ಮೀನುಗಾರಿಕೆಯಲ್ಲಿ ಕೀಳ‌ರಿಮೆ ಬೇಡ: ಡಾ| ಜಿ. ಶಂಕರ್‌


Team Udayavani, May 2, 2017, 2:53 PM IST

meenugarike.jpg

ಕೋಟ: ನಮ್ಮೆಲ್ಲರ ಹೆತ್ತವರು ನಮ್ಮ ಕುಲಕಸುಬು ಮೀನುಗಾರಿಕೆಯನ್ನು ನಡೆಸಿ ಕಷ್ಟಪಟ್ಟು ನಮ್ಮನ್ನೆಲ್ಲ ಸಾಕಿದ್ದಾರೆ. ಇಂದು ಮೊಗವೀರ ಸಮಾಜ ಈ ಮಟ್ಟಿಗೆ ಬೆಳೆದು ನಿಲ್ಲಲು ಮೀನುಗಾರಿಕೆ ವೃತ್ತಿ ಕಾರಣ. ಆದ್ದರಿಂದ ಈ ಮೀನುಗಾರಿಕೆಯ ಕುರಿತು ಯಾರೂ ಕೀಳರಿಮೆ ತೋರಬಾರದು ಎಂದು ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್‌ ಹೇಳಿದರು.

ಅವರು ಮೊಗವೀರ ಕುಟುಂಬದ ಹಿರಿಯ ಆದರ್ಶ ಮಹಿಳೆ, ಜೀವನದ 82 ವರ್ಷಗಳಲ್ಲಿ ಬಹುತೇಕ 75 ವರ್ಷಗಳಷ್ಟು ಕಾಲ ಕುಲಕಸುಬು ಮೀನು ಮಾರಾಟ ಮಾಡಿ ಸಾರ್ಥಕ ಬದುಕನ್ನು ಕಂಡಿರುವ ಕೋಡಿಕನ್ಯಾಣದ ಮೀನ ಮರಕಾಲ್ತಿ (ಮೀನಕ್ಕ) ಅವರಿಗೆ ರವಿವಾರ ಸಾಲಿಗ್ರಾಮ ಹಳೆಕೋಟೆ ಮೈದಾನದಲ್ಲಿ “ಮತ್ಸ್ಯ ಜ್ಯೋತಿ’ ಬಿರುದು ಪ್ರದಾನ ಮಾಡಿ ಮಾತನಾಡಿದರು.

ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಅಂಬಲಪಾಡಿ ಉಡುಪಿ, ಮೊಗವೀರ ಯುವಸಂಘಟನೆ ಉಡುಪಿ ಜಿಲ್ಲೆ ಹಾಗೂ ಸಾಲಿಗ್ರಾಮ, ಕೋಟ ಘಟಕ, ಕರಾವಳಿ ಮೊಗವೀರ ಮಹಾಜನ ಸಂಘ ಕೋಟ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು.

