ನರ್ಮ್ ಲೈಸನ್ಸ್‌ ರದ್ದತಿಗೆ ಜಿಲ್ಲಾಡಳಿತ ಹೊಣೆ: ರಾಜವರ್ಮ ಬಲ್ಲಾಳ್‌


Team Udayavani, Jul 11, 2017, 3:45 AM IST

bus-city-udupi.jpg

ಉಡುಪಿ: ಜಿಲ್ಲೆಯಲ್ಲಿ ನರ್ಮ್ ಬಸ್‌ಗಳ ಮಂಜೂರಾತಿ ಉಸ್ತುವಾರಿ ಸಚಿವರ ಒತ್ತಡದ ಮೇಲೆ ಆಗಿದೆ ವಿನಾ ಕಾನೂನು ರೀತಿಯಲ್ಲಿ ಆಗಿಲ್ಲ. ಆದುದರಿಂದ ಈ ಮಂಜೂರಾತಿಯಲ್ಲಿ ಆಗಿರುವ ಲೋಪದಿಂದಾಗಿಯೇ ಪರವಾನಿಗೆಗಳನ್ನು ಉಚ್ಚ ನ್ಯಾಯಾಲಯ ರದ್ದು ಮಾಡಿದೆ ಎಂದು ರಾಜ್ಯ ಬಸ್‌ ಮಾಲಕರ ಒಕ್ಕೂಟದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ನರ್ಮ್ ಬಸ್‌ಗಳಿಗೆ ಡಿಪಿಆರ್‌ ಮಾಡುವಾಗ ತೋರಿಸಿರುವ ಮಾರ್ಗ ಮತ್ತು ಈಗ ಬಸ್‌ ಹಾಕಿರುವ ಮಾರ್ಗ ಗಳಿಗೆ ಒಂದಕ್ಕೊಂದು ತಾಳೆ ಆಗುತ್ತಿಲ್ಲ. ಜಿಲ್ಲಾಡಳಿತ ಕಾನೂನು ಪ್ರಕಾರ ಪರವಾನಿಗೆ ನೀಡಲು ಹೊರ ಟರೆ ಸಚಿವರ ಒತ್ತಡದಿಂದ ಕಾನೂನು ಮುರಿದು ಪರವಾನಿಗೆ ನೀಡಿರುವುದು ನರ್ಮ್ ಬಸ್‌ಗಳು ನಿಲ್ಲಲು ಕಾರಣ. ಎಲ್ಲದಕ್ಕೂ ಕಾನೂನು ಇದೆ. ಕಾನೂನಿಗಿಂತ ಯಾರೂ ಮೇಲಲ್ಲ ಎಂದು ಬಲ್ಲಾಳ್‌ ಹೇಳಿದ್ದಾರೆ.

