು ಗ್ರಾ.ಪಂ. ನಲ್ಲಿರುವ ಅನು ದಾನವು ಸೀಮಿತವಾಗಿದ್ದು ಅದು ಗ್ರಾ.ಪಂ. ವಿವಿಧ ಕಾಮಗಾರಿಗಳು ಹಾಗೂ ಇತರ ಸೌಕರ್ಯಗಳಿಗೆ ಬಳಸಬೇಕಾಗಿದ್ದು ಅಷ್ಟೊಂದು ಮೊತ್ತದ ಹಣವನ್ನು ಕ್ರೋಡೀ ಕರಿಸುವುದು ಕಷ್ಟಸಾಧ್ಯವೆಂದು ಚಿತ್ತೂರು ಗ್ರಾ.ಪಂ. ಅಧ್ಯಕ್ಷ ಸಂತೋಷ ಮಡಿವಾಳ ಅಭಿಪ್ರಾಯ ಪಟ್ಟಿದ್ದಾರೆ. ನೂತನ ಶಾಸಕರಲ್ಲಿ ಮನವಿ ಸಲ್ಲಿಸಿ ಅನುದಾನಕ್ಕಾಗಿ ಪ್ರಯತ್ನಿಸುವುದಾಗಿ ಹೇಳಿದ್ದಾರೆ.
ತಾ.ಪಂ.ನಲ್ಲಿ ಪ್ರಸ್ತಾಪ
ಸಂನ್ಯಾಸಿಬೆಟ್ಟು-ಚಿತ್ತೂರು ಸಂಪರ್ಕ ಕಿರುಸೇತುವೆ ನಿರ್ಮಾಣವಾಗಿದ್ದರೂ ಅನುದಾನದ ಕೊರತೆಯಿಂದ ರಿವೀಟ್‌ಮೆಂಟ್ ಕಾಮಗಾರಿ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಆ ಬಗ್ಗೆ ತಾ.ಪಂ. ನಲ್ಲಿ ಪ್ರಸ್ತಾಪಿಸಿ ಜಿಲ್ಲಾ ಪಂಚಾಯತ್ ಗಮನಕ್ಕೆ ತಂದು ಅಪೂರ್ಣ ಕಾಮಗಾರಿ ಭರ್ತಿ ಮಾಡಲು ಪ್ರಯತ್ನಿಸಲಾಗುವುದು .
– ಉದಯ ಜಿ. ಪೂಜಾರಿ, ತಾ.ಪಂ. ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.