Zilla Panchayath 14, ತಾ.ಪಂ. 49 ಸ್ಥಾನ ಮಹಿಳೆಯರಿಗೆ ಮೀಸಲು

ಜಿ.ಪಂ., ತಾ. ಪಂ. ಶೀಘ್ರ ಚುನಾವಣೆ ಅನುಮಾನ; ತಲೆಕೆಳಗಾದ ರಾಜಕೀಯ ಪಕ್ಷಗಳ ಲೆಕ್ಕಾಚಾರ

Team Udayavani, Feb 7, 2024, 7:15 AM IST

Zilla Panchayath 14, ತಾ.ಪಂ. 49 ಸ್ಥಾನ ಮಹಿಳೆಯರಿಗೆ ಮೀಸಲು

ಉಡುಪಿ: ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಚುನಾಯಿತ ಸದಸ್ಯ ಸ್ಥಾನಗಳಿಗೆ ರಾಜ್ಯ ಸರಕಾರ ಮೀಸಲು ನಿಗದಿಪಡಿಸಿ ಆದೇಶ ಹೊರಡಿಸಿದ್ದರೂ ಲೋಕಸಭೆ ಚುನಾವಣೆ ಬಳಿಕ ಈ ಸ್ಥಾನಗಳಿಗೆ ಚುನಾವಣೆ ನಡೆಯುವ ಸಾಧ್ಯತೆಗಳು ಹೆಚ್ಚಿವೆ.

ಸದ್ಯ ಲಭ್ಯ ಮಾಹಿತಿ ಪ್ರಕಾರ ಎಲ್ಲ ಪಕ್ಷಗಳೂ ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿವೆ. ಇದರ ಮಧ್ಯದಲ್ಲಿ ಜಿ.ಪಂ.,ತಾ.ಪಂ. ಗಳ ಸ್ಥಾನಕ್ಕೆ ಚುನಾವಣೆ ನಡೆದರೆ ನಿರ್ವಹಣೆ ಕಷ್ಟ. ಹಾಗಾಗಿ ಸದ್ಯಕ್ಕೆ ಈ ಚುನಾವಣೆ ಕನಿಷ್ಠ ಐದಾರು ತಿಂಗಳು ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

ಮುಂದಿನ ಹಂತದಲ್ಲಿ ಜಿ. ಪಂ. ತಾ. ಪಂ. ಚುನಾವಣೆಗೆ ಸಂಬಂಧಿಸಿ ಕ್ಷೇತ್ರವಾರು ಮೀಸಲು ನಿಗದಿ ಆಗಬೇಕಿದ್ದು, ಬಳಿಕ ಆಕ್ಷೇಪಣೆ ಆಹ್ವಾನಿಸಿ ಅಂತಿಮಗೊಳಿಸುವುದು ಬಾಕಿ ಇದೆ. ಈ ಪ್ರಕ್ರಿಯೆ ಯಾವಾಗ ಪೂರ್ಣಗೊಳ್ಳಲಿದೆ ಮತ್ತು ಚುನಾವಣೆ ಯಾವಾಗ ನಡೆಯಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಫೆಬ್ರವರಿ ಮೊದಲ, ಎರಡನೇ ವಾರದಲ್ಲಿ ಮಿಸಲು ನಿಗದಿ ಬಿಡುಗಡೆಯಾದರೆ 15 ಅಥವಾ 7 ದಿನ ಅಕ್ಷೇಪಣೆಗೆ ಕಾಲಾವಕಾಶ ಇರಬಹುದು.