ಖಾಸಗಿ ಮೇಲೆ ಕೋಪವೇಕೋ?
ಹಿರಿಯ ಕಾಂಗ್ರೆಸ್‌ ನಾಯಕ, ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌, ಅಂದಿನ ಸಚಿವರಾದ ಅಭಯಚಂದ್ರ ಜೈನ್‌ ಹಾಗೂ ವಿನಯ ಕುಮಾರ ಸೊರಕೆಯವರಲ್ಲಿ ನಮ್ಮ ಸಮಸ್ಯೆ ಮತ್ತು ಗಂಭೀರತೆಯನ್ನು ಹೇಳಿದಾಗ ಸೂಕ್ತ ಪರಿಹಾರ ಹಾಗೂ ಸೌಹಾರ್ದ ಸ್ಪರ್ಧೆಗೆ ಅವಕಾಶ ಮಾಡಿಕೊಡುವ ಬಗ್ಗೆ ಭರವಸೆ ನೀಡಿದ್ದರು. ಈಗಿನ ಉಸ್ತುವಾರಿ ಸಚಿವರಲ್ಲಿ ಕೂಡ ನಮ್ಮ ಸಂಘದ ನಿಯೋಗ 8 ಬಾರಿ ಹೋಗಿ ಮನವರಿಕೆ ಮಾಡಿದ್ದರೂ ಯಾವುದೇ ಪರಿಹಾರ ಸಿಕ್ಕಿಲ್ಲ. ಒಂದು ಕಡೆ ನಮಗೆ ಭರವಸೆ ನೀಡಿ ಕೆಎಸ್ಸಾರ್ಟಿಸಿಯವರಿಗೆ ಹೊಸ ಪರವಾನಿಗೆಗೆ ಅರ್ಜಿ ಹಾಕಲು ಹೇಳುತ್ತಾರೆ. ಜಿಲ್ಲಾಧಿಕಾರಿಗಳಿಗೆ ಪರವಾ ನಿಗೆ ಮಂಜೂರು ಮಾಡಲು ಒತ್ತಡ ಹೇರುತ್ತಾರೆ. ಇದರ ಹಿಂದಿ ರುವ ಕಾರಣ ಏನು? ಕೋರ್ಟ್‌ಗೆ ಹೋಗಬಾರದು, ನಾನು ಎಲ್ಲವನ್ನೂ ಸರಿ ಮಾಡಿಕೊಡುತ್ತೇನೆ ಎಂದು ಉಸ್ತು ವಾರಿ ಸಚಿವರು ಹೇಳುತ್ತಾರೆ ವಿನಾ ಪರಿಹಾರ ಕೊಟ್ಟಿಲ್ಲ. ಆದ ಕಾರಣ ಕೋರ್ಟ್‌ಗೆ ಹೋಗಬೇಕಾಯಿತು. ಜಿಲ್ಲೆಯಲ್ಲಿ ಖಾಸಗಿ ಬಸ್‌ ಓಡಿಸಲೇ ಬಾರ ದೆಂಬ ಉದ್ದೇಶ ಯಾಕೆ ಎಂಬುದು ಅರ್ಥವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಕರಾವಳಿ ಜಿಲ್ಲೆಗಳಲ್ಲಿ ಕಳೆದ ನೂರು ವರ್ಷಗಳಿಂದ ಸಾರಿಗೆ ಸೇವೆ ನೀಡುತ್ತಿರುವ ಖಾಸಗಿ ಸಾರಿಗೆಯ ಹಿಂದೆ 6ರಿಂದ 7 ಸಾವಿರ ಕುಟುಂಬಗಳಿವೆ. ಒಂದೊಂದು ಬಸ್ಸನ್ನೇನಂಬಿರುವ ಅದೆಷ್ಟೋ ಕುಟುಂಬಗಳಿವೆ. ಅವರ ಪರಿಸ್ಥಿತಿ ಏನು? ಖಾಸಗಿ ಬಸ್‌ಗಳನ್ನು ತಪಾಸಣೆ ಮಾಡಲು ಆದೇಶ ನೀಡಿ ರುವ ವಿಚಾರ ಸ್ವಾಗತ. ಆದರೆ ಸಚಿವರು ಒಬ್ಬೊ
ಬ್ಬರಿಗೆ ಒಂದೊಂದು ಕಾನೂನು ಮಾಡದೇ ಎಲ್ಲರಿಗೂ ಒಂದೇ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.

ಸಚಿವರಿಗೆ ಖಾಸಗಿ ಬಸ್‌ ಮಾಲಕರ ಪ್ರಶ್ನೆ
– ಉಚ್ಚ ನ್ಯಾಯಾಲಯ ನರ್ಮ್ ಬಸ್‌ಗಳ ಪರವಾನಿಗೆ ರದ್ದು ಪಡಿಸಿದರೂಇಂದಿಗೂ ಬಸ್‌ಗಳು ನಿರಾತಂಕವಾಗಿ ಓಡುತ್ತಿವೆ. ಇದು ಕಾನೂನಿನ ಉಲ್ಲಂಘನೆಯಲ್ಲವೇ? ಸಾರಿಗೆ ಅಧಿಕಾರಿಗಳು ನಿಮಗೆ ಹೆದರಿ ಸುಮ್ಮನಿರುವುದು ಯಾಕೆ? 

