ಕುಸಿಯುವ ಭೀತಿಯಲ್ಲಿ ಜಿಲ್ಲಾ ಮುಖ್ಯ ರಸ್ತೆ, ಕಿರುಸೇತುವೆಗಳು


Team Udayavani, May 25, 2018, 6:00 AM IST

2305kota6e.jpg

ಕೋಟ:  ಬ್ರಹ್ಮಾವರ-ಜನ್ನಾಡಿ ಹಾಗೂ ಕೋಟ-ಗೋಳಿಯಂಗಡಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸಮುದ್ರದ ತಡೆಗೋಡೆಗೆ ಬಂಡೆಗಳನ್ನು ಸಾಗಿಸುವ ಲಾರಿಗಳು ನಿಗದಿತ ಪ್ರಮಾಣಕ್ಕಿಂತ ನಾಲ್ಕೈದು ಪಟ್ಟು ಅಧಿಕ ಭಾರವನ್ನು ಹೊತ್ತು ವರ್ಷವಿಡೀ ಸಂಚಾರಿಸುತ್ತಿದೆ. ಇದರ ಪರಿಣಾಮ ಇಲ್ಲಿನ ರಸ್ತೆ, ಕಿರು ಸೇತುವೆಗಳು ಅಪಾಯದಲ್ಲಿದೆ.
 
ಪ್ರತಿ ವರ್ಷ ಮಳೆಗಾಲದಲ್ಲಿ ಇವು ಗಳಿಂದಾಗಿ ಹಾನಿ ಪ್ರಮಾಣ ಹೆಚ್ಚುತ್ತಿದ್ದು ಕಳೆದ ವರ್ಷ ಎರಡು ಕಿರು ಸೇತುವೆ, ರಸ್ತೆ ಕುಸಿತಗೊಂಡಿದೆ. ಈ ಬಾರಿ ಕೂಡ ಸಮಸ್ಯೆ ಮುಂದುವರಿಯುವ ಲಕ್ಷಣವಿದೆ.

ನಿಗದಿತ ಪ್ರಮಾಣಕ್ಕಿಂತ 
ನಾಲ್ಕೈದು ಪಟ್ಟು ಅಧಿಕ  

ಈ ರಸ್ತೆಯಲ್ಲಿ  ಸರಕು ಸಹಿತ 20 ಮೆಟ್ರಿಕ್‌  ಟನ್‌ಗಿಂತ ಅಧಿಕ ಭಾರದ  ವಾಹನಗಳ  ಓಡಾಟಕ್ಕೆ  ಅವಕಾಶವಿಲ್ಲ ವೆಂದು ಲೋಕೋಪಯೋಗಿ  ಇಲಾಖೆ ನಿರ್ಬಂಧಿಸಿದೆ. ಜತೆಗೆ ಬ್ರಹ್ಮಾವರ, ಶಿರಿಯಾರ ಮುಂತಾದ ಕಡೆಗಳಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ. ಆದರೆ ಇಲಾಖೆಯ ಆದೇಶವನ್ನು  ಧಿಕ್ಕರಿಸಿ  40ರಿಂದ 80 ಟನ್‌ ಭಾರದ ಲಾರಿಗಳು ಇಲ್ಲಿ ಓಡಾಟ ನಡೆಸುತ್ತವೆ. 
 
ರಸ್ತೆ, ಕಿರುಸೇತುವೆ ಕುಸಿತ 

ಅಧಿಕ ಭಾರದ ವಾಹನ ಓಡಾಟದಿಂದ ಕಳೆದ ವರ್ಷ ಜೂ.8ರಂದು ಕೋಟ ಮೂರುಕೈ ಸಮೀಪ  ಬೆಟ್ಲಕ್ಕಿ ಹಡೋಲಿನಲ್ಲಿ  ಕಿರು  ಸೇತುವೆಯೊಂದು ಕುಸಿದು  ಎರಡು ದಿನ ಸಂಪರ್ಕ ವ್ಯತ್ಯಯವಾಗಿತ್ತು ಹಾಗೂ ಜು.21ರಂದು ಉಪ್ಲಾಡಿಯಲ್ಲಿ ರಸ್ತೆ ಕುಸಿದು ಕಂದಕ  ಸೃಷ್ಟಿಯಾಗಿ ಸಂಚಾರ ಸ್ಥಗಿತಗೊಂಡಿತ್ತು.  ಪುನಃ ಅ.7ರಂದು ಬೆಟ್ಲಕ್ಕಿಯಲ್ಲಿ ಮತ್ತೂಂದು ಕಿರು ಸೇತುವೆ ಕುಸಿದು ಸಮಸ್ಯೆಯಾಗಿತ್ತು.