ಯಾರೂ ಆಕ್ಷೇಪ ಸಲ್ಲಿಸದಿದ್ದರೆ ತತ್‌ಕ್ಷಣ ಚುನಾವಣೆ ಪ್ರಕ್ರಿಯೆ ನಡೆಸಲು ಅಡ್ಡಿಯಿಲ್ಲ. ಇಲ್ಲದಿದ್ದರೆ ಮಾರ್ಚ್‌ ತಿಂಗಳಲ್ಲಿ ಪರೀಕ್ಷೆ ಸಮಯವಾದ್ದರಿಂದ ಚುನಾವಣೆ ಪ್ರಕ್ರಿಯೆ ಸಾಮಾನ್ಯವಾಗಿ ನಡೆಯದು. ಮಾರ್ಚ್‌ ತಿಂಗಳ ವೇಳೆಗೆ ಲೋಕಸಭೆ ಚುನಾವಣೆಗೆ ಕಾವು ಏರಿರುವ ಸಂಭವವಿದೆ. ಹಾಗಾಗಿ ಜಿ. ಪಂ. , ತಾ. ಪಂ. ಚುನಾವಣೆ ಆಗಸ್ಟ್‌, ಸೆಪ್ಟಂಬರ್‌ನಲ್ಲಿ ನಡೆಯಬಹುದು ಎಂಬ ಲೆಕ್ಕಾಚಾರ ರಾಜಕೀಯ ಪಡಸಾಲೆಯ ವಲಯದಲ್ಲಿ ಇದೆ.
ಈಗಾಗಲೇ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌, ಮತದಾರರ ಪಟ್ಟಿ ಅಂತಿಮವಾದ ಹಿನ್ನೆಲೆಯಲ್ಲಿ ಆಕಾಂಕ್ಷಿಗಳಲ್ಲಿ ಜಾತಿವಾರು ಹಾಗೂ ಕ್ಷೇತ್ರ ವಾರು ಸ್ಥಿತಿಗತಿಗಳ ಲೆಕ್ಕಾಚಾರ ಆರಂಭವಾಗಿದ್ದವು. ಯಾವ ಕ್ಷೇತ್ರದಲ್ಲಿ ಹೇಗಿದೆ ಎಂಬುದರ ಲೆಕ್ಕಾಚಾರವನ್ನೂ ಮುಖಂಡರು ಹಾಕಿದ್ದರು. ಲೋಕಸಭೆ ಚುನಾವಣೆಗೂ ಮುನ್ನ ಸ್ಥಳೀಯ ಅಧಿಕಾರವನ್ನು ಭದ್ರಪಡಿಸಲು ರಣತಂತ್ರ ರೂಪಿಸಲಾಗಿತ್ತು. ಆದರೀಗ ಎಲ್ಲ ರಾಜಕೀಯ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಉಡುಪಿ ಜಿಲ್ಲಾ ಪಂಚಾಯತ್‌ನ 28 ಕ್ಷೇತ್ರಗಳ ಪೈಕಿ 14 ಹಾಗೂ ತಾಲೂಕು ಪಂಚಾಯ ತ್‌ನ 95 ಕ್ಷೇತ್ರಗಳ ಪೈಕಿ 49 ಸ್ಥಾನಗಳು ಮಹಿಳೆಯರಿಗೆ ಮೀಸಲಿ ರಿಸಿ ಆದೇಶ ಹೊರಡಿಸಿದೆ.

ಜಿ.ಪಂ. -ತಾ.ಪಂ. ಚುನಾಯಿತ ಸದಸ್ಯರ ಕ್ಷೇತ್ರಗಳ ಸೀಮಾ ಗಡಿ ಹಾಗೂ ಚುನಾಯಿ ತರಾಗಬೇಕಾದ ಸದಸ್ಯರ ಸಂಖ್ಯೆಯನ್ನು ನಿರ್ಧರಿಸಿ ಆಯೋಗ ಶಿಫಾರಸು ಮಾಡಿರುವ ವರದಿ ಯನ್ನು ಅಂಗೀಕರಿಸಿರುವ ರಾಜ್ಯ ಸರಕಾರ ಮೀಸಲು ನಿಗದಿಪಡಿಸಿ ಈ ಅಧಿಸೂಚನೆ ಹೊರಡಿಸಿದೆ.