– ಕೆಎಸ್ಸಾರ್ಟಿಸಿಯವರು ನ್ಯಾಯಾಲಯದ ಆದೇಶ ಸಿಕ್ಕಿಲ್ಲ ಎನ್ನುತ್ತಾರೆ. ಆದರೆ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಆದೇಶ ಓದುವಾಗ ಅವರ ವಕೀಲರು ಮತ್ತು ಅಧಿಕಾರಿಗಳು ಹಾಜರಿದ್ದೂ ಕೂಡ ಆದೇಶದ ಬಗ್ಗೆ ಗೊತ್ತಿಲ್ಲ ಎಂದರೆ ಸಚಿವರ ಕುಮ್ಮಕ್ಕು ಕಾರಣವಲ್ಲವೇ? ಆದೇಶ ಉಲ್ಲಂಘನೆಗೆ ಮಾಡಲು ಹೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ?

– ಕೇಂದ್ರ ಸರಕಾರ ನರ್ಮ್ ಬಸ್‌ಗಳಿಗೆ ಹಾಕಿರುವ ನಿಬಂಧನೆಗಳನ್ನು ಉಲ್ಲಂ ಸಿ ಜಿಲ್ಲಾಧಿಕಾರಿಗಳಿಗೆ ಒತ್ತಡದ ಪರವಾನಿಗೆ ಪಡೆದು ಖಾಸಗಿ ಬಸ್‌ಗಳನ್ನು ಮುಗಿಸುವ ಹುನ್ನಾರ ಯಾಕೆ? ನಗರ ಪರಿಮಿತಿ ಬಿಟ್ಟು ಉಡುಪಿಯಿಂದ ಶಿವಮೊಗ್ಗ, ಕಾರ್ಕಳ, ಭಟ್ಕಳ, ಕುಂದಾಪುರ, ಕೆಳಸುಂಕ, ಕೊಳಲಗಿರಿ ಪೆರ್ಡೂರು, ಹೆಬ್ರಿಗೆ ಬಸ್‌ ಹಾಕುವುದು ನಿಬಂಧನೆ ಉಲ್ಲಂಘನೆಯಲ್ಲವೆ?

– ಒಂದೇ ಸಮಯದಲ್ಲಿ ಬಸ್‌ ಓಡಿಸಿ ಅಪಘಾತ ಸಂಭವಿಸಿದರೆ ಯಾರು ಜವಾಬ್ದಾರಿ?

– ಪರವಾನಿಗೆ ಪಡೆದ ಬಸ್‌ಗಳು ಕೂಡ ಸಮಯಕ್ಕೆ ಸರಿಯಾಗಿ ಓಡುತ್ತಿಲ್ಲ. ಪರವಾನಿಗೆ ಮಾರ್ಗದಂತೆ ಓಡುತ್ತಿಲ್ಲ. ಇದರ ಬಗ್ಗೆ ಆರ್‌ಟಿಒ ಅಧಿಕಾರಿಗಳಿಗೆ ದೂರು ನೀಡಿದರೆ ಯಾವುದೇ ಕಾನೂನು ಕ್ರಮ ಇಲ್ಲ. ಕೂಡಲೇ ಉಸ್ತುವಾರಿ ಸಚಿವರ ಫೋನ್‌ ಬಂದು ವಿಷಯ ಅಲ್ಲೇಧೂಳು ತಿನ್ನುತ್ತದೆ. 

– ಸಚಿವರ ಧೋರಣೆಯಿಂದ ಖಾಸಗಿ ಸಾರಿಗೆ ವಲಯ ಎಷ್ಟು ದಿನ ನಡೆಯಬಹುದು?

ಟಾಪ್ ನ್ಯೂಸ್

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

1-wewqe

Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belapu

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

Have you updated your Aadhar Card?: Then you must read this news!

Aadhar Card: ಆಧಾರ್‌ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shiroor: ಡಿವೈಡರ್‌ಗೆ ಕಾರು ಢಿಕ್ಕಿ

Shiroor: ಡಿವೈಡರ್‌ಗೆ ಕಾರು ಢಿಕ್ಕಿ

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ

rape

Ashram;89 ವರ್ಷದ ಆಶ್ರಮ ಗುರುವಿನ ಮೇಲೆ ಆತ್ಯಾಚಾ*ರ ಪ್ರಕರಣ ದಾಖಲು

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

Wadi-Pro

Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್‌ ಪ್ರತಿಭಟನೆ, ವಾಡಿ ಬಂದ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.