ಗ್ರಾಮೀಣ ಭಾಗಗಳಲ್ಲಿ ದೀಪಾವಳಿ, ಗೋ ಪೂಜೆ
Team Udayavani, Nov 6, 2018, 10:13 AM IST
ಸಿದ್ದಾಪುರ: ದೀಪಾವಳಿ ಎಂದರೆ ಕತ್ತಲನ್ನು ಓಡಿಸಿ ಬೆಳಕಿನಡೆಗೆ ಕೊಂಡೊಯ್ಯುವ ಹಬ್ಬವಾದರೇ ರೈತರಿಗೆ ಹೊಸ ಫಸಲನ್ನು ಮನೆಗೆ ತಂದು ಸಂಭ್ರಮಿಸಿ ಖುಷಿ ಪಡುವ ಹಬ್ಬ. ಹೊಸ ಫಸಲು ಅಭಿವೃದ್ಧಿಯ ಸಂಕೇತ. ದೀಪಾವಳಿ ರೈತರಿಗೆ ವರುಷದ ಪ್ರಥಮ ಹಬ್ಬವಾಗಿದೆ. ಗದ್ದೆಯಲ್ಲಿ ಭತ್ತದ ತೆನೆ ತುಂಬಿ ಕೊಯ್ಲಿಗೆ ಸಿದ್ಧವಾಗಿರುವ ತೆನೆ ಕೊಯ್ದು ಮನೆಯ ಅಂಗಳದಲ್ಲಿ ಭತ್ತದ ತಿರಿಯನ್ನು ಕಟ್ಟಿ, ತಿರಿಗೆ ಹಾಗೂ ಭತ್ತದ ಗದ್ಧೆಗೆ ಪೂಜೆ ಮಾಡಿ ಬಲೀಂದ್ರನನ್ನು ಕರೆಯುವ ಮೂಲಕ ದೀಪಾಳಿಯನ್ನು ಆಚರಿಸುತ್ತಾರೆ.
ಹಬ್ಬದ ಸಡಗರ
ಇಂದಿನ ಆಧುನಿಕ ಯುಗದ ಭರಾಟೆಯಲ್ಲಿ ದೀಪಾವಳಿ ಹಿಂದಿನ ಸಂಭ್ರಮ ಕಳೆದುಕೊಂಡಿರುವುದೇನೋ ನಿಜ. ಆದರೂ ಕೃಷಿ ಕುಟುಂಬ ಸಾಂಪ್ರದಾಯವೆಂಬಂತೆ ಬಲೀಂದ್ರ ಪೂಜೆ, ಧನಲಕ್ಷ್ಮಿ ಪೂಜೆ, ಗೋ ಪೂಜೆ ಇಂದಿಗೂ ಆಚರಿಸಿಕೊಂಡು ಬರುತ್ತಿದ್ದಾರೆ. ಮನೆ ಮನೆಗಳಲ್ಲಿ ದೀಪಾಲಂಕಾರ, ಸಿಹಿತಿಂಡಿ ತಯಾರಿ, ವಿಶೇಷ ಪೂಜೆ, ಹೊಸ ಬಟ್ಟೆ ಧರಿಸಿ ಸಂಭ್ರಮಿಸುವುದು ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಆಚರಿಸಿಕೊಂಡು ಬಂದಿರುವ ಪದ್ಧತಿ ರೂಡಿಯಲ್ಲಿದೆ. ದೂರ ದೂರದ ಪ್ರದೇಶಗಳಲ್ಲಿ ಹಂಚಿ ಹೋಗಿರುವ ಕೃಷಿ ಕುಟುಂಬ ಸದಸ್ಯರು ದೀಪಾವಳಿಯಂದು ಊರಿಗೆ ಬಂದು ಹಬ್ಬ ಆಚರಿಸಿ, ಸಂಭ್ರಮಿಸುತ್ತಾರೆ.
