ಸೀತಾನದಿ ಹರಿದರೂ ಹೆಬ್ರಿಯಲ್ಲಿ ನೀರಿಗೆ ಬರ
Team Udayavani, Apr 11, 2018, 6:00 AM IST
ಹೆಬ್ರಿ: ಏರುತ್ತಿರುವ ಬಿಸಿಲಿನ ಬೇಗೆ ಹೆಬ್ರಿಗೆ ತೀವ್ರ ನೀರಿನ ಅಭಾವ ಸೃಷ್ಟಿಸಿದೆ. ಹೆಬ್ರಿ ಗ್ರಾ.ಪಂ. ವ್ಯಾಪ್ತಿಯ ಬಚ್ಚಪ್ಪು ಹಾಗೂ ಬಂಗಾರುಗುಡ್ಡೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದ್ದು, ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ.
ಸೀತಾನದಿಗೆ ಪಂಪ್!
ಹೆಬ್ರಿಯ ನೀರಿನ ಮೂಲ ಸೀತಾನದಿ. ಗ್ರಾಮದ ಕೆಲವು ಭಾಗಗಳಲ್ಲಿ ನೀರಿನ ಮೂಲ ಕಡಿಮೆಯಾಗುತ್ತಿದ್ದರೂ, ಇಲ್ಲಿನ ಜನ ಸೀತಾನದಿಗೆ ಪಂಪ್ ಅಳವಡಿಸಿ ಅವ್ಯಾಹತವಾಗಿ ನೀರು ತೆಗೆಯುತ್ತಿದ್ದಾರೆ. ಕೂಡ್ಲುವಿನಿಂದ ಕುಚ್ಚಾರು ತನಕ ಸುಮಾರು 110 ಪಂಪ್ ಸೆಟ್ ಅಳವಡಿಸಲಾಗಿದ್ದು, ದಿನವೀಡೀ ನೀರನ್ನು ತಮ್ಮ ಕೃಷಿ ಕಾರ್ಯಕ್ಕೆ, ಇತರ ಕೆಲಸಕ್ಕೆ ಉಪಯೋಗಿಸುತ್ತಿದ್ದಾರೆ. ಇದರಿಂದ ನೀರಿನ ಸೆಲೆ ಬತ್ತಿ ಹೋಗುತ್ತಿದ್ದು, ನೀರು ಇಲ್ಲದ ಕಡೆಗಳಲ್ಲಿ ಮತ್ತಷ್ಟು ಆತಂಕ ತಂದಿದೆ.
ಬಹುಗ್ರಾಮ ಯೋಜನೆ ವಿಳಂಬ
ಹೆಬ್ರಿಯ ಸುಮಾರು 345 ಮನೆಗಳಿಗೆ ನಲ್ಲಿಗಳ ಮೂಲಕ ನೀರು ಪೂರೈಕೆಯಾಗುತ್ತಿವೆ. ನೀರಿನ ಅಭಾವ ಇದ್ದ ಗ್ರಾಮದ ಕೆಲ ಭಾಗಗಳು ಮತ್ತು ಸುತ್ತಲಿನ ಇತರ 5 ಗ್ರಾಮ ಪಂಚಾಯತ್ ವ್ಯಾಪ್ತಿಯ 1400 ಮನೆಗಳಿಗೆ ನೀರು ಪೂರೈಸಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಮ್ಮಿಕೊಳ್ಳಲಾಗಿದೆ. ಆದರೆ 2006ರಲ್ಲಿ ಆರಂಭಗೊಂಡ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. 5 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ಅಣೆಕಟ್ಟು ಕಾಮಗಾರಿ ಮುಕ್ತಾಯವಾಗಿದೆ. 2ನೇ ಹಂತದ ಕಾಮಗಾರಿಗೆ ಈಗಷ್ಟೇ ಚಾಲನೆ ಸಿಕ್ಕಿದೆ. ಬೇಸಗೆಯ ನೀರಿನ ಅಲಭ್ಯತೆ ಬಗೆಹರಿಸಲೆಂದೇ ಈ ಯೋಜನೆ ಮಂಜೂರಾಗಿದ್ದರೂ, ಯೋಜನೆ ಕುಂಟುತ್ತಾ ಸಾಗಿದೆ. ಈ ಯೋಜನೆ ಆದಷ್ಟು ಬೇಗ ಪೂರ್ಣಗೊಂಡಲ್ಲಿ ಹೆಬ್ರಿ ಪಂಚಾಯತ್‌ನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ.
ಶುದ್ಧ ಕುಡಿಯುವ ನೀರು ನಮ್ಮ ಹಕ್ಕು
ಶುದ್ಧ ಕುಡಿಯುವ ನೀರಿನ ಅಲಭ್ಯತೆ ಇರುವುದರಿಂದ ಪ್ರತಿ ಗ್ರಾಮ ಮಟ್ಟದಲ್ಲಿ ನೀರು ನೈರ್ಮಲ್ಯ ಸಮಿತಿಗಳು ರಚನೆಯಾಗಬೇಕಿದೆ. ಇದರ ಹಿನ್ನೆಲೆಯಲ್ಲಿ ಪ್ರತಿ 15 ದಿನಕ್ಕೊಮ್ಮೆ ಸಭೆ ಸೇರಿ ಶುದ್ಧ ನೀರು, ನೈರ್ಮಲ್ಯದ ಬಗ್ಗ ಚರ್ಚಿಸುವ ಅಗತ್ಯವಿದೆ.
ರೈತರಿಗೆ ಸೂಚನೆ
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಸುಮಾರು 5.5ಕೋಟಿ ವೆಚ್ಚದ 2ನೇ ಹಂತದ ಕಾಮಗಾರಿಗೆ ಚಾಲನೆ ದೊರೆತಿದೆ. ಆದರೆ ಡ್ಯಾಮ್‌ನಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು ನದಿಗೆ ಅಳವಡಿಸಿದ ಪಂಪ್‌ಗ್ಳನ್ನು ಬೆಳಗ್ಗೆ 6ರಿಂದ 2ಗಂಟೆಯ ತನಕ ಮಾತ್ರ ಬಳಸುವಂತೆ ಮೆಸ್ಕಾಂ ಮೂಲಕ ರೈತರಿಗೆ ಸೂಚನೆ ನೀಡಲಾಗಿದೆ.
ವಿಜಯಾ, ಪಿ.ಡಿ.ಒ., ಗ್ರಾ.ಪಂ. ಹೆಬ್ರಿ
ಉದಯಕುಮಾರ್ ಶೆಟ್ಟಿ ಹೆಬ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.