3 ಝೋನ್‌ಗಳಿಗೆ ನಿಗದಿತ ಅವಧಿಯಲ್ಲಿ ನೀರು ವಿತರಣೆ

ಬಜೆ ಡ್ಯಾಂನಲ್ಲಿ ಸಾಕಷ್ಟು ನೀರು

Team Udayavani, Mar 5, 2020, 5:05 AM IST

3 ಝೋನ್‌ಗಳಿಗೆ ನಿಗದಿತ ಅವಧಿಯಲ್ಲಿ ನೀರು ವಿತರಣೆ

ಉಡುಪಿ: ನಗರಕ್ಕೆ ನೀರು ಣಿಸುವ ಹಿರಿಯಡ್ಕದ ಬಜೆ ಅಣೆ ಕಟ್ಟಿನಲ್ಲಿ ಮಾ. 4ರಂದು ನೀರಿನ ಮಟ್ಟ 5.61 ಮೀಟರ್‌ ಇದ್ದು, ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದು ರಾಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ.

ನಗರಸಭೆ ವ್ಯಾಪ್ತಿಯ 35 ವಾರ್ಡ್‌ ಗಳಿಗೆ ಕುಡಿಯುವ ನೀರು ಪೂರೈಕೆಯ ಏಕೈಕ ಮೂಲವಾಗಿರುವ ಬಜೆ ಅಣೆಕಟ್ಟು ಒಳಹರಿವು ನಿಂತು ಒಂದು ತಿಂಗಳು ಕಳೆದಿದೆ. ಸದ್ಯಕ್ಕೆ 5.61 ಮೀಟರ್‌ ನೀರು ಡ್ಯಾಂನಲ್ಲಿ ನಿಲ್ಲಿಸಲಾಗಿದೆ. ನಿತ್ಯ 2 ಸೆಂ. ಮೀಟರ್‌ ನೀರು ಬಳಕೆಯಾಗುತ್ತದೆ. 2019 ಮಾ.4ರಂದು 4.91 ಮೀ. ನೀರು ಸಂಗ್ರಹವಾಗಿತ್ತು. ಒಟ್ಟು ಪರಿಸ್ಥಿತಿ ಯನ್ನು ಅವಲೋಕಿಸಿದರೆ ಈ ಬಾರಿ ನಗರಕ್ಕೆ ಸುಗಮ ಕುಡಿಯುವ ನೀರು ಪೂರೈಕೆಯ ಆಶಾವಾದ ಮೂಡಿದೆ.ಬಜೆಯಲ್ಲಿ ನೀರು ಪ್ರಮಾಣ ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ನೀರಿನ ಒತ್ತಡ ಕಡಿಮೆಯಾಗಿದ್ದು, ಇದರಿಂದ ಎತ್ತರ ಪ್ರದೇಶಗಳಿಗೆ ನೀರು ಸರಬರಾಜು ಆಗುತ್ತಿಲ್ಲ.

ಈ ಹಿನ್ನೆಲೆಯಲ್ಲಿ ನಗರಸಭೆ ಮಾ. 4ರಿಂದ 35 ವಾರ್ಡ್‌ಗಳನ್ನು ಮೂರು ಝೋನ್‌ಗಳಾಗಿ ವಿಗಂಡಿಸಿ, ನಿಗದಿತ ಅವಧಿಯಲ್ಲಿ ನೀರು ಸರಬರಾಜು ಮಾಡಲು ನಿರ್ಧರಿಸಿದೆ.

ಶಿರೂರು ಡ್ಯಾಂನಲ್ಲಿ ನೀರು
ಪ್ರಸ್ತುತ ಬಜೆಗೆ ಶಿರೂರು ಡ್ಯಾಂನಲ್ಲಿ ಸಾಕಷ್ಟು ನೀರು ಸಂಗ್ರಹವಿದೆ. ಮಾ.2 ರಂದು ಶಿರೂರು ಡ್ಯಾಂ ಒಂದು ಬಾಗಿಲಿನಿಂದ ನೀರು ಹರಿ ಬಿಡ ಲಾಗುತ್ತಿದೆ. ಇದರಿಂದ ಬಜೆ ಅಣೆಕಟ್ಟಿನಲ್ಲಿಯೂ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಕಳೆದ ಬಾರಿ ಮಾರ್ಚ್‌ ನಲ್ಲಿ ಶಿರೂರು ಡ್ಯಾಂ ನಲ್ಲಿ ನೀರು ಸಂಪೂರ್ಣವಾಗಿ ಬರಿದಾಗಿತ್ತು.