ಬಲೀಂದ್ರ ಪೂಜೆ
ಮೂಲ ಸಂಸ್ಕೃತಿಯಿಂದ ಆಚರಣೆ ಮಾಡಿಕೊಂಡು ಬಂದಿರುವ ಕೃಷಿಕರು ರಾತ್ರಿ ಸಮಯದಲ್ಲಿ ಭತ್ತದ ಗದ್ದೆಯಲ್ಲಿ ನಾರು ಕೋಲಿಗೆ ಬಟ್ಟೆ ಸುತ್ತಿ ನೆಣೆಕೋಲು ಮಾಡಿಕೊಂಡು ದೀಪ ಹಚ್ಚುತ್ತಾರೆ. ಜತೆಯಲ್ಲಿ ವಿವಿಧ ಜಾತಿಯ ಹೂ ಹಾಗೂ (ಹೊಸ ಚಿಗುರು) ಎಳೆಯ ಎಲೆಗಳನ್ನು ಸಂಗ್ರಹಿಸಿ ಅದನ್ನು ಕೊಚ್ಚಿ, ಪೂಜೆಗೆ ಸಿದ್ಧಪಡಿಸಿಕೊಳ್ಳುತ್ತಾರೆ. ಪ್ರತಿ ನೆಣೆಕೋಲು ಮುಂದೆ ಬಾಳೆ ಎಲೆ ಇಟ್ಟು, ತಾವು ತಯಾರಿಸಿದ ವಿವಿಧ ಬಗ್ಗೆಗಳ ತಿಂಡಿ(ಹಿಟ್ಟು) ಬಡಿಸಿ ಸಂಗ್ರಹಿಸಿದ ಹೂ ಹಾಗೂ ಎಲೆಗಳನ್ನು ಹಾಕಿ ಬಲೀಂದ್ರ ದೇವರನ್ನು ಹೊಗಳಿ ಕರೆಯುತ್ತಾರೆ. ಪೂಜೆಗಾಗಿ ತೆಂಗಿನ ಮರದ ಗರಿಗಳಿಂದ ಸೂಡಿ ಮಾಡಿಕೊಂಡು (ದಾರಿ ದೀಪಕ್ಕಾಗಿ), ಆ ಬೆಂಕಿಯಿಂದ ಪ್ರತಿ ನೆಣೆ ಕೋಲಿಗೆ ದೀಪ ಹಚ್ಚುತ್ತಾರೆ. ಹೊಸ ಬೆಳೆಯಲ್ಲಿ ತಯಾರಿಸಿದ ವಿವಿಧ ಖಾದ್ಯದ ಹಿಟ್ಟನ್ನು ಗದ್ದೆಗೆ ಬಡಿಸಿ ಗ್ರಾಮ್ಯ ಭಾಷೆಯಲ್ಲಿ ಹೊಗಳಿಕೆಯಿಂದ ಬಲೀಂದ್ರ ದೇವರನ್ನು ಸ್ಮರಿಸಿ ಪ್ರಾರ್ಥಿಸುವ ದೀಪಾವಳಿ ಆಚರಣೆಯ ಅನಾದಿಕಾಲದಿಂದಲೂ ರೂಢಿಯಲ್ಲಿದೆ. ಇದು ರೈತಾಪಿ ವರ್ಗಗಳ ಬಲೀಂದ್ರ ಪೂಜೆಯೊಂದಿಗೆ ದೀಪಾವಳಿ ಹಬ್ಬದ ಸಂಭ್ರಮ.
ತೈಲಾಂಭ್ಯಜನದೊಂದಿಗೆ ತಮ್ಮ ತನು ಮನಗಳು ಶುದ್ಧವಾಗಿ ರೈತರು ತಾವು ಬೆಳೆದ ಭತ್ತದ ರಾಶಿಗೆ ಹೂವನ್ನು ಹಾಕಿ ಪೂಜಿಸುವ ಮೂಲಕ ಕಾಯಕವೇ ಕೈಲಾಸವೆಂದು ಕೊಂಡು ದುಡಿಯುವ ರೈತ, ಹೊಲದಲ್ಲಿ ಬೆಳೆ ತುಂಬಲಿ ಎಂದು ಬಲೀಂದ್ರ ದೇವರ ಹೊಗಳಿಕೆಯಲ್ಲಿ ಪ್ರಾರ್ಥಿಸುತ್ತಾರೆ.
ಗೋ ಪೂಜೆ
ಸಮಾಜವನ್ನು ಬಲಿಷ್ಠಗೊಳಿಸುವ ಸಾವಯವ ಗೊಬ್ಬರಗಳನ್ನು ಕೃಷಿಗಾಗಿ ನೀಡುವ ಗೋ ಮಾತೆಯನ್ನು ಕೃಷಿಕರು ದೀಪಾಳಿಯ ಮರುದಿನ ಗೋ ಪೂಜೆ ಮಾಡುತ್ತಾರೆ. ದೀಪಾವಳಿ ಸಂಭ್ರಮಕ್ಕೆ ತಯಾರಿಸಿದ ತಿಂಡಿ ತಿನಿಸುಗಳನ್ನು ತಾವು ಸೇವಿಸುವ ಮುನ್ನ ಪ್ರಥಮವಾಗಿ ಗೋವಿಗೆ ತಿನ್ನಿಸುವ ಮೂಲಕ ಮುಂದಿನ ವರ್ಷದ ಕೃಷಿ ಕಾಯಕಕ್ಕೆ ಕಾಲಿಡುತ್ತಾರೆ.
ಸತೀಶ ಆಚಾರ್ ಉಳ್ಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Kundapura: ಟವರ್‌ನ ಬುಡದಲ್ಲೇ ನೆಟ್‌ವರ್ಕ್ ಇಲ್ಲ!
Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
ಭಾರತ ಮಾತೆಗೆ ಕಿರೀಟ ತೊಡಿಸಿದ ಸರಕಾರ:’ವಿಶ್ವಾರ್ಪಣಮ್’ನಲ್ಲಿ ಪಲಿಮಾರು ಶ್ರೀ ಅಭಿಮತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.