ಮಾದಕದ್ರವ್ಯದಿಂದ ದೇಶ ದುರ್ಬಲಗೊಳಿಸಬೇಡಿ
Team Udayavani, Sep 17, 2018, 11:02 AM IST
ಉಡುಪಿ: ವಿಶ್ವದಲ್ಲಿ ಅತೀ ಹೆಚ್ಚು ಯುವಕರಿರುವ ಸಶಕ್ತ ದೇಶವನ್ನು ಮಾದಕದ್ರವ್ಯದಿಂದ ಅಶಕ್ತರನ್ನಾಗಿ ಮಾಡಬೇಡಿ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ ಹೇಳಿದರು.
ಅವರು ರವಿವಾರ ಮಲ್ಪೆ ಸಮುದ್ರ ಕಿನಾರೆಯಲ್ಲಿ, ಜಿಲ್ಲಾ ಪೊಲೀಸ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಉಡುಪಿ ಪ್ರಸ್ ಕ್ಲಬ್, ಉಡುಪಿ ಪ್ರಸ್ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಮತ್ತು ಮಲ್ಪೆ ಅಭಿವೃದ್ಧಿ ಸಮಿತಿಗಳ ಸಹಯೋಗದಲ್ಲಿ ಮಾದಕ ವ್ಯಸನಗಳ ವಿರುದ್ಧ ಮಾಸಾಚರಣೆ ಅಂಗವಾಗಿ ನಡೆದ ಕಾಟೂìನ್ – ಮರಳು ಶಿಲ್ಪ ರಚನೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಾದಕ ವ್ಯಸನದಿಂದ ವ್ಯಕ್ತಿ ತಾನು ಅಧಃ ಪತನವಾಗುವುದರೊಂದಿಗೆ ಕುಟುಂಬ, ಸಮಾಜವನ್ನು ಅಧಃ ಪತನ ದತ್ತ ಕೊಂಡೊಯ್ಯುತ್ತಿದ್ದಾನೆ. ಈ ವ್ಯಸನದ ವಿರುದ್ಧ ಹೋರಾಡುವುದು ಪೋಲಿಸರೊಂದಿಗೆ ಪ್ರತಿಯೊಬ್ಬನ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದರು.
ಉಡುಪಿ ಎಸ್‌ಪಿ ಲಕ್ಷ್ಮಣ ನಿಂಬರಗಿ ಅಧ್ಯಕ್ಷತೆ ವಹಿಸಿದ್ದರು. ಚಿತ್ರ ಬರೆಯವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ವ್ಯಂಗ್ಯಚಿತ್ರಕಾರ ಜೇಮ್ಸವಾಜ್ ಅವರು ಮೊದಲು ನಾವು ಮಾದಕ ವಸ್ತುಗಳನ್ನು ಸೇವಿಸುತ್ತೇವೆ, ಅನಂತರ ಅದೇ ನಮ್ಮನ್ನು ಸೇವಿಸುತ್ತದೆ, ಅಷ್ಟರಲ್ಲಿ ಸರಿಪಡಿಸಲಾಗದ ದುರಂತ ಸಂಭವಿಸಿರುತ್ತದೆ, ಅದಕ್ಕಿಂತ ಮೊದಲೇ ಎಚ್ಚೆತ್ತುಕೊಳ್ಳಬೇಕು ಎಂದರು.
ಅತಿಥಿಯಾಗಿದ್ದ ಕುಂದಾಪುರ ಉಪ ವಿಭಾಗಾಧಿಕಾರಿ ಭೂಬಾಲನ್, ಅನೇಕ ಬಾರಿ ಸರಕಾರವೊಂದರಿಂದಲೇ ಪರಿ ಹಾರ ಆಗದ ಸಮಸ್ಯೆಗಳು ಸಮಾಜ ಕೈಜೋಡಿಸುವುದರಿಂದ ಸಾಧ್ಯ ವಾಗುತ್ತದೆ, ಮಾದಕ ವ್ಯಸನ ಅಂತಹದ್ದೇ ಒಂದು ಸಮಸ್ಯೆ ಎಂದರು.
ಫೋಟೋಗ್ರಾಫರ್ಸ್ ಅಸೋಸಿ ಯೇಶನ್ ಅಧ್ಯಕ್ಷ ಜನಾರ್ದನ ಕೊಡ ವೂರು, ಮಲ್ಪೆ ಅಭಿವೃದ್ಧಿ ಸಮಿತಿಯ ಸಂಯೋಜಕ ಸುದೇಶ್ ಶೆಟ್ಟಿ, ಪತ್ರಕರ್ತರ ಸಂಘದ ಸಹ ಕಾರ್ಯದರ್ಶಿ ಮೈಕೆಲ್ ರೋಡ್ರಿಗಸ್ ಉಪಸ್ಥಿತರಿದ್ದರು. ಪತ್ರಕರ್ತ ನಾಗರಾಜ್ ವರ್ಕಾಡಿ ಸ್ವಾಗತಿಸಿ ವಂದಿಸಿದರು. ಇರ್ಷಾದ್ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು.
ಜೇಮ್ಸವಾಜ್, ಜೀವನ್ ಶೆಟ್ಟಿ, ತ್ರಿವರ್ಣ ವಿ.ಎಂ. ಅವರು ಮಾದಕ ವಸ್ತು ವಿರುದ್ಧ ಜಾಗೃತಿ ಕಾಟೂìನು ಗಳನ್ನು ಬಿಡಿಸಿದರೆ, ಹರೀಶ್ ಸಾಗಾ, ಸುನಿಲ್ ಓಂತಿಬೆಟ್ಟು ಮತ್ತು ಜಗದೀಶ್ ಆಚಾರ್ಯ ಮತ್ತು ತಂಡದವರು ಮರಳು ಶಿಲ್ಪಗಳನ್ನು ರಚಿಸಿದರು.
ಕಾನೂನಿನಿಂದಷ್ಟೇ ನಿಗ್ರಹ ಅಸಾಧ್ಯ
ಕಾನೂನಿನ ಮೂಲಕ ಮಾದಕ ವ್ಯಸನ ನಿರ್ಮೂಲನೆ ಅಸಾಧ್ಯ, ಪೋಷಕರು ತಮ್ಮ ಮಕ್ಕಳು ಮಾದಕ ವ್ಯಸನಕ್ಕೆ ಬಲಿಯಾಗದಂತೆ ಎಚ್ಚರ ವಹಿಸಬೇಕು. ಇದರಿಂದ ಸಮಾಜದಿಂದಲೇ ಈ ಪಿಡುಗನ್ನು ಒ¨ªೋಡಿಸಬಹುದು. ಕಾನೂನು ಪಾಲನೆಯೊಂದಿಗೆ ಜಾಗೃತಿ ಮೂಡಿಸುವುದು ಪೊಲೀಸರ ಜವಾಬ್ದಾರಿ. ಈ ಕರ್ತವ್ಯಕ್ಕೆ ಪತ್ರಕರ್ತರು, ಕಲಾವಿದರು ಕೈಜೋಡಿಸಿರುವುದು ಶ್ಲಾಘನೀಯ.
– ರವಿಕಾಂತೇ ಗೌಡ, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.