ಮಕ್ಕಳನ್ನು ತುಲನೆ ಮಾಡದಿರಿ: ಡಾ| ಪಿ.ವಿ. ಭಂಡಾರಿ
Team Udayavani, Sep 12, 2017, 7:40 AM IST
ಹೆಬ್ರಿ: ತನ್ನ ಹಿರಿಯ ಮಗ ತುಂಬಾ ಹುಷಾರ್ ಇದ್ದಾನೆ.ಇನ್ನೊಬ್ಬ ಪ್ರಯೋಜನವಿಲ್ಲ ಎಂಬ ತಾರತಮ್ಯವನ್ನು ಮಾಡುವುದರಿಂದ ಮಕ್ಕಳ ಮೇಲೆ ಪರಿಣಾಮ ಬೀರಿ ಆತ್ಮಹತ್ಯೆಯಂತಹ ಘೋರ ಕೃತ್ಯಕ್ಕೆ ಮುಂದಾಗುತ್ತಾರೆ, ತಮ್ಮ ಮಕ್ಕಳನ್ನು ಇತರ ಮಕ್ಕಳ ಜತೆ ತುಲನೆ ಮಾಡಿ ನೋಡಬೇಡಿ. ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಎಂದು ಮಾನಸಿಕ ತಜ್ಞ ಡಾ| ಪಿ.ವಿ. ಭಂಡಾರಿ ಹೇಳಿದರು.
ಅವರು ಸೆ. 10ರಂದು ಹೆಬ್ರಿ ಅನಂತಪದ್ಮನಾಭ ಸನ್ನಿಧಿಯಲ್ಲಿ ಹೆಬ್ರಿ ಜೇಸಿಐ ಆಶ್ರಯದಲ್ಲಿ ನಡೆದ ಅನಂತ ಸಂಭ್ರಮ-2017 ಜೇಸಿ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು. ಹೆಬ್ರಿ ಜೇಸಿಐ ಸಾಧನೆ: ಜೇಸಿಐ ಅಧ್ಯಕ್ಷ ಪ್ರಶಾಂತ ಪೈ ಅವರ ನೇತೃತ್ವದಲ್ಲಿ ದಿನಂಪ್ರತಿ ವಿಭಿನ್ನ ಕಾರ್ಯಕ್ರಮಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗುವುದರೊಂದಿಗೆ ಜೇಸಿಐ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಹೆಬ್ರಿ ಜೇಸಿಐ ಸೇವಾ ಕಾರ್ಯ ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಜೇಸಿಐನ ಪೂರ್ವಾಧ್ಯಕ್ಷ ಯಕ್ಷಗಾನ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಗಾನಗಾರುಡಿಗ ಬಿರುದಾಂಕಿತ ಭಾಗವತ ಗಣೇಶ್ ಹೆಬ್ರಿ ಅವರನ್ನು ಸಮ್ಮಾನಿಸಲಾಯಿತು.
ಸಮಾರಂಭದಲ್ಲಿ ಪ್ರಾಂತ್ಯ ಬಿ ವಲಯ 15ರ ವಲಯ ಉಪಾಧ್ಯಕ್ಷ ಜೆಎಫ್‌ಎಂ ಸರ್ವಜ್ಞ ತಂತ್ರಿ, ಪೂರ್ವ ವಲಯ ಉಪಾಧ್ಯಕ್ಷ ಡಾ| ಅನಿತ್ ಕುಮಾರ್ ಶೃಂಗೇರಿ, ಚಲನಚಿತ್ರ ಮತ್ತು ಕಿರುತೆರೆ ನಟಿ ರಕ್ಷಾ ಶೆಣೈ, ಹೆಬ್ರಿ ಜೇಸಿಐ ಪೂರ್ವಾಧ್ಯಕ್ಷ ವಾದಿರಾಜ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಯುವಜೇಸಿ ಅಧ್ಯಕ್ಷ ದೀಕ್ಷಿತ್, ಜೇಸಿರೆಟ್ ಅಧ್ಯಕ್ಷೆ ರಂಜಿತಾ ಆರ್. ಪ್ರಭು, ಉದಯ ಸೇರಿಗಾರ್, ಪ್ರಶಾಂತ್ ಆಚಾರ್ಯ, ಹರಿಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಹೆಬ್ರಿ ಜೇಸಿಐ ಅಧ್ಯಕ್ಷ ಎಂ. ಪ್ರಶಾಂತ್ ಪೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ದರು. ಕಾರ್ಯದರ್ಶಿ ನಾಗೇಂದ್ರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್ ಪ್ರಸಾದ್ ಸಿನಿಮಾ
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
Tumkur: ಮಧುಗಿರಿ ಡಿವೈಎಸ್ಪಿ ವಿರುದ್ಧ ಮತ್ತೊಬ್ಬ ಸಂತ್ರಸ್ತೆಯಿಂದ ವಿಡಿಯೋ ಆರೋಪ
Fraud Case: ಐಶ್ವರ್ಯಗೌಡ ವಂಚನೆ; ಸಂತಸ್ತರಿಗೆ ನ್ಯಾಯದ ಭರವಸೆ ನೀಡಿದ ಎಚ್‌ಡಿಕೆ
Arrested: ಮಾದಕವಸ್ತು ದಂಧೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.