ಈ ಬಾರಿ ಮಳೆಗಾಲದಲ್ಲಿ  ಹಲವು ಕಿರು ಸೇತುವೆ ಕುಸಿಯುವ ಮುನ್ಸೂಚನೆ ಕಂಡುಬಂದಿದೆ ಹಾಗೂ ಬನ್ನಾಡಿ, ಉಪ್ಲಾಡಿ, ಹಡೋಲು ಮುಂತಾದ ಕಡೆ ರಸ್ತೆ ಕುಸಿಯುತ್ತಿರುವುದು ಕಂಡು ಬಂದಿದೆ. ಇಲ್ಲಿ ನೂರಾರು ಪ್ರಯಾಣಿಕರು, ವಿದ್ಯಾರ್ಥಿಗಳು ಬಸ್ಸಿನಲ್ಲಿ  ಪ್ರತಿ ನಿತ್ಯ ಸಂಚಾರಿಸುತ್ತಾರೆ. ಹೀಗಾಗಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅಪಾಯ ಖಂಡಿತ. 
 
ಗ್ರಾಮಸಭೆಯ ನಿರ್ಣಯಕ್ಕೂ ಬೆಲೆಯಿಲ್ಲ
ಈ ಕುರಿತು ಕ್ರಮಕೈಗೊಳ್ಳುವಂತೆ  ವಡ್ಡರ್ಸೆ ಗ್ರಾಮಸಭೆಯಲ್ಲಿ ನಿರ್ಣಯವೊಂದನ್ನುಕೈಗೊಂಡು ಜಿಲ್ಲಾಡಳಿತಕ್ಕೆ ಕಳುಹಿಸಿಸಲಾಗಿತ್ತು ಹಾಗೂ ಸಾರ್ವಜನಿಕರು ಕೂಡ ಆರ್‌.ಟಿ.ಒ, ಜಿಲ್ಲಾಡಳಿತಕ್ಕೆ  ಮನವಿ ಸಲ್ಲಿಸಿದ್ದರು. ಆದರೆ ಪರಿಹಾರ ಶೂನ್ಯವಾಗಿದೆ.

ಮನವಿ ಪುರಸ್ಕರಿಸಿಲ್ಲ
ಕ್ರಮಕೈಗೊಳ್ಳುವಂತೆ ಡಿಸಿಗೆ ಹಾಗೂ ಪೋನ್‌-ಇನ್‌ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗಳಿಗೆ ಮನವಿ ಮಾಡಿದ್ದೆ. ಪಿಡಬ್ಲೂಡಿ.ಇಲಾಖೆಗೂ ತಿಳಿಸಿದ್ದೆ. ಆದರೆ ಸಾರ್ವಜನಿಕರನ್ನು ಅಣಕಿಸುವ ರೀತಿಯಲ್ಲಿ ಅಕ್ರಮ ಮುಂದುವರಿದಿರುವುದು ತುಂಬಾ ಬೇಸರ ತಂದಿದೆ. 
– ಸತೀಶ್‌ ಶೆಟ್ಟಿ ಯಡ್ತಾಡಿ, ಸ್ಥಳೀಯರು

ತಪಾಸಣೆ ಸಾಧ್ಯವಾಗುತ್ತಿಲ್ಲ
ಈ ಕುರಿತು ದೂರುಗಳು ಬಂದಿದೆ. ಆದರೆ ಇಲಾಖೆಯಲ್ಲಿನ ಸಿಬಂದಿಗಳ ಕೊರತೆಯಿಂದ ಪ್ರತಿ ನಿತ್ಯ ತಪಾಸಣೆ ನಡೆಸಲು ಸಾಧ್ಯವಾಗುತ್ತಿಲ್ಲ ಹಾಗೂ ತಪಾಸಣೆ ನಡೆಸಿದರೆ ವಾಹನಗಳ ಓಡಾಟ ಸ್ಥಗಿತಗೊಳ್ಳುತ್ತದೆ. ಈ ಕುರಿತು ಸಮರ್ಪಕವಾಗಿ ಕ್ರಮಕೈಗೊಳ್ಳಲು ಪ್ರಯತ್ನಿಸಲಾಗುವುದು.
– ವರ್ಣೇಕರ್‌, 
ಉಪ ಸಾರಿಗೆ ಆಯುಕ್ತರು, ಆರ್‌.ಟಿ.ಒ. ಉಡುಪಿ

– ರಾಜೇಶ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.