ಮೀನುಗಾರ ಮಹಿಳೆಯರಿಗೆ ಗೌರವ ನೀಡಿ
ಮೀನಕ್ಕನನ್ನು ನೋಡಿದಾಗ ನನ್ನ ತಾಯಿ ಲಕ್ಷಿ ¾à ಬಂಗೇರ ಕಣ್ಣೆದುರು ಬರುತ್ತಾರೆ. ಇವರ ತ್ಯಾಗ, ಜೀವನ ಪ್ರೇಮ ನಮಗೆಲ್ಲ ಆದರ್ಶವಾಗಿದೆ. ಮುಂದೆ ಪ್ರತೀ ವರ್ಷ ದಕ್ಷಿಣ ಕನ್ನಡದ ಉಳ್ಳಾಲದಿಂದ ಉಡುಪಿಯ ಶಿರೂರು ವರೆಗಿನ ಹಳೆಯ ತಲೆಮಾರಿನ, ಸಾಂಪ್ರದಾಯಿಕ ಮೀನುಗಾರಿಕಾ ವೃತ್ತಿ ನಿರತ 50 ವರ್ಷಗಳ ಕಾಲ ಮೀನು ಮಾರಾಟದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡ ಆಯ್ದ 10 ಮಹಿಳಾ ಕಾರ್ಮಿಕರನ್ನು ಡಾ| ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ವತಿಯಿಂದ ಗುರುತಿಸಲಾಗುವುದು. ಈ ಮೂಲಕ ಮೀನುಗಾರಿಕೆ ವೃತ್ತಿಯ ಬಗೆಗಿನ ಕೀಳರಿಮೆ ಹೋಗಲಾಡಿಸಿ, ಗೌರವ ನೀಡಲು ಪ್ರೇರೇಪಿಸಲಾಗುವುದು ಎಂದರು. ಒಳನಾಡು ಮೀನುಗಾರರು ಸರಕಾರದ ಸವಲತ್ತುಗಳಿಂದ ವಂಚಿತರಾಗಿದ್ದು, ಅವರಿಗೆ ಕೂಡ ಸವಲತ್ತುಗಳನ್ನು ಕೊಡಿಸುವಲ್ಲಿ ಹೋರಾಟ ನಡೆಸಲಾಗುವುದು ಎಂದರು.
ಉಡುಪಿ ಜಿಲ್ಲಾ ಮೊಗವೀರ ಯುವಸಂಘಟನೆಯ ಜಿಲ್ಲಾಧ್ಯಕ್ಷ ಗಣೇಶ ಕಾಂಚನ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಮ್ಮಾನ
ಈ ಸಂದರ್ಭ ಸುಮಾರು 50 ವರ್ಷಗಳಿಂದ ಮೀನುಗಾರಿಕೆ ವೃತ್ತಿನಿರತ ಲಕ್ಷ್ಮೀ ಮರಕಾಲ್ತಿ, ಗೋಪಿ ಮರಕಾಲ್ತಿ, ಲಕ್ಷ್ಮೀ ಪಾಂಡೇಶ್ವರ, ನಾಗು ಮಧುವನ, ಬೋಳು ಮರಕಾಲ್ತಿ, ಭಾಗಿ ಮರಕಾಲ್ತಿ, ಭಾಗಿ ಗುಂಡ್ಮಿ, ಅಂಬಾ ಖಾರ್ವಿ ಮುಂತಾದವರನ್ನು ಸಮ್ಮಾನಿಸಲಾಯಿತು.

ಕರಾವಳಿ ಮೊಗವೀರ ಮಹಾಜನಸಂಘದ ಅಧ್ಯಕ್ಷ ಆನಂದ ಸಿ. ಕುಂದರ್‌, ಉಚ್ಚಿಲ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಗಂಗಾಧಕ ಕರ್ಕೇರ, ಬೆಣ್ಣೆಕುದ್ರು ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷ ವಿಶ್ವನಾಥ ಮಾಸ್ಟರ್‌, ಬಗ್ವಾಡಿ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಕೆ.ಕೆ. ಕಾಂಚನ್‌, ಹೆಮ್ಮಾಡಿ ಮೀನುಗಾರರ ಸಂಘದ ವ್ಯವಸ್ಥಾಪಕ ಉದಯ ಕುಮಾರ್‌ ಹಟ್ಟಿಯಂಗಡಿ, ಮೊಗವೀರ ಯುವ ಸಂಘಟನೆ ಸಾಲಿಗ್ರಾಮ ಘಟಕದ ಅಧ್ಯಕ್ಷ ಸತೀಶ ಮರಕಾಲ, ಕೋಟ ಘಟಕದ ಗಿರೀಶ್‌ ಬಂಗೇರ, ಸಾಲಿಗ್ರಾಮ ಮಹಿಳಾ ಘಟಕದ ಗೀತಾ ಭಾಸ್ಕರ್‌, ಕೋಟ ಘಟಕದ ಗುಲಾಬಿ ದೇವದಾಸ ಬಂಗೇರ ಹಾಗೂ ಮೊಗವೀರ ಸಮಾಜದ ಮುಖಂಡರಾದ ಅಜೀತ್‌ ಸುವರ್ಣ, ಟಿ. ಗಣಪತಿ ಶ್ರೀಯಾನ್‌, ಗೋಪಾಲ ಕಾಂಚನ್‌, ಕೆ.ಎಲ್‌. ಬಂಗೇರ, ಕೇಶವ ಕುಂದರ್‌, ಬೇಬಿ ಎಸ್‌. ಸಾಲ್ಯಾನ್‌, ಸುಶೀಲಾ ಸೋಮಶೇಖರ, ಬಾಬು ಎಸ್‌. ಕಾವಡಿ ಉಪಸ್ಥಿತರಿದ್ದರು.

ಯುವಸಂಘಟನೆಯ ಕೋಟ ಘಟಕದ ಸತೀಶ ಮರಕಾಲ ಸ್ವಾಗತಿಸಿ, ಶಿವರಾಮ ಕೆ.ಎಂ. ಕಾರ್ಯಕ್ರಮ ನಿರೂಪಿಸಿದರು.

