ದ.ಕ. 9, ಉಡುಪಿ 6 ಪಿಎಸ್‌ಐಗಳ ವರ್ಗಾವಣೆ
Team Udayavani, Oct 24, 2019, 2:25 AM IST
ಮಂಗಳೂರು/ ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಒಂಬತ್ತು ಮತ್ತು ಉಡುಪಿ ಜಿಲ್ಲೆಯ ಆರು ಮಂದಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ಸರಕಾರ ಬುಧವಾರ ಆದೇಶ ಹೊರಡಿಸಿದೆ.
ಧರ್ಮಸ್ಥಳ ಠಾಣೆಯ ಅವಿನಾಶ್ ಅವರನ್ನು ಬಂಟ್ವಾಳ ನಗರ ಠಾಣೆಗೆ, ಬೆಳ್ಳಾರೆ ಠಾಣೆಯ ಈರಯ್ಯ ಡಿ.ಎಂ. ಅವರನ್ನು ಉಪ್ಪಿನಂಗಡಿ ಠಾಣೆಗೆ, ಪುತ್ತೂರು ನಗರ (ಅಪರಾಧ) ಠಾಣೆಯ ಎಂ.ವಿ. ಚೆಲುವಯ್ಯ ಅವರನ್ನು ಪುತ್ತೂರು ಸಂಚಾರ ಠಾಣೆಗೆ, ಮೆಸ್ಕಾಂ ಜಾಗೃತ ದಳದ ಲೋಲಾಕ್ಷ ಕೆ. ಅವರನ್ನು ವೇಣೂರು ಠಾಣೆಗೆ, ಬೆಳ್ತಂಗಡಿ ಸಂಚಾರ ಠಾಣೆಯ ಓಡಿಯಪ್ಪ ಗೌಡ ಅವರನ್ನು ಧರ್ಮಸ್ಥಳ ಠಾಣೆಗೆ, ಉಪ್ಪಿನಂಗಡಿ ಠಾಣೆಯ ನಂದ ಕುಮಾರ ಎಂ.ಎಂ. ಅವರನ್ನು ಬೆಳ್ತಂಗಡಿ ಠಾಣೆಗೆ, ಬಂಟ್ವಾಳ ನಗರ (ಅಪರಾಧ) ಠಾಣೆಯ ಸುಧಾಕರ ತೋನ್ಸೆ ಅವರನ್ನು ಹಿರಿಯಡಕ ಠಾಣೆಗೆ, ವಿಟ್ಲ ಠಾಣೆಯ ಯಲ್ಲಪ್ಪ ಎಸ್. ಅವರನ್ನು ದಾಂಡೇಲಿ ನಗರ ಠಾಣೆಗೆ, ದ.ಕ. ಡಿಎಸ್‌ಬಿ ಘಟಕದ ಮಂಜುಳಾ ಕೆ.ಎಂ. ಅವರನ್ನು ಬಂಟ್ವಾಳ ಸಂಚಾರ ಠಾಣೆಗೆ ವರ್ಗಾಯಿಸಲಾಗಿದೆ.
ಉಡುಪಿ ಜಿಲ್ಲೆಯ ಅಮಾಸೆಬೈಲು ಠಾಣೆಯ ಸುದರ್ಶನ್ ಬಿ.ಎನ್. ಅವರನ್ನು ಕುಂದಾಪುರ ಸಂಚಾರ ಠಾಣೆಗೆ, ಕುಂದಾಪುರ ಗ್ರಾಮಾಂತರ ಠಾಣೆಯ ಶ್ರೀಧರ್ ನಾಯ್ಕ ಅವರನ್ನು ಶಂಕರನಾರಾಯಣ ಠಾಣೆಗೆ, ಹೆಜಮಾಡಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಶೇಖರ ಅವರನ್ನು ಉಡುಪಿ ಸಂಚಾರ ಠಾಣೆಗೆ, ಕಾರ್ಕಳ ನಗರ ಠಾಣೆಯ ನಂಜಾ ನಾಯ್ಕ ಅವರನ್ನು ಶಿರಸಿ ಗ್ರಾಮಾಂತರ ಠಾಣೆಗೆ, ಮಲ್ಪೆ ಠಾಣೆಯ ಮಧು ಬಿ.ಇ. ಅವರನ್ನು ಬೈಂದೂರು ಠಾಣೆಗೆ, ಬೈಂದೂರು ಠಾಣೆಯ ತಿಮ್ಮೇಶ್ ಬಿ.ಎನ್. ಅವರನ್ನು ಕಾರ್ಕಳ ನಗರ ಠಾಣೆಗೆ, ಮಂಕಿ ಠಾಣೆಯ ನೀತು ಗುಡೆ ಅವರನ್ನು ಮಲ್ಪೆ ಠಾಣೆಗೆ ವರ್ಗಾಯಿಸಲಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.