ಜಿ.ಪಂ. ಮೀಸಲಾತಿ ವಿವರ
ಜಿ.ಪಂ.ನ 26 ಕ್ಷೇತ್ರಗಳಲ್ಲಿ ಮಹಿಳೆಯರಿಗೆ 14 ಸ್ಥಾನಗಳು ಸಿಕ್ಕಿವೆ. ಅನುಸೂಚಿತ ಜಾತಿಗೆ ಎರಡು ಸ್ಥಾನಗಳನ್ನು ನೀಡಿದ್ದು. ಅದರಲ್ಲಿ ಒಂದು ಮಹಿಳೆಗೆ ಮೀಸಲಿಟ್ಟಿದೆ. ಅನುಸೂಚಿತ ಪಂಗಡ ಒಂದು ಸ್ಥಾನದಲ್ಲಿ ಒಂದು ಮಹಿಳೆಗೆ, ಹಿಂದುಳಿದ ವರ್ಗ (ಅ)ದಲ್ಲಿರುವ ಒಟ್ಟು 7 ಸ್ಥಾನಗಳಲ್ಲಿ 4 ಮಹಿಳೆಯರಿಗೆ ಹಾಗೂ ಹಿಂದುಳಿದ ವರ್ಗ (ಬಿ) 2 ಸ್ಥಾನದಲ್ಲಿ ಒಬ್ಬ ಪುರುಷ, ಒಬ್ಬ ಮಹಿಳೆಗೆ ಮೀಸಲಿಡಲಾಗಿದೆ. ಸಾಮಾನ್ಯ ಸ್ಥಾನಗಳನ್ನು ಒಟ್ಟು 15ರಲ್ಲಿ 7 ಸ್ಥಾನಗಳು ಮಹಿಳೆಯರಿಗೆ ಮೀಸಲಿಟ್ಟಿದೆ.

ತಾ.ಪಂ. ವಿವರ
7 ತಾಲೂಕು ಪಂಚಾಯತ್‌ಗಳಲ್ಲಿ ಒಟ್ಟು ಇರುವ 95 ಸ್ಥಾನಗಳ ಪೈಕಿ ಮಹಿಳೆಯರಿಗೆ 49 ಸ್ಥಾನಗಳು ನಿಗದಿಯಾಗಿವೆ. ಹೆಬ್ರಿ 7 ಸ್ಥಾನದಲ್ಲಿ 4 ಮಹಿಳೆಯರಿಗೆ, ಬೈಂದೂರು 11 ಸ್ಥಾನದಲ್ಲಿ 6 ಮಹಿಳೆಯರಿಗೆ, ಕಾಪು 12 ಸ್ಥಾನದಲ್ಲಿ 6 ಮಹಿಳೆಯರಿಗೆ, ಉಡುಪಿ 13 ಸ್ಥಾನದಲ್ಲಿ 7 ಮಹಿಳೆ ಯರಿಗೆ, ಬ್ರಹ್ಮಾವರ, ಕಾರ್ಕಳ ತಲಾ 16 ಸ್ಥಾನದಲ್ಲಿ 8 ಮಹಿಳೆಯರಿಗೆ, ಕುಂದಾಪುರ 20 ಸ್ಥಾನದಲ್ಲಿ 10 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.

-ಅವಿನ್‌ ಶೆಟ್ಟಿ

ಟಾಪ್ ನ್ಯೂಸ್

PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್‌ ಸ್ಟೋರಿ

Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್‌ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ

Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್‌ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ

5-kundapura

Kundapura: ಅನೂಪ್ ಪೂಜಾರಿ ಪಾರ್ಥೀವ ಶರೀರ ಹುಟ್ಟೂರಿಗೆ; ತಾಯಿ, ಪತ್ನಿಯಿಂದ ಅಂತಿಮ ದರ್ಶನ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

IRCTC: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

2-shirva

Shirva ಹ‌ಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್‌ ಸ್ಟೋರಿ

Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್‌ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ

Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್‌ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ

5-kundapura

Kundapura: ಅನೂಪ್ ಪೂಜಾರಿ ಪಾರ್ಥೀವ ಶರೀರ ಹುಟ್ಟೂರಿಗೆ; ತಾಯಿ, ಪತ್ನಿಯಿಂದ ಅಂತಿಮ ದರ್ಶನ

5

Mangaluru: ಪದವು ಜಂಕ್ಷನ್‌- ಶರ್ಬತ್‌ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್‌

4

Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.