ಮೀನಕ್ಕಗೆ ಮೀನಿನ ತುಲಾಭಾರ
“ಮತ್ಸ್ಯ ಜ್ಯೋತಿ’ ಬಿರುದು ಪ್ರದಾನ ಮಾಡಿ ಸಮ್ಮಾನಿಸುವ ಸಂದರ್ಭ ಮೀನಕ್ಕ ಅವ ರನ್ನು ಬಂಗಡಿ ಮೀನಿನಿಂದ ತುಲಾಭಾರ ಮಾಡಿದ್ದು ವಿಶೇಷವಾಗಿತ್ತು ಹಾಗೂ ಗಾಳದಿಂದ ಮೀನು ಹಿಡಿಯುವ ಮಾದರಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಟಾಪ್ ನ್ಯೂಸ್

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

IFFI: ಪಾಪ್‌ ಸಂಗೀತಗಾರ ರಾಬಿ ವಿಲಿಯಮ್ಸ್‌ ಬೆಟರ್‌ ಮ್ಯಾನ್‌ ಚಿತ್ರೋತ್ಸವದ ಉದ್ಘಾಟನಾ ಸಿನಿಮಾ

IFFI: ಪಾಪ್‌ ಸಂಗೀತಗಾರ ರಾಬಿ ವಿಲಿಯಮ್ಸ್‌ ಬೆಟರ್‌ ಮ್ಯಾನ್‌ ಚಿತ್ರೋತ್ಸವದ ಉದ್ಘಾಟನಾ ಸಿನಿಮಾ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

vikr

Naxal: ಸರ್ಕಾರಿ ಬಸ್‌ ಅಡ್ಡ ಹಾಕಿ ಬೆಂಕಿ ಹಚ್ಚಿ ಕರಪತ್ರ ಹಂಚಿದ್ದ ವಿಕ್ರಂಗೌಡ ಮತ್ತು ತಂಡ!

Bar-Associatin

Wine Merchants: ನಾಳೆಯ ಮದ್ಯ ಮಾರಾಟ ಬಂದ್‌ ನಿರ್ಧಾರ ವಾಪಸ್‌ ಪಡೆದ ಅಸೋಸಿಯೇಷನ್‌

vital

Vitla: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

IFFI Goa 2024: ಕೋಟ ಫ್ಯಾಕ್ಟರಿಯಿಂದ ಬೊಮಾನ್‌ ಇರಾನಿವರೆಗೆ

IFFI Goa 2024: ಕೋಟ ಫ್ಯಾಕ್ಟರಿಯಿಂದ ಬೊಮಾನ್‌ ಇರಾನಿವರೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-roopa

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್‌ ಎನ್‌ಕೌಂಟರ್‌ ಬಗ್ಗೆ ಡಿಐಜಿ ಹೇಳಿದ್ದೇನು ?

13(2)

Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ

12

Udupi: ವಿಸಿಲ್‌ ಹೊಡೆದು, ಕೈ ಸನ್ನೆಯಲ್ಲೇ ಟ್ರಾಫಿಕ್‌ ನಿರ್ವಹಣೆ!

11

Padubidri: ನಿಧಾನವಾಗಿ ಚಲಿಸಿ, ಹೆದ್ದಾರಿ ಕಾಮಗಾರಿ ನಡೆಯುತ್ತಿದೆ!

8

Hosur: ಕರೆಗಾಗಿ ಮರ, ಗುಡ್ಡ ಏರುವ ಪರಿಸ್ಥಿತಿ

MUST WATCH

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

ಹೊಸ ಸೇರ್ಪಡೆ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

IFFI: ಪಾಪ್‌ ಸಂಗೀತಗಾರ ರಾಬಿ ವಿಲಿಯಮ್ಸ್‌ ಬೆಟರ್‌ ಮ್ಯಾನ್‌ ಚಿತ್ರೋತ್ಸವದ ಉದ್ಘಾಟನಾ ಸಿನಿಮಾ

IFFI: ಪಾಪ್‌ ಸಂಗೀತಗಾರ ರಾಬಿ ವಿಲಿಯಮ್ಸ್‌ ಬೆಟರ್‌ ಮ್ಯಾನ್‌ ಚಿತ್ರೋತ್ಸವದ ಉದ್ಘಾಟನಾ ಸಿನಿಮಾ

Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ

Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Mahaveera Hanuma: ಆಲ್ಬಂನಲ್ಲಿ ಹನುಮ ಗಾನ

Mahaveera Hanuma: ಆಲ್ಬಂನಲ್ಲಿ ಹನುಮ ಗಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.