ಯುವಜನತೆ ದುಶ್ಚಟಗಳಿಗೆ ಬಲಿಯಾಗದಿರಿ: ಭಂಡಾರಿ
Team Udayavani, Sep 28, 2018, 6:50 AM IST
ಕಾರ್ಕಳ: ಭಾರತ ವಿಶ್ವದಲ್ಲೇ ಅತೀ ಹೆಚ್ಚು ಯುವಜನತೆಯನ್ನು ಹೊಂದಿದ್ದು, ಯುವಜನರೇ ನಮ್ಮ ದೇಶದ ಸಂಪನ್ಮೂಲ. ಹೀಗಾಗಿ ಯುವ ಜನತೆ ಸನ್ಮಾರ್ಗದಲ್ಲಿ ನಡೆಯ ಬೇಕು. ಯಾವ ದುಶrಗಳಿಗೂ ಬಲಿಯಾಗ ಬಾರದು ಎಂದು ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಹೇಳಿದರು.
ಉಡುಪಿ ಜಿಲ್ಲಾ ಪೊಲೀಸ್, ರೋಟರಿ ಕ್ಲಬ್ ಕಾರ್ಕಳ, ಕಾರ್ಯನಿರತ ಪತ್ರಕರ್ತರ ಸಂಘ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ ಮಾದಕ ದ್ರವ್ಯ ವಿರೋಧಿ ಮಾಸಾಚರಣೆ ಪ್ರಯುಕ್ತ ಸೆ. 27ರಂದು ನಡೆದ ಬೃಹತ್ ಜಾಥಾದ ಅನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಸ್ಪೃಶ್ಯತೆ, ಅಸಮಾನತೆಗಳು ದೂರವಾಗುತ್ತಿರುವ ನಮ್ಮ ದೇಶದಲ್ಲಿ, ಮಾದಕ ವಸ್ತುಗಳು ಮಾರಕವಾಗಿ ಪರಿಣಮಿಸುತ್ತಿವೆ. ಯುವ ಜನಾಂಗ ಸರಿದಾರಿಯಲ್ಲಿ ನಡೆಯು ತ್ತಿದ್ದರೆ, ಮತ್ತೂಂದು ವರ್ಗ ಯುವಕರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಅಂತಹ ಚಟುವಟಿಕೆಗಿಂದ ಯುವಕರು ಜಾಗೃತರಾಗಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರ್ಗಿ ಅವರು ಮಾತನಾಡಿ, ದೇಶದ ಆರ್ಥಿಕತೆಯನ್ನು ಬಡಮೇಲು ಮಾಡುವಲ್ಲಿ ಮತ್ತೂಂದು ರೀತಿಯಲ್ಲಿ ದಾಳಿ ಮಾಡುತ್ತಿರುವುದು ಮಾದಕ ವಸ್ತುಗಳು. ಕಣ್ಣಿಗೆ ಕಾಣದ ರೀತಿಯಲ್ಲಿ ಪ್ರಭಾವ ಬೀರುತ್ತಿದೆ. ಯುವ ಸಮುದಾಯವನ್ನು ಹಾದಿ ತಪ್ಪಿಸುತ್ತಿದೆ. ಆ ಮೂಲಕ ದೇಶದ ಆರ್ಥಿಕತೆ, ಸಂಸ್ಕೃƒತಿಯ ಮೇಲೆ ದಾಳಿ ಮಾಡುತ್ತಿದೆ ಎಂದರು.
ಹಣದ ವಿಚಾರ, ಕೌಟುಂಬಿಕ ಸಮಸ್ಯೆ ಹೀಗೆ ಬೇರೆ ಬೇರೆ ಕಾರಣದಿಂದ ಮಾದಕ ದ್ರವ್ಯದ ದಾಸರಾಗುತ್ತಾರೆ. ಅದನ್ನು ಪೊಲೀಸರು ಹೇಗೆ ತಡೆಗಟ್ಟಲು ಮುಂದಾಗುತ್ತಾರೋ ಅದೇ ರೀತಿಯಲ್ಲಿ ಸಮಾಜವು ಅದನ್ನು ವಿರೋಧಿಸಿ ತಡಗಟ್ಟಲು ಪ್ರಯತ್ನಿಸಬೇಕು. ಕಾನೂನು ಒಂದೇ ಪರಿಹಾರವಾಗದೇ ಸಮಾಜಿಕ ಪರಿವರ್ತೆನೆಯ ಮೂಲಕ ತಡೆಗಟ್ಟಬಹುದು ಎಂದರು.ಕಾರ್ಯಕ್ರಮದ ಪ್ರಯುಕ್ತ ಕಾರ್ಕಳ ನಗರದ ಅನಂತಶಯನದಿಂದ ಕುಕ್ಕುಂದೂರು ವರೆಗೆ ಬೃಹತ್ ಜಾಥ ನಡೆಯಿತು. ವಿವಿಧ ಸಂಘಟನೆಗಳ ಮುಖಂಡರು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತಹಶೀಲ್ದಾರ್ ಮಹಮ್ಮದ್ ಇಸಾಕ್, ಮೇಬಲ್ ಡಿಸೋಜಾ, ರೋಹಿತ್ ಕುಮಾರ್ ಕಟೀಲ್, ಶೈಲೇಂದ್ರ ರಾವ್, ಮುನಿಯಾಲ್ ಉದಯ ಕುಮಾರ್ ಶೆಟ್ಟಿ, ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
MUST WATCH
ಹೊಸ ಸೇರ್ಪಡೆ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.