ನೀರಿಗೆ ಮುನ್ನೆಚ್ಚರಿಕೆ
ಕಳೆದ ಬೇಸಗೆಯಲ್ಲಿ ಕುಡಿಯುವ ನೀರು ಪೂರೈಸುವಲ್ಲಿ ವಿಫ‌ಲಗೊಂಡ ನಗರಸಭೆ, ಈ ಬಾರಿ ಮುಂಜಾಗೃತ ಕ್ರಮವಾಗಿ ಬಜೆ ಹೂಳು ತೆಗೆಸುವಲ್ಲಿ ಸಫ‌ಲವಾಗಿದೆ. ಬಜೆ ಡ್ಯಾಂ ತಳಮಟ್ಟದ ಹೂಳು ತೆಗೆದಿರುವುದರಿಂದ ಡ್ಯಾಂ ತಳಭಾಗದಲ್ಲಿ ನೀರಿನ ಸಂಗ್ರಹ ಪ್ರಮಾಣ ಹೆಚ್ಚಿದೆ ಎನ್ನುವುದು ನಗರಸಭೆ ಅಧಿಕಾರಿಗಳ ಅಭಿಪ್ರಾಯ. ಈ ಬಾರಿ ನೀರಿನ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಡ್ಯಾಂ ಬಾಗಿಲುಗಳನ್ನು ದುರಸ್ತಿಗೊಳಿಸಿ ಭದ್ರಗೊಳಿಸಿದೆ.

18 ದಶಲಕ್ಷ ಲೀ. ನೀರು ಸಾಕು
ನಗರದಲ್ಲಿ ಸುಮಾರು 10,500 ಮನೆಗಳು, ಮಣಿಪಾಲ ಕೈಗಾರಿಕಾ ವಲಯದಲ್ಲಿ 70ರಿಂದ 80 ಕೈಗಾರಿಕಾ ಘಟಕ, 570 ಫ್ಲ್ಯಾಟ್‌ಗಳಿವೆ. ಸುಮಾರು 1,000 ವಾಣಿಜ್ಯ ಸಂಸ್ಥಾಪನೆಗಳು ಇವೆ. ಸುಮಾರು 600 ಹೊಟೇಲ್‌, 40 ಲಾಡ್ಜ್ಗಳಿವೆ. ಸರಕಾರದ ಪ್ರಕಾರ ಪ್ರತಿ ಪ್ರಜೆಗೆ ದಿನಕ್ಕೆ 135 ಲೀ. ನೀರು ಒದಗಿಸಬೇಕು. ನಗರದ ಜನಸಂಖ್ಯೆ 1.6 ಲಕ್ಷ. ಅದರ ಪ್ರಕಾರ ಪ್ರತಿನಿತ್ಯ ನಗರಕ್ಕೆ ಸುಮಾರು 18 ದಶಲಕ್ಷ ಲೀ. ನೀರು ಸಾಕಾಗುತ್ತದೆ. ಆದರೆ ಪ್ರತಿದಿನ 24 ದಶಲಕ್ಷ ಲೀ. ನೀರು ಪೂರೈಸಲಾಗುತ್ತದೆ.

ಪ್ರತಿ ತಿಂಗಳು 1 ಲ.ಲೀ.
ಬೇಸಗೆ ಕಾಲದಲ್ಲಿ ಇಡೀ ನಗರದ ಜನರು ನೀರಿಗಾಗಿ ತತ್ತರಿಸಿ ಹೋಗುತ್ತಾರೆ. ಕಳೆದ ಬಾರಿ ಮಣಿಪಾಲದಲ್ಲಿ ಶೇ.68ರ ಪೈಕಿ ಪ್ರತಿಯೊಬ್ಬರೂ ಪ್ರತಿ ತಿಂಗಳು 1 ಲ.ಲೀ. ನೀರು ಬಳಕೆ ಮಾಡುತ್ತಿದ್ದಾರೆ. ಮೂರ್‍ನಾಲ್ಕು ಜನರು ವಾಸಿಸುವ ಮನೆಗಳಲ್ಲಿ ಭಾರೀ ನೀರು ಬಳಕೆ ಮಾಡಲಾಗುತ್ತಿದೆ. ಬಿಲ್ಲು ಕಟ್ಟುತ್ತೇವೆಂಬ ನೆಪವೊಡ್ಡಿ ಬೇಕಾಬಿಟ್ಟಿ ನೀರು ಬಳಕೆ ಮತ್ತು ಗಿಡಗಳಿಗೆ ಹಾಕುವುದರಿಂದ ಕೊರತೆಯಾಗುತ್ತಿದೆ ಎನ್ನುವುದು ನಗರಸಭೆ ಅಧಿಕಾರಿಗಳ ಅಭಿಪ್ರಾಯ.

ಸಿಬಂದಿಗಳಿಗೆ ಎಇಇ- ಸ್ಪೆಶಲ್‌ ಕ್ಲಾಸ್‌
ಬಜೆ ಡ್ಯಾಂನಲ್ಲಿ ಮೂರು ಮೂರು ಶಿಫ್ rನಲ್ಲಿ 14 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಲ್ಲಿ ಇಬ್ಬರು ವಾಚ್‌ಮ್ಯಾನ್‌ ಬಾಕಿ 12 ಮಂದಿ ಒಂದು ಶಿಫ್ಟ್ಗೆ 4 ಜನರಂತೆ 3 ಶಿಫ್ಟ್ನಲ್ಲಿ ಕೆಲಸ ಮಾಡುತ್ತಾರೆ. ಈ ಸಿಬಂದಿಗಳು ಕೆಲಸಕ್ಕೆ ಬಾರದೆ ಇರುವುದರಿಂದ ಡ್ಯಾಂನಲ್ಲಿ ಉಂಟಾಗುವ ಸಮಸ್ಯೆ ಅಧಿಕಾರಗಳ ಗಮನಕ್ಕೆ ಬಾರದೆ ತಿಂಗಳುಗಟ್ಟಲೆ ನೀರು ಸೋರಿಕೆಯಾಗುತ್ತಿತ್ತು. ಬಯೋಮೆಟ್ರಿಕ್‌, ಸಿಸಿ ಕೆಮರಾ ಅಳವಡಿಸಿದರೂ ವಿವಿಧ ನೆಪವೊಡ್ಡಿ ಹಿಂದೆ ಕಳುಹಿಸಿದ್ದಾರೆ. ಇದೀಗ ಪ್ರತಿ ಶಿಫ್ಟ್ ಸಿಬಂದಿಗಳು ಕೆಲಸಕ್ಕೆ ಬರುವ ಸಮಯ ಹಾಗೂ ಹೋಗುವ ಸಮಯ ಗಡಿಯಾರದ ಮುಂಭಾಗದಲ್ಲಿ ನಿಂತು ಸೆಲ್ಫಿ ತೆಗೆದು ಕಳುಹಿಸುವಂತೆ ಆದೇಶ ಮಾಡಿದ್ದೇನೆ. ಇದೀಗ ಡ್ಯಾಂನಲ್ಲಿ ಏನೇ ಸಮಸ್ಯೆ ಬಂದರೂ ಸಿಬಂದಿಗಳು ತತ್‌ಕ್ಷಣ ಮಾಹಿತಿ ನೀಡುತ್ತಾರೆ. ಇದರಿಂದಾಗಿ ನೀರಿನ ಸೋರಿಕೆ ಕಡಿಮೆಯಾಗಿದೆ ಎಂದು ನಗರಸಭೆ ಎಇಇ ಮೋಹನ್‌ ರಾಜ್‌ ತಿಳಿಸಿದ್ದಾರೆ.

ನೀರಿನ ಕಡಿತವಿಲ್ಲ !
ಕಳೆದ 2017 ಮತ್ತು 2019 ವರ್ಷವೂ ನಗರಕ್ಕೆ ನೀರಿನ ಸಮಸ್ಯೆ ತಲೆದೋರಿದ್ದು, ಮಾರ್ಚ್‌ ಮೊದಲ ವಾರದಿಂದಲೇ ಕೆಲವು ಕಡೆಗಳಿಗೆ 2 ದಿನಕ್ಕೊಮ್ಮೆ ನೀರು ಕೊಡಲಾಗುತ್ತಿತ್ತು. ಪ್ರಸ್ತುತ ಬಜೆಯಲ್ಲಿ 5.61 ಮೀಟರ್‌ ನೀರಿದ್ದು, ಶಿರೂರು ಡ್ಯಾಂನಲ್ಲಿ ನೀರು ಸಂಗ್ರಹವಿರುವ ಕಾರಣದಿಂದ ನಗರಸಭೆ ನೀರಿನ ಕಡಿತ ಪ್ರಕ್ರಿಯೆ ಆರಂಭಗೊಂಡಿಲ್ಲ.

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

10-karkala

Karkala: ಬಾವಿ‌ಗೆ ಬಿದ್ದು ವ್ಯಕ್ತಿ‌ ‌ಸಾವು‌; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ‌ ಪಡೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.